AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Per Capita Income: 2014ರಿಂದೀಚೆ ಭಾರತದ ತಲಾದಾಯ ನೂರಕ್ಕೆ ನೂರು ಹೆಚ್ಚಳ; ಎಷ್ಟಿದೆ ಪರ್ ಕ್ಯಾಪಿಟಾ ಇನ್ಕಮ್?

Double of Income In India Since 2014: ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಭಾರತದ ನಾಮಿನಲ್ ಜಿಡಿಪಿಯ ತಲಾದಾಯದಲ್ಲಿ ಎರಡು ಪಟ್ಟು ಹೆಚ್ಚಾಗಿದೆ. ಇದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ನೀಡಿದ ಅಂಕಿ ಅಂಶದಿಂದ ತಿಳಿದುಬಂದಿದೆ.

Per Capita Income: 2014ರಿಂದೀಚೆ ಭಾರತದ ತಲಾದಾಯ ನೂರಕ್ಕೆ ನೂರು ಹೆಚ್ಚಳ; ಎಷ್ಟಿದೆ ಪರ್ ಕ್ಯಾಪಿಟಾ ಇನ್ಕಮ್?
ಆದಾಯ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 06, 2023 | 2:01 PM

Share

ನವದೆಹಲಿ: 2014-15ರಿಂದೀಚೆ ಭಾರತದ ತಲಾದಾಯ (Per Capita Income) ದ್ವಿಗುಣಗೊಂಡಿದೆ. 86,647 ರುಪಾಯಿಯಷ್ಟಿದ್ದ ವಾರ್ಷಿಕ ತಲಾದಾಯ 2022-23ರ ವರ್ಷದಲ್ಲಿ 1.72 ಲಕ್ಷ ರುಪಾಯಿಗೆ ಏರಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO- National Statistical Office) ನೀಡಿದ ಅಂಕಿ ಅಂಶದಿಂದ ಈ ಮಾಹಿತಿ ತಿಳಿದುಬಂದಿದೆ. ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭಾರತದ ಸರಾಸರಿ ತಲಾದಾಯದಲ್ಲಿ ಶೇ. 99ರಷ್ಟು ಹೆಚ್ಚಳವಾಗಿದೆ. ಅಂದರೆ ಸರಾಸರಿಯಾಗಿ ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ 1.72 ಲಕ್ಷ ರೂ ಆದಾಯ ಗಳಿಸುತ್ತಿದ್ದಾನೆ ಎಂದರ್ಥ.

ಆದರೆ, ಈ ತಲಾದಾಯದ ಅಂಕಿ ಅಂಶವು ನಾಮಿನಲ್ ಟರ್ಮ್​ನದ್ದಾಗಿದೆ (Nominal GDP Per Capita Income). ಅಂದರೆ, ಒಟ್ಟಾರೆ ಜಿಡಿಪಿಯ ಅಂಕಿ ಅಂಶವನ್ನು ತಲಾದಾಯಕ್ಕೆ ಪರಿವರ್ತಿಸುವಾಗ ಮಾರ್ಕೆಟ್ ಎಕ್ಸ್​ಚೇಂಜ್ ದರಗಳನ್ನು ಬಳಸಲಾಗುತ್ತದೆ. ಜೀವನ ವೆಚ್ಚ, ಜೀವನ ಮಟ್ಟ, ಹಣದುಬ್ಬರ ಇತ್ಯಾದಿ ಅಂಶಗಳನ್ನು ಪರಿಗಣಿಸಲಾಗುವುದಿಲ್ಲ. ಒಟ್ಟಾರೆ ಆರ್ಥಿಕತೆಯ ಸ್ಥೂಲನೋಟದಲ್ಲಿ ತಲಾದಾಯವನ್ನು ಗಣಿಸಲಾಗುತ್ತದೆ. ಮಾರುಕಟ್ಟೆ ವಿನಿಮಯ ದರ ಕೆಲವೊಮ್ಮೆ ನಾಮಿನಲ್ ಜಿಡಿಪಿ ತಲಾದಾಯದ ದರದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ.

