Poco X5 Pro: ಭಾರತಕ್ಕೆ ಬಂತು 108MP ಕ್ಯಾಮೆರಾದ ಹೊಸ ಸ್ಮಾರ್ಟ್‌ಫೋನ್: ಯಾವುದು?, ಬೆಲೆ ಎಷ್ಟು?
ಪೋಕೋ ಸಂಸ್ಥೆಯು ತನ್ನ ಬಹುನಿರೀಕ್ಷಿತ ಪೋಕೋ X5 ಪ್ರೊ (Poco X5 Pro) ಅನ್ನು ರಿಲೀಸ್ ಮಾಡಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಮೊಬೈಲ್ ಕ್ಯಾಮೆರಾದಿಂದಲೇ ಟೆಕ್ ಪ್ರಿಯರನ್ನು ದಂಗಾಗಿಸಿದೆ. ಹಾಗಾದರೆ ಈ ಫೋನಿನ ವಿಶೇಷತೆ ಏನು?, ಬೆಲೆ ಎಷ್ಟು? ಎಂಬುದನ್ನು ನೋಡೋಣ.
ಭಾರತದಲ್ಲಿ ಪೋಕೋ (Poco) ಸಂಸ್ಥೆಯ ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗುತ್ತಿರುವುದು ತೀರಾ ಕಡಿಮೆ ಆಗುತ್ತಿದೆ. ಇಂದು ಮಾರುಕಟ್ಟೆಯಲ್ಲಿ ಅನೇಕ ಮೊಬೈಲ್ ಬ್ರ್ಯಾಂಡ್ಗಳು ಹುಟ್ಟುಕೊಂಡಿರುವ ಕಾರಣ ಸಾಮಾನ್ಯ ಫೀಚರ್ಗಳಿರುವ ಫೋನ್ಗಳಿಗೆ ಬೇಡಿಕೆ ಇಲ್ಲ. ಇದೇ ಕಾರಣ ಪೋಕೋ ಸಂಸ್ಥೆ ಕೆಲ ತಿಂಗಳುಗಳ ಕಾಲ ಕಾದು ಇದೀಗ ಆಕರ್ಷಕವಾದ ಹೊಸ ಸ್ಮಾರ್ಟ್ಫೋನೊಂದನ್ನು (Smartphone) ದೇಶದಲ್ಲಿ ಅನಾವರಣ ಮಾಡಿದೆ. ಪೋಕೋ ಸಂಸ್ಥೆಯು ತನ್ನ ಬಹುನಿರೀಕ್ಷಿತ ಪೋಕೋ X5 ಪ್ರೊ (Poco X5 Pro) ಅನ್ನು ರಿಲೀಸ್ ಮಾಡಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಮೊಬೈಲ್ ಕ್ಯಾಮೆರಾದಿಂದಲೇ ಟೆಕ್ ಪ್ರಿಯರನ್ನು ದಂಗಾಗಿಸಿದೆ. ಹಾಗಾದರೆ ಈ ಫೋನಿನ ವಿಶೇಷತೆ ಏನು?, ಬೆಲೆ ಎಷ್ಟು? ಎಂಬುದನ್ನು ನೋಡೋಣ.
ಬೆಲೆ ಎಷ್ಟು?:
ಪೋಕೋ X5 ಪ್ರೊ ಫೋನ್ ದೇಶದಲ್ಲಿ ಒಟ್ಟು ಎರಡು ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 6GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯಕ್ಕೆ 22,999 ರೂ. ಇದೆ. ಅಂತೆಯೆ 8GB RAM + 256GB ಆಯ್ಕೆಗೆ 24,999 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ ಮೂಲಕ ಫೆಬ್ರವರಿ 13 ರಿಂದ ಖರೀದಿಗೆ ಸಿಗಲಿದೆ. ಮೊದಲ ಸೇಲ್ ಪ್ರಯುಕ್ತ ಐಸಿಐಸಿಐ ಕಾರ್ಡ್ ಮೂಲಕ ಪಡೆದುಕೊಂಡರೆ 2,000 ರೂ. ಗಳ ಡಿಸ್ಕೌಂಟ್ ಆಫರ್ ಕೂಡ ಘೋಷಿಸಲಾಗಿದೆ.
ಏರ್ಟೆಲ್ನ ನಾಲ್ಕು ಅಗ್ಗದ ರೀಚಾರ್ಜ್ ಪ್ಲಾನ್‌ಗಳು ಇಲ್ಲಿವೆ, ಉಚಿತ OTT ಚಂದಾದಾರಿಕೆಯೂ ಲಭ್ಯ
ಏನು ಫೀಚರ್ಸ್:
ಪೋಕೋ X5 ಪ್ರೊ ಸ್ಮಾರ್ಟ್‌ಫೋನ್ 1080*2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67 ಇಂಚಿನ ಫುಲ್‌ಹೆಚ್‌ಡಿ ಪ್ಲಸ್ ಅಮೊಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. 120Hz ಅಡಾಪ್ಟಿವ್ ರಿಫ್ರೆಶ್ ರೇಟ್, HDR10+ ಬೆಂಬಲ ಪಡೆದುಕೊಂಡಿದೆ. ಇದರಲ್ಲಿರುವ ಡಾಲ್ಬಿ ವರ್ಷನ್ 10 ಬಿಟ್ ಸಪೋರ್ಟ್ ಪಡೆದುಕೊಂಡಿದೆ. ಕಾರ್ನಿಂಗ್ ಗೋರಿಲ್ಲ ಗ್ಲಾಸ್ 5 ಪ್ರೊಟೆಕ್ಷನ್ ಕೂಡ ನೀಡಲಾಗಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದು ಆಂಡ್ರಾಯ್ಡ್ 13ನಲ್ಲಿ ರನ್ ಆಗುತ್ತದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರ ಮುಖ್ಯ ಕ್ಯಾಮೆರಾ ಬರೋಬ್ಬರಿ 108 ಮೆಗಾಫಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಕೆಲವೇ ಸ್ಮಾರ್ಟ್ಫೋನ್ಗಳ ಸಾಲಿಗೆ ಇದುಕೂಡ ಸೇರ್ಪಡೆ ಆಗಿದೆ. ಹಾಗೆಯೆ ಎರಡನೇ ಕ್ಯಾಮೆರಾ 8MP ಅಲ್ಟ್ರಾ-ವೈಡ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2MP ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿರಲಿದೆ. ಇದಲ್ಲದೆ ಮುಂಭಾಗ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.
ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಇದಕ್ಕೆ ತಕ್ಕಂತೆ 67W ವೇಗದ ಚಾರ್ಜಿಂಗ್ ಬೆಂಬಲ ಕೂಡ ಪಡೆದುಕೊಂಡಿದೆ. ಇದರ ಜೊತೆಗೆ 5W ರಿವರ್ಸ್ ಚಾರ್ಜಿಂಗ್ ಸಪೋರ್ಟ್ ಕೂಡ ಇದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿದ್ದು, ಹಾಟ್‌ಸ್ಪಾಟ್, ವೈಫೈ, ಬ್ಲೂಟೂತ್, ಹೆಡ್‌ಫೋನ್ ಜ್ಯಾಕ್ ಇರಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:12 am, Tue, 7 February 23