Tech Tips: ವಾಟ್ಸ್​ಆ್ಯಪ್​ನಲ್ಲಿರುವ ಸೆಲ್ಫ್ ಮೆಸೇಜ್ ಫೀಚರ್ ಉಪಯೋಗಿಸಿದ್ದೀರಾ?: ಇಲ್ಲಿದೆ ಟ್ರಿಕ್

WhatsApp Tricks: ವಾಟ್ಸ್​ಆ್ಯಪ್ ಇತ್ತೀಚೆಗಷ್ಟೆ ದಿಢೀರ್ ಆಗಿ ತನ್ನ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ಹೊಸ ಸೆಲ್ಫ್ ಮೆಸೇಜ್ ಆಯ್ಕೆಯೊಂದನ್ನು ಪರಿಚಯಿಸಿತು. ಅಂದರೆ ನಿಮ್ಮ ನಂಬರ್​ಗೆ ನೀವೇ ಮೆಸೇಜ್ ಮಾಡಬಹುದಾದ ಆಯ್ಕೆ.

Tech Tips: ವಾಟ್ಸ್​ಆ್ಯಪ್​ನಲ್ಲಿರುವ ಸೆಲ್ಫ್ ಮೆಸೇಜ್ ಫೀಚರ್ ಉಪಯೋಗಿಸಿದ್ದೀರಾ?: ಇಲ್ಲಿದೆ ಟ್ರಿಕ್
WhatsApp Tricks
Follow us
Vinay Bhat
|

Updated on:Jan 28, 2023 | 5:57 PM

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ 2022 ರಲ್ಲಿ ಸಾಕಷ್ಟು ಬೆಳವಣಿಗೆ ಕಂಡು ಅತಿ ಹೆಚ್ಚು ಫೀಚರ್​ಗಳನ್ನು ಪರಿಚಯಿಸಿತ್ತು. ಇದಕ್ಕಾಗಿಯೇ ಇಂದು ವಿಶ್ವದಲ್ಲಿ ವಾಟ್ಸ್​ಆ್ಯಪ್ ಬಳಸುವವರ ಸಂಖ್ಯೆ 2 ಬಿಲಿಯನ್​ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ವಾರಕ್ಕೆ ಒಂದು ಹೊಸ ಫೀಚರ್​ಗಳ ಬಗ್ಗೆ ಘೋಷಣೆ ಮಾಡುವ ವಾಟ್ಸ್​ಆ್ಯಪ್ (WhatsApp)​ 2023 ರಲ್ಲಿ ಕೂಡ ಅನೇಕ ವಿನೂತನ ಆಯ್ಕೆಗಳನ್ನು ಪರಿಚಯಿಸಲು ತಯಾರಿ ಮಾಡಿಕೊಂಡಿದೆ. ಇದರ ನಡುವೆ ವಾಟ್ಸ್​ಆ್ಯಪ್ ಇತ್ತೀಚೆಗಷ್ಟೆ ದಿಢೀರ್ ಆಗಿ ತನ್ನ ಆಂಡ್ರಾಯ್ಡ್ (Android) ಮತ್ತು ಐಓಎಸ್ ಬಳಕೆದಾರರಿಗೆ ಹೊಸ ಸೆಲ್ಫ್ ಮೆಸೇಜ್ ಆಯ್ಕೆಯೊಂದನ್ನು ಪರಿಚಯಿಸಿತು. ಅಂದರೆ ನಿಮ್ಮ ನಂಬರ್​ಗೆ ನೀವೇ ಮೆಸೇಜ್ ಮಾಡಬಹುದಾದ ಆಯ್ಕೆ. ಆದರೆ, ಈ ಫೀಚರ್ ಅನ್ನು ಕೆಲವರಿಗೆ ಬಳಸುವುದು ಹೇಗೆಂದು ತಿಳಿದಿಲ್ಲ. ಅಂಥವರಿಗೆ ಇಲ್ಲಿದೆ ಮಾಹಿತಿ.

