Big Saving Days Sale: iPhone14 ಭಾರೀ ಕಡಿಮೆ ಬೆಲೆಗೆ; ಫ್ಲಿಪ್​ಕಾರ್ಟ್​ನಲ್ಲಿ ಭರ್ಜರಿ ಸೇಲ್ ಆಫರ್ಸ್

Flipkart Offer From March 11-15: ಮಾರ್ಚ್ 11ರಿಂದ 15ರವರೆಗೆ ಐದು ದಿನಗಳ ಕಾಲ ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ಸೇವಿಂಗ್ ಡೇಸ್ ಹೆಸರಿನಲ್ಲಿ ಮಾರಾಟ ಸುಗ್ಗಿ ಆಗಲಿದೆ. ಐಫೋನ್, ಗೆಲಾಕ್ಸಿ ಎಸ್21, ಗೂಗಲ್ ಪಿಕ್ಸೆಲ್7 ಮೊದಲಾದ ಬೇಡಿಕೆಯ ಸ್ಮಾರ್ಟ್​ಫೋನ್​​ಗಳು ಕಡಿಮೆ ಬೆಲೆಗೆ ಸಿಗಲಿವೆ.

Big Saving Days Sale: iPhone14 ಭಾರೀ ಕಡಿಮೆ ಬೆಲೆಗೆ; ಫ್ಲಿಪ್​ಕಾರ್ಟ್​ನಲ್ಲಿ ಭರ್ಜರಿ ಸೇಲ್ ಆಫರ್ಸ್
ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 06, 2023 | 4:14 PM

ಆನ್​ಲೈನ್ ಮಾರುಕಟ್ಟೆ ಸ್ಥಳ ಫ್ಲಿಪ್​ಕಾರ್ಟ್​ನಲ್ಲಿ ಈ ಹೋಳಿ ಸೀಸನ್​ನಲ್ಲಿ (Flipkart Sales in Holi Season) ಭರ್ಜರಿ ಆಫರ್​ಗಳೊಂದಿಗೆ ಸೇಲ್ ನಡೆಯುತ್ತಿದೆ. ಐಫೋನ್ ಸೇರಿದಂತೆ ಹಲವು ಉತ್ಪನ್ನಗಳಿಗೆ ಭಾರೀ ಡಿಸ್ಕೌಂಟ್ ನೀಡಲಾಗುತ್ತಿದೆ. ಅದರಲ್ಲೂ ಮಾರ್ಚ್ 11ರಿಂದ 15ರವರೆಗೆ ಐದು ದಿನಗಳ ಕಾಲ ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ಸೇವಿಂಗ್ ಡೇಸ್ (Flipkart Big Saving Days Sale) ಹೆಸರಿನಲ್ಲಿ ಮಾರಾಟ ಸುಗ್ಗಿ ಆಗಲಿದೆ. ಫ್ಲಿಪ್​ಕಾರ್ಟ್​ನಲ್ಲಿ ಪ್ಲಸ್ ಫೀಚರ್​ನ (Flipkart Plus Membership) ಸದಸ್ಯರಾದವರು ಒಂದು ದಿನ ಮೊದಲೇ ಆಫರ್​ಗಳನ್ನು ಪಡೆಯಬಹುದು.

ಭಾರೀ ಬೇಡಿಕೆಯಲ್ಲಿರುವ ಮತ್ತು ಭಾರೀ ಪ್ರತಿಷ್ಠೆ ಎನಿಸಿರುವ ಐಫೋನ್14 ಸರಣಿಯ ಫೋನ್​ಗಳಿಗೆ ಫ್ಲಿಪ್​ಕಾರ್ಟ್​ನಲ್ಲಿ ಭರ್ಜರಿ ರಿಯಾಯಿತಿ ಇಡಲಾಗುತ್ತಿದೆ ಎಂಬಂತಹ ಮಾಹಿತಿಯನ್ನು ಸ್ವತಃ ಫ್ಲಿಪ್​ಕಾರ್ಟ್ ನೀಡಿದೆ. ಗೂಗಲ್ ಪಿಕ್ಸೆಲ್, ಸ್ಯಾಮ್ಸುಂಗ್, ಪೋಕೋ, ರಿಯಲ್​ಮಿ, Nothing ಮೊದಲಾದ ಕಂಪನಿಗಳ ಹೊಚ್ಚ ಹೊಸ ಮಾಡೆಲ್​ಗಳು ಡಿಸ್ಕೌಂಟ್ ದರದಲ್ಲಿ ಫ್ಲಿಪ್​ಕಾರ್ಟ್​ನಲ್ಲಿ ಖರೀದಿಸಬಹುದು.

70 ಸಾವಿರಕ್ಕಿಂತ ಕಡಿಮೆ ಬೆಲೆಗೆ ಐಫೋನ್14?

