Flipkart Big Saving Days Sale: ಫ್ಲಿಪ್​ಕಾರ್ಟ್​ನಲ್ಲಿ ಶುರುವಾಯಿತು ಬಿಗ್ ಸೇವಿಂಗ್ ಡೇಸ್: ಈ ಬಾರಿಯ ಆಫರ್ ಕೇಳಿದ್ರೆ ದಂಗಾಗ್ತೀರ

Flipkart Offer: ಫ್ಲಿಪ್​ಕಾರ್ಟ್​ನಲ್ಲಿ ಇಂದಿನಿಂದ ಬಿಗ್ ಸೇವಿಂಗ್ ಡೇಸ್ (Flipkart Big Saving Days Sale) ಹೆಸರಿನಲ್ಲಿ ಮಾರಾಟ ಸುಗ್ಗಿ ಆರಂಭವಾಗಿದೆ. ಮಾರ್ಚ್ 11 ರಿಂದ 15 ರವರೆಗೆ ಐದು ದಿನಗಳ ಕಾಲ ಈ ಸೇಲ್ ನಡೆಯುತ್ತಿದೆ.

Flipkart Big Saving Days Sale: ಫ್ಲಿಪ್​ಕಾರ್ಟ್​ನಲ್ಲಿ ಶುರುವಾಯಿತು ಬಿಗ್ ಸೇವಿಂಗ್ ಡೇಸ್: ಈ ಬಾರಿಯ ಆಫರ್ ಕೇಳಿದ್ರೆ ದಂಗಾಗ್ತೀರ
Flipkart Big Saving Days Sale
Follow us
Vinay Bhat
|

Updated on:Mar 11, 2023 | 1:51 PM

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ (Flipkart)​ ಮೊನ್ನೆಯಷ್ಟೆ ಹೋಳಿ ಹಬ್ಬದ ಪ್ರಯುಕ್ತ ಸೇಲ್ ನಡೆಸಿ ಆಕರ್ಷಕ ಕೊಡುಗೆಗಳನ್ನು ನೀಡಿತ್ತು. ಇದೀಗ ಮತ್ತೊಂದು ಹೊಸ ಮೇಳದೊಂದಿಗೆ ಫ್ಲಿಪ್​ಕಾರ್ಟ್ ಬಂದಿದ್ದು ಇಂದಿನಿಂದ ಬಿಗ್ ಸೇವಿಂಗ್ ಡೇಸ್ (Flipkart Big Saving Days Sale) ಹೆಸರಿನಲ್ಲಿ ಮಾರಾಟ ಸುಗ್ಗಿ ಆರಂಭವಾಗಿದೆ. ಮಾರ್ಚ್ 11 ರಿಂದ 15 ರವರೆಗೆ ಐದು ದಿನಗಳ ಕಾಲ ಈ ಸೇಲ್ ನಡೆಯುತ್ತಿದೆ. ಫ್ಲಿಪ್​ಕಾರ್ಟ್​ನಲ್ಲಿ ಪ್ಲಸ್ ಫೀಚರ್​ನ (Flipkart Plus Membership) ಸದಸ್ಯರಾದವರು ಒಂದು ದಿನ ಮೊದಲೇ ಆಫರ್​ಗಳನ್ನು ಪಡೆದುಕೊಂಡಿದ್ದಾರೆ. ಯುಗಾದಿ ಹಬ್ಬದ ಸಂಭ್ರಮಕ್ಕೂ ಮುನ್ನ ಫ್ಲಿಪ್‌ಕಾರ್ಟ್‌ ಈ ಮೇಳ ಆರಂಭಿಸಿರುವುದು ಖರೀದಿದಾರರಿಗೆ ಖುಷಿ ನೀಡಿದೆ.

ಫ್ಲಿಪ್​ಕಾರ್ಟ್​ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್‌, ಲ್ಯಾಪ್‌ಟಾಪ್‌, ಸ್ಮಾರ್ಟ್‌ಟಿವಿ ಸೇರಿದಂತೆ ಹಲವು ಡಿವೈಸ್‌ಗಳ ಮೇಲೆ ಆಕರ್ಷಕ ಡಿಸ್ಕೌಂಟ್‌ ಪಡೆದುಕೊಳ್ಳಬಹುದು. ಬಳಕೆದಾರರು ICICI ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ನಲ್ಲಿ 10 ಪ್ರತಿಶತ ತ್ವರಿತ ರಿಯಾಯಿತಿ ಮತ್ತು EMI ಸೌಲಭ್ಯದ ಲಾಭವನ್ನು ನೀಡಲಾಗಿದೆ. ಮುಖ್ಯವಾಗಿ ಕಳೆದ ವರ್ಷ ಅನಾವರಣಗೊಂಡ ಆ್ಯಪಲ್ ಐಫೋನ್ 14 128GB ಮಾದರಿಯು ಶೇ. 17 ರಿಯಾಯಿತಿಯೊಂದಿಗೆ ಲಭ್ಯವಿದೆ. ಬಳಕೆದಾರರು ಈ ಫೋನ್ ಅನ್ನು ಸುಮಾರು 65,999 ರೂ. ಗೆ ಖರೀದಿಸಬಹುದು. ಎಕ್ಸ್​ಚೇಂಜ್ ಆಫರ್ ಕೂಡ ನೀಡಲಾಗಿದ್ದು 20,000 ರೂ. ವರೆಗೆ ಉಳಿತಾಯವಾಗಲಿದೆ. ಕಂಪನಿಯು ಈ ಫೋನ್ ಮೇಲೆ ಒಂದು ವರ್ಷದ ವಾರಂಟಿ ಮತ್ತು ಇನ್-ಬಾಕ್ಸ್ ಬಿಡಿಭಾಗಗಳ ಮೇಲೆ 6 ತಿಂಗಳ ವಾರಂಟಿಯನ್ನು ನೀಡುತ್ತಿದೆ.

