Cola SmartPhone: ಮಾರುಕಟ್ಟೆಗೆ ಬರುತ್ತಿದೆ ಕೋಕಾ- ಕೋಲಾ ಕಂಪನಿಯ ಚೊಚ್ಚಲ ಮೊಬೈಲ್: ಬೆಲೆ ಎಷ್ಟು?, ಏನು ಫೀಚರ್ಸ್?
Coca-Cola Smartphone: ಕೋಕಾ ಕೋಲಾ ಹೆಸರು ಹೇಳಿದಾಗ ಎಲ್ಲರಿಗೂ ನೆನಪಾಗುವುದು ಕೂಲ್ ಡ್ರಿಂಕ್ಸ್ ಮಾತ್ರ. ಕೇವಲ ಕೂಲ್ ಡ್ರಿಂಕ್ಸ್ಗೆ ಸೀಮಿತವಾಗಿದ್ದ ಕೋಕಾ ಕೋಲಾ ಕಂಪನಿ ಇದೀಗ ಸ್ಮಾರ್ಟ್‌ಫೋನ್ ತಯಾರಿಕಾ ಕ್ಷೇತ್ರಕ್ಕೆ ಕಾಲಿಡುತ್ತಿದೆ.
ವಿಶ್ವದಲ್ಲಿ ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆ ಇಂದು ವಿಶಾಲವಾಗಿ ಬೆಳೆದು ನಿಂತಿದೆ. ಭರ್ಜರಿ ಬೇಡಿಕೆಯಲ್ಲಿರುವ ಮೊಬೈಲ್ ಮಾರುಕಟ್ಟೆಯಲ್ಲಿ ದಿನಕ್ಕೊಂದು ಫೋನ್ ಬಿಡುಗಡೆ ಆಗುತ್ತದೆ. ಇದರ ಜೊತೆಗೆ ಹೊಸ ಹೊಸ ಕಂಪನಿಗಳು ಕೂಡ ಹುಟ್ಟಿಗೊಳ್ಳುತ್ತಿದೆ. ಕಳೆದ ವರ್ಷ ನಥಿಂಗ್ ಎಂಬ ಕಂಪನಿ ತನ್ನ ಮೊಟ್ಟ ಮೊದಲ ನಥಿಂಗ್ ಫೋನ್ 1 (Nothing Phone 1) ಸ್ಮಾರ್ಟ್‌ಫೋನ್ ಪರಿಚಯಿಸಿ ಮೋಡಿ ಮಾಡಿತ್ತು. ಇದೀಗ ಮತ್ತೊಂದು ಪ್ರಸಿದ್ಧ ಪಾನೀಯ ಸಂಸ್ಥೆ ಕೋಕಾ-ಕೋಲಾ (Coca-Cola) ಚೊಚ್ಚಲ ಮೊಬೈಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ತಯಾರಿ ನಡೆಸುತ್ತಿದೆ. ಹೌದು, ಕೋಕಾ ಕೋಲಾ ಹೆಸರು ಹೇಳಿದಾಗ ಎಲ್ಲರಿಗೂ ನೆನಪಾಗುವುದು ಕೂಲ್ ಡ್ರಿಂಕ್ಸ್ ಮಾತ್ರ. ಪ್ರಪಂಚದಾದ್ಯಂತ ಈ ಬ್ರ್ಯಾಂಡ್ ಹೊಂದಿರುವ ಕ್ರೇಜ್ ಅನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕೇವಲ ಕೂಲ್ ಡ್ರಿಂಕ್ಸ್ಗೆ ಸೀಮಿತವಾಗಿದ್ದ ಕೋಕಾ ಕೋಲಾ ಕಂಪನಿ ಇದೀಗ ಸ್ಮಾರ್ಟ್‌ಫೋನ್ ತಯಾರಿಕಾ ಕ್ಷೇತ್ರಕ್ಕೆ ಕಾಲಿಡುತ್ತಿದೆ.