ಫ್ಲಿಪ್​ಕಾರ್ಟ್​​ನಲ್ಲಿ ಐಫೋನ್14 ಫೋನ್​ಗಳಿಗೆ ಒಳ್ಳೆಯ ರಿಯಾಯಿತಿ ಸಿಗುತ್ತದೆ ಎಂದು ಹೇಳಲಾಗಿದೆಯಾದರೂ ಎಷ್ಟು ಡಿಸ್ಕೌಂಟ್ ಎಂಬುದು ಬಹಿರಂಗವಾಗಿಲ್ಲ. ಐಫೋನ್14 ಮೊಬೈಲ್​ಗಳ ಬೆಲೆ 80,000 ರೂನಿಂದ ಆರಂಭವಾಗುತ್ತದೆ. ಫ್ಲಿಪ್​ಕಾರ್ಟ್​ನಲ್ಲಿ 70,000 ರೂಗಿಂತ ಕಡಿಮೆ ಬೆಲೆಗೆ ಸಿಗುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ, ಬ್ಯಾಂಕ್ ಸಾಲ, ಇಎಂಐ ಇತ್ಯಾದಿ ಅವಕಾಶಗಳು ಮಾಮೂಲಿಯಾಗಿಯೇ ಇರುತ್ತವೆ. ಇದು ಫ್ಲಿಪ್​ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್​ನಲ್ಲಿಯೂ ಇರುತ್ತದೆ.

ಇದನ್ನೂ ಓದಿFD Rates: ಬಜಾಜ್ ಫೈನಾನ್ಸ್​ನಲ್ಲಿ ಠೇವಣಿಗಳಿಗೆ ಶೇ. 8.20ರವರೆಗೆ ಬಡ್ಡಿ; ಇಲ್ಲಿದೆ ವಿವರ

ಗೆಲಾಕ್ಸಿ ಎಸ್​21ಎಫ್​ಇ

ಇನ್ನು ಸ್ಯಾಮ್ಸುಂಗ್ ಗೆಲಾಕ್ಸಿ S21FE ಮೊಬೈಲ್ 12,990 ರೂಗೆ ಫ್ಲಿಪ್​ಕಾರ್ಟ್​ನಲ್ಲಿ ಮಾರ್ಚ್ 11ರಿಂದ 15ರವರೆಗೂ ಸಿಗಲಿದೆ. ಆದರೆ, ಈ ಸ್ಮಾರ್ಟ್​ಫೋನ್​ನ ಡಿಸ್ಕೌಂಟ್ ಆಫರ್​ನಲ್ಲಿ ಕೆಲವೊಂದಿಷ್ಟು ಷರುತ್ತುಗಳಿದ್ದು ಅವೇನೆಂದು ಇನ್ನಷ್ಟೇ ಬಹಿರಂಗವಾಗಬೇಕು.

ರೆಡ್​ಮಿ ನೋಟ್ 12 ಪ್ರೋ+, ಗೂಗಲ್ ಪಿಕ್ಸೆಲ್ 7, ನಥಿಂಗ್ ಫೋನ್ ಮೊದಲಾದ ಸ್ಮಾರ್ಟ್​ಫೋನ್​ಗಳೂ ಕೂಡ ಭಾರೀ ರಿಯಾಯಿತಿಯಲ್ಲಿ ಫ್ಲಿಪ್​ಕಾರ್ಟ್​ನಲ್ಲಿ ಲಭ್ಯ ಇರಲಿವೆ. 60 ಸಾವಿರ ರೂ ಬೆಲೆಯ ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್​​ಫೋನ್ ಫೆಸ್ಟಿವ್ ಸೇಲ್ ಆಫರ್​ನಲ್ಲಿ 50 ಸಾವಿರ ರೂಗಿಂತ ಅಗ್ಗದ ಬೆಲೆಗೆ ಸಿಗಲಿದೆ. ಇನ್ನು ಲಂಡನ್ ಮೂಲದ ನಥಿಂಗ್ ಟೆಕ್ನಾಲಜೀಸ್ ಕಂಪನಿಯ Nothing Phone (1) ಬೆಲೆ 30 ಸಾವಿರ ರೂ ಒಳಗೆ ಇರಲಿದೆ ಎಂಬ ಮಾಹಿತಿ ಇದೆ.

ಇದನ್ನೂ ಓದಿGold Bond: ಕಡಿಮೆ ಬೆಲೆಗೆ ಸರ್ಕಾರದಿಂದ ಚಿನ್ನ; ಮಾರ್ಚ್ 10ರವರೆಗೆ ಹೂಡಿಕೆ ಅವಕಾಶ

ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ 2023ರ ಮಾರ್ಚ್ 11ರಿಂದ 15ರವರೆಗೂ ಇರಲಿದೆ. ಫ್ಲಿಪ್​ಕಾರ್ಟ್​ನ ಪ್ಲಸ್ ಗ್ರಾಹಕರಿಗೆ ಮಾರ್ಚ್ 10ರಿಂದಲೇ ಆಫರ್​ಗಳು ಸಿಗುತ್ತವೆ. ಪ್ಲಸ್ ಅಕೌಂಟ್ ಹೊಂದಿರುವ ಗ್ರಾಹಕರಿಗೆ ಉಚಿತ ಡೆಲಿವರಿ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ.

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:14 pm, Mon, 6 March 23