iPhone 13 Offer: ಹೋಳಿ ಹಬ್ಬಕ್ಕೆ ಬಂಪರ್ ಆಫರ್: ಐಫೋನ್ ಖರೀದಿಗೆ ಇದಕ್ಕಿಂತ ಒಳ್ಳೆಯ ಸಮಯ ಬರಲ್ಲ

Flipkart Holi Sale 2023: ನೀವು ಹೋಳಿ ಸಂದರ್ಭ ಹೊಸ ಐಫೋನ್ ಖರೀದಿಸಬೇಕು ಅಥವಾ ಉಡುಗೊರೆ ನೀಡಬೇಕು ಎಂಬ ಯೋಜನೆ ಹಾಕಿಕೊಂಡಿದ್ದರೆ ಇದಕ್ಕಿಂತ ಉತ್ತಮ ಸಮಯ ಬರಲ್ಲ. ಫ್ಲಿಪ್​ಕಾರ್ಟ್ ಅನೇಕ ಆಫರ್​ಗಳೊಂದಿಗೆ ಐಫೋನ್ 13 ಮತ್ತು ಐಫೋನ್ 14 ಅನ್ನು ಸೇಲ್ ಮಾಡುತ್ತಿದೆ.

iPhone 13 Offer: ಹೋಳಿ ಹಬ್ಬಕ್ಕೆ ಬಂಪರ್ ಆಫರ್: ಐಫೋನ್ ಖರೀದಿಗೆ ಇದಕ್ಕಿಂತ ಒಳ್ಳೆಯ ಸಮಯ ಬರಲ್ಲ
iPhone 13 and Flipkart
Follow us
Vinay Bhat
|

Updated on:Mar 05, 2023 | 11:15 AM

ಇನ್ನೇನು ಹೋಳಿ ಹಬ್ಬ (Holi Festival) ಸಮೀಪಿಸುತ್ತಿದೆ. ಹೀಗಿರುವಾಗ ಪ್ರಸಿದ್ಧ ಇ-ಕಾಮರ್ಸ್ ತಾಣಗಳು ಒಂದೊಂದೆ ಮೇಳಗಳನ್ನು ಆಯೋಜಿಸಲು ಶುರು ಮಾಡಿಕೊಂಡಿವೆ. ಅಮೆಜಾನ್​ನಲ್ಲಿ (Amazon) ಈಗಾಗಲೇ ಹೋಳಿ ಶಾಪಿಂಗ್ ಸ್ಟೋರ್​ ಸೇಲ್​ ನಡೆಯುತ್ತಿದೆ. ಇತ್ತ ಫ್ಲಿಪ್‌ಕಾರ್ಟ್​ನಲ್ಲೂ (Flipkart) ಬಿಗ್ ಬಚತ್ ಧಮಾಲ್ ಸೇಲ್ 2023 ಎಂಬ ಹೊಸ ಮೇಳವನ್ನು ಹಮ್ಮಿಕೊಂಡಿದೆ. ಎರಡೂ ತಾಣಗಳು ಮಾರ್ಚ್ 8 ರಂದು ಬಣ್ಣಗಳ ಹಬ್ಬಕ್ಕೆ ಮುಂಚಿತವಾಗಿ ಅದ್ಭುತ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಘೋಷಿಸಿವೆ. ಎಲೆಕ್ಟ್ರಾನಿಕ್ಸ್, ಪೀಠೋಪಕರಣಗಳು, ಮೊಬೈಲ್ ಫೋನ್‌ಗಳು, ಉಪಕರಣಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಪಡೆಯಬಹುದು. ಫ್ಲಿಪ್‌ಕಾರ್ಟ್‌ ಈ ಸೇಲ್​ನಲ್ಲಿ ಆ್ಯಪಲ್ ಐಫೋನ್​ಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.

ನೀವು ಹೋಳಿ ಸಂದರ್ಭ ಹೊಸ ಐಫೋನ್ ಖರೀದಿಸಬೇಕು ಅಥವಾ ಉಡುಗೊರೆ ನೀಡಬೇಕು ಎಂಬ ಯೋಜನೆ ಹಾಕಿಕೊಂಡಿದ್ದರೆ ಇದಕ್ಕಿಂತ ಉತ್ತಮ ಸಮಯ ಬರಲ್ಲ. ಫ್ಲಿಪ್​ಕಾರ್ಟ್ ಅನೇಕ ಆಫರ್​ಗಳೊಂದಿಗೆ ಐಫೋನ್ 13 ಮತ್ತು ಐಫೋನ್ 14 ಅನ್ನು ಸೇಲ್ ಮಾಡುತ್ತಿದೆ. ಕಳೆದ ವರ್ಷ ಬಿಡುಗಡೆ ಆದ ಐಫೋನ್ 14 ಅನ್ನು ನೀವು ಕೇವಲ 44,999 ರೂ. ಗಳಿಗೆ ಖರೀದಿ ಮಾಡಬಹುದು.

