Poco X5 Pro: ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಲು ತಯಾರಾದ 108MP ಕ್ಯಾಮೆರಾದ ಪೋಕೋ ಸ್ಮಾರ್ಟ್​ಫೋನ್

108MP Camera Phone: ಪೋಕೋ X5 ಪ್ರೊ ಸ್ಮಾರ್ಟ್‌ಫೋನ್‌ ಮುಖ್ಯ ಕ್ಯಾಮೆರಾ ಬರೋಬ್ಬರಿ 108 ಮೆಗಾಫಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಕೆಲವೇ ಸ್ಮಾರ್ಟ್​ಫೋನ್​ಗಳ ಸಾಲಿಗೆ ಇದುಕೂಡ ಸೇರ್ಪಡೆ ಆಗಲಿದೆ.

Poco X5 Pro: ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಲು ತಯಾರಾದ 108MP ಕ್ಯಾಮೆರಾದ ಪೋಕೋ ಸ್ಮಾರ್ಟ್​ಫೋನ್
Poco X5 Pro
Follow us
Vinay Bhat
|

Updated on: Jan 31, 2023 | 1:41 PM

ಭಾರತದಲ್ಲಿ ಪೋಕೋ (Poco) ಸಂಸ್ಥೆಯ ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆಗುತ್ತಿರುವುದು ಕಡಿಮೆ ಆಗುತ್ತಿದೆ. ಇಂದು ಮಾರುಕಟ್ಟೆಯಲ್ಲಿ ಅನೇಕ ಮೊಬೈಲ್ ಬ್ರ್ಯಾಂಡ್​ಗಳು ಹುಟ್ಟುಕೊಂಡಿರುವ ಕಾರಣ ಸಾಮಾನ್ಯ ಫೀಚರ್​ಗಳಿರುವ ಫೋನ್​ಗಳಿಗೆ ಬೇಡಿಕೆ ಇಲ್ಲ. ಇದೇ ಕಾರಣ ಪೋಕೋ ಸಂಸ್ಥೆ ಕೆಲ ತಿಂಗಳುಗಳ ಕಾಲ ಕಾದು ಇದೀಗ ಆಕರ್ಷಕವಾದ ಹೊಸ ಸ್ಮಾರ್ಟ್​​ಫೋನೊಂದನ್ನು (Smartphone) ಅನಾವರಣ ಮಾಡಲು ಸಜ್ಜಾಗಿ ನಿಂತಿದೆ. ಪೋಕೋ ಸಂಸ್ಥೆಯು ತನ್ನ ಬಹುನಿರೀಕ್ಷಿತ ಪೋಕೋ X5 ಪ್ರೊ (Poco X5 Pro) ಅನ್ನು ಅಧಿಕೃತವಾಗಿ ಲಾಂಚ್ ಮಾಡಲು ಮುಹೂರ್ತ ನಿಗದಿ ಮಾಡಿಕೊಂಡಿದೆ. ಇದೇ ಫೆಬ್ರವರಿ 6 ರಂದು ಈ ಫೋನ್ ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಲಿದೆ. ಪೋಕೋ ಸಂಸ್ಥೆ ಈ ಫೋನಿನ ಫೀಚರ್ಸ್ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಹಾಕಿಲ್ಲ. ಆದರೆ, ಮೂಲಗಳ ಪ್ರಕಾರ ಕೆಲ ವಿಚಾರಗಳು ಸೋರಿಕೆಯಾಗಿದೆ.

ಲೀಕ್ ಆಗಿರುವ ಮಾಹಿತಿಯ ಪ್ರಕಾರ, ಪೋಕೋ X5 ಪ್ರೊ ಸ್ಮಾರ್ಟ್‌ಫೋನ್‌ 1080*2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67 ಇಂಚಿನ ಫುಲ್‌ಹೆಚ್‌ಡಿ ಪ್ಲಸ್‌ OLED ಡಿಸ್‌ಪ್ಲೇಯನ್ನು ಹೊಂದಿರಲಿದೆಯಂತೆ. 120Hz ಅಡಾಪ್ಟಿವ್ ರಿಫ್ರೆಶ್ ರೇಟ್‌, HDR10+ ಬೆಂಬಲ ಪಡೆದುಕೊಂಡಿರುವ ಸಾಧ್ಯತೆ ಇದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದ್ದು, ಇದು ಆಂಡ್ರಾಯ್ಡ್‌ 13ನಲ್ಲಿ ರನ್‌ ಆಗಲಿದೆ ಎಂದು ಹೇಳಲಾಗಿದೆ.

