OnePlus TV 65 Q2 Pro: ₹99,999 ಬೆಲೆಯ ಒನ್ಪ್ಲಸ್ ಸ್ಮಾರ್ಟ್ ಟಿವಿ ಬಿಡುಗಡೆ
ಪ್ರೀಮಿಯಂ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಮೂಲಕ ಟೆಕ್ಲೋಕದಲ್ಲಿ ಹೆಸರು ಗಳಿಸಿರುವ ಚೀನಾ ಮೂಲದ ಒನ್ಪ್ಲಸ್, ಭಾರತದಲ್ಲಿ ಸ್ಮಾರ್ಟ್ಫೋನ್ ಜತೆಗೇ, ಇಯರ್ಫೋನ್, ಇಯರ್ಬಡ್ಸ್ ಮತ್ತು ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲೂ ಛಾಪು ಮೂಡಿಸಿದೆ. ಭಾರತದಲ್ಲಿ ಒನ್ಪ್ಲಸ್ ಹೊಸ ಮಾದರಿಯ 65 ಇಂಚಿನ ಸ್ಮಾರ್ಟ್ ಟಿವಿ ಬಿಡುಗಡೆ ಮಾಡಿದೆ.
ಸ್ಮಾರ್ಟ್ ಟಿವಿ ಲೋಕಕ್ಕೆ ಹೊಸ ಹೊಸ ಮಾದರಿಗಳು ಕಾಲಕಾಲಕ್ಕೆ ಅಪ್ಡೇಟ್ ಆಗಿ ಬರುತ್ತಿವೆ. ಅದರಲ್ಲೂ ಸಾಂಪ್ರದಾಯಿಕ ಟಿವಿ ಬ್ರ್ಯಾಂಡ್ಗಳ ಜತೆಗೆ, ಹೊಸ ಕಂಪನಿಗಳ ಟಿವಿಗಳು ಸ್ಪರ್ಧೆಗೆ ಬಿದ್ದಿವೆ. ಟಿವಿಯ ಡಿಸ್ಪ್ಲೇ ಗಾತ್ರವೂ ಈಗ ದೊಡ್ಡದಾಗುತ್ತಿದೆ. 40 ಇಂಚು, 50 ಇಂಚಿನ ಸ್ಮಾರ್ಟ್ ಟಿವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಜತೆಗೆ, ಸ್ಮಾರ್ಟ್ ಫೀಚರ್ಗಳು ಕೂಡ ಅಪ್ಡೇಟ್ ಆಗುತ್ತಿವೆ. ಅದಕ್ಕೆ ಪೂರಕವಾಗಿ ಒಟಿಟಿ ವೇದಿಕೆಗಳು ಕೂಡ ಹೆಚ್ಚಿನ ವಿಡಿಯೊ, ಸಿನಿಮಾ, ಫೀಚರ್ ಕಂಟೆಂಟ್ಗಳ ಮೂಲಕ ಜನರನ್ನು ರಂಜಿಸುತ್ತಿವೆ. ಪ್ರೀಮಿಯಂ ಸ್ಮಾರ್ಟ್ಫೋನ್ ತಯಾರಿಕ ಕಂಪನಿ ಒನ್ಪ್ಲಸ್, ಒನ್ಪ್ಲಸ್ TV 65 Q2 Pro (OnePlus TV 65 Q2 Pro) ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಒನ್ಪ್ಲಸ್ TV 65 Q2 Pro ವಿಶೇಷತೆಗಳೇನು?
