Apple Watch Series 8: ₹20,900 ಡಿಸ್ಕೌಂಟ್​ನಲ್ಲಿ ಲಭ್ಯವಾಗುತ್ತಿದೆ ಆ್ಯಪಲ್ ವಾಚ್ ಸಿರೀಸ್ 8

ಗ್ಯಾಜೆಟ್ ಲೋಕದ ಫೇವರಿಟ್ ಎನ್ನಿಸಿಕೊಂಡಿರುವ ಸ್ಮಾರ್ಟ್​ವಾಚ್ ಕ್ಷೇತ್ರದಲ್ಲಿ ಆ್ಯಪಲ್ ವಾಚ್​ಗಳು ಹೆಚ್ಚಿನ ಜನಪ್ರಿಯತೆ ಗಳಿಸಿವೆ. ಅದರಲ್ಲೂ, ಫಿಟ್ನೆಸ್ ಮತ್ತು ಹೆಲ್ತ್ ಟ್ರ್ಯಾಕಿಂಗ್ ನಿಖರವಾಗಿ ಆ್ಯಪಲ್ ವಾಚ್​ಗಳು ಹೇಳುವುದರಿಂದ, ಜನರು ಪ್ರೀಮಿಯಂ ಎನ್ನಿಸಿದರೂ, ಆ್ಯಪಲ್ ವಾಚ್ ಖರೀದಿಗೆ ಮುಂದಾಗುತ್ತಾರೆ. ಆ್ಯಪಲ್ ವಾಚ್ ನೂತನ ಸರಣಿ 8 ಈಗ ಯುನಿಕಾರ್ನ್ ವಿಶೇಷ ಡಿಸ್ಕೌಂಟ್ ಸೇಲ್ ಮೂಲಕ ಲಭ್ಯವಾಗುತ್ತಿದೆ. ಆ್ಯಪಲ್ ವಾಚ್ ಸಿರೀಸ್ 8 ಮೇಲೆ ₹20,900 ವರೆಗೆ ಆಫರ್ ಕೊಡುಗೆ ದೊರೆಯುತ್ತಿದೆ.

Apple Watch Series 8: ₹20,900 ಡಿಸ್ಕೌಂಟ್​ನಲ್ಲಿ ಲಭ್ಯವಾಗುತ್ತಿದೆ ಆ್ಯಪಲ್ ವಾಚ್ ಸಿರೀಸ್ 8
ಆ್ಯಪಲ್ ವಾಚ್ ಸಿರೀಸ್ 8
Follow us
ಕಿರಣ್​ ಐಜಿ
|

Updated on: Mar 08, 2023 | 1:56 PM

ಆ್ಯಪಲ್ ವಾಚ್​ಗಳು ಗ್ಯಾಜೆಟ್ ಲೋಕದ ಫೇವರಿಟ್ ಎನ್ನಿಸಿಕೊಂಡಿರುವ ಸ್ಮಾರ್ಟ್​ವಾಚ್ ಕ್ಷೇತ್ರದಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿವೆ. ಅದರಲ್ಲೂ, ಫಿಟ್ನೆಸ್ ಮತ್ತು ಹೆಲ್ತ್ ಟ್ರ್ಯಾಕಿಂಗ್ ನಿಖರವಾಗಿ ಆ್ಯಪಲ್ ವಾಚ್​ಗಳು ಹೇಳುವುದರಿಂದ, ಜನರು ಪ್ರೀಮಿಯಂ ಎನ್ನಿಸಿದರೂ, ಆ್ಯಪಲ್ ವಾಚ್ (Apple Watch) ಖರೀದಿಗೆ ಮುಂದಾಗುತ್ತಾರೆ. ಕಳೆದ ವರ್ಷ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಆ್ಯಪಲ್ ವಾಚ್ ನೂತನ ಸರಣಿ 8 ಈಗ ಯುನಿಕಾರ್ನ್ ವಿಶೇಷ ಡಿಸ್ಕೌಂಟ್ ಸೇಲ್ ಮೂಲಕ ಲಭ್ಯವಾಗುತ್ತಿದೆ. ಆ್ಯಪಲ್ ವಾಚ್ ಸಿರೀಸ್ 8(Apple watch series 8) ಮೇಲೆ ₹20,900ವರೆಗೆ ಆಫರ್ ಕೊಡುಗೆ ದೊರೆಯುತ್ತಿದೆ. ಹೆಚ್ಚಿನ ವಿವರ ಇಲ್ಲಿದೆ.

