Sign In

By signing in or creating an account, you agree with Associated Broadcasting Company's Terms & Conditions and Privacy Policy.

Moto E13: ಈ ಸ್ಮಾರ್ಟ್​ಫೋನ್ ಬೆಲೆ ಕೇವಲ 6,999 ರೂ.: ಭಾರತದಲ್ಲಿ ಹೊಸ ಮೋಟೋ E13 ಫೋನ್ ಬಿಡುಗಡೆ

Best Budget Smartphones: ಮೋಟೋರೊಲಾ ಕಂಪನಿ ಮೋಟೋ ಇ13 (Moto E13) ಎಂಬ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಇದು ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್ ಆಗಿದ್ದರೂ ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿದೆ.

Moto E13: ಈ ಸ್ಮಾರ್ಟ್​ಫೋನ್ ಬೆಲೆ ಕೇವಲ 6,999 ರೂ.: ಭಾರತದಲ್ಲಿ ಹೊಸ ಮೋಟೋ E13 ಫೋನ್ ಬಿಡುಗಡೆ
MOTO E13
Follow us
Vinay Bhat
|

Updated on: Feb 09, 2023 | 2:02 PM

ಪ್ರಸಿದ್ಧ ಮೋಟೋರೊಲಾ (Motorola) ಕಂಪನಿ ಮಾರುಕಟ್ಟೆಯಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಮೊಬೈಲ್​ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಬಜೆಟ್ ಬೆಲೆಯಿಂದ ಹಿಡಿದು ಹೈ ರೇಂಜ್ ಮಾದರಿಯ ಫೋನ್​ಗಳನ್ನು ರಿಲೀಸ್ ಮಾಡುತ್ತಿರುವ ಮೋಟೋ ಇತ್ತೀಚೆಗಷ್ಟೆ ತನ್ನ E ಸರಣಿಯಲ್ಲಿ ಮೋಟೋ E32s ಎಂಬ ಸ್ಮಾರ್ಟ್‌ಫೋನ್‌ (Smartphone) ಅನ್ನು ಅನಾವರಣ ಮಾಡಿ ಸದ್ದು ಮಾಡಿತ್ತು. ಇದೀಗ ಇದೇ ಸರಣಿಯಡಿಯಲ್ಲಿ ಕಂಪನಿ ಮೋಟೋ ಇ13 (Moto E13) ಎಂಬ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಇದು ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್ ಆಗಿದ್ದರೂ ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿದೆ.

ಬೆಲೆ ಎಷ್ಟು?:

ಮೋಟೋ E13 ಸ್ಮಾರ್ಟ್‌ಫೋನ್​ ಭಾರತದಲ್ಲಿ ಒಟ್ಟು ಎರಡು ಸ್ಟೋರೇಜ್ ಆಯ್ಕೆಯನ್ನು ರಿಲೀಸ್ ಆಗಿದೆ. ಇದರ 2GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಬೆಲೆ ಕೇವಲ 6,999 ರೂ. ಆಗಿದೆ. ಅಂತೆಯೆ 4GB RAM ಮತ್ತು 64GB ಸ್ಟೋರೇಜ್ ಸಾಮರ್ಥ್ಯಕ್ಕೆ 7,999 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಫೆಬ್ರವರಿ 15 ರಿಂದ ಖರೀದಿಗೆ ಸಿಗಲಿದೆ.

ಇದನ್ನೂ ಓದಿ
Image
OnePlus 11 5G: 2023ರ ಮೊದಲ ಸ್ಮಾರ್ಟ್​ಫೋನ್ ಪರಿಚಯಿಸಿದ ಒನ್​ಪ್ಲಸ್: ಇದರ ಬೆಲೆ 61,999 ರೂ.: ಏನಿದೆ ಫೀಚರ್ಸ್?
Image
Tech Tips: ವಾಟ್ಸ್​ಆ್ಯಪ್ ಚಾಟ್ ಓಪನ್ ಮಾಡದೇ ಮೆಸೇಜ್ ಓದುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್
Image
Server Down: ಏಕಕಾಲದಲ್ಲಿ ಫೇಸ್​ಬುಕ್, ಯೂಟ್ಯೂಬ್, ಟ್ವಿಟ್ಟರ್, ಇನ್​ಸ್ಟಾಗ್ರಾಮ್ ಡೌನ್
Image
Moto E13: ಇಂದು ಮೋಟೋರೊಲಾದಿಂದ ಮೋಟೋ E13 ಬಿಡುಗಡೆ: ಇದರ ಬೆಲೆ 7,000 ರೂ. ಗಿಂತ ಕಡಿಮೆ

Poco X5 Pro: ಭಾರತಕ್ಕೆ ಬಂತು 108MP ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್: ಯಾವುದು?, ಬೆಲೆ ಎಷ್ಟು?

