Moto G73 5G: ಭಾರತೀಯ ಮಾರುಕಟ್ಟೆಗೆ ಇಂದು ಅಪ್ಪಳಿಸಲಿದೆ ಮೋಟೋ ಕಂಪನಿಯ ಹೊಸ ಸ್ಮಾರ್ಟ್​ಫೋನ್: ಯಾವುದು ನೋಡಿ

ಮೋಟೋ ಇದೀಗ ಹೊಸ ಸ್ಮಾರ್ಟ್​ಫೋನ್​ವೊಂದನ್ನು (Smartphone) ರಿಲೀಸ್ ಮಾಡಲು ಸಜ್ಜಾಗಿ ನಿಂತಿದೆ. ಅದುವೇ ಮೋಟೋ ಜಿ73 5ಜಿ (Moto G73 5G). ಇಂದು ಈ ಸ್ಮಾರ್ಟ್​ಫೋನ್ ಭಾರತಕ್ಕೆ ಅಪ್ಪಳಿಸಲಿದೆ.

Moto G73 5G: ಭಾರತೀಯ ಮಾರುಕಟ್ಟೆಗೆ ಇಂದು ಅಪ್ಪಳಿಸಲಿದೆ ಮೋಟೋ ಕಂಪನಿಯ ಹೊಸ ಸ್ಮಾರ್ಟ್​ಫೋನ್: ಯಾವುದು ನೋಡಿ
Moto G73 5G
Follow us
Vinay Bhat
|

Updated on: Mar 10, 2023 | 6:55 AM

ಟೆಕ್ ಮಾರುಕಟ್ಟೆಯಲ್ಲಿ ವಿಶಿಷ್ಟ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುವುದರಲ್ಲಿ ಮೋಟೋರೊಲಾ (Motorola) ಸಂಸ್ಥೆ ಎತ್ತಿದ ಕೈ. ಇಂದು ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಯಿಂದ ಹಿಡಿದು ಅತ್ಯಂತ ದುಬಾರಿ ಬೆಲೆಯ ವರೆಗೆ ಮೊಬೈಲ್​ಗಳನ್ನು ಬಿಡುಗಡೆ ಮಾಡುವ ಮೋಟೋ ಇದೀಗ ಹೊಸ ಸ್ಮಾರ್ಟ್​ಫೋನ್​ವೊಂದನ್ನು (Smartphone) ರಿಲೀಸ್ ಮಾಡಲು ಸಜ್ಜಾಗಿ ನಿಂತಿದೆ. ಅದುವೇ ಮೋಟೋ ಜಿ73 5ಜಿ (Moto G73 5G). ಇಂದು ಈ ಸ್ಮಾರ್ಟ್​ಫೋನ್ ಭಾರತಕ್ಕೆ ಅಪ್ಪಳಿಸಲಿದೆ. ಇದೊಂದು ಮಧ್ಯಮ ಬೆಲೆಗೆ ಫೋನಾಗಿದ್ದರೂ ಬಲಿಷ್ಠ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ, ಬ್ಯಾಟರಿಯಿಂದ ಆವೃತ್ತವಾಗಿದೆ. ಈ ಫೋನಿನ ಫೀಚರ್ಸ್ ಬಗ್ಗೆ ಕಂಪನಿ ಅಧಿಕೃತ ಮಾಹಿತಿ ತಿಳಿಸಿಲ್ಲ. ಆದರೆ, ಕೆಲ ವಿಶೇಷತೆ ಸೋರಿಕೆ ಆಗಿದೆ.

ಲೀಕ್ ಆಗಿರುವ ಮಾಹಿತಿಯ ಪ್ರಕಾರ, ಮೋಟೋ G73 5G ಸ್ಮಾರ್ಟ್‌ಫೋನ್‌ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ IPS LCD ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. ಬಲಿಷ್ಠವಾದ ಮೀಡಿಯಾ ಟೆಕ್ ಡೈಮೆನ್ಸಿಟಿ 930 SoC ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿರುವ ಸಾಧ್ಯತೆ ಇದ್ದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸುವುದು ಖಚಿತವಾಗಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿರಲಿದೆ.

Tech Tips: ಬ್ಯಾಂಕ್ ಅಕೌಂಟ್​ನಲ್ಲಿ ಎಷ್ಟು ಹಣವಿದೆ ಎಂದು ವಾಟ್ಸ್​ಆ್ಯಪ್​ನಲ್ಲಿ ನೋಡುವುದು ಹೇಗೆ?: ಇಲ್ಲಿದೆ ಟ್ರಿಕ್

ಇದನ್ನೂ ಓದಿ
Image
iPhone 14: ಐಫೋನ್ ಪ್ರಿಯರಿಗೆ ಸಂತಸದ ಸುದ್ದಿ: ಹೊಸ ಕಲರ್​ನಲ್ಲಿ ಬಂತು ಐಫೋನ್ 14, ಐಫೋನ್ 14 ಪ್ಲಸ್
Image
Samsung Galaxy M14 5G: ಸ್ಯಾಮ್​ಸಂಗ್​ನಿಂದ 6000mAh ಸಾಮರ್ಥ್ಯದ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ: ಯಾವುದು?, ಬೆಲೆ ಎಷ್ಟು?
Image
Instagram Down: ಭಾರತ ಸೇರಿದಂತೆ ವಿಶ್ವದ ಅನೇಕ ಭಾಗಗಳಲ್ಲಿ ಇನ್​ಸ್ಟಾಗ್ರಾಮ್ ಡೌನ್
Image
Apple Watch Series 8: ₹20,900 ಡಿಸ್ಕೌಂಟ್​ನಲ್ಲಿ ಲಭ್ಯವಾಗುತ್ತಿದೆ ಆ್ಯಪಲ್ ವಾಚ್ ಸಿರೀಸ್ 8

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಫೋನ್​ನಲ್ಲಿ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅಳವಡಿಸಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಲೆನ್ಸ್‌ ಅನ್ನು ಪಡೆದಿರಲಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ ಎಂದು ಹೇಳಲಾಗಿದೆ. ಕ್ಯಾಮೆರಾ ಪ್ರಿಯರಿಗೆ ಈ ಫೋನ್ ಇಷ್ಟವಾಗಲಿದೆ.

ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದಕ್ಕೆ ತಕ್ಕಂತೆ 30W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಸಪೋರ್ಟ್ ಮಾಡುತ್ತದೆ. ಇದರೊಂದಿಗೆ 3.5mm ಹೆಡ್‌ಫೋನ್ ಜ್ಯಾಕ್ ಮತ್ತು ಸ್ಟಿರಿಯೊ ಸ್ಪೀಕರ್ ಸೆಟಪ್ ಅನ್ನು ಹೊಂದಿರಲಿದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೇರಿದಂತೆ ಇತ್ತೀಚಿನ ಎಲ್ಲ ಆಯ್ಕೆ ಅಳವಡಿಸಲಾಗಿದೆಯಂತೆ. ಮೋಟೋ G73 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಇಂದು ಮಾರ್ಚ್ 10 ರಂದು ಫ್ಲಿಪ್​ಕಾರ್ಟ್​ನಲ್ಲಿ ಬಿಡುಗಡೆಯಾಗಲಿದೆ. ಇದರ ನಿಖರ ಬೆಲೆ ಬಹಿರಂಗಗೊಂಡಿಲ್ಲ. ಆದರೆ, ಮೂಲಗಳ ಪ್ರಕಾರ 20,000ರೂ. ಆಸುಪಾಸಿನಲ್ಲಿ ಇರಬಹುದು ಎಂಬ ಮಾತಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