AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ವಾಟ್ಸ್​ಆ್ಯಪ್​ನಲ್ಲಿ ಟೆಕ್ಸ್ಟ್ ಎಡಿಟರ್ ಫೀಚರ್ಸ್‌: ಬಳಕೆದಾರರಿಗೆ ಸಿಗಲಿದೆ ಆಕರ್ಷಕ ಆಯ್ಕೆ

WhatsApp New Features: ಇತ್ತೀಚೆಗಷ್ಟೆ ವಾಟ್ಸ್​ಆ್ಯಪ್​ ಫೋಟೋ ಸೆಂಡ್‌ ಮಾಡುವಾಗ ಹೈ ಕ್ವಾಲಿಟಿಯ ಆಯ್ಕೆ ನೀಡುವ ಬಗ್ಗೆ ಸೂಚನೆ ನೀಡಿತ್ತು. ಇದೀಗ ಡ್ರಾಯಿಂಗ್ ಎಡಿಟರ್‌ ಮೂಲಕ ಹೊಸ ಸೌಲಭ್ಯಗಳನ್ನು ಕಲ್ಪಿಸಲು ಮೆಸೇಜಿಂಗ್ ಅಪ್ಲಿಕೇಶನ್ ಮುಂದಾಗಿದೆ.

WhatsApp: ವಾಟ್ಸ್​ಆ್ಯಪ್​ನಲ್ಲಿ ಟೆಕ್ಸ್ಟ್ ಎಡಿಟರ್ ಫೀಚರ್ಸ್‌: ಬಳಕೆದಾರರಿಗೆ ಸಿಗಲಿದೆ ಆಕರ್ಷಕ ಆಯ್ಕೆ
WhatsApp
Follow us
Vinay Bhat
|

Updated on:Jan 28, 2023 | 2:28 PM

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ 2022 ರಲ್ಲಿ ಸಾಕಷ್ಟು ಅಭಿವೃದ್ದಿ ಕಂಡಿತು. ಕಳೆದ ವರ್ಷ 50ಕ್ಕೂ ಅಧಿಕ ಹೊಸ ಹೊಸ ವಿನೂತನವಾದ ಫೀಚರ್​ಗಳನ್ನು ಪರಿಚಯಿಸಿ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಯಿತು. ಇದಕ್ಕಾಗಿಯೆ ವಾಟ್ಸ್​ಆ್ಯಪ್ (WhatsApp) ಅನ್ನು ಇಂದು ವಿಶ್ವದಲ್ಲಿ ಬಳಸುವವರ ಸಂಖ್ಯೆ 2 ಬಿಲಿಯನ್​ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಈ ವರ್ಷ ಕೂಡ ವಿಭಿನ್ನವಾದ ಆಯ್ಕೆಗಳು ಬರಲಿದ್ದು, ವಾಟ್ಸ್​ಆ್ಯಪ್​ ಈ ಕೆಸದಲ್ಲಿ ನಿರತವಾಗಿದೆ. ಇತ್ತೀಚೆಗಷ್ಟೆ ವಾಟ್ಸ್​ಆ್ಯಪ್​ ಫೋಟೋ ಸೆಂಡ್‌ ಮಾಡುವಾಗ ಹೈ ಕ್ವಾಲಿಟಿಯ ಆಯ್ಕೆ ನೀಡುವ ಬಗ್ಗೆ ಸೂಚನೆ ನೀಡಿತ್ತು. ಇದೀಗ ಡ್ರಾಯಿಂಗ್ ಎಡಿಟರ್‌ (Drawing Tool) ಮೂಲಕ ಹೊಸ ಸೌಲಭ್ಯಗಳನ್ನು ಕಲ್ಪಿಸಲು ಮೆಸೇಜಿಂಗ್ ಅಪ್ಲಿಕೇಶನ್ ಮುಂದಾಗಿದೆ.