ವಾಟ್ಸ್​ಆ್ಯಪ್​ನ ಈ ಹೊಸ ಮೆಸೇಜ್ ವಿಥ್ ಯುವರ್​ಸೆಲ್ಫ್ ಎಂಬ ಫೀಚರ್ ಕಾಂಟೆಕ್ಟ್ ಲಿಸ್ಟ್​​ನಲ್ಲಿ ಕಾಣಲಿದೆ. ವಾಟ್ಸ್​ಆ್ಯಪ್ ತೆರೆದು ನ್ಯೂ ಚಾಟ್​ನಲ್ಲಿ ಕಾಂಟೆಕ್ಟ್ ಲಿಸ್ಟ್​​ ಓಪನ್ ಮಾಡಿದರೆ ಅಲ್ಲಿ ನಿಮಗೆ ನಿಮ್ಮ ನಂಬರ್ ಕಾಣಸಿಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಚಾಟ್ ಬಾಕ್ಸ್ ಓಪನ್ ಆಗಲಿದ್ದು ನಿಮಗೆ ನೀವೇ ಮೆಸೇಜ್ ಕಳುಹಿಸಬಹುದು. ಈ ಚಾಟ್ ಬಾಕ್ಸ್​ನಲ್ಲಿ ನಿಮಗೆ ಎಲ್ಲ ರೀತಿಯ ಆಯ್ಕೆ ಕಾಣಸಿಗುತ್ತದೆ. ಫೋಟೋ, ವಿಡಿಯೋ, ಡಾಕ್ಯುಮೆಂಟ್, ಆಡಿಯೋ ಎಲ್ಲ ರೀತಿಯ ಫೈಲ್​ಗಳನ್ನು ಕಳುಹಿಸಬಹುದು. ಈ ಮೂಲಕ ಅಗತ್ಯ ದಾಖಲೆಗಳನ್ನು ಇಲ್ಲಿ ಸೇವ್ ಮಾಡಿಡಬಹುದು.

Infinix Note 12i: ಬಜೆಟ್ ಸ್ಮಾರ್ಟ್​ಫೋನ್ ಅಂದ್ರೆ ಇದು: ಕೇವಲ 9,999 ರೂ. ಗೆ ಆಕರ್ಷಕ ಫೀಚರ್​ಗಳ ಹೊಸ ಫೋನ್ ರಿಲೀಸ್

ಇದನ್ನೂ ಓದಿ
Image
Cola SmartPhone: ಮಾರುಕಟ್ಟೆಗೆ ಬರುತ್ತಿದೆ ಕೋಕಾ- ಕೋಲಾ ಕಂಪನಿಯ ಚೊಚ್ಚಲ ಮೊಬೈಲ್: ಬೆಲೆ ಎಷ್ಟು?, ಏನು ಫೀಚರ್ಸ್?
Image
WhatsApp: ವಾಟ್ಸ್​ಆ್ಯಪ್​ನಲ್ಲಿ ಟೆಕ್ಸ್ಟ್ ಎಡಿಟರ್ ಫೀಚರ್ಸ್‌: ಬಳಕೆದಾರರಿಗೆ ಸಿಗಲಿದೆ ಆಕರ್ಷಕ ಆಯ್ಕೆ
Image
Tech Tips: ಏರ್ಪೋರ್ಟ್​ನಲ್ಲಿ ಗಂಟೆಗಟ್ಟಲೇ ಕ್ಯೂನಲ್ಲಿ ನಿಲ್ಲಬೇಕಿಲ್ಲ: ಈ ಆ್ಯಪ್ ಇನ್​ಸ್ಟಾಲ್ ಮಾಡಿಕೊಳ್ಳಿ
Image
Adani Group: ಈಗ ಅದಾನಿ ಸಮೂಹ ಕಂಪನಿಗಳ ಷೇರು ಖರೀದಿಸುವುದು ಉತ್ತಮವೇ? ಚಾಟ್​ ಜಿಪಿಟಿ ಕೊಟ್ಟ ಉತ್ತರ ಹೀಗಿದೆ ನೋಡಿ!