ನಾಮಿನಲ್ ಜಿಡಿಪಿ ತಲಾದಾಯ 1.72 ಲಕ್ಷ ರುಪಾಯಿಗೆ ಏರಿದೆಯಾದರೂ ಅದು ಈಗಿನ ದರದ ಪ್ರಕಾರವಾಗಿದೆ. ಹಣದುಬ್ಬರದ ಅಂಶವನ್ನು ಪರಿಗಣಿಸಿದರೆ ತಲಾದಾಯದಲ್ಲಿ ಹೆಚ್ಚಿನ ಏರಿಕೆ ಆಗಿಲ್ಲ. 2014-15ರಲ್ಲಿ ಹಣದುಬ್ಬರ ಹೊಂದಾಣಿಕೆಯ ತಲಾದಾಯ 72,805 ರೂ ಇತ್ತು. ಈಗ ಅದು 98,118 ರುಪಾಯಿಗೆ ಮಾತ್ರ ಹೆಚ್ಚಾಗಿದೆ.

ಇದನ್ನೂ ಓದಿVehicles Sale: ಭಾರತದಲ್ಲಿ ವಾಹನಗಳ ಮಾರಾಟ ಭರಾಟೆ; ಫೆಬ್ರುವರಿಯಲ್ಲಿ ಒಟ್ಟು ಸೇಲ್ ಆಗಿದ್ದು ಎಷ್ಟು?

ಅಂದರೆ ಈಗಿನ ಬೆಲೆ ಪ್ರಕಾರವಾಗಿ ನಾಮಿನಲ್ ಜಿಡಿಪಿಯ ತಲಾದಾಯ ಗಮನಾರ್ಹವಾಗಿ ಹೆಚ್ಚಾದಂತೆ ಅನಿಸುತ್ತದೆ. ಈ ಹೆಚ್ಚಳದಲ್ಲಿ ಬಹುಪಾಲು ಮೇಲಿನ ಶೇ. 10 ಜನರ ಆದಾಯ ಹೆಚ್ಚಳ ಕಾರಣ. ಇತರ ಶೇ. 90ರಷ್ಟು ಜನರ ಆದಾಯ ಬಹಳ ಕಡಿಮೆ ಆಗಿದೆ ಎಂಬುದು ಜೆಎನ್​ಯು ವಿವಿಯ ಅರ್ಥಶಾಸ್ತ್ರಜ್ಞೆ ಜಯತಿ ಘೋಷ್ ಅನಿಸಿಕೆ.

ಏನಿದು ತಲಾದಾಯ?

ತಲಾದಾಯ ಅಥವಾ ಪರ್ ಕ್ಯಾಪಿಟಾ ಇನ್ಕಮ್ ಎಂದರೆ ಒಟ್ಟು ರಾಷ್ಟ್ರೀಯ ಉತ್ಪನ್ನವನ್ನು ಒಟ್ಟು ಜನಸಂಖ್ಯೆಯಿಂದ ವಿಭಾಗಿಸಿದರೆ ಸಿಗುವ ಅಂಕಿ. ಇದು ಅಸಮಾನತೆಯ ಅಂಶವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಒಂದು ಪ್ರದೇಶದಲ್ಲಿ 100 ಜನರು ಇದ್ದರೆ, ಅವರಲ್ಲಿ ಇಬ್ಬರು ಮಾತ್ರ ಶ್ರೀಮಂತರು, ಉಳಿದವರು ಬಡವರು ಎಂದಿಟ್ಟುಕೊಂಡರೆ ಸರಾಸರಿ ತಲಾದಾಯವನ್ನು ಶ್ರೀಮಂತ ಮತ್ತು ಬಡವರ ಎಲ್ಲಾ ಆದಾಯವನ್ನೂ ಗಣಿಸಿ ಲೆಕ್ಕ ಹಾಕಲಾಗುತ್ತದೆ.

ಹೀಗಾಗಿ, ಭಾರತದಲ್ಲಿ ಶ್ರೀಮಂತರು ಅತಿಶ್ರೀಮಂತರಾಗುತ್ತಿರುವುದು ಮತ್ತು ಬಡವರು ಅತಿಬಡವರಾಗುತ್ತಿರುವುದು ಈ ಅಂಶಗಳು ಪರ್ ಕ್ಯಾಪಿಟಾ ಇನ್ಕಮ್ ಲೆಕ್ಕಾಚಾರದಲ್ಲಿ ಮಸುಕಾಗಿ ಹೋಗುತ್ತದೆ.

