- Kannada News Photo gallery iPhone 14 has received a price cut of Rs 12,000 in India in Flipkart Technology News in Kannada
iPhone 14 Plus: ಐಫೋನ್ ಖರೀದಿಗೆ ಇದೇ ಬೆಸ್ಟ್ ಟೈಮ್: ಐಫೋನ್ 14 ಪ್ಲಸ್ ಮೇಲೆ ಬಂಪರ್ ಡಿಸ್ಕೌಂಟ್
Flipkart Offer: ಐಫೋನ್ 14 ಪ್ಲಸ್ ಬೆಲೆಯಲ್ಲಿ ಬರೋಬ್ಬರಿ 12,000 ರೂಪಾಯಿ ಡಿಸ್ಕೌಂಟ್ ಮಾಡಲಾಗಿದೆ. ಇದಲ್ಲದೆ ಫ್ಲಿಪ್‌ಕಾರ್ಟ್‌ನಲ್ಲಿ ಬ್ಯಾಂಕ್ ಆಫರ್‌ಗಳು ಮತ್ತು ಎಕ್ಸ್‌ಚೇಂಜ್ ಆಫರ್ ಅನ್ನು ಅನ್ವಯಿಸಿದರೆ ಇನ್ನಷ್ಟು ಕಡಿಮೆ ಬೆಲೆಗೆ ಐಫೋನ್ 14 ಪ್ಲಸ್ ಅನ್ನು ಖರೀದಿಸಬಹುದು.
Updated on:Jan 29, 2023 | 1:07 PM

ಆ್ಯಪಲ್ ಕಂಪನಿ ಕಳೆದ ವರ್ಷ ಅನಾವರಣಗೊಳಿಸಿದ ಐಫೋನ್ 14 ಪ್ಲಸ್ ಸ್ಮಾರ್ಟ್ಫೋನ್ ಇದೀಗ ಬಂಪರ್ ಡಿಸ್ಕೌಂಟ್ನಲ್ಲಿ ಮಾರಾಟ ಆಗುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಕಾಣಿಸಿಕೊಂಡಿದೆ. ನೀವು ಐಫೋನ್ ಖರೀದಿಸಬೇಕು ಎಂದು ಅಂದುಕೊಂಡಿದ್ದಲ್ಲಿ ಅಥವಾ ಹಳೆಯ ಐಫೋನ್ ಬಿಟ್ಟು ಹೊಸ ಐಫೋನ್ ಪಡೆದುಕೊಳ್ಳುವ ಪ್ಲಾನ್ನಲ್ಲಿದ್ದರೆ ಇದೊಂದು ಅತ್ಯುತ್ತಮ ಅವಕಾಶ.

ಐಫೋನ್ 14 ಪ್ಲಸ್ ಬೆಲೆಯಲ್ಲಿ ಬರೋಬ್ಬರಿ 12,000 ರೂಪಾಯಿ ಡಿಸ್ಕೌಂಟ್ ಮಾಡಲಾಗಿದೆ. ಇದಲ್ಲದೆ ಫ್ಲಿಪ್‌ಕಾರ್ಟ್‌ನಲ್ಲಿ ಬ್ಯಾಂಕ್ ಆಫರ್‌ಗಳು ಮತ್ತು ಎಕ್ಸ್‌ಚೇಂಜ್ ಆಫರ್ ಅನ್ನು ಅನ್ವಯಿಸಿದರೆ ಇನ್ನಷ್ಟು ಕಡಿಮೆ ಬೆಲೆಗೆ ಐಫೋನ್ 14 ಪ್ಲಸ್ ಅನ್ನು ಖರೀದಿಸಬಹುದು.

89,900ರೂ. ಮೂಲ ಬೆಲೆ ಹೊಂದಿರುವ ಐಫೋನ್ 14 ಪ್ಲಸ್ ಬೆಲೆ ಕಡಿತಗೊಂಡು ಇದೀಗ ಕೇವಲ 76,999ರೂ. ಬೆಲೆಯಲ್ಲಿ ಫ್ಲಿಪ್‌ಕಾರ್ಟ್ ಮಾರಾಟ ಮಾಡುತ್ತಿದೆ. ಇದರ ಜೊತೆಗೆ ಆಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ ಶೇ. 5 ರಷ್ಟು ಡಿಸ್ಕೌಂಟ್ ಸಿಗಲಿದೆ. 21400ರೂ. ವರೆಗೆ ಎಕ್ಸ್‌ಚೇಂಜ್ ಆಫರ್ ಕೂಡ ನೀಡಲಾಗಿದೆ.

ಐಫೋನ್ 14 ಪ್ಲಸ್ ಫೋನಿನ ಫೀಚರ್ಸ್ ಬಗ್ಗೆ ನೋಡುವುದಾದರೆ ಇದು 6.7 ಇಂಚಿನ OLED ಡಿಸ್‌ಪ್ಲೇ ಹೊಂದಿದೆ. ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಮುಂಭಾಗ ಕೂಡ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಈ ಫೋನ್ ದೀರ್ಘ ಸಮಯ ಬಾಳಿಕೆ ಬರುವ ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ. ಅಲ್ಲದೆ ತುರ್ತು ಸಂದರ್ಭಕ್ಕೆ Emergency SOS via satellite ಫೀಚರ್ಸ್ ನೀಡಲಾಗಿದೆ.

ಇದರ ಜೊತೆಗೆ ಐಫೋನ್ 14 ಕೂಡ ಬಂಪರ್ ಡಿಸ್ಕೌಂಟ್ನಲ್ಲಿ ಮಾರಾಟ ಆಗುತ್ತಿದೆ ಐಫೋನ್ 14 128GB ಸ್ಟೋರೇಜ್ ಮಾಡೆಲ್ 79,900 ರೂಪಾಯಿಗೆ ಬಿಡುಗಡೆ ಆಗಿತ್ತು. ಇದೀಗ ಈ ಫೋನ್ 66,99 ರೂ. ಗೆ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದು. ಶೇ. 16 ರಷ್ಟು ರಿಯಾಯಿತಿ ಘೋಷಿಸಲಾಗಿದೆ.

ಬ್ಯಾಂಕ್ ಆಫರ್ ಜೊತೆಗೆ 21,400 ರೂ. ವರೆಗಿನ ಎಕ್ಸ್‌ಚೇಂಜ್ ಆಫರ್ ಕೂಡ ಘೋಷಿಸಲಾಗಿದೆ. ನೀವು ಐಫೋನ್ 11, ಐಫೋನ್ XR ಅಥವಾ ಐಫೋನ್ 12 ಉಪಯೋಗಿಸುತ್ತಿದ್ದರೆ ಬದಲಾಯಿಸಲು ಉತ್ತಮ ಸಮಯ.
Published On - 1:07 pm, Sun, 29 January 23




