WhatsApp: ಗ್ರೂಪ್ಗಳಲ್ಲಿ ಸದ್ದಿಲ್ಲದೆ ವಾಟ್ಸ್ಆ್ಯಪ್ ಪರಿಚಯಿಸಿದೆ ವಿಶೇಷ ಫೀಚರ್: ತಕ್ಷಣವೇ ಅಪ್ಡೇಟ್ ಮಾಡಿ
WhatsApp New Features: ವಾಟ್ಸ್ಆ್ಯಪ್ ಐಒಎಸ್ ಬಳಕೆದಾರರಿಗೆ ಸದ್ದಿಲ್ಲದೆ ವಿಶೇಷ ಆಯ್ಕೆಯೊಂದು ನೀಡಿದೆ. ಇದಕ್ಕೆ ಇನ್ ಆ್ಯಪ್ ಬ್ಯಾನರ್ ಎಂದು ಹೆಸರಿಸಲಾಗಿದ್ದು, ಇದರ ಮೂಲಕ ಅನೌನ್ಸ್‌ಮೆಂಟ್ ಗ್ರೂಪ್‌ನಲ್ಲಿರುವ ಸಂದೇಶಗಳಿಗೆ ಎಮೋಜಿ ರಿಯಾಕ್ಷನ್ ಮಾಡಲು ಸಾಧ್ಯವಾಗುತ್ತಿದೆ.
ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಕಳೆದ ವರ್ಷದಂತೆ ಈ ವರ್ಷ ಕೂಡ ಅನೇಕ ನೂತನ ಆಯ್ಕೆಗಳನ್ನು ಪರಿಚಯಿಸಲು ಶುರು ಮಾಡಿಕೊಂಡಿದೆ. ದಿನದಿಂದ ದಿನಕ್ಕೆ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುತ್ತಿರುವ ವಾಟ್ಸ್ಆ್ಯಪ್ (WhatsApp) ಅನ್ನು ಇಂದು ಕೇವಲ ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. 2023 ವರ್ಷದ ಮೊದಲ ತಿಂಗಳಲ್ಲೇ ಕೆಲ ಅಪ್ಡೇಟ್ಗಳನ್ನು ನೀಡಿರುವ ವಾಟ್ಸ್ಆ್ಯಪ್ನಲ್ಲಿ ಮುಂದಿನ ತಿಂಗಳು ಕೂಡ 4 ರಿಂದ 5 ಹೊಸ ಫೀಚರ್ಗಳು ಬರಲಿಕ್ಕಿವೆ. ಇದರ ನಡುವೆ ತಿಂಗಳ ಅಂತ್ಯದಲ್ಲಿ ಐಒಎಸ್ (iOS) ಬಳಕೆದಾರರಿಗೆ ಸದ್ದಿಲ್ಲದೆ ವಿಶೇಷ ಆಯ್ಕೆಯೊಂದು ನೀಡಿದೆ. ಈ ಹೊಸ ಅಪ್ಡೇಟ್ಗೆ ಇನ್ ಆ್ಯಪ್ ಬ್ಯಾನರ್ ಎಂದು ಹೆಸರಿಸಲಾಗಿದ್ದು ಇದರ ಮೂಲಕ ಅನೌನ್ಸ್‌ಮೆಂಟ್ ಗ್ರೂಪ್‌ನಲ್ಲಿರುವ ಸಂದೇಶಗಳಿಗೆ ಎಮೋಜಿ ರಿಯಾಕ್ಷನ್ ಮಾಡಲು ಸಾಧ್ಯವಾಗುತ್ತಿದೆ.
ಈಗಾಗಲೇ ಅನೌನ್ಸ್‌ಮೆಂಟ್ ಗ್ರೂಪ್‌ನಲ್ಲಿ ಬಂದ ಮೆಸೇಜ್ಗಳಿಗೆ ಎಮೋಜಿ ಮೂಲಕ ರಿಯಾಕ್ಷನ್ ಮಾಡುವ ಆಯ್ಕೆ ಐಒಎಸ್ ಬಳಕೆದಾರರಿಗೆ ಲಭ್ಯವಾಗುತ್ತಿದೆ. ಸದ್ಯದಲ್ಲೇ ಇದು ಆಂಡ್ರಾಯ್ಡ್ ಬಳಕೆದಾರರಿಗೂ ಸಿಗಲಿದೆಯಂತೆ. ಇದರ ಜೊತೆಗೆ ಐಒಎಸ್ ಆವೃತ್ತಿಯಲ್ಲಿ ಗ್ರೂಪ್ ಅಡ್ಮಿನ್‌ಗಳಿಗೆ ಕೆಲವು ಹೊಸ ಶಾರ್ಟ್‌ಕಟ್‌ಗಳನ್ನು ಹೊರತಂದಿದೆ ಎಂದು ವರದಿಯಾಗಿದೆ. ಇದರಿಂದ ಗ್ರೂಪ್ ಅಡ್ಮಿನ್‌ಗಳು ಮತ್ತು ಗ್ರೂಪ್‌ನಲ್ಲಿ ಭಾಗವಹಿಸುವವರ ಜೊತೆ ಖಾಸಗಿಯಾಗಿ ಸಂವಹನ ನಡೆಸಲು ಸಾಧ್ಯವಾಗಲಿದೆ. ಸರ್ಚ್ ಬೈ ಡೇಟ್ ಎಂಬ ಫೀಚರ್ಸ್ ಕೂಡ ಬರುತ್ತಿದ್ದು ಇದರ ಮೂಲಕ ಬಳಕೆದಾರರು ಹಳೆಯ ಚಾಟ್ ಅನ್ನು ದಿನಾಂಕದ ಮೂಲಕ ಸರ್ಚ್ ಮಾಡಬಹುದು.
