Galaxy S23 Series: ಬಹುನಿರೀಕ್ಷಿತ ಗ್ಯಾಲಕ್ಸಿ S23 ಸರಣಿ ಮುಂದಿನ ತಿಂಗಳು ಬಿಡುಗಡೆ: ಬೆಲೆ ಎಷ್ಟು?, ಏನು ಫೀಚರ್ಸ್?

ಈ ವರ್ಷದ ಬಹುನಿರೀಕ್ಷಿತ ಸ್ಮಾರ್ಟ್​ಫೋನ್ ಸ್ಯಾಮ್​ಸಂಗ್ ಗ್ಯಾಲಕ್ಸಿ S23 (Samsung Galaxy S23 Series) ಸರಣಿ ಫೆಬ್ರವರಿಯಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಒಂದೊಂದೆ ವಿಚಾರ ಬಹಿರಂಗವಾಗುತ್ತಿದೆ.

Galaxy S23 Series: ಬಹುನಿರೀಕ್ಷಿತ ಗ್ಯಾಲಕ್ಸಿ S23 ಸರಣಿ ಮುಂದಿನ ತಿಂಗಳು ಬಿಡುಗಡೆ: ಬೆಲೆ ಎಷ್ಟು?, ಏನು ಫೀಚರ್ಸ್?
samsung galaxy s23 series
Follow us
Vinay Bhat
|

Updated on: Jan 29, 2023 | 6:45 AM

ಸ್ಯಾಮ್​ಸಂಗ್ ಕಂಪನಿ ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಲು ಭರ್ಜರಿ ತಯಾರಿ ನಡೆಸುತ್ತಿದೆ. ಈ ವರ್ಷದ ಬಹುನಿರೀಕ್ಷಿತ ಸ್ಮಾರ್ಟ್​ಫೋನ್ ಸ್ಯಾಮ್​ಸಂಗ್ ಗ್ಯಾಲಕ್ಸಿ S23 (Samsung Galaxy S23 Series) ಸರಣಿ ಫೆಬ್ರವರಿಯಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಒಂದೊಂದೆ ವಿಚಾರ ಬಹಿರಂಗವಾಗುತ್ತಿದೆ. ಇದು ಕಳೆದ ವರ್ಷ ಫೆಬ್ರವರಿಯಲ್ಲಿ ಅನಾವರಣಗೊಂಡ ಸ್ಯಾಮ್​ಸಂಗ್ ಗ್ಯಾಲಕ್ಸಿ S22 ಸರಣಿಯ ಮುಂದಿನ ಆವೃತ್ತಿಯಾಗಿದೆ. ಗ್ಯಾಲಕ್ಸಿ S22 ಸರಣಿಯಲ್ಲಿ S22 ಆಲ್ಟ್ರಾ ಸ್ಮಾರ್ಟ್​​ಫೋನ್ ಎಲ್ಲರ ಹುಬ್ಬೇರುವಂತೆ ಮಾಡಿದ್ದು ಗೊತ್ತೇ ಇದೆ. ಇದರಲ್ಲಿರುವ ಫೀಚರ್ಸ್, ಅದರಲ್ಲೂ 108 ಮೆಗಾಫಿಕ್ಸೆಲ್ ಕ್ಯಾಮೆರಾಕ್ಕೆ ಎಲ್ಲರೂ ಫಿದಾ ಆಗಿದ್ದರು. ಇದೀಗ ಗ್ಯಾಲಕ್ಸಿ S23 ಸರಣಿ (Galaxy S23 Ultra) ಕೂಡ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ.

ಈ ಫೋನಿನ ಕುರಿತು ಕೆಲ ಮಾಹಿತಿ ಕೂಡ ಸೋರಿಕೆ ಆಗಿದ್ದು, ಗ್ಯಾಲಕ್ಸಿ S23 ಆರಂಭಿಕ ಬೆಲೆ $799 ಅಂದರೆ ಭಾರತದಲ್ಲಿ ಸುಮಾರು 64,950 ರೂ. ಇರಬಹುದು ಎಂದು ಹೇಳಲಾಗಿದೆ. ಅಂತೆಯೆ ಗ್ಯಾಲಕ್ಸಿ S23+ ಬೆಲೆ $999 (ಸುಮಾರು 80,000 ರೂ.), ಗ್ಯಾಲಕ್ಸಿ S23 ಆಲ್ಟ್ರಾ ಬೆಲೆ $1,199 ಇರಬಹುದು ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಗ್ಯಾಲಕ್ಸಿ S22 ಸರಣಿಗೂ ಹೊಸ ಗ್ಯಾಲಕ್ಸಿ S23 ಸರಣಿಯ ಬೆಲೆಗೂ ಹೆಚ್ಚಿನ ಬದಲಾವಣೆ ಇಲ್ಲವಂತೆ. ಗ್ಯಾಲಕ್ಸಿ S22 ಭಾರತದಲ್ಲಿ 72,999 ರೂ. ಗೆ ಲಾಂಚ್ ಆಗಿತ್ತು.