ಟೆಕ್ಸ್ಟ್ ಎಡಿಟರ್ ಫೀಚರ್ಸ್‌:

ಡ್ರಾಯಿಂಗ್ ಎಡಿಟರ್‌ ಮೂಲಕ ಹೊಸ ಸೌಲಭ್ಯಗಳನ್ನು ಕಲ್ಪಿಸಲು ವಾಟ್ಸ್​ಆ್ಯಪ್ ಮುಂದಾಗಿದೆ. ಈ ಡ್ರಾಯಿಂಗ್ ಎಡಿಟರ್ ಅಡಿಯಲ್ಲಿ ಮೂರು ಹೊಸ ಫೀಚರ್​ಗಳನ್ನು ಕಂಪನಿ ಪರಿಚಯಿಸುತ್ತಿದೆ. ಮೊದಲನೆಯದಾಗಿ ವಾಟ್ಸ್​ಆ್ಯಪ್​ನಲ್ಲಿ ಪಠ್ಯದ ಶೈಲಿ ಸಂಪೂರ್ಣ ಬದಲಾವಣೆ ಆಗಲಿದೆ. ಇದು ಟೆಕ್ಸ್ಟ್ ಎಡಿಟರ್ ಫೀಚರ್ಸ್‌ ಆಗಿದ್ದು ಕೀಬೋರ್ಡ್ ಮೇಲೆ ಪ್ರದರ್ಶಿಸಲಾದ ಫಾಂಟ್ ಆಯ್ಕೆಗಳಲ್ಲಿ ಒಂದನ್ನು ಟ್ಯಾಪ್ ಮಾಡುವ ಮೂಲಕ ವಿವಿಧ ಫಾಂಟ್‌ಗಳನ್ನು ತ್ವರಿತವಾಗಿ ಬದಲಾಯಿಸುವ ಆಯ್ಕೆಯನ್ನು ಬಳಕೆದಾರರಿಗೆ ನೀಡಲಾಗುತ್ತದೆ. ಎರಡನೆಯದಾಗಿ ಪಠ್ಯ ಜೋಡಣೆ ಎಂಬ ಆಯ್ಕೆ ನೀಡುತ್ತಿದ್ದು ಇದರ ಸಹಾಯದಿಂದ ಬಳಕೆದಾರರು ಪಠ್ಯವನ್ನು ಎಡ, ಮಧ್ಯ ಅಥವಾ ಬಲಕ್ಕೆ ಸುಲಭವಾಗಿ ಇರಿಸಲು ಸಾಧ್ಯವಾಗುತ್ತದೆ.

ಕೊನೆಯದಾಗಿ ಪಠ್ಯದ ಹಿನ್ನೆಲೆ ಬಣ್ಣ ಬದಲಾವಣೆ ಮಾಡುವ ಆಯ್ಕೆ. ಇದು ಬಳಕೆದಾರರಿಗೆ ಸುಲಭವಾಗಿ ಪಠ್ಯದ ಹಿನ್ನೆಲೆ ಬಣ್ಣವನ್ನು ಬದಲಾಯಿಸುವಲ್ಲಿ ಸಹಕಾರ ನೀಡುವುದರ ಜೊತೆಗೆ ಪಠ್ಯವನ್ನು ಪ್ರತ್ಯೇಕಿಸಲು ಸುಲಭವಾಗಿ ಸಹಾಯ ಮಾಡಲಿದೆ. ಈಗಾಗಲೇ ಈ ಎಲ್ಲ ಆಯ್ಕೆ ಬೀಟಾ ಬಳಕೆದಾರರಿಗೆ ಲಭ್ಯವಿದೆ. ಸದ್ಯದಲ್ಲೇ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:55 pm, Sat, 28 January 23