Apple Logo: ಐಫೋನ್ ನ ಆ್ಯಪಲ್ ಲೋಗೋ ಹಿಂದಿದೆ ಇಂಟರೆಸ್ಟಿಂಗ್ ಸ್ಟೋರಿ, ಅದೇನು ಗೊತ್ತಾ? ಇಲ್ಲಿದೆ ನೋಡಿ

ಎಷ್ಟೇ ದುಬಾರಿಯಾಗಿದ್ದರೂ ಕೂಡ ಅದೆಷ್ಟೋ ಜನರಿಗೆ ಒಂದು ಆ್ಯಪಲ್ ಬ್ರ್ಯಾಂಡ್ ಫೋನ್​​ ಖರೀದಿಸಬೇಕೆಂಬ ಕನಸಿರುತ್ತದೆ. ಅಷ್ಟರ ಮಟ್ಟಿಗೆ ಟ್ರೆಂಡ್​​ ಸೆಟ್​ ಕ್ರಿಯೇಟ್​​ ಮಾಡಿದೆ ಈ ಬ್ರ್ಯಾಂಡ್. ಇದರ ಈ ಯಶಸ್ಸಿಗೆ ಪ್ರಮುಖ ಕಾರಣ ಇದರ ಸಂಸ್ಥಾಪಕ,  ಸಿಇಒ ಸ್ಟೀವ್ ಜಾಬ್ಸ್. ಈ ಐಫೋನ್ ನ ಆ್ಯಪಲ್ ಲೋಗೋ ಹಿಂದಿದೆ ಇಂಟರೆಸ್ಟಿಂಗ್ ಸ್ಟೋರಿ, ಅದೇನು ಗೊತ್ತಾ? ಈ ಸ್ಟೋರಿ ಓದಿ.

Apple Logo: ಐಫೋನ್ ನ ಆ್ಯಪಲ್ ಲೋಗೋ ಹಿಂದಿದೆ ಇಂಟರೆಸ್ಟಿಂಗ್ ಸ್ಟೋರಿ, ಅದೇನು ಗೊತ್ತಾ? ಇಲ್ಲಿದೆ ನೋಡಿ
Follow us
ಅಕ್ಷತಾ ವರ್ಕಾಡಿ
| Updated By: ರಮೇಶ್ ಬಿ. ಜವಳಗೇರಾ

Updated on:Jan 29, 2023 | 10:37 PM

ಪ್ರಪಂಚದ ಅತೀ ದೊಡ್ಡ ಕಂಪೆನಿಯಾಗಿ ಹೊರಹೊಮ್ಮಿರುವ ಆ್ಯಪಲ್(Apple)​​, ಇನ್ನೂ ಕೂಡ ಅದೇ ಕ್ರೇಜ್ ಜನರಲ್ಲಿ ಉಳಿದುಕೊಳ್ಳುವಂತೆ ಮಾಡಿದೆ. ಇದಕ್ಕೆ ಪ್ರಮುಖ ಕಾರಣ ಇದರ ಗುಣಮಟ್ಟ. ಇಂದಿನ ಯುವ ಪೀಳಿಗೆಗಂತೂ ಆ್ಯಪಲ್​​ ಫೋನ್(Apple iPhone) ​​ ಸಕ್ಕತ್ತ್​​​ ಫೇವರೇಟ್. ಎಷ್ಟೇ ದುಬಾರಿಯಾಗಿದ್ದರೂ ಕೂಡ ಅದೆಷ್ಟೋ ಜನರಿಗೆ ಒಂದು ಆ್ಯಪಲ್ ಬ್ರ್ಯಾಂಡ್ ಫೋನ್​​ ಖರೀದಿಸಬೇಕೆಂಬ ಕನಸಿರುತ್ತದೆ. ಅಷ್ಟರ ಮಟ್ಟಿಗೆ ಟ್ರೆಂಡ್​​ ಸೆಟ್​ ಕ್ರಿಯೇಟ್​​ ಮಾಡಿದೆ ಈ ಬ್ರ್ಯಾಂಡ್. ಇದರ ಈ ಯಶಸ್ಸಿಗೆ ಪ್ರಮುಖ ಕಾರಣ ಇದರ ಸಂಸ್ಥಾಪಕ,  ಸಿಇಒ ಸ್ಟೀವ್ ಜಾಬ್ಸ್. ಈ ಐಫೋನ್ ನ ಆ್ಯಪಲ್ ಲೋಗೋ ಹಿಂದಿದೆ ಇಂಟರೆಸ್ಟಿಂಗ್ ಸ್ಟೋರಿ, ಅದೇನು ಗೊತ್ತಾ? ಈ ಸ್ಟೋರಿ ಓದಿ.

