Airtel Recharge Price Hike: ಕರ್ನಾಟಕ ಸೇರಿ 8 ಕಡೆಗಳಲ್ಲಿ ಏರ್ಟೆಲ್ ತಿಂಗಳ ಕನಿಷ್ಠ ರಿಚಾರ್ಜ್ ದರ ಭಾರೀ ಹೆಚ್ಚಳ
ಮುಂದಿನ ಕೆಲವೇ ದಿನಗಳಲ್ಲಿ ದೇಶದಾದ್ಯಂತ 155 ರೂ. ಪ್ಲಾನ್ ಅನ್ನು ಏರ್ಟೆಲ್ ಜಾರಿಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ. 155 ರೂ.ಗಿಂತ ಕಡಿಮೆ ಮೊತ್ತದ ಎಲ್ಲ ಕರೆ ಮತ್ತು ಎಸ್ಎಂಎಸ್ ಪ್ಲಾನ್ಗಳನ್ನು ರದ್ದುಗೊಳಿಸಲು ಕಂಪನಿ ಚಿಂತನೆ ನಡೆಸಿದೆ ಎನ್ನಲಾಗಿದೆ.

ನವದೆಹಲಿ: ಕರ್ನಾಟಕ ಸೇರಿದಂತೆ 8 ವೃತ್ತಗಳಲ್ಲಿ ತಿಂಗಳ ಕನಿಷ್ಠ ರಿಚಾರ್ಜ್ ದರವನ್ನು ಭಾರ್ತಿ ಏರ್ಟೆಲ್ (Bharti Airtel) ಶೇ 57ರಷ್ಟು ಹೆಚ್ಚಳ ಮಾಡಿದ್ದು, 155 ರೂ. ನಿಗದಿ ಮಾಡಿದೆ. ಆಂಧ್ರ ಪ್ರದೇಶ, ಬಿಹಾರ, ಉತ್ತರ ಪ್ರದೇಶ ಪಶ್ಚಿಮ, ಈಶಾನ್ಯ, ಜಮ್ಮು-ಕಾಶ್ಮೀರ, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶ ಕನಿಷ್ಠ ರಿಚಾರ್ಜ್ ದರ ಹೆಚ್ಚಳವಾಗಿರುವ ಇತರ ವೃತ್ತಗಳಾಗಿವೆ. 99 ರೂ. ಕನಿಷ್ಠ ರಿಚಾರ್ಜ್ ಪ್ಲಾನ್ ಅನ್ನು ಕಂಪನಿ ಸ್ಥಗಿತಗೊಳಿಸಿದೆ. ಈ ಪ್ಲಾನ್ನಲ್ಲಿ 200 ಎಂಬಿ ಡೇಟಾ, ಪ್ರತಿ ಸೆಕೆಂಡ್ಗೆ 2.5 ರೂ.ನಂತೆ ಕರೆ ಸೌಲಭ್ಯ ದೊರೆಯುತ್ತಿತ್ತು. 155 ರೂ. ಪ್ಲಾನ್ ಅನ್ನು ಆರಂಭದಲ್ಲಿ ಈ ಪ್ಲಾನ್ ಅನ್ನು ಹರಿಯಾಣ ಮತ್ತು ಒಡಿಶಾದಲ್ಲಿ ನವೆಂಬರ್ನಲ್ಲೇ ಜಾರಿಗೊಳಿಸಲಾಗಿತ್ತು. ಅಲ್ಲಿ ಈಗಾಗಲೇ 155 ರೂ. ಪ್ಲಾನ್ ಜಾರಿಯಾಗಿದ್ದು, ಅನಿಯಮಿತ ಕರೆ, 1 ಜಿಬಿ ಡೇಟಾ ಹಾಗೂ 300 ಎಸ್ಎಂಎಸ್ ಸೌಲಭ್ಯ ಒದಗಿಸಲಾಗುತ್ತಿದೆ. ನಂತರ ಇತರ ಕಡೆಗಳಿಗೆ ವಿಸ್ತರಿಸಲಾಗಿದೆ ಎಂದು ಏರ್ಟೆಲ್ ತಿಳಿಸಿದೆ.
ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವುದಕ್ಕಾಗಿ ಮೀಟರ್ಡ್ ಟಾರಿಫ್ ಅನ್ನು ಸ್ಥಗಿತಗೊಳಿಸಿದ್ದು 155 ರೂ. ಪ್ಲಾನ್ ಪರಿಚಯಿಸಿದ್ದೇವೆ. ಇದರಲ್ಲಿ ಅನಿಯಮಿತ ಕರೆ, 1 ಜಿಬಿ ಡೇಟಾ ಹಾಗೂ 300 ಎಸ್ಎಂಎಸ್ ದೊರೆಯಲಿದೆ. ಯಾವುದೇ ನಿರ್ಬಂಧಗಳಿಲ್ಲದೆ ಗ್ರಾಹಕರು ಈ ಪ್ಲಾನ್ನ ಪ್ರಯೋಜನ ಪಡೆಯಬಹುದಾಗಿದೆ. ಈ ಯೋಜನೆಯಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬುದಾಗಿ ಭಾವಿಸುತ್ತೇವೆ ಎಂದು ಏರ್ಟೆಲ್ ವಕ್ತಾರರು ತಿಳಿಸಿದ್ದಾರೆ.
ಮುಂದಿನ ಕೆಲವೇ ದಿನಗಳಲ್ಲಿ ದೇಶದಾದ್ಯಂತ 155 ರೂ. ಪ್ಲಾನ್ ಅನ್ನು ಏರ್ಟೆಲ್ ಜಾರಿಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ. 155 ರೂ.ಗಿಂತ ಕಡಿಮೆ ಮೊತ್ತದ ಎಲ್ಲ ಕರೆ ಮತ್ತು ಎಸ್ಎಂಎಸ್ ಪ್ಲಾನ್ಗಳನ್ನು ರದ್ದುಗೊಳಿಸಲು ಕಂಪನಿ ಚಿಂತನೆ ನಡೆಸಿದೆ ಎನ್ನಲಾಗಿದೆ.
ಇದನ್ನೂ ಓದಿ: Airtel 5G: ಕೇವಲ 30 ದಿನಗಳಲ್ಲಿ 10 ಲಕ್ಷ ಗ್ರಾಹಕರ ಸಂಪಾದಿಸಿದ ಏರ್ಟೆಲ್ 5ಜಿ
ಹರಿಯಾಣ ಮತ್ತು ಒಡಿಶಾ ವಲಯಗಳಲ್ಲಿ 28 ದಿನಗಳ ಅವಧಿಯ ಕನಿಷ್ಠ ರಿಚಾರ್ಜ್ ದರವನ್ನು ಭಾರ್ತಿ ಏರ್ಟೆಲ್ ನವೆಂಬರ್ 21ರಂದು ಪ್ರಾಯೋಗಿಕವಾಗಿ 155 ರೂ.ಗೆ ಹೆಚ್ಚಿಸಿತ್ತು. ಮುಂದಿನ ಕೆಲ ದಿನಗಳಲ್ಲಿ ದೇಶದಾದ್ಯಂತ ವಿಸ್ತರಿಸುವ ಸಾಧ್ಯತೆ ಇದೆ ಎಂದು ಆಗಲೇ ಕಂಪನಿಯ ಉನ್ನತ ಮೂಲಗಳು ತಿಳಿಸಿದ್ದವು. ಈ ಹಿಂದೆ ಕೂಡ ಏರ್ಟೆಲ್ ಇಂಥದ್ದೇ ಮಾದರಿ ಅನುಸರಿಸಿತ್ತು. ಕನಿಷ್ಠ ರಿಚಾರ್ಜ್ ದರವನ್ನು ಆಯ್ದ ವಲಯಗಳಲ್ಲಿ 79 ರೂ.ನಿಂದ 99 ರೂ.ಗೆ ಹೆಚ್ಚಿಸಿತ್ತು. ಬಳಿಕ ದೇಶದಾದ್ಯಂತ ಅನುಷ್ಠಾನಗೊಳಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:02 am, Wed, 25 January 23