AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

FD Rates: ಬಜಾಜ್ ಫೈನಾನ್ಸ್​ನಲ್ಲಿ ಠೇವಣಿಗಳಿಗೆ ಶೇ. 8.20ರವರೆಗೆ ಬಡ್ಡಿ; ಇಲ್ಲಿದೆ ವಿವರ

Bajaj Finance Fixed Deposit Rates: ಬಜಾಜ್ ಫೈನಾನ್ಸ್ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು 44 ತಿಂಗಳ ಅವಧಿಗೆ ಇರಿಸುವ ನಿಶ್ಚಿತ ಠೇವಣಿಗೆ ವಾರ್ಷಿಕ ಶೇ. 8.20 ಬಡ್ಡಿ ಪಡೆಯಬಹುದು. 33 ತಿಂಗಳ ಅವಧಿಗಾದರೆ ಶೇ. 8ರಷ್ಟು ಬಡ್ಡಿ ಸಿಗುತ್ತದೆ.

FD Rates: ಬಜಾಜ್ ಫೈನಾನ್ಸ್​ನಲ್ಲಿ ಠೇವಣಿಗಳಿಗೆ ಶೇ. 8.20ರವರೆಗೆ ಬಡ್ಡಿ; ಇಲ್ಲಿದೆ ವಿವರ
ಎಫ್​ಡಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 06, 2023 | 3:20 PM

Share

ನವದೆಹಲಿ: ಖಾಸಗಿ ಹಣಕಾಸು ಸಂಸ್ಥೆ ಬಜಾಜ್ ಫೈನಾನ್ಸ್​ನಲ್ಲಿ (Bajaj Finance) ಆಕರ್ಷಕ ಬಡ್ಡಿ ದರಗಳ ಆಫರ್ ಇದೆ. ಇತ್ತೀಚೆಗಷ್ಟೇ ಈ ಸಂಸ್ಥೆ ತನ್ನಲ್ಲಿನ ನಿಶ್ಚಿತ ಠೇವಣಿಗಳಿಗೆ (Fixed Deposit) 35 ಬೇಸಿಸ್ ಪಾಯಿಂಟ್​ಗಳಷ್ಟು ಬಡ್ಡಿ ದರ ಹೆಚ್ಚಿಸಿದೆ. ಹಿರಿಯ ನಾಗರಿಕರಿಗೆ (Senior Citizens) ಗರಿಷ್ಠ ಬಡ್ಡಿ ದರವಾದ ಶೇ. 8.20 ಸಿಗುತ್ತದೆ. 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗ್ರಾಹಕರ ಠೇವಣಿಗಳಿಗೆ ಶೇ. 7.95ರವರೆಗೂ ಬಡ್ಡಿ ಸಿಗುತ್ತದೆ. ಮಾರ್ಚ್ 4ರಿಂದ ಹೊಸ ದರಗಳು ಅನ್ವಯ ಆಗುತ್ತವೆ.

ಬಜಾಜ್ ಫೈನಾನ್ಸ್ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು 44 ತಿಂಗಳ ಅವಧಿಗೆ ಇರಿಸುವ ನಿಶ್ಚಿತ ಠೇವಣಿಗೆ ವಾರ್ಷಿಕ ಶೇ. 8.20 ಬಡ್ಡಿ ಪಡೆಯಬಹುದು. 33 ತಿಂಗಳ ಅವಧಿಗಾದರೆ ಶೇ. 8ರಷ್ಟು ಬಡ್ಡಿ ಸಿಗುತ್ತದೆ.

ಇತರ ವಯೋಮಾನದ ಠೇವಣಿದಾರರು 44 ತಿಂಗಳಿಗೆ ವಾರ್ಷಿಕ 7.95 ದರದಲ್ಲಿ ಬಡ್ಡಿ ಪಡೆಯಬಹುದು. ಇನ್ನು, 33 ತಿಂಗಳ ಅವಧಿಯದ್ದಾದರೆ ಶೇ. 7.75ರಷ್ಟು ಬಡ್ಡಿ ಸಿಗುತ್ತದೆ. 33 ತಿಂಗಳ ಎಫ್​ಡಿ ಆಫರ್ ಅನ್ನು ಬಜಾಜ್ ಫೈನಾನ್ಸ್ ಹೊಸದಾಗಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ: Gold Bond: ಕಡಿಮೆ ಬೆಲೆಗೆ ಸರ್ಕಾರದಿಂದ ಚಿನ್ನ; ಮಾರ್ಚ್ 10ರವರೆಗೆ ಹೂಡಿಕೆ ಅವಕಾಶ

ಬಜಾಜ್ ಫೈನಾನ್ಸ್​ನಲ್ಲಿ ಮಾಮೂಲಿಯ ಗ್ರಾಹಕರ ಠೇವಣಿಗಳಿಗೆ ಸಿಗುವ ವಾರ್ಷಿಕ ಬಡ್ಡಿ ದರಗಳ ವಿವರ:

