Redmi 10 Prime: ಬಿಡುಗಡೆಗೆ ಒಂದು ದಿನ ಬಾಕಿ ಇರುವಾಗಲೇ ಧೂಳೆಬ್ಬಿಸುತ್ತಿದೆ ರೆಡ್ಮಿ 10 ಪ್ರೈಮ್: ಅಂಥದ್ದೇನಿದೆ ಗೊತ್ತೇ?

TV9 Digital Desk

| Edited By: Vinay Bhat

Updated on:Sep 02, 2021 | 3:27 PM

ರೆಡ್ಮಿ ತನ್ನ ರೆಡ್ಮಿ 10 ಪ್ರೈಮ್ ಸ್ಮಾರ್ಟ್​ಫೋನ್ ಬಿಡುಗಡೆ ಬಗ್ಗೆ ಟ್ವಿಟ್ಟರ್​ನಲ್ಲಿ ಟೀಸರ್ ಒಂದನ್ನು ಬಿಡುಗಡೆ ಮಾಡಿದ್ದು, ಸೆ. 3 ರಂದು ಮಧ್ಯಾಹ್ನ 12 ಗಂಟೆಗೆ ಅನಾವರಣಗೊಳ್ಳಲಿದೆ ಎಂದು ಹೇಳಿದೆ.

Redmi 10 Prime: ಬಿಡುಗಡೆಗೆ ಒಂದು ದಿನ ಬಾಕಿ ಇರುವಾಗಲೇ ಧೂಳೆಬ್ಬಿಸುತ್ತಿದೆ ರೆಡ್ಮಿ 10 ಪ್ರೈಮ್: ಅಂಥದ್ದೇನಿದೆ ಗೊತ್ತೇ?
Redmi 10 Prime
Follow us

ಚೀನಾ ಮೂಲದ ಶವೋಮಿ (Xiaomi) ಕಂಪೆನಿಯ ರೆಡ್ಮಿ ಸ್ಮಾರ್ಟ್​ಫೋನ್​ಗಳಿಗೆ ಭಾರತದಲ್ಲಿ ಎಲ್ಲಿಲ್ಲದ ಬೇಡಿಕೆ ಇದೆ. ಅದಕ್ಕಾಗಿಯೇ ಕಡಿಮೆ ಬೆಲೆಗೆ ಶವೋಮಿ ಆಕರ್ಷಕ ಫೀಚರ್​​ಗಳುಳ್ಳ ರೆಡ್ಮಿ ಫೋನನ್ನು ದೇಶದಲ್ಲಿ ಬಿಡುಗಡೆ ಮಾಡುತ್ತಿರುತ್ತದೆ. ಸದ್ಯ ಇದೇ ಸಾಲಿಗೆ ಮತ್ತೊಂದು ಸ್ಮಾರ್ಟ್​ಫೋನ್ ಸೇರ್ಪಡೆಯಾಗಲಿದೆ. ನಾಳೆ ಸೆ. 3 ರಂದು ಭಾರತದಲ್ಲಿ ರೆಡ್ಮಿ 10 ಪ್ರೈಮ್ (Redmi 10 Prime) ಸ್ಮಾರ್ಟ್​ಫೋನ್ ಅನಾವರಣಗೊಳ್ಳಲಿದೆ. ಬಿಡುಗಡೆಗೆ ಒಂದು ದಿನ ಬಾಕಿ ಇರುವಾಗಲೇ ಇದರ ಫೀಚರ್ಸ್ ಮೊಬೈಲ್ ಪ್ರಿಯರಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದೆ.

ರೆಡ್ಮಿ ತನ್ನ ಈ ಸ್ಮಾರ್ಟ್​ಫೋನ್ ಬಿಡುಗಡೆ ಬಗ್ಗೆ ಟ್ವಿಟ್ಟರ್​ನಲ್ಲಿ ಟೀಸರ್ ಒಂದನ್ನು ಬಿಡುಗಡೆ ಮಾಡಿದ್ದು, ಸೆ. 3 ರಂದು ಮಧ್ಯಾಹ್ನ 12 ಗಂಟೆಗೆ ಅನಾವರಣಗೊಳ್ಳಲಿದೆ ಎಂದು ಹೇಳಿದೆ. ಜೊತೆಗೆ ಬರೋಬ್ಬರಿ 6000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕಪ್​ನೊಂದಿಗೆ ಬರಲಿದೆ ಎಂಬುದನ್ನೂ ಖಚಿತ ಪಡಿಸಿದೆ.