ಈ ಡ್ರಾಯಿಂಗ್ ಎಡಿಟರ್ ಅಡಿಯಲ್ಲಿ ಮೂರು ಹೊಸ ಫೀಚರ್​ಗಳನ್ನು ಕಂಪನಿ ಪರಿಚಯಿಸುತ್ತಿದೆ. ಮೊದಲನೆಯದಾಗಿ ವಾಟ್ಸ್​ಆ್ಯಪ್​ನಲ್ಲಿ ಪಠ್ಯದ ಶೈಲಿ ಸಂಪೂರ್ಣ ಬದಲಾವಣೆ ಆಗಲಿದೆ. ಇದು ಟೆಕ್ಸ್ಟ್ ಎಡಿಟರ್ ಫೀಚರ್ಸ್‌ ಆಗಿದ್ದು ಕೀಬೋರ್ಡ್ ಮೇಲೆ ಪ್ರದರ್ಶಿಸಲಾದ ಫಾಂಟ್ ಆಯ್ಕೆಗಳಲ್ಲಿ ಒಂದನ್ನು ಟ್ಯಾಪ್ ಮಾಡುವ ಮೂಲಕ ವಿವಿಧ ಫಾಂಟ್‌ಗಳನ್ನು ತ್ವರಿತವಾಗಿ ಬದಲಾಯಿಸುವ ಆಯ್ಕೆಯನ್ನು ಬಳಕೆದಾರರಿಗೆ ನೀಡಲಾಗುತ್ತದೆ. ಎರಡನೆಯದಾಗಿ ಪಠ್ಯ ಜೋಡಣೆ ಎಂಬ ಆಯ್ಕೆ ನೀಡುತ್ತಿದ್ದು ಇದರ ಸಹಾಯದಿಂದ ಬಳಕೆದಾರರು ಪಠ್ಯವನ್ನು ಎಡ, ಮಧ್ಯ ಅಥವಾ ಬಲಕ್ಕೆ ಸುಲಭವಾಗಿ ಇರಿಸಲು ಸಾಧ್ಯವಾಗುತ್ತದೆ.

ಕೊನೆಯದಾಗಿ ಪಠ್ಯದ ಹಿನ್ನೆಲೆ ಬಣ್ಣ ಬದಲಾವಣೆ ಮಾಡುವ ಆಯ್ಕೆ. ಇದು ಬಳಕೆದಾರರಿಗೆ ಸುಲಭವಾಗಿ ಪಠ್ಯದ ಹಿನ್ನೆಲೆ ಬಣ್ಣವನ್ನು ಬದಲಾಯಿಸುವಲ್ಲಿ ಸಹಕಾರ ನೀಡುವುದರ ಜೊತೆಗೆ ಪಠ್ಯವನ್ನು ಪ್ರತ್ಯೇಕಿಸಲು ಸುಲಭವಾಗಿ ಸಹಾಯ ಮಾಡಲಿದೆ. ಈಗಾಗಲೇ ಈ ಎಲ್ಲ ಆಯ್ಕೆ ಬೀಟಾ ಬಳಕೆದಾರರಿಗೆ ಲಭ್ಯವಿದೆ. ಸದ್ಯದಲ್ಲೇ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ
Image
Tech Tips: ಏರ್ಪೋರ್ಟ್​ನಲ್ಲಿ ಗಂಟೆಗಟ್ಟಲೇ ಕ್ಯೂನಲ್ಲಿ ನಿಲ್ಲಬೇಕಿಲ್ಲ: ಈ ಆ್ಯಪ್ ಇನ್​ಸ್ಟಾಲ್ ಮಾಡಿಕೊಳ್ಳಿ
Image
Adani Group: ಈಗ ಅದಾನಿ ಸಮೂಹ ಕಂಪನಿಗಳ ಷೇರು ಖರೀದಿಸುವುದು ಉತ್ತಮವೇ? ಚಾಟ್​ ಜಿಪಿಟಿ ಕೊಟ್ಟ ಉತ್ತರ ಹೀಗಿದೆ ನೋಡಿ!
Image
Infinix Note 12i: ಬಜೆಟ್ ಸ್ಮಾರ್ಟ್​ಫೋನ್ ಅಂದ್ರೆ ಇದು: ಕೇವಲ 9,999 ರೂ. ಗೆ ಆಕರ್ಷಕ ಫೀಚರ್​ಗಳ ಹೊಸ ಫೋನ್ ರಿಲೀಸ್
Image
Microsoft: ಮೈಕ್ರೋಸಾಫ್ಟ್ ಬಳಕೆದಾರರಿಗೆ ಭಾರತ ಸರ್ಕಾರದಿಂದ ತುರ್ತು ಎಚ್ಚರಿಕೆ: ತಕ್ಷಣ ಅಪ್ಡೇಟ್ ಮಾಡಿ

Android Phones: ಭಾರತದಲ್ಲಿ ಭಿನ್ನವಾಗಿರಲಿವೆ ಆ್ಯಂಡ್ರಾಯ್ಡ್ ಫೋನ್​ಗಳು; ಕಾರಣ ಇಲ್ಲಿದೆ

ಒರಿಜಿನಲ್ ಕ್ವಾಲಿಟಿಯಲ್ಲಿ ಫೋಟೋ ಕಳುಹಿಸಿ:

ವಾಟ್ಸ್​ಆ್ಯಪ್​ನಲ್ಲಿ ಈಗ ಒಂದು ಫೋಟೋ ಕಳುಹಿಸಿದರೆ ಅದು ರಿಸೀವ್ ಮಾಡಿಕೊಂಡ ಬಳಕೆದಾರನಿಗೆ ಒರಿಜಿನಲ್ ಕ್ವಾಲಿಟಿಯಲ್ಲಿ ಸಿಗುವುದಿಲ್ಲ. ತನ್ನ ನೈಜ್ಯ ಗುಣಮಟ್ಟವನ್ನು ಕಳೆದುಕೊಳ್ಳುತ್ತದೆ. ಇದಕ್ಕಾಗಿ ವಾಟ್ಸ್​ಆ್ಯಪ್​ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೂಲ ಗುಣಮಟ್ಟದ ಫೋಟೋಗಳನ್ನು ಸೆಂಡ್‌ ಮಾಡಲು ಅನುಮತಿಸುವ ಹೊಸ ಫೀಚರ್ಸ್‌ ಪರಿಚಯಿಸುವುದಕ್ಕೆ ತಯಾರಿ ನಡೆಸಿದೆ.

ವಾಟ್ಸ್​ಆ್ಯಪ್​ಪರಿಚಯಿಸಲಿರುವ ಹೊಸ ಫೀಚರ್ಸ್‌ ನಿಮಗೆ ಫೋಟೋ ಗುಣಮಟ್ಟವನ್ನು ಆಯ್ಕೆ ಮಾಡಲು ಅನುಮತಿಸಲಿದೆ. ಅಂದರೆ ನೀವು ಸೆಂಡ್‌ ಮಾಡುವ ಫೋಟೋ ಗುಣಮಟ್ಟ ಹೇಗಿರಬೇಕು ಎಂಬುದನ್ನು ನೀವೇ ನಿರ್ಧಾರ ಮಾಡಬಹುದು. ಇದರಿಂದ ನಿಮ್ಮ ಫೋಟೋದ ಒರಿಜಿನಲ್ ಕ್ವಾಲಿಟಿಯಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ ಸೆಂಡ್‌ ಮಾಡುತ್ತದೆ. ಸದ್ಯ ಆಂಡ್ರಾಯ್ಡ್‌ ಬೇಟಾ ವರ್ಷನ್​ನಲ್ಲಿ ಈ ಆಯ್ಕೆ ಕಾಣಿಸಿದ್ದು ಆದಷ್ಟು ಬೇಗ ಎಲ್ಲ ಬಳಕೆದಾರರಿಗೆ ಸಿಗಲಿದೆಯಂತೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:27 pm, Sat, 28 January 23

ಮಂಡ್ಯ: ಮಾನಸಿಕ ಅಸ್ವಸ್ಥ ತಾಯಿಯನ್ನು ಬೀದಿಯಲ್ಲಿ ಬಿಟ್ಟು ಹೋದ ಮಗ
ಮಂಡ್ಯ: ಮಾನಸಿಕ ಅಸ್ವಸ್ಥ ತಾಯಿಯನ್ನು ಬೀದಿಯಲ್ಲಿ ಬಿಟ್ಟು ಹೋದ ಮಗ
ಮನೆಯಲ್ಲಿ ದೇವರ ವಿಗ್ರಹಗಳನ್ನು ಪಶ್ಚಿಮಾಭಿಮುಖವಾಗಿ ಇಡಬಹುದಾ?
ಮನೆಯಲ್ಲಿ ದೇವರ ವಿಗ್ರಹಗಳನ್ನು ಪಶ್ಚಿಮಾಭಿಮುಖವಾಗಿ ಇಡಬಹುದಾ?
Daily horoscope: ರವಿ ಮಿಥುನ ರಾಶಿಯಲ್ಲಿ, ಚಂದ್ರ ವೃಷಭ ರಾಶಿಯಲ್ಲಿ ಸಂಚಾರ
Daily horoscope: ರವಿ ಮಿಥುನ ರಾಶಿಯಲ್ಲಿ, ಚಂದ್ರ ವೃಷಭ ರಾಶಿಯಲ್ಲಿ ಸಂಚಾರ
ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್
ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್
ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು
ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್
ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ
ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ
ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ
ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