Xiaomi 13 Pro: ಮೂರು ಕ್ಯಾಮೆರಾ ಕೂಡ 50MP ಸೆನ್ಸಾರ್: ಇಂದಿನಿಂದ ಶವೋಮಿ 13 ಪ್ರೊ ಖರೀದಿಗೆ ಲಭ್ಯ: 10,000 ರೂ. ಡಿಸ್ಕೌಂಟ್

ಚೀನಾ ಮೂಲದ ಶವೋಮಿ ಕಂಪನಿ ಕಳೆದ ವಾರ ಶವೋಮಿ 13, ಶವೋಮಿ 13 ಪ್ರೊ ಮತ್ತು ಶವೋಮಿ 13 ಲೈಟ್ ಎಂಬ ಮೂರು ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿತ್ತು. ಈ ಪೈಕಿ ಶವೋಮಿ 13 ಪ್ರೊ ಫೋನ್ ಇಂದಿನಿಂದ ಭಾರತದಲ್ಲಿ ಮಾರಾಟ ಕಾಣುತ್ತಿದೆ.

Xiaomi 13 Pro: ಮೂರು ಕ್ಯಾಮೆರಾ ಕೂಡ 50MP ಸೆನ್ಸಾರ್: ಇಂದಿನಿಂದ ಶವೋಮಿ 13 ಪ್ರೊ ಖರೀದಿಗೆ ಲಭ್ಯ: 10,000 ರೂ. ಡಿಸ್ಕೌಂಟ್
Xiaomi 13 Pro
Follow us
Vinay Bhat
|

Updated on: Mar 06, 2023 | 1:55 PM

ಭಾರತೀಯ ಸ್ಮಾರ್ಟ್​ಫೋನ್ (Smartphone) ಬಳಕೆದಾರರ ಮನಸ್ಥಿತಿಯನ್ನು ಚೆನ್ನಾಗಿ ಅರಿತುಕೊಂಡಿರುವ ಚೀನಾ ಮೂಲದ ಶವೋಮಿ ಕಂಪನಿ ನೂತನ ಮೊಬೈಲ್​ಗಳನ್ನು ಬಿಡುಗಡೆ ಮಾಡುವುದು ಕಡಿಮೆ ಆಗಿದೆ. ಬಜೆಟ್ ಬೆಲೆಗೆ ರೆಡ್ಮಿ ಫೋನನ್ನು ಅನಾವರಣ ಮಾಡಿದರೆ ತನ್ನ ಪ್ರಮುಖ ಬ್ರ್ಯಾಂಡ್ ಶವೋಮಿ ಅಡಿಯಲ್ಲಿ ಅಪರೂಪಕ್ಕೆ ಬಲಿಷ್ಠವಾದ ಮೊಬೈಲ್ ಅನ್ನು ರಿಲೀಸ್ ಮಾಡುತ್ತಿದೆ. ಇದೇ ಸಾಲಿನಲ್ಲಿ ಕಳೆದ ವಾರ ಬಿಡುಗಡೆ ಆಗಿದ್ದು ಶವೋಮಿ 13 ಸರಣಿ (Xiaomi 13). ಇದರಲ್ಲಿ ಶವೋಮಿ 13, ಶವೋಮಿ 13 ಪ್ರೊ ಮತ್ತು ಶವೋಮಿ 13 ಲೈಟ್ ಎಂಬ ಮೂರು ಸ್ಮಾರ್ಟ್​ಫೋನ್​ಗಳು ಇದೆ. ಈ ಪೈಕಿ ಶವೋಮಿ 13 ಪ್ರೊ (Xiaomi 13 Pro) ಫೋನ್ ಇಂದಿನಿಂದ ಭಾರತದಲ್ಲಿ ಮಾರಾಟ ಕಾಣುತ್ತಿದೆ. ಇದರಲ್ಲಿ ಹುಬ್ಬೇರಿಸುವಂತಹ ಫೀಚರ್​ಗಳು ಅಡಕವಾಗಿದ್ದು ಬಲಿಷ್ಠ ಪ್ರೊಸೆಸರ್‌, ಆಕರ್ಷಕ ಕ್ಯಾಮೆರಾ ನೀಡಲಾಗಿದೆ. ಈ ಫೋನ್​ಗಳ ಬೆಲೆ, ಫೀಚರ್ಸ್ ಹಾಗೂ ಆಫರ್​ಗಳ ಕುರಿತ ಮಾಹಿತಿ ಇಲ್ಲಿದೆ.

ಬೆಲೆ ಮತ್ತು ಆಫರ್ ಏನಿದೆ?:

ಭಾರತದಲ್ಲಿ ಶವೋಮಿ 13 ಪ್ರೊ 5G ಸ್ಮಾರ್ಟ್‌ಫೋನ್‌ ಒಂದು ಆಯ್ಕೆಯಲ್ಲಷ್ಟೆ ರಿಲೀಸ್ ಆಗಿತ್ತು. ಇದರ 12GB RAM + 256GB ವೇರಿಯಂಟ್‌ ಬೆಲೆಯು 79,999 ರೂ. ಆಗಿದೆ. ಮೊದಲ ಸೇಲ್ ಪ್ರಯುಕ್ತ ವಿಶೇಷ ಆಫರ್ ಕೂಡ ಘೋಷಣೆ ಮಾಡಲಾಗಿದ್ದು, ಐಸಿಐಸಿಐ ಬ್ಯಾಂಕ್‌ ಗ್ರಾಹಕರು 10,000 ರೂ. ಗಳ ಭರ್ಜರಿ ರಿಯಾಯಿತಿ ಪಡೆಯಬಹುದು. 8,000 ರೂ. ವರೆಗಿನ ಎಕ್ಸ್‌ಚೇಂಜ್‌ ಕೊಡುಗೆ ಸಹ ಲಭ್ಯವಾಗುತ್ತಿದೆ. ಈ ಫೋನ್ ಸಿರಾಮಿಕ್ ಬ್ಲ್ಯಾಕ್‌ ಮತ್ತು ಸಿರಾಮಿಕ್ ವೈಟ್‌ ಎರಡು ಬಣ್ಣಗಳಲ್ಲಿ ಸಿಗುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್‌ ಸೇರಿದಂತೆ ಎಂಐ ಸ್ಟೋರ್‌ ಹಾಗೂ ಎಂಐ ಹೋಮ್‌ ಶಾಪ್‌ಗಳಲ್ಲಿ ಖರೀದಿಸಬಹುದು.

