AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp Features: ಅಪರಿಚಿತರಿಂದ ಕರೆ ಬರುತ್ತಿದ್ದರೆ ಟೆನ್ಶನ್ ಬೇಡ: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಊಹಿಸಲಾಗದ ಫೀಚರ್

ಅಪರಿಚಿತ ಕರೆಗಳನ್ನು ಮ್ಯೂಟ್ ಮಾಡುವಂತಹ ಆಯ್ಕೆಯನ್ನು ವಾಟ್ಸ್​ಆ್ಯಪ್ ನೀಡಲು ಮುಂದಾಗಿದೆ. ಅಂದರೆ ಎಲ್ಲ ಅಪರಿಚಿತ ಸಂಖ್ಯೆಗಳು ಅಥವಾ ಸೇವ್‌ ಮಾಡಿರದ ಕಾಂಟೆಕ್ಟ್​ಗಳಿಂದ ಬರುವ ಕರೆಗಳ ವಿರುದ್ಧ ಇದು ಕ್ರಮ ಕೈಗೊಳ್ಳುತ್ತದೆ.

WhatsApp Features: ಅಪರಿಚಿತರಿಂದ ಕರೆ ಬರುತ್ತಿದ್ದರೆ ಟೆನ್ಶನ್ ಬೇಡ: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಊಹಿಸಲಾಗದ ಫೀಚರ್
WhatsApp
Vinay Bhat
|

Updated on: Mar 06, 2023 | 11:53 AM

Share

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ ಪ್ರತಿ ದಿನ ಒಂದಲ್ಲ ಒಂದು ಹೊಸ ಫೀಚರ್​ಗಳ ಘೋಷಣೆ ಮಾಡುತ್ತಲೇ ಇದೆ. ಈಗಾಗಲೇ ತನ್ನ ಬಳಕೆದಾರರನ್ನು 2000 ಮಿಲಿಯನ್​ಗೆ ತಲುಪಿರುವ ವಾಟ್ಸ್​ಆ್ಯಪ್ (WhatsApp) ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಅಗತ್ಯವಿರುವ ಎಲ್ಲ ಆಯ್ಕೆಗಳನ್ನು ಒಂದೊಂದಾಗಿ ನೀಡುತ್ತಿರುವ ಇದರಲ್ಲಿ ಆಂಡ್ರಾಯ್ಡ್ (Android), ಐಒಎಸ್, ಟ್ಯಾಬ್ಲೆಟ್ ಹಾಗೂ ವೆಬ್ ಬಳಕೆದಾರರಿಗೆ ನೂತನ ಫೀಚರ್ಸ್ ನೀಡುವಲ್ಲಿ ನಿರತವಾಗಿದೆ. ಎರಡು ದಿನಗಳ ಹಿಂದೆಯಷ್ಟೆ ಟ್ಯಾಬ್ಲೆಟ್​ನಲ್ಲಿ ಸ್ಪ್ಲಿಟ್ ವ್ಯೂ ಫೀಚರ್ಸ್‌ ನೀಡುವುದಾಗಿ ಘೋಷಣೆ ಮಾಡಿದ್ದ ಕಂಪನಿ ಇದೀಗ ಮತ್ತೊಂದು ಉಪಯುಕ್ತ ಆಯ್ಕೆಯನ್ನು ನೀಡಲು ಮುಂದಾಗಿದೆ. ಈ ಫೀಚರ್ ಮೂಲಕ ಬಳಕೆದಾರರು ಅಪರಿಚಿತ ಕರೆ ಹಾಗೂ ಅನವಶ್ಯಕ ಕರೆಗಳಿಂದ ಮುಕ್ತಿ ಪಡೆಯಬಹುದು.

ಅಪರಿಚಿತ ಕರೆಗಳನ್ನು ಮ್ಯೂಟ್ ಮಾಡುವಂತಹ ಆಯ್ಕೆಯನ್ನು ವಾಟ್ಸ್​ಆ್ಯಪ್ ನೀಡಲು ಮುಂದಾಗಿದೆ. ಅಂದರೆ ಎಲ್ಲ ಅಪರಿಚಿತ ಸಂಖ್ಯೆಗಳು ಅಥವಾ ಸೇವ್‌ ಮಾಡಿರದ ಕಾಂಟೆಕ್ಟ್​ಗಳಿಂದ ಬರುವ ಕರೆಗಳ ವಿರುದ್ಧ ಇದು ಕ್ರಮ ಕೈಗೊಳ್ಳುತ್ತದೆ. ಆರಂಭದಲ್ಲಿ ಆಂಡ್ರಾಯ್ಡ್‌ ಬಳಕೆದಾರರಿಗೆ ಈ ಫೀಚರ್ಸ್‌ ಲಭ್ಯವಾಗಲಿದೆ.