ಆ್ಯಪಲ್ ವಾಚ್ ಸಿರೀಸ್ 8

ಕಳೆದ ವರ್ಷ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಆ್ಯಪಲ್ ವಾಚ್ ಸಿರೀಸ್ 8ರಲ್ಲಿ 41mm ಮತ್ತು 45mm ಎಂಬ ಎರಡು ಡಯಲ್ ಮಾದರಿಗಳು ಜನಪ್ರಿಯತೆ ಗಳಿಸಿದೆ. ಅದರಲ್ಲಿ ಆರಂಭಿಕ ಆವೃತ್ತಿ Apple Watch Series 8 ದೇಶದ ಮಾರುಕಟ್ಟೆಯಲ್ಲಿ ₹45,900 ದರ ಹೊಂದಿದೆ. ನೂತನ ಆ್ಯಪಲ್ ವಾಚ್ ಸಿರೀಸ್ 8 ಈಗ ಯುನಿಕಾರ್ನ್ ಆ್ಯಪಲ್ ಫೆಸ್ಟ್ ಸೇಲ್ ಮೂಲಕ ₹20,900ವರೆಗೆ ಡಿಸ್ಕೌಂಟ್ ದೊರೆಯುತ್ತಿದೆ. ಅಲ್ಲದೆ, ಹೊಸ ವಾಚ್ ಖರೀದಿಸುವುದಾದರೆ, ಎಕ್ಸ್​ಚೇಂಜ್, ಕ್ಯಾಶ್​ಬ್ಯಾಕ್ ಮತ್ತು ಡಿಸ್ಕೌಂಟ್ ಕೊಡುಗೆಗಳ ಮೂಲಕ ₹25,000ಕ್ಕೆ ಲಭ್ಯವಾಗುತ್ತಿದೆ.

ಆ್ಯಪಲ್ ವಾಚ್ ಸಿರೀಸ್ 8 ಡಿಸ್ಕೌಂಟ್

ಜಿಪಿಎಸ್ ಮತ್ತು ಸೆಲ್ಯೂಲರ್ ಎಂಬ ಎರಡು ಮಾದರಿಗಳಲ್ಲಿ ಲಭ್ಯವಿರುವ ಆ್ಯಪಲ್ ವಾಚ್ ಸಿರೀಸ್ 8, ಮಿಡ್​ನೈಟ್, ಸಿಲ್ವರ್ ಮತ್ತು ಸ್ಟಾರ್​ಲೈಟ್ ಎಂಬ ಮೂರು ಬಣ್ಣಗಳಲ್ಲಿ ದೊರೆಯುತ್ತದೆ. ಅಲ್ಲದೆ, ಎಚ್​ಡಿಎಫ್​ಸಿ ಕಾರ್ಡ್ ಬಳಕೆಗೆ ₹3,000 ಡಿಸ್ಕೌಂಟ್ ಇದ್ದು ಇಎಂಐ ಆಯ್ಕೆಯನ್ನೂ ಕಂಪನಿ ಒದಗಿಸಿದೆ. ಅಲ್ಲದೆ, ಹಳೆಯ ಸ್ಮಾರ್ಟ್​ವಾಚ್ ₹13,392 ವರೆಗೆ ಎಕ್ಸ್​ಚೇಂಜ್ ಕೊಡುಗೆ ಲಭ್ಯವಿದ್ದು, ₹2000 ಕ್ಯಾಶಿಫೈ ಬೋನಸ್ ಕೂಡ ಲಭ್ಯವಾಗುತ್ತಿದೆ. ಯುನಿಕಾರ್ನ್ ಆ್ಯಪಲ್ ಫೆಸ್ಟ್ ಸೇಲ್​ನಲ್ಲಿ ವಾಚ್ ಸಿರೀಸ್ 8 ಮಾತ್ರವಲ್ಲದೆ, ಐಫೋನ್, ಐಪ್ಯಾಡ್ ಸಹಿತ ವಿವಿಧ ಆ್ಯಪಲ್ ಉತ್ಪನ್ನಗಳಿಗೆ ಡಿಸ್ಕೌಂಟ್ ದೊರೆಯುತ್ತಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