ಏನು ಫೀಚರ್ಸ್?:

ಈ ಸ್ಮಾರ್ಟ್‌ಫೋನ್‌ 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ HD+ IPS LCD ಡಿಸ್‌ಪ್ಲೇ ಹೊಂದಿದೆ. ಇದು 90Hz ರಿಫ್ರೆಶ್ ರೇಟ್​ನಿಂದ ಕೂಡಿದೆ. ಆಕ್ಟಾ-ಕೋರ್ T606 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 13 OS ಜೊತೆಗೆ ರನ್ ಆಗಲುತ್ತಿದ್ದು 1TB ವರೆಗೆ ಮೆಮೋರಿಯನ್ನು ಹೆಚ್ಚಿಸಬಹುದಾಗಿದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಮೋಟೋ E13 ಸ್ಮಾರ್ಟ್‌ಫೋನ್‌ ಸಿಂಗಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಹಾಗೂ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾಗಳ ಮೂಲಕ 30fps ಫುಲ್‌ HD ವಿಡಿಯೋವನ್ನು ರೆಕಾರ್ಡಿಂಗ್ ಮಾಡಬಹುದು. ಜೊತೆಗೆ ಪನೋರಮ, ಪೋಟ್ರೆಟ್, ನೈಟ್ ವರ್ಷನ್, ಡ್ಯುಯೆಲ್ ಕಾಪ್ಚರ್, ಲೈವ್ ಫಿಲ್ಟರ್ ಸೇರಿದಂತೆ ಅನೇಕ ಆಯ್ಕೆಗಳಿವೆ.