Best Smartphone: 20,000 ರೂ. ಒಳಗೆ ಸಿಗುತ್ತಿರುವ 108MP ಕ್ಯಾಮೆರಾದ ಬೆಸ್ಟ್ ಸ್ಮಾರ್ಟ್​​ಫೋನ್ಸ್

ಇದನ್ನೂ ಓದಿ
Image
Infinix Note 12i: ಕೇವಲ 9,999 ರೂ.: ಆಕರ್ಷಕ ಫೀಚರ್​ಗಳ ಇನ್ಫಿನಿಕ್ಸ್‌ ನೋಟ್‌ 12i ಫೋನ್ ಈಗ ಖರೀದಿಗೆ ಲಭ್ಯ
Image
Budget 2023: ಆ್ಯಪ್​ನಲ್ಲೂ ಸಿಗಲಿದೆ ಬಜೆಟ್ ಪ್ರತಿ; ಯೂನಿಯನ್ ಬಜೆಟ್ ಆ್ಯಪ್ ಹೀಗೆ ಬಳಸಬಹುದು
Image
Cyber Crime: ಮತ್ತೊಂದು ಸೈಬರ್ ಕ್ರೈಮ್ ಪ್ರಕರಣ ದಾಖಲು: ಓಟಿಪಿ ಹಾಕಿ 1 ಲಕ್ಷ ರೂ. ಕಳೆದುಕೊಂಡ ಮಹಿಳೆ
Image
WhatsApp: ಗ್ರೂಪ್​ಗಳಲ್ಲಿ ಸದ್ದಿಲ್ಲದೆ ವಾಟ್ಸ್​ಆ್ಯಪ್ ಪರಿಚಯಿಸಿದೆ ವಿಶೇಷ ಫೀಚರ್: ತಕ್ಷಣವೇ ಅಪ್ಡೇಟ್ ಮಾಡಿ

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿರಲಿದೆ. ಇದರ ಮುಖ್ಯ ಕ್ಯಾಮೆರಾ ಬರೋಬ್ಬರಿ 108 ಮೆಗಾಫಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಕೆಲವೇ ಸ್ಮಾರ್ಟ್​ಫೋನ್​ಗಳ ಸಾಲಿಗೆ ಇದುಕೂಡ ಸೇರ್ಪಡೆ ಆಗಲಿದೆ. ಹಾಗೆಯೆ ಎರಡನೇ ಕ್ಯಾಮೆರಾ 8MP ಅಲ್ಟ್ರಾ-ವೈಡ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2MP ಮ್ಯಾಕ್ರೋ ಲೆನ್ಸ್‌ ಅನ್ನು ಒಳಗೊಂಡಿರಲಿದೆ. ಇದಲ್ಲದೆ ಮುಂಭಾಗ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ದೀರ್ಘ ಸಮಯ ಬಾಳಿಕೆ ಬರುವ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಇದಕ್ಕೆ ತಕ್ಕಂತೆ 67W ವೇಗದ ಚಾರ್ಜಿಂಗ್ ಬೆಂಬಲ ಕೂಡ ಪಡೆದಿರಲಿದೆ ಎನ್ನಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿದೆಯೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌, ಹೆಡ್‌ಫೋನ್‌ ಜ್ಯಾಕ್‌ ಇರಲಿದೆ. ಈ ಸ್ಮಾರ್ಟ್‌ಫೋನ್‌ ಬೆಲೆ ಎಷ್ಟಿರಲಿದೆ ಎಂಬುದು ಇನ್ನು ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ 20,000 ರೂ. ಇರಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