ಆ್ಯಪಲ್ ಕಂಪೆನಿಯು ಅತ್ಯಂತ ಚಿಕ್ಕದಾಗಿ 1976 ರಲ್ಲಿ ಕ್ಯಾಲಿಫೋರ್ನಿಯಾದ ಲಾಸ್ ಆಲ್ಟೋಸ್‌ನಲ್ಲಿ ಪ್ರಾರಂಭವಾಯಿತು. ಸ್ಟೀವ್ ಜಾಬ್ಸ್ ಇದರ ಸೃಷ್ಟಿಕರ್ತ. ಅತ್ಯಂತ ಚಿಕ್ಕದಾಗಿ ಪ್ರಾರಂಭಗೊಂಡ ಈ ಕಂಪೆನಿ ಇಂದು ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿದೆ. 1977 ರಲ್ಲಿ, ಅಧಿಕೃತವಾಗಿ ಆ್ಯಪಲ್ ಕಂಪನಿಯಾಯಿತು. ಮೊದಲಿಗೆ ಕಂಪ್ಯೂಟರ್‌ಗಳನ್ನು ಮಾರಾಟ ಮಾಡುತ್ತಿದ್ದ ಈ ಕಂಪೆನಿ, ನಂತರ ಮೊಬೈಲ್​​ ಪ್ರಾರಂಭಿಸಿ, ಈಗ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಕೂಡ ಆರಂಭಿಸಿದೆ.

ಸ್ಟೀವ್ ಜಾಬ್ಸ್ ಅವರಿಗೆ ಬಹಳ ಪ್ರಿಯವಾದ ಹಣ್ಣು ಸೇಬು ಹಾಗೂ ಅವರಿಗೆ ಬಹಳ ಇಷ್ಟವಾದ ವಿಜ್ಞಾನಿ ಸರ್ ಐಸಾಕ್ ನ್ಯೂಟನ್. ಆದ್ದರಿಂದಲೇ 1976ರಲ್ಲಿ ಮೊದಲ ಬಾರಿ ತಯಾರಿಸಿದ ಈ ಕಂಪೆನಿಯ ಮೊದಲ ಲೋಗೊದಲ್ಲಿ ಸೇಬು​ ಮರದ ಕೆಳಗೆ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ಕಾಣಬಹುದು. ಆದರೆ ಈ ಲೋಗೋ ಸ್ಟೀವ್ ಜಾಬ್ಸ್​​​ಗೆ ಅಷ್ಟೊಂದು ಇಷ್ಟವಾಗದ ಕಾರಣದಿಂದಾಗಿ 1977ರಲ್ಲಿ ರಾಬ್ ಜಾನೋಫ್ ಎಂಬ ಹೆಸರಿನ ಗ್ರಾಫಿಕ್ ಡಿಸೈನರ್​​ನ ನೇಮಿಸಿ ಹೊಸ ಆಪಲ್​​ ಡಿಸೈನ್​​​ ಕ್ರಿಯೇಟ್​​ ಮಾಡ್ತಾರೆ. ಇದು ಅರ್ಥ ಕಚ್ಚಿದ ಸೇಬು ಹಣ್ಣಿನ ಆಕಾರವನ್ನು ಯಾಕೆ ಹೊಂದಿದೆ ಎಂಬ ಪ್ರಶ್ನೆ ಸಾಕಷ್ಟು ಮಟ್ಟಿಗೆ ಹರಿದಾಡುತ್ತದೆ. ಈ ಎಲ್ಲ ಪ್ರಶ್ನೆಗಳಿಗೆ ಸ್ಟೀವ್ ಜಾಬ್ಸ್ ಉತ್ತರ ನೀಡುತ್ತಾರೆ.