ಗ್ಯಾಲಕ್ಸಿ S23 ಆಲ್ಟ್ರಾ ಫೋನಿನ ಡಿಸೈನ್ ಥೇಟ್ ಗ್ಯಾಲಕ್ಸಿ S22 ಆಲ್ಟ್ರಾ ರೀತಿಯಲ್ಲೇ ಇದೆ. ಇದರಲ್ಲಿರುವ ಕ್ವಾಡ್ ಕ್ಯಾಮೆರಾ ಒಂದೇ ಮಾದರಿಯಲ್ಲಿದೆ. ಗ್ಯಾಲಕ್ಸಿ S23 ಮತ್ತು ಗ್ಯಾಲಕ್ಸಿ S23+ ಡಿಸೈನ್​ನಲ್ಲಿ ಕೊಂಚ ಬದಲಾವಣೆ ತರಲಾಗಿದೆ. ಇನ್ನು ಗ್ಯಾಲಕ್ಸಿ S23 ಆಲ್ಟ್ರಾದಲ್ಲಿ ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 2 ಪ್ರೊಸೆಸರ್ ಇರಲಿದೆ ಎಂದು ಹೇಳಲಾಗಿದೆ. ಇದು ಅತ್ಯಂತ ಬಲಿಷ್ಠ ಪ್ರೊಸೆಸರ್ ಆಗಿದ್ದು ವೇಗವಾಗಿ ಕಾರ್ಯನಿರ್ವಹಿಸಲಿದೆಯಂತೆ. ಇದರ ಜೊತೆಗೆ ಬರೋಬ್ಬರಿ 200 ಮೆಗಾಫಿಕ್ಸೆಲ್ ಕ್ಯಾಮೆರಾದೊಂದಿಗೆ ಲಾಂಚ್ ಆಗಲಿದೆ ಎನ್ನಲಾಗಿದೆ.

ಇದನ್ನೂ ಓದಿ
Image
Tech Tips: ವಾಟ್ಸ್​ಆ್ಯಪ್​ನಲ್ಲಿರುವ ಸೆಲ್ಫ್ ಮೆಸೇಜ್ ಫೀಚರ್ ಉಪಯೋಗಿಸಿದ್ದೀರಾ?: ಇಲ್ಲಿದೆ ಟ್ರಿಕ್
Image
Cola SmartPhone: ಮಾರುಕಟ್ಟೆಗೆ ಬರುತ್ತಿದೆ ಕೋಕಾ- ಕೋಲಾ ಕಂಪನಿಯ ಚೊಚ್ಚಲ ಮೊಬೈಲ್: ಬೆಲೆ ಎಷ್ಟು?, ಏನು ಫೀಚರ್ಸ್?
Image
WhatsApp: ವಾಟ್ಸ್​ಆ್ಯಪ್​ನಲ್ಲಿ ಟೆಕ್ಸ್ಟ್ ಎಡಿಟರ್ ಫೀಚರ್ಸ್‌: ಬಳಕೆದಾರರಿಗೆ ಸಿಗಲಿದೆ ಆಕರ್ಷಕ ಆಯ್ಕೆ
Image
Tech Tips: ಏರ್ಪೋರ್ಟ್​ನಲ್ಲಿ ಗಂಟೆಗಟ್ಟಲೇ ಕ್ಯೂನಲ್ಲಿ ನಿಲ್ಲಬೇಕಿಲ್ಲ: ಈ ಆ್ಯಪ್ ಇನ್​ಸ್ಟಾಲ್ ಮಾಡಿಕೊಳ್ಳಿ

Adani Group: ಈಗ ಅದಾನಿ ಸಮೂಹ ಕಂಪನಿಗಳ ಷೇರು ಖರೀದಿಸುವುದು ಉತ್ತಮವೇ? ಚಾಟ್​ ಜಿಪಿಟಿ ಕೊಟ್ಟ ಉತ್ತರ ಹೀಗಿದೆ ನೋಡಿ!

ಕೊರಿಯಾ ಐಟ ನ್ಯೂಸ್ ಮಾಡಿರುವ ವರದಿ ಪ್ರಕಾರ, ಗ್ಯಾಲಕ್ಸಿ S23 ಆಲ್ಟ್ರಾ 200 ಮೆಗಾಫಿಕ್ಸೆಲ್ ಕ್ಯಾಮೆರಾದಿಂದ ಆವೃತ್ತವಾಗಿದೆ ಎಂದು ಹೇಳಿದೆ. ಈ ಫೋನ್ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ ಆಗಲಿದೆ. ಇನ್ನೊಂದು ಶಾಕಿಂಗ್ ವಿಚಾರ ಎಂದರೆ S23 ಆಲ್ಟ್ರಾದಲ್ಲಿ ಕ್ವಾಲ್ಕಂ 3D ಸೋನಿಕ್ ಮ್ಯಾಕ್ಸ್ ಫಿಂಗರ್​ಪ್ರಿಂಟ್ ಅಳವಡಿಸಲಾಗಿದೆಯಂತೆ. ಇದರ ಮೂಲಕ ನೀವು ಕ್ಷಣಾರ್ಧದಲ್ಲಿ ಮೊಬೈಲ್ ಅನ್ನು ಅನ್ಲಾಕ್ ಮಾಡಬಹುದು.

ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ನೊಂದಿಗೆ ಬರುವ ನಿರೀಕ್ಷೆಯಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು ಮೂರನೇ ಕ್ಯಾಮೆರಾ 10 ಮೆಗಾಪಿಕ್ಸೆಲ್ ಸೆನ್ಸಾರ್‌ನೊಂದಿಗೆ ಬರಲಿದೆ ಎನ್ನಲಾಗಿದೆ. ಇದಲ್ಲದೆ 12 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾದೊಂದಿಗೆ ಬರುವ ನಿರೀಕ್ಷೆ ಕೂಡ ಇದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