Airtel 5G: 265ಕ್ಕೂ ಅಧಿಕ ನಗರಗಳಲ್ಲಿ ಏರ್ಟೆಲ್ 5G ಲಾಂಚ್: ಪ್ಲಾನ್, ಬೆಲೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ
ಏರ್ಟೆಲ್ 5G ಹೊಸದಾಗಿ 125 ನಗರಗಳಾದ್ಯಂತ ಪ್ರಾರಂಭಿಸುವುದರೊಂದಿಗೆ ಏರ್ಟೆಲ್ 5G ಲಭ್ಯವಿರುವ ಪ್ರದೇಶಗಳ ಸಂಖ್ಯೆ 265 ದಾಟಿದೆ. ಈ ನಗರಗಳಲ್ಲಿ ವಾಸಿಸುವ ಜನರು ತಮ್ಮ 5G ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಈ ಸೇವೆಗಳನ್ನು ಬಳಸಲು ಸಾಧ್ಯವಾಗುತ್ತದೆ
ಭಾರತದಲ್ಲಿ 5ಜಿ (5G) ಯುಗ ಆರಂಭವಾಗಿ ತಿಂಗಳುಗಳು ಕಳೆದಿದ್ದು ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ರಿಲಯನ್ಸ್ ಜಿಯೋ (JIO) ಹಾಗೂ ಭಾರ್ತಿ ಏರ್ಟೆಲ್ ಪೈಪೋಟಿಗೆ ಬಿದ್ದಂತೆ ವೇಗವಾಗಿ ಅನೇಕ ನಗರಗಳಲ್ಲಿ 5ಜಿ ಸೇವೆಯನ್ನು ಆರಂಭಿಸುತ್ತಿದೆ. ಇದೀಗ ಏರ್ಟೆಲ್ ಒಟ್ಟು 265 ಕ್ಕೂ ಅಧಿಕ ಪ್ರದೇಶಗಳಲ್ಲಿ 5ಜಿ ಲಭ್ಯವಾಗುವಂತೆ ಮಾಡಿದೆ. ಅಲ್ಲದೆ ಕೊಹಿಮಾ, ಇಟಾನಗರ್, ಐಜ್ವಾಲ್, ಗ್ಯಾಂಗ್ಟಾಕ್, ಸಿಲ್ಚಾರ್, ದಿಬ್ರುಗಢ್ ಮತ್ತು ಟಿನ್ಸುಕಿಯಾದಲ್ಲಿ ವಾಸಿಸುವ ಏರ್ಟೆಲ್ (Airtel) ಬಳಕೆದಾರರು ಈಗ ಹೆಚ್ಚಿನ ವೇಗದ ಏರ್‌ಟೆಲ್ 5G ಪ್ಲಸ್ ಸೇವೆಗಳನ್ನು ಉಚಿತವಾಗಿ ಬಳಸಬಹುದು ಎಂದು ಕಂಪನಿ ಹೇಳಿದೆ.
ಏರ್ಟೆಲ್ 5G ಹೊಸದಾಗಿ 125 ನಗರಗಳಾದ್ಯಂತ ಪ್ರಾರಂಭಿಸುವುದರೊಂದಿಗೆ ಏರ್ಟೆಲ್ 5G ಲಭ್ಯವಿರುವ ಪ್ರದೇಶಗಳ ಸಂಖ್ಯೆ 265 ದಾಟಿದೆ. ಈ ನಗರಗಳಲ್ಲಿ ವಾಸಿಸುವ ಜನರು ತಮ್ಮ 5G ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಈ ಸೇವೆಗಳನ್ನು ಬಳಸಲು ಸಾಧ್ಯವಾಗುತ್ತದೆ ಎಂದು ಕಂಪನಿ ಭರವಸೆ ನೀಡಿದೆ. ಯಾವ ರಾಜ್ಯಗಳ ಯಾವ ನಗರಗಳಲ್ಲಿ ಏರ್ಟೆಲ್ 5ಜಿ ಸೇವ್ ಲಭ್ಯವಿದೆ ಎಂಬುದನ್ನು ನೋಡುವುದಾದರೆ…
Mozilla Firefox: ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ಮೊಝಿಲ್ಲಾ ಫೈರ್ಫಾಕ್ಸ್ ಬಳಸುತ್ತಿದ್ದೀರಾ? ಎಚ್ಚರಿಕೆ!