ಇದನ್ನೂ ಓದಿ
Image
Best Smartphones: ಕಡಿಮೆ ಬೆಲೆಯ ಮೊಬೈಲ್ ಬೇಕೇ?: ಇಲ್ಲಿದೆ ನೋಡಿ 10,000 ರೂ. ಒಳಗಿನ ಟಾಪ್ 5 ಸ್ಮಾರ್ಟ್​ಫೋನ್
Image
WhatsApp Features: ಅಪರಿಚಿತರಿಂದ ಕರೆ ಬರುತ್ತಿದ್ದರೆ ಟೆನ್ಶನ್ ಬೇಡ: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಊಹಿಸಲಾಗದ ಫೀಚರ್
Image
Vivo V27 Pro: ಭರ್ಜರಿ ಫೀಚರ್ಸ್​ನ ವಿವೋ V27 ಪ್ರೊ ಸ್ಮಾರ್ಟ್​ಫೋನ್ ಇಂದಿನಿಂದ ಖರೀದಿಗೆ ಲಭ್ಯ: ಬೆಲೆ ಎಷ್ಟು?
Image
Jio vs Airtel: ದಿನಕ್ಕೆ 2GB ಡೇಟಾ: ಜಿಯೋ-ಏರ್ಟೆಲ್​ನ ಬಂಪರ್ ಪ್ಲಾನ್ ಇಲ್ಲಿದೆ ನೋಡಿ

WhatsApp New Features: ವಾಟ್ಸ್​ಆ್ಯಪ್​ನಲ್ಲಿ ಬಹುನಿರೀಕ್ಷಿತ ಫೀಚರ್: ಏನಿದು ಸ್ಪ್ಲಿಟ್ ವ್ಯೂ ಆಯ್ಕೆ?

ಏನು ಫೀಚರ್ಸ್?:

ಶವೋಮಿ 13 ಪ್ರೊ ಸ್ಮಾರ್ಟ್​ಫೋನ್ 3200*1440 ಪಿಕ್ಸೆಲ್ಸ್ ರೆಸಲೂಷನ್ ಸಾಮರ್ಥ್ಯದ 6.73 ಇಂಚಿನ ಫುಲ್ HD+ E6 ಅಮೋಲ್ಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್‌ ರೆಟ್‌, ಕಾರ್ನಿಂಗ್ ಗೋರಿಲ್ಲ ಗ್ಲಾಸ್ 5 ಪ್ರೊಟೆಕ್ಷನ್ ಮತ್ತು ಡಾಲ್ಬಿ ವಿಷನ್ ಬೆಂಬಲವನ್ನು ಪಡೆದಿದೆ. ಇದರಲ್ಲಿ ಆಕ್ಟಾ-ಕೋರ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 4nm ಪ್ರೊಸೆಸರ್‌ ನೀಡಲಾಗಿದ್ದು MIUI 14 ಆಧಾರಿತ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೋನಿ IMX989 ಸೆನ್ಸಾರ್‌, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್​ನ ಆಲ್ಟ್ರಾ-ವೈಡ್ ಆ್ಯಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ ಕೂಡ 50 ಮೆಗಾಪಿಕ್ಸೆಲ್​ನ ಟೆಲಿಫೋಟೋ ಕ್ಯಾಮೆರಾ ನೀಡಲಾಗಿದೆ. ಇದರಲ್ಲಿ 8K ವಿಡಿಯೋ ರೆಕಾರ್ಡಿಂಗ್ ಆಯ್ಕೆ ಇರುವುದು ವಿಶೇಷ. ಇವುಗಳ ಜೊತೆಗೆ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಮುಖ್ಯವಾಗಿ ಕ್ಯಾಮೆರಾ ರಚನೆಯಲ್ಲಿ Leica ಲೆನ್ಸ್‌ ಬಳಕೆ ಮಾಡಿರುವುದು ಪ್ಲಸ್‌ ಪಾಯಿಂಟ್‌.

ಶವೋಮಿ 13 ಪ್ರೊನಲ್ಲಿ 4820mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದು, ಇದಕ್ಕೆ ತಕ್ಕಂತೆ 120W ಫಾಸ್ಟ್ ಚಾರ್ಜರ್ ಸೌಲಭ್ಯ ಇದೆ. ಅಂತೆಯೆ 10W ವಯರ್​ಲೆಸ್ ಚಾರ್ಜಿಂಗ್ ಆಯ್ಕೆ ಕೂಡ ಇದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಬೆಂಬಲ ಪಡೆದಿರುವ ಜೊತೆಗೆ ವೈಫೈ 7, ಬ್ಲೂಟೂತ್ 5.3, USB ಟೈಪ್-C ಪೋರ್ಟ್‌ ಸೇರಿದಂತೆ ಇತ್ತೀಚೆಗಿನ ಎಲ್ಲ ಆಯ್ಕೆ ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