AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vehicles Sale: ಭಾರತದಲ್ಲಿ ವಾಹನಗಳ ಮಾರಾಟ ಭರಾಟೆ; ಫೆಬ್ರುವರಿಯಲ್ಲಿ ಒಟ್ಟು ಸೇಲ್ ಆಗಿದ್ದು ಎಷ್ಟು?

FADA Data On All Vehicles Sales In February: 2023ರ ಫೆಬ್ರುವರಿಯಲ್ಲಿ 17,75,424 ವಾಹನಗಳು ಮಾರಾಟಕ್ಕೆ ನೊಂದಣಿಯಾಗಿವೆ ಎಂದು ಆಟೊಮೊಬೈಲ್ ಡೀಲರ್​ಗಳ ಸಂಘಟನೆ ಎಫ್​ಎಡಿಎ ಸೋಮವಾರ ಮಾಹಿತಿ ನೀಡಿದೆ. ದ್ವಿಚಕ್ರ ವಾಹನ, ಪ್ಯಾಸೆಂಜರ್ ವಾಹನಗಳ ಮಾರಾಟವೂ ಇದರಲ್ಲಿ ಒಳಗೊಂಡಿದೆ.

Vehicles Sale: ಭಾರತದಲ್ಲಿ ವಾಹನಗಳ ಮಾರಾಟ ಭರಾಟೆ; ಫೆಬ್ರುವರಿಯಲ್ಲಿ ಒಟ್ಟು ಸೇಲ್ ಆಗಿದ್ದು ಎಷ್ಟು?
ದ್ವಿಚಕ್ರ ವಾಹನಗಳು
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 06, 2023 | 1:11 PM

Share

ನವದೆಹಲಿ: ಭಾರತದಲ್ಲಿ ವಾಹನಗಳ ಮಾರಾಟ (Automobile Sales) ಬಹಳ ಚುರುಕುಗೊಂಡಂತಿದೆ. ಫೆಬ್ರುವರಿ ತಿಂಗಳಲ್ಲಿ ವರ್ಷವಾರು ಲೆಕ್ಕದಲ್ಲಿ ವಾಹನಗಳ ಮಾರಾಟ ಶೇ. 16ರಷ್ಟು ಹೆಚ್ಚಾಗಿದೆ. ಅಂದರೆ 2022ರ ಫೆಬ್ರುವರಿ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಫೆಬ್ರುವರಿಯಲ್ಲಿ ಶೇ. 16ರಷ್ಟು ಹೆಚ್ಚು ವಾಹನಗಳು ಸೇಲ್ ಆಗಿವೆ. 2023ರ ಫೆಬ್ರುವರಿಯಲ್ಲಿ 17,75,424 ವಾಹನಗಳು ಮಾರಾಟಕ್ಕೆ ನೊಂದಣಿಯಾಗಿವೆ ಎಂದು ಆಟೊಮೊಬೈಲ್ ಡೀಲರ್​ಗಳ ಸಂಘಟನೆ ಎಫ್​ಎಡಿಎ (FADA) ಸೋಮವಾರ ಮಾಹಿತಿ ನೀಡಿದೆ. ದ್ವಿಚಕ್ರ ವಾಹನ, ಪ್ಯಾಸೆಂಜರ್ ವಾಹನಗಳ ಮಾರಾಟವೂ ಇದರಲ್ಲಿ ಒಳಗೊಂಡಿದೆ. ಹಿಂದಿನ ವರ್ಷದ ಫೆಬ್ರುವರಿಯಲ್ಲಿ 15,31,196 ವಾಹನಗಳ ಮಾರಾಟವಾಗಿತ್ತು. ಹತ್ತಿರಹತ್ತಿರ ಎರಡೂವರೆ ಲಕ್ಷದಷ್ಟು ಹೆಚ್ಚು ವಾಹನಗಳು ಈ ವರ್ಷದ ಫೆಬ್ರುವರಿಯಲ್ಲಿ ಸೇಲ್ ಆಗಿವೆ.