12-14 ತಿಂಗಳು: ಶೇ. 7.40

15 ತಿಂಗಳು: ಶೇ. 7.45

15ರಿಂದ 23 ತಿಂಗಳು: ಶೇ. 7.50

18 ತಿಂಗಳು: ಶೇ. 7.40

22 ತಿಂಗಳು: ಸೇ. 7.50

24 ತಿಂಗಳು: ಶೇ. 7.55

25-30 ತಿಂಗಳು: ಶೇ. 7.35

30 ತಿಂಗಳು: ಶೇ. 7.45

33 ತಿಂಗಳು: ಶೇ. 7.75

36-60 ತಿಂಗಳು: ಶೇ. 7.65

44 ತಿಂಗಳು: ಶೇ. 7.95

ಬಜಾಜ್ ಫೈನಾನ್ಸ್​ನಲ್ಲಿ ಆಫರ್ ಮಾಡಲಾಗಿರುವ ಬಡ್ಡಿ ದರ ಸದ್ಯ ಗರಿಷ್ಠ ಮಟ್ಟದ್ದಾಗಿದೆ. ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲೂ ಎಫ್​ಡಿಗಳಿಗೆ ಶೇ. 8.20ರವರೆಗೆ ಬಡ್ಡಿ ಕೊಡಲಾಗುತ್ತಿದೆ. ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಕೆಲ ಅವಧಿ ಠೇವಣಿಗಳಿಗೆ 125 ಬೇಸಿಸ್ ಅಂಕಗಳಷ್ಟು ಬಡ್ಡಿ ದರಗಳನ್ನು ಹೆಚ್ಚಳ ಮಾಡಿ ಗಮನ ಸೆಳೆದಿದೆ. ಈ ಬ್ಯಾಂಕಿನಲ್ಲಿ ಉಳಿತಾಯ ಖಾತೆಯಲ್ಲಿನ ಹಣಕ್ಕೆ ನೀಡಲಾಗುವ ಬಡ್ಡಿ ದರ ಶೇ. 2ರಷ್ಟು (200 ಮೂಲಾಂಕಗಳು) ಹೆಚ್ಚಿಗೆ ಮಾಡಲಾಗಿದೆ.

ಇದನ್ನೂ ಓದಿPhishing Scam: ಕೆವೈಸಿ ಲಿಂಕ್ ಕ್ಲಿಕ್ ಮಾಡಿ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಂಡ ಟಿವಿ ನಿರೂಪಕಿ ಮತ್ತಿತರ 40 ಮಂದಿ

ಆರ್​ಬಿಐ ತನ್ನ ಇತ್ತೀಚಿನ ಎಂಪಿಸಿ ಸಭೆ ಬಳಿಕ ರೆಪೋ ದರವನ್ನು (ಬಡ್ಡಿ) ಶೇ. 6.50ಗೆ ಏರಿಸಿತ್ತು. ಅದಾದ ಬೆನ್ನಲ್ಲೇ ಬಹುತೇಕ ಎಲ್ಲಾ ವಾಣಿಜ್ಯ ಬ್ಯಾಂಕುಗಳು, ಸಣ್ಣ ಬ್ಯಾಂಕುಗಳು, ಸಹಕಾರ ಬ್ಯಾಂಕುಗಳು, ಸಹಕಾರ ಸಂಸ್ಥೆಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಬಡ್ಡಿ ದರಗಳನ್ನು ಪರಿಷ್ಕರಿಸಿವೆ. ಬಹುತೇಕ ಠೇವಣಿಗಳಿಗೆ ಶೇ. 6.5 ಕ್ಕಿಂತ ಹೆಚ್ಚಿನ ಬಡ್ಡಿ ದರಗಳು ಸಿಗುತ್ತವೆ.

ಬಜಾಜ್ ಫೈನಾನ್ಸ್ ಸಂಸ್ಥೆಯಲ್ಲಿ ಎಫ್​ಡಿ ಇತ್ಯಾದಿ ಠೇವಣಿ ಕಾರ್ಯವನ್ನು ಬಹಳ ಸರಳಗೊಳಿಸಲಾಗಿದೆ. ಎಲ್ಲವೂ ಡಿಜಿಟೈಸ್ ಮಾಡಲಾಗಿದೆ. ಹೂಡಿಕೆದಾರರಿಗೆ ಉತ್ತಮ ಬಡ್ಡಿ ಕೊಡುತ್ತಿದ್ದೇವೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿ ಸಚಿನ್ ಸಿಕ್ಕಾ ಹೇಳಿದ್ದಾರೆ.

ಭಾರತದಲ್ಲಿ ರೀಟೇಲ್ ಹಣದುಬ್ಬರ 2023ರ ಜನವರಿಯಲ್ಲಿ ಶೇ. 6.52ಕ್ಕೆ ಏರಿದೆ. ಅಂದರೆ ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿ ಸರಾಸರಿ ಬೆಲೆಗಳು ಶೇ. 6.52ರಷ್ಟು ಏರಿವೆ. ಈ ಹಣದುಬ್ಬರ ಮೀರಿಸಿ ಹಣ ಬೆಳೆಸುವ ಹೂಡಿಕೆ ಯೋಜನೆಗಳು ಅತ್ಯಗತ್ಯವಾಗಿದ್ದು, ಅದರಲ್ಲಿ ಎಫ್​ಡಿ ಇತ್ಯಾದಿ ವಿವಿಧ ಸ್ಕೀಮ್​ಗಳು ಸಹಾಯವಾಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