OnePlus TV 65 Q2 Pro: ₹99,999 ಬೆಲೆಯ ಒನ್​ಪ್ಲಸ್ ಸ್ಮಾರ್ಟ್ ಟಿವಿ ಬಿಡುಗಡೆ

ಇದನ್ನೂ ಓದಿ
Image
Oppo Reno 7 Pro 5G: ಕ್ಯಾಮೆರಾ ಪ್ರಿಯರನ್ನು ದಂಗಾಗಿಸಿದ ಒಪ್ಪೋ ರೆನೋ 7 ಪ್ರೊ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಅತಿ ಕಡಿಮೆ ಬೆಲೆಗೆ ಲಭ್ಯ
Image
Redmi 12C: ಶವೋಮಿಯಿಂದ ಅತಿ ಕಡಿಮೆ ಬೆಲೆಗೆ ರೆಡ್ಮಿ 12C ಸ್ಮಾರ್ಟ್‌ಫೋನ್‌ ಬಿಡುಗಡೆ: ಎಷ್ಟು ರೂ. ಗೊತ್ತೇ?
Image
Mobile Data: ಅತಿ ಕಡಿಮೆ ಬೆಲೆಗೆ ಇಂಟರ್ನೆಟ್ ಸೇವೆ ನೀಡುತ್ತಿರುವ ದೇಶ ಯಾವುದು ಗೊತ್ತೇ?
Image
iQOO Z7 5G: ಬಹುನಿರೀಕ್ಷಿತ ಐಕ್ಯೂ Z7 5G ಆಗಮನಕ್ಕೆ ದಿನಾಂಕ ಫಿಕ್ಸ್: ಏನಿದರ ವಿಶೇಷತೆ ನೋಡಿ

ಇನ್ನು ಕಳೆದ ವರ್ಷ ಮಾರುಕಟ್ಟೆಗೆ ಎಂಟ್ರಿ ನೀಡಿ ಹೊಸ ಅಲೆಯನ್ನೇ ಎಬ್ಬಿಸಿದ್ದ ನಥಿಂಗ್ ಫೋನ್ 1 ಕೂಡ ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ನಲ್ಲಿ ಡಿಸ್ಕೌಂಟ್‌ನಲ್ಲಿ ದೊರೆಯಲಿದೆ. ಈ ಸ್ಮಾರ್ಟ್‌ಫೋನ್‌ ಅನ್ನು ನೀವು 25,000 ರೂ. ಬೆಲೆಯಲ್ಲಿ ಖರೀದಿಸಬಹುದು. ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಈ ಸೇಲ್​ನಲ್ಲಿ ಪ್ಲಸ್ ಅಕೌಂಟ್ ಹೊಂದಿರುವ ಗ್ರಾಹಕರಿಗೆ ಉಚಿತ ಡೆಲಿವರಿ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ರೆಡ್ಮಿ ನೋಟ್ 12 ಪ್ರೋ+, ಗೂಗಲ್ ಪಿಕ್ಸೆಲ್ 7, ಮೊದಲಾದ ಸ್ಮಾರ್ಟ್​ಫೋನ್​ಗಳೂ ಕೂಡ ಭಾರೀ ರಿಯಾಯಿತಿಯಲ್ಲಿ ಫ್ಲಿಪ್​ಕಾರ್ಟ್​ನಲ್ಲಿ ಲಭ್ಯ ಇರಲಿವೆ. 60 ಸಾವಿರ ರೂ ಬೆಲೆಯ ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್​​ಫೋನ್ ಫೆಸ್ಟಿವ್ ಸೇಲ್ ಆಫರ್​ನಲ್ಲಿ 50 ಸಾವಿರ ರೂಗಿಂತ ಅಗ್ಗದ ಬೆಲೆಗೆ ಖರೀದಿಸಬಹುದು.

ಫ್ಲಿಪ್‌ಕಾರ್ಟ್‌ನ ಟಾಪ್ ಡೀಲ್‌ಗಳು:

  • ಲೆನೋವಾ Tabs ಅನ್ನು 7,999 ರೂ. ಗೆ ಖರೀದಿಸುವ ಅವಕಾಶವಿದೆ.
  • ಸಂಗೀತ ಉಪಕರಣಗಳು ಇತ್ಯಾದಿಗಳ ಮೇಲೆ ಶೇಕಡಾ 80 ರಷ್ಟು ರಿಯಾಯಿತಿ ಲಭ್ಯವಿರುತ್ತದೆ.
  • ಏರ್ ಕೂಲರ್‌ಗಳ ಮೇಲೆ ಶೇಕಡಾ 45 ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
  • ಕಿಚನ್ ಎಲೆಕ್ಟ್ರಾನಿಕ್ಸ್ ಮೇಲೆ ಶೇ. 60 ವರೆಗೆ ರಿಯಾಯಿತಿ.
  • ಕೀಬೋರ್ಡ್ ಖರೀದಿಯಲ್ಲಿ ಶೇಕಡಾ 15 ರಷ್ಟು ಉಳಿತಾಯವಾಗಲಿದೆ.
  • ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ನಥಿಂಗ್ ಫೋನ್ (1) ಕೇವಲ 25,000 ರೂ. ಗೆ ಲಭ್ಯವಿರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:50 pm, Sat, 11 March 23