Airtel New Offers: ಏರ್ಟೆಲ್ನಿಂದ ಎರಡು ಪ್ರಿಪೇಯ್ಡ್ ಪ್ಲಾನ್; ಸಿಗಲಿದೆ ಭರ್ಜರಿ ಡೇಟಾ, ಇಲ್ಲಿದೆ ಮತ್ತಷ್ಟು ವಿವರ
ಭಾರ್ತಿ ಏರ್ಟೆಲ್ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್ ಘೋಷಿಸಿದ್ದು, ಗ್ರಾಹಕರಿಗೆ ಹೆಚ್ಚಿನ ಡೇಟಾ, ಅನಿಯಮಿತ ಕರೆ ಹಾಗೂ ಇತರ ಹಲವು ಸೌಲಭ್ಯಗಳು ದೊರೆಯಲಿವೆ.
ಭಾರ್ತಿ ಏರ್ಟೆಲ್ (Bharti Airtel) ಎರಡು ಹೊಸ ಪ್ರಿಪೇಯ್ಡ್ ಪ್ಲಾನ್ (prepaid plans) ಘೋಷಿಸಿದ್ದು, ಗ್ರಾಹಕರಿಗೆ ಹೆಚ್ಚಿನ ಡೇಟಾ, ಅನಿಯಮಿತ ಕರೆ ಹಾಗೂ ಇತರ ಹಲವು ಸೌಲಭ್ಯಗಳು ದೊರೆಯಲಿವೆ. ವಿಶೇಷವೆಂದರೆ ಈ ಬಾರಿ ಪ್ರಿಪೇಯ್ಡ್ ಪ್ಲಾನ್ ಮತ್ತು ಪೋಸ್ಟ್ ಪೇಯ್ಡ್ ಪ್ಲಾನ್ಗಳ ನಡುವಣ ದರ ವ್ಯತ್ಯಾಸವನ್ನು ಕಡಿಮೆ ಮಾಡಲಾಗಿದೆ. ಹೊಸ ಪ್ಲಾನ್ ಅಡಿಯಲ್ಲಿ ತಿಂಗಳಿಗೆ 60 ಜಿಬಿವರೆಗೆ ಡೇಟಾ ದೊರೆಯಲಿದೆ. ಕೆಲವು ದಿನಗಳ ಹಿಂದಷ್ಟೇ ಕರ್ನಾಟಕ ಸೇರಿದಂತೆ 8 ಕಡೆಗಳಲ್ಲಿ ತಿಂಗಳ ಕನಿಷ್ಠ ರಿಚಾರ್ಜ್ ದರದಲ್ಲಿ ಶೇ 57ರಷ್ಟು ಹೆಚ್ಚಳ ಮಾಡಿದ್ದ ಏರ್ಟೆಲ್, 155 ರೂ. ನಿಗದಿ ಮಾಡಿತ್ತು. ಇದೀಗ ಹೊಸದಾಗಿ ಘೋಷಿಸಿರುವ ಎರಡು ಪ್ರಿಪೇಯ್ಡ್ ಯೋಜನೆಗಳ ವಿವರ ಇಲ್ಲಿ ನೀಡಲಾಗಿದೆ.
ಏರ್ಟೆಲ್ 489 ರೂ. ಪ್ಲಾನ್
489 ರೂ. ಪ್ರಿಪೇಯ್ಡ್ ಪ್ಲಾನ್ ಅನ್ನು ಏರ್ಟೆಲ್ ಪರಿಚಯಿಸಿದೆ. ಇದರಲ್ಲಿ ಅನಿಯಮಿತ ಸ್ಥಳೀಯ, ಎಸ್ಟಿಡಿ ಹಾಗೂ ರೋಮಿಂಗ್ ಕರೆ ಸೌಲಭ್ಯ ನೀಡಲಾಗಿದೆ. ಜತೆಗೆ 30 ದಿನಗಳ ವ್ಯಾಲಿಡಿಟಿಯೊಂದಿಗೆ 300 ಉಚಿತ ಎಸ್ಎಂಎಸ್ ಮಾಡಬಹುದಾಗಿದೆ. 50 ಜಿಬಿ ಡೇಟಾ ದೊರೆಯಲಿದೆ. ಹೆಚ್ಚುವರಿಯಾಗಿ ಉಚಿತ ವಿಂಕ್ ಮ್ಯೂಸಿಕ್ ಸಬ್ಸ್ಕ್ರಿಪ್ಷನ್, ಉಚಿತ ಹಲೋ ಟ್ಯೂನ್ಸ್, ಅಪೋಲೊ 24 by 7 ಸರ್ಕಲ್ ಮತ್ತು ಫಾಸ್ಟ್ಟ್ಯಾಗ್ ರಿಚಾರ್ಜ್ಗೆ ಕ್ಯಾಶ್ಬ್ಯಾಕ್ ಆಯ್ಕೆಯನ್ನೂ ನೀಡಿದೆ.