Galaxy S23 Series: ಬಹುನಿರೀಕ್ಷಿತ ಗ್ಯಾಲಕ್ಸಿ S23 ಸರಣಿ ಮುಂದಿನ ತಿಂಗಳು ಬಿಡುಗಡೆ: ಬೆಲೆ ಎಷ್ಟು?, ಏನು ಫೀಚರ್ಸ್?
ಟೆಕ್ಸ್ಟ್ ಎಡಿಟರ್ ಫೀಚರ್ಸ್:
ಡ್ರಾಯಿಂಗ್ ಎಡಿಟರ್ ಮೂಲಕ ಹೊಸ ಸೌಲಭ್ಯಗಳನ್ನು ಕಲ್ಪಿಸಲು ವಾಟ್ಸ್ಆ್ಯಪ್ ಮುಂದಾಗಿದೆ. ಈ ಡ್ರಾಯಿಂಗ್ ಎಡಿಟರ್ ಅಡಿಯಲ್ಲಿ ಮೂರು ಹೊಸ ಫೀಚರ್ಗಳನ್ನು ಕಂಪನಿ ಪರಿಚಯಿಸುತ್ತಿದೆ. ಮೊದಲನೆಯದಾಗಿ ವಾಟ್ಸ್ಆ್ಯಪ್ನಲ್ಲಿ ಪಠ್ಯದ ಶೈಲಿ ಸಂಪೂರ್ಣ ಬದಲಾವಣೆ ಆಗಲಿದೆ. ಇದು ಟೆಕ್ಸ್ಟ್ ಎಡಿಟರ್ ಫೀಚರ್ಸ್ ಆಗಿದ್ದು ಕೀಬೋರ್ಡ್ ಮೇಲೆ ಪ್ರದರ್ಶಿಸಲಾದ ಫಾಂಟ್ ಆಯ್ಕೆಗಳಲ್ಲಿ ಒಂದನ್ನು ಟ್ಯಾಪ್ ಮಾಡುವ ಮೂಲಕ ವಿವಿಧ ಫಾಂಟ್‌ಗಳನ್ನು ತ್ವರಿತವಾಗಿ ಬದಲಾಯಿಸುವ ಆಯ್ಕೆಯನ್ನು ಬಳಕೆದಾರರಿಗೆ ನೀಡಲಾಗುತ್ತದೆ. ಎರಡನೆಯದಾಗಿ ಪಠ್ಯ ಜೋಡಣೆ ಎಂಬ ಆಯ್ಕೆ ನೀಡುತ್ತಿದ್ದು ಇದರ ಸಹಾಯದಿಂದ ಬಳಕೆದಾರರು ಪಠ್ಯವನ್ನು ಎಡ, ಮಧ್ಯ ಅಥವಾ ಬಲಕ್ಕೆ ಸುಲಭವಾಗಿ ಇರಿಸಲು ಸಾಧ್ಯವಾಗುತ್ತದೆ.
ಕೊನೆಯದಾಗಿ ಪಠ್ಯದ ಹಿನ್ನೆಲೆ ಬಣ್ಣ ಬದಲಾವಣೆ ಮಾಡುವ ಆಯ್ಕೆ. ಇದು ಬಳಕೆದಾರರಿಗೆ ಸುಲಭವಾಗಿ ಪಠ್ಯದ ಹಿನ್ನೆಲೆ ಬಣ್ಣವನ್ನು ಬದಲಾಯಿಸುವಲ್ಲಿ ಸಹಕಾರ ನೀಡುವುದರ ಜೊತೆಗೆ ಪಠ್ಯವನ್ನು ಪ್ರತ್ಯೇಕಿಸಲು ಸುಲಭವಾಗಿ ಸಹಾಯ ಮಾಡಲಿದೆ. ಈಗಾಗಲೇ ಈ ಎಲ್ಲ ಆಯ್ಕೆ ಬೀಟಾ ಬಳಕೆದಾರರಿಗೆ ಲಭ್ಯವಿದೆ. ಸದ್ಯದಲ್ಲೇ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