ಪ್ರೀಮಿಯಂ ಟಿವಿ ಸರಣಿಯಲ್ಲಿ ಬಿಡುಗಡೆಯಾಗಿರುವ ಒನ್ಪ್ಲಸ್ TV 65 Q2 Pro, 65 ಇಂಚಿನ ಡಿಸ್ಪ್ಲೇ ಹೊಂದಿದೆ. ಅಧಿಕ ಗಾತ್ರದ ಸ್ಕ್ರೀನ್ ಹೊಂದಿರುವ ಟಿವಿಗಳಿಗೆ ಬೇಡಿಕೆ ಹೆಚ್ಚಿದ್ದು, ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ, ಸ್ಮಾರ್ಟ್ ಟಿವಿ (Smart TV) ಬಿಡುಗಡೆಯಾಗುತ್ತಿದೆ. ಹೊಸ ಒನ್ಪ್ಲಸ್ ಸ್ಮಾರ್ಟ್ ಟಿವಿ 65 Q2 Pro 3840 x 2160 ರೆಸೊಲ್ಯೂಶನ್ ಹೊಂದಿದೆ. ಇದರಿಂದಾಗಿ ಗುಣಮಟ್ಟದ ಚಿತ್ರಗಳು ಹೆಚ್ಚು ಸ್ಪಷ್ಟವಾಗಿ ಮೂಡಿಬರುತ್ತವೆ ಎಂದು ಒನ್ಪ್ಲಸ್ ಹೇಳಿದೆ.
ಸಿನಿಮಾ ಅನುಭವಕ್ಕಾಗಿ ಒನ್ಪ್ಲಸ್ TV 65 Q2 Pro
ಹೊಸ ಒನ್ಪ್ಲಸ್ TV 65 Q2 Pro ಸ್ಮಾರ್ಟ್ ಟಿವಿಯಲ್ಲಿ ಡಾಲ್ಬಿ ವಿಶನ್, HDR10+ ಪ್ರಮಾಣೀಕೃತ, HDR10, HLG ವೈಶಿಷ್ಟ್ಯ ಹೊಂದಿದೆ. ಹೀಗಾಗಿ ಡಾಲ್ಬಿ ಅಟ್ಮೋಸ್ ಅನುಭವದ ಜತೆಗೆ, 2.1 ಚಾನಲ್ 70W ಸೌಂಡ್ ಓಟ್ಪುಟ್ ಲಭ್ಯವಾಗುತ್ತದೆ. ಗೂಗಲ್ ಟಿವಿ ಆ್ಯಂಡ್ರಾಯ್ಡ್ 11 (Android 11) ಮೂಲಕ ಕಾರ್ಯನಿರ್ವಹಿಸುವ ಒನ್ಪ್ಲಸ್ TV 65 Q2 Pro, ಹತ್ತು ಹಲವು ಅಪ್ಲಿಕೇಶನ್ಗಳನ್ನು ಹೊಂದಿದೆ. ಉಳಿದಂತೆ ಆಕ್ಸಿಜನ್ ಪ್ಲೇ, ಅಮೆಜಾನ್ ಪ್ರೈಮ್, ನೆಟ್ಫ್ಲಿಕ್ಸ್, ಯೂಟ್ಯೂಬ್, ಗೂಗಲ್ ಪ್ಲೇ ಸ್ಟೋರ್ ಬೆಂಬಲವಿದ್ದು, ಬಳಕೆದಾರರು ಅಗತ್ಯವಿರುವ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಬಳಸಬಹುದು. ಗೂಗಲ್ ಸ್ಮಾರ್ಟ್ ವಾಯ್ಸ್ ಅಸಿಸ್ಟ್ ಮತ್ತು ಅಲೆಕ್ಸಾ ಬೆಂಬಲವಿದೆ.
ಒನ್ಪ್ಲಸ್ TV 65 Q2 Pro ಬೆಲೆ ಮತ್ತು ಲಭ್ಯತೆ
ಒನ್ಪ್ಲಸ್ TV 65 Q2 Pro ಸ್ಮಾರ್ಟ್ಟಿವಿ 3GB+32GB ಸ್ಟೋರೇಜ್ ಹೊಂದಿದೆ. ಹೊಸ ಮಾದರಿಗೆ ₹99,999 ದರವಿದ್ದು, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗೆ ₹5,000 ಇನ್ಸ್ಟಂಟ್ ಡಿಸ್ಕೌಂಟ್ ಲಭ್ಯವಿದೆ. ಉಳಿದಂತೆ ಇಎಂಐ ಬಳಸಿ, ಹೊಸ ಟಿವಿ ಖರೀದಿಸಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:53 pm, Fri, 10 March 23