Olectra e-Buses: ಟಿಎಸ್​ಆರ್​ಟಿಸಿಯಿಂದ 550 ಎಲೆಕ್ಟ್ರಿಕ್ ಬಸ್ಸುಗಳಿಗೆ ಆರ್ಡರ್ ಪಡೆದ ಒಲೆಕ್ಟ್ರಾ ಗ್ರೀನ್​ಟೆಕ್

ಹೈದರಾಬಾದ್: ಒಲೆಕ್ಟ್ರಾ ಗ್ರೀನ್​ಟೆಕ್ ಕಂಪನಿ ತೆಲಂಗಾಣ ಸಾರಿಗೆ ಸಂಸ್ಥೆಗೆ 550 ಎಲೆಕ್ಟ್ರಿಕ್ ಬಸ್ಸುಗಳನ್ನು ಪೂರೈಸಲು ಆರ್ಡರ್ ಪಡೆದಿದೆ. 2019ರಲ್ಲಿ ಇದೇ ಸಾರಿಗೆ ಸಂಸ್ಥೆಗೆ ಒಲೆಕ್ಟ್ರಾ 40 ಇ-ಬಸ್ಸುಗಳನ್ನು ಸರಬರಾಜು ಮಾಡಿತ್ತು. ಈ ಬಗ್ಗೆ ಒಂದು ವರದಿ:

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 06, 2023 | 6:26 PM

ಇತ್ತೀಚೆಗಷ್ಟೇ ಭಾರತದ ಮೊತ್ತಮೊದಲ ಇ-ಟಿಪ್ಪರ್ ತಯಾರಿಸಿ ಪ್ರಾಧಿಕಾರದ ಅನುಮೋದನೆ ಪಡೆದ ಒಲೆಕ್ಟ್ರಾ ಗ್ರೀನ್​ಟೆಕ್ ಸಂಸ್ಥೆ (Olectra Greentech Ltd) ಇದೀಗ ತೆಲಂಗಾಣ ಸಾರಿಗೆ ಸಂಸ್ಥೆಗೆ 550 ಎಲೆಕ್ಟ್ರಿಕ್ ಬಸ್ಸುಗಳನ್ನು (Electric Buses) ಪೂರೈಸಲು ಆರ್ಡರ್ ಪಡೆದಿದೆ. ಮೇಘಾ ಎಂಜಿನಿಯರಿಂಗ್ ಅಂಡ್ ಇನ್​ಫ್ರಾಸ್ಟ್ರಕ್ಚರ್ ಲಿ (ಎಂಇಐಎಲ್) ಸಂಸ್ಥೆ ಭಾರತದಲ್ಲಿ ಎಲೆಕ್ಟ್ರಿಕ್ ಬಸ್ಸು ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಇದೀಗ ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆಗೆ (TSRTC) 550 ಇ-ಬಸ್ಸುಗಳನ್ನು ತಯಾರಿಸಿ ಕೊಡಲಿದೆ. ದಕ್ಷಿಣ ಭಾರತದಲ್ಲಿ  ಎಲೆಕ್ಟ್ರಿಕ್ ಬಸ್ಸುಗಳ ಸರಬರಾಜಿಗೆ ಈ ಕಂಪನಿಗೆ ಸಿಕ್ಕಿರುವ ಅತಿದೊಡ್ಡ ಆರ್ಡರ್ ಇದಾಗಿದೆ.

1 / 8
ಇದರಲ್ಲಿ ಸ್ಟಾಂಡರ್ಡ್ ಫ್ಲೋರ್ 12 ಮೀಟರ್ ಇಂಟರ್​ಸಿಟಿ ಕೋಚ್​ನ 50 ಇ-ಬಸ್ಸುಗಳಿವೆ. ಲೋ ಫ್ಲೋರ್ 12-ಮೀಟರ್ ಇಂಟ್ರಾಸಿಟಿ ಕೋಚ್​ನ 500 ಇ-ಬಸ್ಸುಗಳನ್ನು ಒಲೆಕ್ಟ್ರಾ ತಯಾರಿಸಿಕೊಡಲಿದೆ. ಹೈದರಾಬಾದ್ ನಗರ ಹಾಗೂ ತೆಲಂಗಾಣದ ವಿವಿಧ ಕಡೆ ಈ ಬಸ್ಸುಗಳನ್ನು ಕಾರ್ಯಾಚರಿಸಲು ಟಿಎಸ್​ಆರ್​ಟಿಸಿ ಉದ್ದೇಶಿಸಿದೆ.