ಪ್ಯಾಸೆಂಜರ್ ವಾಹನ ವಿಭಾಗದಲ್ಲಿ ಈ ಫೆಬ್ರುವರಿಯಲ್ಲಿ 2,87,182 ವಾಹನಗಳು ಮಾರಾಟ ಕಂಡಿವೆ. ಹಿಂದಿನ ವರ್ಷದ ಫೆಬ್ರುವರಿಗೆ ಹೋಲಿಸಿದರೆ ಈ ಬಾರಿಯದ್ದು ಶೇ. 11ರಷ್ಟು ಹೆಚ್ಚು. ದ್ವಿಚಕ್ರ ವಾಹನಗಳು ಮಾರಾಟ ಶೇ. 15ರಷ್ಟು ಹೆಚ್ಚಾಗಿದೆ. ಒಟ್ಟು 12,67,233 ಟುವ್ಹೀಲರ್​ಗಳು ಫೆಬ್ರುವರಿಯಲ್ಲಿ ಸೇಲ್ ಆಗಿವೆ.

ಇದನ್ನೂ ಓದಿPhishing Scam: ಕೆವೈಸಿ ಲಿಂಕ್ ಕ್ಲಿಕ್ ಮಾಡಿ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಂಡ ಟಿವಿ ನಿರೂಪಕಿ ಮತ್ತಿತರ 40 ಮಂದಿ

ದ್ವಿಚಕ್ರ ವಾಹನಗಳು 2022ರ ಫೆಬ್ರುವರಿಯಲ್ಲಿಗಿಂತ ಶೇ. 15ರಷ್ಟು ಹೆಚ್ಚು ಮಾರಾಟ ಕಂಡಿವೆಯಾದರೂ ಕೋವಿಡ್ ಮುಂಚಿನ ಸಂದರ್ಭಕ್ಕೆ ಹೋಲಿಸಿದರೆ ಕಡಿಮೆಯೇ ಇದೆ. ಅಂದರೆ 2020ರ ಫೆಬ್ರುವರಿಯಲ್ಲಿ ಶೇ. 14ರಷ್ಟು ಹೆಚ್ಚು ದ್ವಿಚಕ್ರ ವಾಹನಗಳು ಸೇಲ್ ಆಗಿದ್ದವು.

2023 ಫೆಬ್ರುವರಿಯಲ್ಲಿ ವಾಹನಗಳ ಮಾರಾಟ ವಿವರ

ಪ್ಯಾಸೆಂಜರ್ ವಾಹನಗಳು: 2,87,182

ದ್ವಿಚಕ್ರ ವಾಹನಗಳು: 12,67,233

ಕಮರ್ಷಿಯಲ್ ವಾಹನಗಳು: 79,027

ತ್ರಿಚಕ್ರ ವಾಹನಗಳು: 72,994

ಟ್ರಾಕ್ಟರ್ ವಾಹನಗಳು: 68,988

ಒಟ್ಟು ಮಾರಾಟ: 17,75,424

ಈ ಮೇಲಿನ ವಾಹನಗಳ ಮಾರಾಟವು ರೀಟೇಲ್ ಸೇಲ್​ನದ್ದಾಗಿದೆ. ಅಂದರೆ ವಾಹನಗಳ ಶೋರೂಮ್ ಮೂಲಕ ಮಾರಾಟವಾದ ಮತ್ತು ಮಾರಾಟಕ್ಕೆ ನೊಂದಣಿಯಾದ ವಾಹನಗಳ ಸಂಖ್ಯೆ ಇದು.

ಮುಂದೆ ಹಬ್ಬದ ಸೀಸನ್ ಇರುವುದರಿಂದ ವಾಹನಗಳ ಮಾರಾಟಕ್ಕೆ ಇನ್ನಷ್ಟು ಪುಷ್ಟಿ ಸಿಗಬಹುದು. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಹೆಚ್ಚು ವಾಹನಗಳನ್ನು ಜನರು ಖರೀದಿಸುವ ಸಾಧ್ಯತೆ ಇದೆ ಎಂಬುದು ಆಟೊಮೊಬೈಲ್ ಉದ್ಯಮಿಗಳ ನಿರೀಕ್ಷೆ.

ಆದರೆ, ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ವೆಚ್ಚಕ್ಕೆ ಮುಂದಾಗುತ್ತಿಲ್ಲ. ಹಣ ಉಳಿತಾಯಕ್ಕೆ ಒತ್ತುಕೊಡುವುದು ಹೆಚ್ಚಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಇದು ವಾಹನ ಮಾರಾಟದ ನಾಗಾಲೋಟಕ್ಕೆ ಬ್ರೇಕ್ ಹಾಕಿದರೂ ಹಾಕಬಹುದು.

ಇನ್ನಷ್ಟು ಉದ್ಯಮ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:11 pm, Mon, 6 March 23