ಇದನ್ನು ಓದಿ: ಪ್ರಪಂಚದ ಅತಿದೊಡ್ಡ ಕಪ್ಪೆ ಗೊಲಿಯತ್, ಗುಲಾಬಿ ಬಣ್ಣದ ಹಾಲು ನೀಡುವ ಪ್ರಾಣಿ ನೀರಾನೆ

ಪ್ರಾರಂಭದಲ್ಲಿ ಪೂರ್ತಿಯಾಗಿ ಸೇಬು ಹಣ್ಣನ್ನು ಬಿಡಿಸಲಾಗಿದ್ದರೂ ಸಹ ಅದು ಚೆರಿ ಹಣ್ಣನ್ನು ಹೋಲುತ್ತದೆ ಎಂಬ ಕಾರಣಕ್ಕಾಗಿ, ಈ ರೀತಿಯಾಗಿ ಲೋಗೋ ತಯಾರಿಸಲಾಯಿತು ಎಂದು ಹೇಳುತ್ತಾರೆ. ಇದು ಹೊಸ ರೀತಿಯ ಮಾರ್ಕೆಟಿಂಗ್​​ ಸ್ಟಾಟರ್ಜಿಯಾಗಿರುವುದನ್ನು ಕಾಣಬಹುದು. ಇದಲ್ಲದೇ ಆಧುನಿಕ ಕಂಪ್ಯೂಟರ್‌ನ ಪಿತಾಮಹ ಅಲನ್ ಟ್ಯೂರಿಂಗ್ ಸೈನೈಡ್ ಮಿಶ್ರಿತ ಸೇಬನ್ನು ತಿಂದ ಕಾರಣ ಮೃತಪಟ್ಟಿದ್ದರು. ಆದ್ದರಿಂದ ಅವರ ಗೌರವಾರ್ಥವಾಗಿ ಆ್ಯಪಲ್ ಹಣ್ಣಿನ ಲೋಗೋ ಬಳಸಲಾಗುತ್ತದೆ ಎಂದು ಹೇಳಲಾಗುತ್ತದೆ.

1977ರಲ್ಲಿ ಕಾಮನಬಿಲ್ಲಿನ ಬಣ್ಣದಲ್ಲಿ ರಚಿಸಲಾಗಿದ್ದ ಈ ಲೋಗೋವನ್ನು ಮುಂದಿನ 20 ವರ್ಷಗಳ ವರೆಗೆ ಅಂದರೆ 1977 ರಿಂದ 1998ವರೆಗೆ ಬಳಸಲಾಯಿತು. ಸ್ಟೀವ್ ಜಾಬ್ಸ್ 1997 ರಲ್ಲಿ ಆಪಲ್‌ಗೆ ಹಿಂದಿರುಗಿದ ಒಂದು ವರ್ಷದ ನಂತರ ಅಂದರೆ 1998ರಿಂದ 2000ರವರೆಗೆ ಗಾಢ ಕಪ್ಪು ಬಣ್ಣದ ಆಪಲ್​​ ಲೋಗೋ, 2001ರಿಂದ 2007ರ ವರೆಗೆ ಆಕಾಶ ನೀಲಿ ಬಣ್ಣದಲ್ಲಿ ತ್ರಿಡಿ ಲೋಗೋ ವಿನ್ಯಾಸಗೊಳಿಸಲಾಯಿತು. ಪ್ರಸ್ತುತ ಈಗ ಬಿಳಿ ಬಣ್ಣದಲ್ಲಿ ಕಾಣಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 5:17 pm, Sun, 29 January 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