ಮೋಟೋ E13 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಬಲವನ್ನು ಪಡೆದಿದೆ. ಇದು 10W ಚಾರ್ಜಿಂಗ್ ವೇಗವನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 3.5mm ಹೆಡ್‌ಫೋನ್ ಜ್ಯಾಕ್‌, ವೈಫೈ, ಬ್ಲೂಟೂತ್ v5.0 ಬೆಂಬಲ ಪಡೆದುಕೊಂಡಿದೆ. ಇದು 5ಜಿ ಬೆಂಬಲ ಪಡೆದುಕೊಂಡಿಲ್ಲ ಬದಲಾಗಿ 4G VoLTE ಸಪೋರ್ಟ್ ಮಾಡುತ್ತದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್​ನೊಂದಿಗೆ ಲಗ್ಗೆಯಿಟ್ಟಿದೆ. ಸದ್ಯ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿರುವ ಉತ್ತಮ ಫೀಚರ್​ಗಳ ಕೆಲವೇ ಕೆಲವು ಸ್ಮಾರ್ಟ್​ಫೋನ್​ಗಳ ಸಾಲಿಗೆ ಇದು ಕೂಡ ಸೇರ್ಪಡೆಯಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಸೋಂಕಿತ ಸೂಜಿ ಚುಚ್ಚುವ ಪ್ರಯತ್ನ ಯಾರಿಂದ ನಡೆದಿತ್ತು ಅಂತ ರಂಗನಾಥ್ ಹೇಳಲ್ಲ
ಸೋಂಕಿತ ಸೂಜಿ ಚುಚ್ಚುವ ಪ್ರಯತ್ನ ಯಾರಿಂದ ನಡೆದಿತ್ತು ಅಂತ ರಂಗನಾಥ್ ಹೇಳಲ್ಲ
ಒಂದು ರಾತ್ರಿ ಮಲಗಲು 5000 ರೂ.: ಪತ್ನಿಯ ಕರಾಳ ಮುಖ ಬಿಚ್ಚಿಟ್ಟ ಪತಿ
ಒಂದು ರಾತ್ರಿ ಮಲಗಲು 5000 ರೂ.: ಪತ್ನಿಯ ಕರಾಳ ಮುಖ ಬಿಚ್ಚಿಟ್ಟ ಪತಿ
ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ಗೌಡರನ್ನು ನೂಕಿದ ಅಭಿಮಾನಿಗಳು
ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ಗೌಡರನ್ನು ನೂಕಿದ ಅಭಿಮಾನಿಗಳು
ಲೋಡ್‌ ಶೆಡ್ಡಿಂಗ್‌: ವಿದ್ಯುತ್​ ಇಲ್ಲದೇ ರೈತರು, ವಿದ್ಯಾರ್ಥಿಗಳು ಪರದಾಟ!
ಲೋಡ್‌ ಶೆಡ್ಡಿಂಗ್‌: ವಿದ್ಯುತ್​ ಇಲ್ಲದೇ ರೈತರು, ವಿದ್ಯಾರ್ಥಿಗಳು ಪರದಾಟ!
ಮೊದಲ ಬಾರಿ ಶಾಸಕನಾಗಿರುವ ಧೀರಜ್ ಬಹಳಷ್ಟು ಅರ್ಥಮಾಡಿಕೊಳ್ಳಬೇಕಿದೆ: ಕೆಎಂಎಸ್
ಮೊದಲ ಬಾರಿ ಶಾಸಕನಾಗಿರುವ ಧೀರಜ್ ಬಹಳಷ್ಟು ಅರ್ಥಮಾಡಿಕೊಳ್ಳಬೇಕಿದೆ: ಕೆಎಂಎಸ್
ಒತ್ತುವರಿ ತೆರವು ಕಾರ್ಯಾಚರಣೆಯಿಂದ ಕುಮಾರಸ್ವಾಮಿ ಭಯಗೊಂಡಿಲ್ಲ: ಮಂಜು
ಒತ್ತುವರಿ ತೆರವು ಕಾರ್ಯಾಚರಣೆಯಿಂದ ಕುಮಾರಸ್ವಾಮಿ ಭಯಗೊಂಡಿಲ್ಲ: ಮಂಜು
ಯಾದಗಿರಿ ಜಿಲ್ಲೆಯ ಜನ ಹನಿಹನಿ ನೀರಿಗಾಗಿ ಪರಿತಪಿಸುತ್ತಿದ್ದಾರೆ: ಶರಣಗೌಡ
ಯಾದಗಿರಿ ಜಿಲ್ಲೆಯ ಜನ ಹನಿಹನಿ ನೀರಿಗಾಗಿ ಪರಿತಪಿಸುತ್ತಿದ್ದಾರೆ: ಶರಣಗೌಡ
ಗ್ಯಾರಂಟಿ ಯೋಜನೆಗಳ ಬಗ್ಗೆ ತನ್ನದೇನೂ ತಕರಾರಿಲ್ಲವೆಂದ ಶರಣಗೌಡ ಕಂದ್ಕೂರ್
ಗ್ಯಾರಂಟಿ ಯೋಜನೆಗಳ ಬಗ್ಗೆ ತನ್ನದೇನೂ ತಕರಾರಿಲ್ಲವೆಂದ ಶರಣಗೌಡ ಕಂದ್ಕೂರ್
Video: ಕೇಂದ್ರ ಸಚಿವರ ಜತೆ ರೈತ ಮುಖಂಡರ ಮಾತುಕತೆ
Video: ಕೇಂದ್ರ ಸಚಿವರ ಜತೆ ರೈತ ಮುಖಂಡರ ಮಾತುಕತೆ
ಮಜಾ ಟಾಕೀಸ್​ಗೆ ಮಜಾ ಹೆಚ್ಚಿಸೋಕೆ ಬಂದ ಕ್ರಿಕೆಟ್ ಕಾಮೆಂಟೇಟರ್ಸ್
ಮಜಾ ಟಾಕೀಸ್​ಗೆ ಮಜಾ ಹೆಚ್ಚಿಸೋಕೆ ಬಂದ ಕ್ರಿಕೆಟ್ ಕಾಮೆಂಟೇಟರ್ಸ್