ಐಫೋನ್ 14 ನ ಮೂಲಬೆಲೆ 79,900 ರೂ. ಆದರೆ, ಫ್ಲಿಪ್‌ಕಾರ್ಟ್ 9 % ರಿಯಾಯಿತಿ ಘೋಷಣೆ ಮಾಡಿದೆ. ಈ ಮೂಲಕ ಈ ಫೋನ್‌ 71,999 ರೂ. ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಹಾಗೆಯೆ ಇನ್ನೂ ಹೆಚ್ಚಿನ ಡಿಸ್ಕೌಂಟ್​ನಲ್ಲಿ ಐಫೋನ್‌ ಖರೀದಿ ಮಾಡಬಹುದು. ಇದಕ್ಕಾಗಿ ಖರೀದಿದಾರರು ಹೆಚ್‌ಡಿಎಫ್‌ಸಿ ಕ್ರೆಡಿಟ್ ಬಳಕೆ ಮಾಡಿಕೊಂಡು ಕೊಂಡುಕೊಂಡರೆ 4,000 ರೂ. ಗಳ ರಿಯಾಯಿತಿ ಲಭ್ಯವಾಗಲಿದೆ. ಅದರಂತೆ 67,999 ರೂ. ಗೆ ಐಫೋನ್ ಬೆಲೆ ಇಳಿಯಲಿದೆ.

ಇದನ್ನೂ ಓದಿ
Image
Smartphones: ಹುಬ್ಬೇರಿಸುವಂತಹ ಫೀಚರ್​ಗಳಿದ್ದರೂ ಮಾರುಕಟ್ಟೆಯಲ್ಲಿ ಫೇಲ್ ಆದ ಸ್ಮಾರ್ಟ್​ಫೋನ್​ಗಳು ಯಾವುವು ಗೊತ್ತೇ?
Image
POCO C55: ಕೇವಲ 8,999 ರೂ.: ಕಳೆದ ವಾರ ಬಿಡುಗಡೆ ಆದ ಈ ಸ್ಮಾರ್ಟ್​ಫೋನ್ ಮೇಲೆ ಬಂಪರ್ ಡಿಸ್ಕೌಂಟ್
Image
Amazon, Flipkart Holi sale 2023: ಅಮೆಜಾನ್, ಫ್ಲಿಪ್​ಕಾರ್ಟ್​ನಲ್ಲಿ ಹೋಳಿ ಸೇಲ್: ಅನೇಕ ಪ್ರಾಡಕ್ಟ್ ಮೇಲೆ ಬಂಪರ್ ಡಿಸ್ಕೌಂಟ್
Image
OnePlus Nord CE 3: ಅದ್ಭುತ ಕ್ಯಾಮೆರಾ, ಭರ್ಜರಿ ಫೀಚರ್ಸ್: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಒನ್​ಪ್ಲಸ್ ನಾರ್ಡ್ CE 3

Tech Tips: ಇಂಟರ್ನೆಟ್ ಇಲ್ಲದೆಯೂ ಇಮೇಲ್ ಕಳುಹಿಸುವ ಟ್ರಿಕ್ ಗೊತ್ತೇ?: ಇಲ್ಲಿದೆ ನೋಡಿ

ಹಾಗೆಯೇ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಹೊಂದಿರುವವರು ಶೇಕಡಾ 5 ಕ್ಯಾಶ್‌ಬ್ಯಾಕ್ ಸಹ ಪಡೆದುಕೊಳ್ಳಬಹುದಾಗಿದೆ. ಎಕ್ಸ್​ಚೇಂಜ್ ಆಫರ್ ಕೂಡ ನೀಡಲಾಗಿದ್ದು ನಿಮ್ಮ ಹಳೆಯ ಫೋನ್‌ ಮೇಲೆ 23,000 ರೂ. ಗಳ ವರೆಗೂ ರಿಯಾಯಿತಿ ಪಡೆಯಬಹುದು. ಈ ಮೂಲಕ ಅತಿ ಕಡಿಮೆ ಬೆಲೆಗೆ ಐಫೋನ್ 14 ನಿಮ್ಮದಾಗಿಸಬಹುದು.

ಇನ್ನು ಭಾರತದಲ್ಲಿ ಅತಿ ಹೆಚ್ಚು ಸೇಲ್ ಕಾಣುತ್ತಿರುವ ಐಫೋನ್ 13 ಕೂಡ ಆಕರ್ಷಕ ಡಿಸ್ಕೌಂಟ್​ನಲ್ಲಿ ಲಭ್ಯವಾಗುತ್ತಿದ್ದು, ಕೇವಲ 36,999ರೂ. ಗಳಿಗೆ ಈ ಫೋನ್‌ ಅನ್ನು ಖರೀದಿ ಮಾಡಬಹುದು. ಇದರ 128GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯದ ವೇರಿಯಂಟ್‌ ಮೂಲಬೆಲೆ 69,900 ರೂ. ಆಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಶೇ. 11 ಡಿಸ್ಕೌಂಟ್‌ ಘೋಷಣೆ ಮಾಡಲಾಗಿದೆ. ಇದರಿಂದಾಗಿ ಈ ಫೋನ್ 61,999 ರೂ. ಗಳಿಗೆ ಇಳಿಯುತ್ತದೆ.

ಹೆಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ ಹೆಚ್ಚುವರಿ 2,000 ರೂ. ಗಳ ಡಿಸ್ಕೌಂಟ್‌ ಸಿಗಲಿದೆ. ಹಾಗೆಯೇ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ ಹೊಂದಿರುವವರು ಈ ಫೋನ್‌ ಖರೀದಿಯಲ್ಲಿ ಶೇ. 5 ಕ್ಯಾಶ್‌ಬ್ಯಾಕ್ ಪಡೆದುಕೊಳ್ಳಬಹುದು. ಎಕ್ಸ್​ಚೇಂಜ್ ಆಫರ್​ 36,999 ರೂ. ವರೆಗೆ ನೀಡಲಾಗಿದೆ. ಈ ಮೂಲಕ ಅತ್ಯುತ್ತಮ ರಿಯಾಯಿತಿಗೆ ಐಫೋನ್ 13 ಲಭ್ಯವಾಗಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:15 am, Sun, 5 March 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್