2 / 8
ಒಲೆಕ್ಟ್ರಾ ಗ್ರೀನ್​ಟೆಕ್​ನ ಛೇರ್ಮನ್ ಕೆ.ವಿ. ಪ್ರದೀಪ್ ಈ ಬಗ್ಗೆ ಮಾತನಾಡಿ, 550 ಎಲೆಕ್ಟ್ರಿಕ್ ಬಸ್ಸುಗಳನ್ನು ಹಂತ ಹಂತವಾಗಿ ಸರಬರಾಜು ಮಾಡಲಾಗುವುದು. ಇವು ಶುದ್ಧ ಎಲೆಕ್ಟ್ರಿಕ್ ಬಸ್ಸುಗಳಾಗಿದ್ದು ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯದಿಂದ ಮುಕ್ತವಾಗಿರುತ್ತವೆ ಎಂದು ಹೇಳಿದ್ದಾರೆ.

3 / 8
ಟಿಎಸ್​ಆರ್​ಟಿಸಿಗೆ ಒಲೆಕ್ಟ್ರಾ 2019ರಲ್ಲಿ 40 ಎಲೆಕ್ಟ್ರಿಕ್ ಬಸ್ಸುಗಳನ್ನು ಒದಗಿಸಿತ್ತು. ಈ ಬಸ್ಸುಗಳು ಹೈದರಾಬಾದ್ ಏರ್​ಪೋರ್ಟ್​ನಿಂದ ನಗರದ ವಿವಿಧೆಡೆಗೆ ಸಂಚರಿಸುತ್ತಿವೆ. ಈಗ ಇನ್ನಷ್ಟು 550 ಒಲೆಕ್ಟ್ರಾ ಇ-ಬಸ್ಸುಗಳು ಹೈದರಾಬಾದ್ ರಸ್ತೆಗೆ ಇಳಿಯುವ ಸಮಯ ಬಂದಿದೆ.

4 / 8
ಈ ವರ್ಷ ಆರ್ಡರ್ ಕೊಡಲಾಗಿರುವ 550 ಇ-ಬಸ್ಸುಗಳ ಪೈಕಿ 500 ಬಸ್ಸುಗಳು ಹೈದರಾಬಾದ್ ನಗರದೊಳಗೆ ಸಂಚರಿಸಲು ಉದ್ದೇಶಿಸಿವೆ. ಇವು ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ 225 ಕಿಮೀ ದೂರ ಸಂಚರಿಸಬಹುದು. ಹಾಗೆಯೇ, 50 ಇಂಟರ್​ಸಿಟಿ ಇ-ಬಸ್ಸುಗಳು ಹೈದರಾಬಾದ್​ನಿಂದ ವಿಜಯವಾಡ ಮಧ್ಯೆ ಓಡಾಟ ಮಾಡಲಿವೆ.

5 / 8
ಒಲೆಕ್ಟ್ರಾ ಎಲೆಕ್ಟ್ರಿಕ್ ಬಸ್ಸುಗಳ ನಿರ್ವಹಣೆಗೆ ಟಿಎಸ್​ಆರ್​ಟಿಸಿ ಸಂಸ್ಥೆ ಹೈದರಾಬಾದ್​ನಲ್ಲಿ ಐದು ಡಿಪೋಗಳನ್ನು ನಿಯೋಜಿಸಿದೆ. ಒಲೆಕ್ಟ್ರಾ ಇ-ಬಸ್ಸುಗಳ ನಿರ್ವಹಣಾ ವೆಚ್ಚ ಕಡಿಮೆ ಆಗಿರುವುದರಿಂದ ತೆಲಂಗಾಣ ಸಾರಿಗೆ ಸಂಸ್ಥೆಗೆ ಲಾಭದಾಯಕ ಆಗುವ ನಿರೀಕ್ಷೆ ಇದೆ.

6 / 8
ಟಿಎಸ್​ಆರ್​ಟಿಸಿ ಸಂಸ್ಥೆ ಮುಂದಿನ ಎರಡು ವರ್ಷದಲ್ಲಿ 3,400 ಎಲೆಕ್ಟ್ರಿಕ್ ಬಸ್ಸುಗಳನ್ನು ನಿಯೋಜಿಸುವ ಯೋಜನೆ ಹೊಂದಿದೆ. ಇದರ ಮೊದಲ ಹಂತವಾಗಿ ಒಲೆಕ್ಟ್ರಾದಿಂದ 550 ಇ-ಬಸ್ಸುಗಳಿಗೆ ಆರ್ಡರ್ ಕೊಡಲಾಗಿದೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿ ಸಜ್ಜನಾರ್ ಅವರು ಹೇಳಿದ್ದಾರೆ.

7 / 8
ಟಿಎಸ್​ಆರ್​ಟಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಇ-ಬಸ್ಸುಗಳನ್ನು ಖರೀದಿಸಲು ಉದ್ದೇಶಿಸಿರುವುದರಿಂದ ಒಲೆಕ್ಟ್ರಾ ಕಂಪನಿ ಇನ್ನಷ್ಟು ಆರ್ಡರ್ ಪಡೆಯುವ ನಿರೀಕ್ಷೆಯಲ್ಲಿದೆ.

8 / 8
Follow us