Smartphones: ಹುಬ್ಬೇರಿಸುವಂತಹ ಫೀಚರ್​ಗಳಿದ್ದರೂ ಮಾರುಕಟ್ಟೆಯಲ್ಲಿ ಫೇಲ್ ಆದ ಸ್ಮಾರ್ಟ್​ಫೋನ್​ಗಳು ಯಾವುವು ಗೊತ್ತೇ?

ಇದನ್ನೂ ಓದಿ
Image
Vivo V27 Pro: ಭರ್ಜರಿ ಫೀಚರ್ಸ್​ನ ವಿವೋ V27 ಪ್ರೊ ಸ್ಮಾರ್ಟ್​ಫೋನ್ ಇಂದಿನಿಂದ ಖರೀದಿಗೆ ಲಭ್ಯ: ಬೆಲೆ ಎಷ್ಟು?
Image
Jio vs Airtel: ದಿನಕ್ಕೆ 2GB ಡೇಟಾ: ಜಿಯೋ-ಏರ್ಟೆಲ್​ನ ಬಂಪರ್ ಪ್ಲಾನ್ ಇಲ್ಲಿದೆ ನೋಡಿ
Image
WhatsApp New Features: ವಾಟ್ಸ್​ಆ್ಯಪ್​ನಲ್ಲಿ ಬಹುನಿರೀಕ್ಷಿತ ಫೀಚರ್: ಏನಿದು ಸ್ಪ್ಲಿಟ್ ವ್ಯೂ ಆಯ್ಕೆ?
Image
iPhone 13 Offer: ಹೋಳಿ ಹಬ್ಬಕ್ಕೆ ಬಂಪರ್ ಆಫರ್: ಐಫೋನ್ ಖರೀದಿಗೆ ಇದಕ್ಕಿಂತ ಒಳ್ಳೆಯ ಸಮಯ ಬರಲ್ಲ

ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನ ವಾಟ್ಸ್​ಆ್ಯಪ್ ಸೆಟ್ಟಿಂಗ್‌ ವಿಭಾಗದಲ್ಲಿ ‘ಅನಾಮಿಕ ಕರೆ ಮಾಡುವವರನ್ನು ಮ್ಯೂಟ್‌ ಮಾಡು’ ಎಂಬ ಫೀಚರ್ಸ್‌ ಕಾಣಿಸಲಿದೆ. ಇದರಲ್ಲಿ ಆನ್‌ ಹಾಗೂ ಆಫ್‌ ಎಂಬ ಆಯ್ಕೆಯನ್ನು ನೀಡಲಾಗಿದ್ದು, ನೀವು ಇದನ್ನು ಆಫ್‌ ಮಾಡಿದಾಗ ಅಪರಿಚಿತ ನಂಬರ್​ನಿಂದ ವಾಟ್ಸ್​ಆ್ಯಪ್ ಕಾಲ್‌ ಬರುವುದಿಲ್ಲ. ಆದರೆ, ನೋಟಿಫಿಕೇಶನ್‌ ಬಾರ್‌ನಲ್ಲಿ ಈ ಕರೆಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಸದ್ಯಕ್ಕೆ ಈ ಫೀಚರ್ಸ್ ಅಭಿವೃದ್ಧಿ ಹಂತದಲ್ಲಿದೆ. ಶೀಘ್ರದಲ್ಲೇ ಪರೀಕ್ಷೆ ಉದ್ದೇಶಕ್ಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಿದೆ.

ಸ್ಪ್ಲಿಟ್ ವ್ಯೂ ಫೀಚರ್ಸ್‌:

ವಾಟ್ಸ್​ಆ್ಯಪ್ ತನ್ನ ಟ್ಯಾಬ್ಲೆಟ್ ಯೂಸರ್ಸ್​ಗೆ ಸ್ಪ್ಲಿಟ್ ವ್ಯೂ ಎಂಬ ವಿಶೇಷ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ. ಈಗಾಗಲೇ ಈ ಆಯ್ಕೆ ಸ್ಮಾರ್ಟ್​ಫೋನ್​ಗಳಲ್ಲಿ ಇದೆ. ಇದರ ಮೂಲಕ ಒಂದೇ ಮೊಬೈಲ್‌ನಲ್ಲಿ ಎರಡೆರಡು ಆ್ಯಪ್‌ಗಳನ್ನು ಏಕಕಾಲದಲ್ಲಿ ಬಳಕೆ ಮಾಡಬಹುದು. ಇದೀಗ ಈ ಫೀಚರ್ ಅನ್ನು ವಾಟ್ಸ್​ಆ್ಯಪ್ ತನ್ನ ಟ್ಯಾಬ್ಲೆಟ್ ಬಳಕೆದಾರರಿಗೆ ನೀಡಲು ಮುಂದಾಗಿದೆ. ಸ್ಪ್ಲಿಟ್ ವ್ಯೂ ಫೀಚರ್ಸ್‌ ಮೂಲಕ ಒಮ್ಮೆಲೆ ಒಂದೇ ಡಿಸ್‌ಪ್ಲೇನಲ್ಲಿ ಎರಡು ಆ್ಯಪ್​ಗಳನ್ನು ತೆರೆಯಲು ಅವಕಾಶ ನೀಡುತ್ತದೆ.

ಇದು ವಾಟ್ಸ್​ಆ್ಯಪ್​ನಲ್ಲಿ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ನೀವು ಒಬ್ಬರ ಜೊತೆ ಚಾಟಿಂಗ್​ನಲ್ಲಿ ನಿರತವಾಗುವುದರ ಜೊತೆಗೆ ಇನ್ನೊಂದು ಬದಿಯಲ್ಲಿ ವಾಟ್ಸ್​ಆ್ಯಪ್​ನ ಇತರೆ ಫೀಚರ್ಸ್‌ ಅನ್ನು ಸಹ ಬಳಕೆ ಮಾಡಿಕೊಳ್ಳಬಹುದು. ಸ್ಪ್ಲಿಟ್ ವ್ಯೂ ಆಯ್ಕೆಯನ್ನು ಸದ್ಯಕ್ಕೆ ಪರೀಕ್ಷಿಸಲಾಗುತ್ತಿದ್ದು, ಟ್ಯಾಬ್ಲೆಟ್‌ಗಳಿಗಾಗಿ ಆಂಡ್ರಾಯ್ಡ್ ಬೀಟಾದಲ್ಲಿ ಇದನ್ನು ಹೊರತರಲು ಯೋಜಿಸಲಾಗುತ್ತಿದೆ. WABetaInfo ಈ ಬಗ್ಗೆ ವರದಿ ಮಾಡಿದ್ದು, ಆಂಡ್ರಾಯ್ಡ್ ಟ್ಯಾಬ್ಲೆಟ್ ಬಳಕೆದಾರರು ವಾಟ್ಸ್​ಆ್ಯಪ್​ನ ಸ್ಪ್ಲಿಟ್ ವ್ಯೂ ಫೀಚರ್ಸ್‌ ಅನ್ನು ಬಳಕೆ ಮಾಡಲು ಅನುಮತಿಸಲಾಗುತ್ತದೆ ಎಂದು ಉಲ್ಲೇಖಿಸಿದೆ.

ಈ ಆಯ್ಕೆ ಬಳಕೆದಾರರಿಗೆ ಲಭ್ಯವಾದರೆ ವಾಟ್ಸ್​ಆ್ಯಪ್ ಚಾಟ್‌ನಿಂದ ನಿರ್ಗಮಿಸುವ ಅಗತ್ಯವಿಲ್ಲದೇ ಚಾಟ್‌ ಪಟ್ಟಿಯನ್ನು ತ್ವರಿತವಾಗಿ ಸ್ಕ್ರೋಲ್ ಮಾಡುವ ಮೂಲಕ ಚಾಟ್‌ಗಳನ್ನು ಕಂಟ್ರೋಲ್‌ ಮಾಡಲು ಇದು ಸಹಾಯ ಮಾಡುತ್ತದೆ. ಇದರಿಂದಾಗಿ ಬಳಕೆದಾರರಿಗೆ ಸಮಯದ ವ್ಯರ್ಥವಾಗದೆ ಸುಲಭವಾಗಿ ಹಾಗೂ ವೇಗವಾಗಿ ಬೇಕಾದ ಚಾಟ್​ನಲ್ಲಿ ಸಕ್ರಿಯವಾಗಬಹುದು. ಟ್ಯಾಬ್ಲೆಟ್ ಬಳಿಕ ಈ ಆಯ್ಕೆ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೂ ಬರುವ ನಿರೀಕ್ಷೆ ಇದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್