Tech Tips: ವಾಟ್ಸ್ಆ್ಯಪ್ ಚಾಟ್ ಓಪನ್ ಮಾಡದೇ ಮೆಸೇಜ್ ಓದುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್
WhatsApp Tricks: ವಾಟ್ಸ್ಆ್ಯಪ್ನಲ್ಲಿ ಆ್ಯಪ್ ತೆರೆಯದೆ ಚಾಟ್ ಅನ್ನು ಓದಬಹುದು. ಇದಕ್ಕೆ ಕೆಲವೊಂದು ಟ್ರಿಕ್ಗಳಿವೆ. ಇದಕ್ಕಾಗಿ ನೀವು ಯಾವುದೇ ಥರ್ಡ್ ಪಾರ್ಟಿ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಬೇಕಾಗಿಲ್ಲ.
ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ಅನ್ನು ಇಂದು ಉಪಯೋಗಿಸುವವರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ವಾರಕ್ಕೊಂದು ಹೊಸ ಹೊಸ ಫೀಚರ್ಗಳನ್ನು ಬಿಡುಗಡೆ ಮಾಡುತ್ತಿರುವ ವಾಟ್ಸ್ಆ್ಯಪ್ನಲ್ಲಿ ಇನ್ನೂ ಅನೇಕ ಆಯ್ಕೆಗಳು ಸದ್ಯದಲ್ಲೇ ಬರಲಿದೆ. ವಾಟ್ಸ್ಆ್ಯಪ್ ಹೊಸ ಅಪ್ಡೇಟ್ಗಳನ್ನು ಬಿಡುಗಡೆ ಮಾಡುತ್ತಿದ್ದಂತೆ ಅದಕ್ಕೆ ಸಂಬಂಧಿಸಿದಂತೆ ಇತರೆ ಥರ್ಡ್ ಪಾರ್ಟಿ ಆ್ಯಪ್ಗಳು (Third Party App) ಹುಟ್ಟಿಗೊಳ್ಳುತ್ತವೆ. ಈಗಾಗಲೇ ಡಿಲೀಟ್ ಆಗಿರುವ ಮೆಸೇಜ್ ಅನ್ನು ನೋಡುವಂತಹ ಆಯ್ಕೆ, ಡಿಪಿ ಯಾರು ನೋಡಿದ್ದಾರೆಂದು ತಿಳಿಯಲು ಆ್ಯಪ್ ಹೀಗೆ ಕೆಲ ಥರ್ಡ್ ಪಾರ್ಟಿ ಆ್ಯಪ್ ಮೂಲ ವಾಟ್ಸ್ಆ್ಯಪ್ನ ಕೆಲ ಟ್ರಿಕ್ ತಿಳಿದುಕೊಳ್ಳಬಹುದು. ಅದರಂತೆ ವಾಟ್ಸ್ಆ್ಯಪ್ನಲ್ಲಿ ಚಾಟ್ ಓಪನ್ ಮಾಡದೇ ಮೆಸೇಜ್ ಓದುವುದು ಹೇಗೆ ಎಂಬುದಕ್ಕೂ ಒಂದು ಟ್ರಿಕ್ (Tricks) ಇದೆ.
ವಾಟ್ಸ್ಆ್ಯಪ್ನಲ್ಲಿ ಆ್ಯಪ್ ತೆರೆಯದೆ ಚಾಟ್ ಅನ್ನು ಓದಬಹುದು. ಇದಕ್ಕೆ ಕೆಲವೊಂದು ಟ್ರಿಕ್ಗಳಿವೆ. ಇದಕ್ಕಾಗಿ ನೀವು ಯಾವುದೇ ಥರ್ಡ್ ಪಾರ್ಟಿ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಬೇಕಾಗಿಲ್ಲ. ಸಾಮಾನ್ಯವಾಗಿ ನೋಟಿಫಿಕೇಶನ್ ಪ್ಯಾನೆಲ್ನಲ್ಲಿ ಈ ಮೆಸೇಜ್ ಒದಬಹುದು. ಆದರೆ, ಇಲ್ಲಿ ತೀರಾ ಉದ್ದವಿದ್ದ ಮೆಸೇಜ್ ಓದಲು ಸಾಧ್ಯವಿಲ್ಲ. ಬದಲಾಗಿ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಕೆಲವೊಂದು ಸೆಟ್ಟಿಂಗ್ಗಳನ್ನು ಬದಲಾವಣೆ ಮಾಡಿಕೊಳ್ಳುವ ಮೂಲಕ ವಾಟ್ಸ್ಆ್ಯಪ್ ಚಾಟ್ ಅನ್ನು ತೆರೆಯದೆ ಓದಬಹುದು. ಅದು ಆಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಟ್ರಿಕ್.
Poco X5 Pro: ಭಾರತಕ್ಕೆ ಬಂತು 108MP ಕ್ಯಾಮೆರಾದ ಹೊಸ ಸ್ಮಾರ್ಟ್ಫೋನ್: ಯಾವುದು?, ಬೆಲೆ ಎಷ್ಟು?
- ಆಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ಮೈನ್ ಸ್ಕ್ರೀನ್ನಲ್ಲಿರುವ ಹೋಮ್ ಪೇಜ್ ಅನ್ನು ಲಾಂಗ್ ಪ್ರೆಸ್ ಮಾಡಿ
- ಈಗ ಅಲ್ಲಿ ಕಾಣಿಸುವ Widgets ಆಯ್ಕೆ ಮೇಲೆ ಒತ್ತಿರಿ
- ನಂತರ ಮೈನ್ ಸ್ಕ್ರೀನ್ನಲ್ಲಿ ಎಲ್ಲ Widgets ಕಾಣಿಸುತ್ತದೆ. ಇದರಲ್ಲಿ ವಾಟ್ಸ್ಆ್ಯಪ್ ಆಯ್ಕೆ ಮಾಡಿ
- ವಾಟ್ಸ್ಆ್ಯಪ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಮೈನ್ ಸ್ಕ್ರೀನ್ನಲ್ಲಿ ಕಾಣಿಸುತ್ತದೆ
- ನಂತರ ಡನ್ ಆಯ್ಕೆಯನ್ನು ಒತ್ತಿರಿ. ಈ ಸಂದರ್ಭ ಬೇಕಾದಲ್ಲಿ ಫುಲ್ ಸ್ಕ್ರೀನ್ ವರೆಗೂ ಸೆಲೆಕ್ಟ್ ಮಾಡಬಹುದು.
- ಈ ಸೆಟ್ಟಿಂಗ್ ನಂತರ ಸ್ಕ್ರಾಲ್ ಮಾಡುವ ಮೂಲಕ ವಾಟ್ಸ್ಆ್ಯಪ್ ತೆರೆಯದೆ ಮೆಸೇಜ್ ಓದಬಹುದು
- ಯಾವುದೇ ಕಾರಣಕ್ಕೂ ಮೆಸೇಜ್ ಮೇಲೆ ಕ್ಲಿಕ್ ಮಾಡಬೇಡಿ, ಮಾಡಿದರೆ ವಾಟ್ಸ್ಆ್ಯಪ್ ಓಪನ್ ಆಗಿ ನೇರವಾಗಿ ಚಾಟ್ಗೆ ಪ್ರವೇಶಿಸುತ್ತದೆ.
ಒರಿಜಿನಲ್ ಕ್ವಾಲಿಟಿಯಲ್ಲಿ ಫೋಟೋ ಕಳುಹಿಸಿ:
ವಾಟ್ಸ್ಆ್ಯಪ್ ಸದ್ಯದಲ್ಲೇ ತನ್ನ ಬಳಕೆದಾರರಿಗೆ ನೂತನ ಫೀಚರ್ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ವಾಟ್ಸ್ಆ್ಯಪ್ನಲ್ಲಿ ಈಗ ಒಂದು ಫೋಟೋ ಕಳುಹಿಸಿದರೆ ಅದು ರಿಸೀವ್ ಮಾಡಿಕೊಂಡ ಬಳಕೆದಾರನಿಗೆ ಒರಿಜಿನಲ್ ಕ್ವಾಲಿಟಿಯಲ್ಲಿ ಸಿಗುವುದಿಲ್ಲ. ತನ್ನ ನೈಜ್ಯ ಗುಣಮಟ್ಟವನ್ನು ಕಳೆದುಕೊಳ್ಳುತ್ತದೆ. ಇದಕ್ಕಾಗಿ ವಾಟ್ಸ್ಆ್ಯಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೂಲ ಗುಣಮಟ್ಟದ ಫೋಟೋಗಳನ್ನು ಸೆಂಡ್ ಮಾಡಲು ಅನುಮತಿಸುವ ಹೊಸ ಫೀಚರ್ಸ್ ಪರಿಚಯಿಸುವುದಕ್ಕೆ ತಯಾರಿ ನಡೆಸಿದೆ.
ವಾಟ್ಸ್ಆ್ಯಪ್ಪರಿಚಯಿಸಲಿರುವ ಹೊಸ ಫೀಚರ್ಸ್ ನಿಮಗೆ ಫೋಟೋ ಗುಣಮಟ್ಟವನ್ನು ಆಯ್ಕೆ ಮಾಡಲು ಅನುಮತಿಸಲಿದೆ. ಅಂದರೆ ನೀವು ಸೆಂಡ್ ಮಾಡುವ ಫೋಟೋ ಗುಣಮಟ್ಟ ಹೇಗಿರಬೇಕು ಎಂಬುದನ್ನು ನೀವೇ ನಿರ್ಧಾರ ಮಾಡಬಹುದು. ಇದರಿಂದ ನಿಮ್ಮ ಫೋಟೋದ ಒರಿಜಿನಲ್ ಕ್ವಾಲಿಟಿಯಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ ಸೆಂಡ್ ಮಾಡುತ್ತದೆ. ಸದ್ಯ ಆಂಡ್ರಾಯ್ಡ್ ಬೇಟಾ ವರ್ಷನ್ನಲ್ಲಿ ಈ ಆಯ್ಕೆ ಕಾಣಿಸಿದ್ದು ಆದಷ್ಟು ಬೇಗ ಎಲ್ಲ ಬಳಕೆದಾರರಿಗೆ ಸಿಗಲಿದೆಯಂತೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:47 am, Thu, 9 February 23