ಏರ್ಟೆಲ್ 509 ರೂ. ಪ್ಲಾನ್
ಏರ್ಟೆಲ್ ಪರಿಚಯಿಸಿರುವ ಮತ್ತೊಂದು ಪ್ಲಾನ್ 509 ರೂ.ನದ್ದು. ಇದರಲ್ಲಿ ಅನಿಯಮಿತ ಸ್ಥಳೀಯ, ಎಸ್ಟಿಡಿ ಹಾಗೂ ರೋಮಿಂಗ್ ಕರೆ ಸೌಲಭ್ಯ ನೀಡಲಾಗಿದೆ. ಈ ಪ್ಲಾನ್ಗೆ 30 ದಿನಗಳ ವ್ಯಾಲಿಡಿಟಿ ಇದೆ. 300 ಉಚಿತ ಎಸ್ಎಂಎಸ್ ಹಾಗೂ 60 ಜಿಬಿ ಡೇಟಾ ದೊರೆಯಲಿದೆ. ಹೆಚ್ಚುವರಿಯಾಗಿ ಉಚಿತ ವಿಂಕ್ ಮ್ಯೂಸಿಕ್ ಸಬ್ಸ್ಕ್ರಿಪ್ಷನ್, ಉಚಿತ ಹಲೋ ಟ್ಯೂನ್ಸ್, ಅಪೋಲೊ 24 by 7 ಸರ್ಕಲ್ ಮತ್ತು ಫಾಸ್ಟ್ಟ್ಯಾಗ್ ರಿಚಾರ್ಜ್ಗೆ ಕ್ಯಾಶ್ಬ್ಯಾಕ್ ಆಯ್ಕೆ ಈ ಪ್ಲಾನ್ನಲ್ಲೂ ಲಭ್ಯವಿದೆ.
ಇದನ್ನೂ ಓದಿ: Airtel Recharge Price Hike: ಕರ್ನಾಟಕ ಸೇರಿ 8 ಕಡೆಗಳಲ್ಲಿ ಏರ್ಟೆಲ್ ತಿಂಗಳ ಕನಿಷ್ಠ ರಿಚಾರ್ಜ್ ದರ ಭಾರೀ ಹೆಚ್ಚಳ
ಈ ಮಧ್ಯೆ ಕನಿಷ್ಠ ರಿಚಾರ್ಜ್ ದರವನ್ನು ಏರ್ಟೆಲ್ ಹೆಚ್ಚಿಸಿದ್ದು, 155 ರೂ.ಗೆ ನಿಗದಿಪಡಿಸಿದೆ. ಹರಿಯಾಣ ಮತ್ತು ಒಡಿಶಾಗಳಲ್ಲಿ ನವೆಂಬರ್ನಲ್ಲಿ ಪ್ರಾಯೋಗಿಕವಾಗಿ ಈ ಪ್ಲಾನ್ ಜಾರಿಮಾಡಲಾಗಿತ್ತು. ಇದೀಗ ಕರ್ನಾಟಕ ಸೇರಿ 8 ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.
155 ರೂ. ಪ್ಲಾನ್ ವಿವರ ಇಲ್ಲಿದೆ
ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ. 1 ಜಿಬಿ ಮೊಬೈಲ್ ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯ ಈ ಪ್ಲಾನ್ನಲ್ಲಿದೆ. 300 ಎಸ್ಎಂಎಸ್ ಕೂಡ ಇರಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:49 pm, Fri, 27 January 23