ನಾಮಿನಲ್ ಜಿಡಿಪಿಗಿಂತ ಪಿಪಿಪಿ ಮಾನದಂಡ ಹೆಚ್ಚು ನಿಖರ ಎಂದು ಹೇಳಲಾಗುತ್ತದೆ. ಪಿಪಿಪಿ ಎಂದರೆ ಪರ್ಚೇಸ್ ಪವರ್ ಪ್ಯಾರಿಟಿ. ಅಂದರೆ ವ್ಯಕ್ತಿಯ ಸರಾಸರಿ ಖರ್ಚು ಮಾಡುವ ಶಕ್ತಿ ಎಷ್ಟು ಎಂಬುದು ಇದರಲ್ಲಿ ವೇದ್ಯವಾಗುತ್ತದೆ. ಹಣದುಬ್ಬರ ಏರಿಕೆ ಇತ್ಯಾದಿ ಹಲವು ಅಂಶಗಳನ್ನು ಪಿಪಿಪಿ ಜಿಡಿಪಿ ಎಣಿಕೆಯಲ್ಲಿ ಪರಿಗಣಿಸಲಾಗುತ್ತದಾದ್ದರಿಂದ ಇದು ನಾಮಿನಲ್ ಜಿಡಿಪಿಗಿಂತ ಹೆಚ್ಚು ಸಂದರ್ಭೋಚಿತ ಮತ್ತು ಸೂಕ್ತ ಎಂದು ಭಾವಿಸಲಾಗಿದೆ.

ಇದನ್ನೂ ಓದಿGold Bond: ಕಡಿಮೆ ಬೆಲೆಗೆ ಸರ್ಕಾರದಿಂದ ಚಿನ್ನ; ಮಾರ್ಚ್ 10ರವರೆಗೆ ಹೂಡಿಕೆ ಅವಕಾಶ

ಅಸಮಾನತೆ ಇದ್ದರೂ ಭಾರತದ ರಾಷ್ಟ್ರೀಯ ಆದಾಯ ಗಮನಾರ್ಹವಾಗಿ ಹೆಚ್ಚಿರುವುದು ಸಣ್ಣ ವಿಷಯ ಅಲ್ಲ. ಕೋವಿಡ್ ಆಘಾತದಿಂದ ಚೇತರಿಸಿಕೊಂಡು ಈ ಬೆಳವಣಿಗೆ ಹೊಂದಲಾಗಿದೆ. ಪ್ರಾದೇಶಿಕ ಅಭಿವೃದ್ಧಿಯಲ್ಲಿ ಸಮತೋಲನ ಸಾಧಿಸಿದರೆ ಇನ್ನಷ್ಟು ಏರಿಕೆ ಆಗುತ್ತದೆ. ಅಸಮಾನತೆಯೂ ಕಡಿಮೆ ಆಗುತ್ತದೆ ಎಂಬುದು ಪಿನಾಕಿ ಚಕ್ರಬರ್ತಿ ಮತ್ತಿತರ ಕೆಲ ಅರ್ಥಶಾಸ್ತ್ರಜ್ಞರ ಅನಿಸಿಕೆ.

ಇನ್ನೂ ಒಂದು ಅಂಶವನ್ನು ಇಲ್ಲಿ ಉಲ್ಲೇಖಿಸಬಹುದು. ವರ್ಲ್ಡೋಮೀಟರ್ ತಾಣದಲ್ಲಿರುವ ಮಾಹಿತಿ ಪ್ರಕಾರ 2017ರ ಜಿಡಿಪಿ ತಲಾದಾಯ ಪಟ್ಟಿಯಲ್ಲಿ ಭಾರತ 122ನೇ ಸ್ಥಾನದಲ್ಲಿದೆ. ಶ್ರೀಲಂಕಾ ಭಾರತಕ್ಕಿಂತ ಬಹಳ ಮೇಲಿದೆ. ಕತಾರ್, ಮಕಾವೋ, ಲಕ್ಸಂಬರ್ಗ್, ಸಿಂಗಾಪುರ್, ಬ್ರೂನೇ, ಐರ್​ಲೆಂಡ್, ಯುಎಇ, ಕುವೇತ್, ಸ್ವಿಟ್ಜರ್​ಲೆಂಡ್ ಮತ್ತು ಸ್ಯಾನ್ ಮರಿನೋ ದೇಶಗಳು ಟಾಪ್-10ನಲ್ಲಿ ಇವೆ.

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:01 pm, Mon, 6 March 23

ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