ಕೋಕಾ-ಕೋಲಾ ಕಂಪನಿಯ ಬ್ರ್ಯಾಂಡ್ ಅಡಿಯಲ್ಲಿ ಕೋಲಾ ಫೋನ್ ‘Cola phone’ ಎಂಬ ಸ್ಮಾರ್ಟ್‌ಫೋನ್ ಕೆಲವೇ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಎಂದು ವರದಿಯಾಗಿದೆ. ಇದರ ಬಗ್ಗೆ ಟಿಪ್‌ಸ್ಟಾರ್ ಮುಕುಲ್ ಶರ್ಮಾ ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ. ಈ ಸ್ಮಾರ್ಟ್ಫೋನ್ನ ವಿನ್ಯಾಸ ಹಾಗೂ ಬ್ಯಾಕ್ ಪ್ಯಾನೆಲ್ನ ಫೋಟೋವನ್ನು ತನ್ನ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋನ್ ಕೆಂಪು ಬಣ್ಣದ ವೇರಿಯಂಟ್‌ನಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಅಂದಾಜಿಸಲಾಗಿದೆ. ವದಂತಿಗಳಂತೆ, ಈ ಇದು ಇತ್ತೀಚಿನ ರಿಯಲ್ ಮಿ 10 4G ಸ್ಮಾರ್ಟ್‌ಫೋನ್ ಆಗಿರಬಹುದು ಎಂಬ ಮಾತುಕೂಡ ಇದೆ.
ರಿಯಲ್ ಮಿ 10 4G ಸ್ಮಾರ್ಟ್‌ಫೋನ್ 6.4-ಇಂಚಿನ ಫುಲ್-HD+ ಸೂಪರ್ ಅಮಲೊಡ್ ಡಿಸ್‌ಪ್ಲೇ ಹೊಂದಿದೆ. ಮೀಡಿಯಾಟೆಕ್ ಹೀಲಿಯೊ G99 SoC ಪ್ರೊಸೆಸರ್ ಅಳವಡಿಸಲಾಗಿದ್ದು, 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಮೊನೊಕ್ರೋಮ್ ಸಂವೇದಕವನ್ನು ಒಳಗೊಂಡಂತೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 33W SuperVOOC ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿ ನೀಡಲಾಗಿದ್ದು, ಇದು 28 ನಿಮಿಷಗಳ ಚಾರ್ಜ್‌ನೊಂದಿಗೆ 50 ಪ್ರತಿಶತದಷ್ಟು ಬ್ಯಾಕಪ್ ಒದಗಿಸುತ್ತದೆ. ಈ ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆ 12,999 ರೂ.
ಏತನ್ಮಧ್ಯೆ, ಕೂಲ್ಡ್ರಿಂಕ್ಸ್ ಕಂಪನಿಯು ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವುದು ಇದೇ ಮೊದಲಲ್ಲ. ಪೆಪ್ಸಿ ಕಂಪನಿ 2015 ರಲ್ಲಿ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಿತು. ಶೆನ್ಜೆನ್ ಕುಬೆ ಎಂಬ ಕಂಪನಿಯ ಸಹಯೋಗದಲ್ಲಿ ಪೆಪ್ಸಿ P1 ಹೆಸರಿನ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿತು. ಆದರೆ, ಅಂದುಕೊಂಡ ಮಟ್ಟಿಗೆ ಯಶಸ್ಸು ಸಾಧಿಸಲು ಸಾಧ್ಯವಾಗದ ಕಾರಣ ಕಂಪನಿಯು ಈ ಫೋನ್‌ಗಳನ್ನು ಸ್ಥಗಿತಗೊಳಿಸಿತು. ಇತ್ತೀಚೆಗಷ್ಟೆ ಎಲೆಕ್ಟ್ರಿಕ್ ಕಾರು ತಯಾರಕ ಟೆಸ್ಲಾ ಕೂಡ ಪೈ ಫೋನ್ ಹೆಸರಿನ ಹೊಸ ಗೇಮಿಂಗ್ ಸ್ಮಾರ್ಟ್‌ಫೋನ್ ಅನ್ನು ತರುವುದಾಗಿ ಘೋಷಿಸಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:35 pm, Sat, 28 January 23