ಮೂಲಗಳ ಪ್ರಕಾರ ರೆಡ್ಮಿ 10 ಪ್ರೈಮ್ ಸ್ಮಾರ್ಟ್‌ಫೋನ್‌ನಲ್ಲಿ ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೋ ಜಿ 88 SoC ಪ್ರೊಸೆಸರ್ ಹೊತ್ತು ಬರಲಿದೆ ಎನ್ನಲಾಗಿದೆ.  6.5 ಇಂಚಿನ ಪೂರ್ಣ ಹೆಚ್​ಡಿ ಪ್ಲಸ್ (1,080×2,400 ಪಿಕ್ಸೆಲ್​ಗಳು) ಅಡಾಪ್ಟಿವ್ ಸಿಂಕ್ ಡಿಸ್ಪ್ಲೇ, 90Hz ರಿಫ್ರೆಶ್ ರೇಟ್​ನಿಂದ ಕೂಡಿದೆ.

ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿರಬಹುದು. ಅಲ್ಟ್ರಾ ವೈಡ್ ಗಾಗಿ ಕಂಪನಿಯು 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಒದಗಿಸಿದೆ. ಇನ್ನು ಫ್ರಂಟ್‌ನಲ್ಲಿ ಸೆಲ್ಫಿಗಾಗಿ ಕಂಪನಿಯು 8 ಮೆಗಾ ಪಿಕ್ಸೆಲ್ ಕಲ್ಪಿಸಿರಬಹುದು ಎಂದು ಹೇಳಲಾಗುತ್ತಿದೆ. ಹಾಗೂ ಇದು 6GB RAM ಮತ್ತು ಗರಿಷ್ಠ 128GB ಆನ್‌ಬೋರ್ಡ್ ಸಂಗ್ರಹಣೆಯನ್ನು ಒಳಗೊಂಡಿದೆ ಎಂದು ವರದಿಯಾಗಿದೆ.

ಗ್ರಾಹಕರ ಆಯ್ಕೆಯಲ್ಲಿ ಯಾವಾಗಲೂ ಮುಂದಿರುವ ರೆಡ್ಮಿ 10 ಪ್ರೈಮ್ ಸ್ಮಾರ್ಟ್‌ಫೋನಿನಲ್ಲಿ 18W ವೇಗದ ಚಾರ್ಜಿಂಗ್ ಮತ್ತು 9W ರಿವರ್ಸ್ ವೈರ್ಡ್ ಚಾರ್ಜಿಂಗ್‌ನೊಂದಿಗೆ 6000mAh ಬ್ಯಾಟರಿಯನ್ನು ಸಹ ಅಳವಡಿಸಿದೆ.

ಇನ್ನೂ ರೆಡ್ಮಿ 10 ಸ್ಮಾರ್ಟ್​ಫೋನಿನ ನಿಖರ ಬೆಲೆ ಬಹಿರಂಗವಾಗಿಲ್ಲ. ಆದರೆ, ಮೂಲಗಳ ಪ್ರಕಾರ 13000-15000 ರೂ. ಬೆಲೆಗಳಲ್ಲಿ ಈ ಸ್ಮಾರ್ಟ್‌ಫೋನ್ ಗ್ರಾಹಕ ಖರೀದಿಗೆ ಸಿಗಬಹುದು ಎಂದು ವರದಿಗಳು ಹೇಳಿವೆ.

Instagram Down: ಭಾರತ ಸೇರಿದಂತೆ ಕೆಲ ದೇಶಗಳಲ್ಲಿ ಇನ್​ಸ್ಟಾಗ್ರಾಮ್ ಡೌನ್

ಟ್ವಿಟ್ಟರ್​​ನಲ್ಲಿ ಪೋಸ್ಟ್ ಮಾಡುವ ಮುನ್ನ ಎಚ್ಚರ: ಹೊಸ ಅಪ್ಡೇಟ್​ನಲ್ಲಿ ಅಚ್ಚರಿಯ ಫೀಚರ್

(Xiaomi Redmi 10 Prime launch tomorrow teased to be lightest 6000mAh battery phone)

ತಾಜಾ ಸುದ್ದಿ

Related Stories

Click on your DTH Provider to Add TV9 Kannada