– ಅಸ್ಸಾಂ: ಗುವಾಹಟಿ, ತಿನ್ಸುಕಿಯಾ, ದಿಬ್ರುಗಢ್, ಸಿಲ್ಚಾರ್.
– ಆಂಧ್ರಪ್ರದೇಶ- ವೈಜಾಗ್, ವಿಜಯವಾಡ, ರಾಜಮಂಡ್ರಿ, ಕಾಕಿನಾಡ, ಗುಂಟೂರು, ಕರ್ನೂಲ್, ತಿರುಪತಿ, ಕಡಪಾ, ಓಂಗೋಲ್, ಎಲೂರು, ವಿಜಯನಗರಂ, ನೆಲ್ಲೂರು ಮತ್ತು ಅನಂತಪುರ.
– ಬಿಹಾರ: ಪಾಟ್ನಾ, ಮುಜಾಫರ್‌ಪುರ್, ಬೋಧ್ ಗಯಾ, ಭಾಗಲ್‌ಪುರ್, ಬೇಗುಸರೈ, ಕತಿಹಾರ್, ಪೂರ್ಣಿಯಾ, ಕಿಶನ್‌ಗಂಜ್, ಬಿಹ್ತಾ, ಗೋಪಾಲ್‌ಗಂಜ್, ಬಾರ್ಹ್, ಬಿಹಾರ್ಷರೀಫ್, ನಾವಡಾ, ಸೋನೆಪುರ್, ಫತ್ವಾ, ಅರಾರಿಯಾ, ಜೆಹಾನಾಬಾದ್, ಫೋರ್ಬೆಸ್‌ಗಂಜ್, ಮೋತಿಹಾರಿ, ಸಿವಾನ್‌ಸರಾಹೆ, ಸಹರ್ಸಾ ಸುಲ್ತಂಗಂಜ್, ಜಮುಯಿ, ಗಯಾ, ಖಗರಿಯಾ ಮತ್ತು ಬೆಟ್ಟಿಯಾ.
– ಛತ್ತೀಸ್‌ಗಢ: ದುರ್ಗ್-ಭಿಲಾಯ್, ರಾಯ್‌ಪುರ ಮತ್ತು ಬಿಲಾಸ್‌ಪುರ.
– ಚಂಡೀಗಢ: ಚಂಡೀಗಢ
– ದೆಹಲಿ
– ಗುಜರಾತ್: ಅಹಮದಾಬಾದ್, ಸೂರತ್, ರಾಜ್‌ಕೋಟ್, ವಡೋದರಾ, ನವಸಾರಿ, ಮೊರ್ಬಿ, ಸುರೇಂದ್ರನಾ, ಜುನಾಗಢ್, ವಾಪಿ, ದಹೇಜ್, ಭರೂಚ್, ಆನಂದ್, ಭಾವನಗರ, ಅಂಕಲೇಶ್ವರ, ಜಾಮ್‌ನಗರ, ನಾಡಿಯಾಡ್, ಕಡೋದರ, ಮೆಹ್ಸಾನಾ, ಕಲೋಲ್ ಮತ್ತು ಭುಜ್.
– ಹರಿಯಾಣ: ಗುರುಗ್ರಾಮ್, ಪಾಣಿಪತ್, ಫರಿದಾಬಾದ್, ಅಂಬಾಲಾ, ಕರ್ನಾಲ್, ಸೋನಿಪತ್, ಯಮುನಾನಗರ, ಬಹದ್ದೂರ್ಗಢ ಮತ್ತು ಪಂಚಕುಲ.
– ಹಿಮಾಚಲ ಪ್ರದೇಶ: ಶಿಮ್ಲಾ, ಧರ್ಮಶಾಲಾ, ಮಂಡಿ, ಬಡ್ಡಿ, ಮನಾಲಿ, ಸೋಲನ್, ಕಂಗ್ರಾ, ಕುಲು, ಪಾಲಂಪುರ್ ಮತ್ತು ನಲಗಢ.
– ಜಮ್ಮು ಮತ್ತು ಕಾಶ್ಮೀರ: ಜಮ್ಮು, ಶ್ರೀನಗರ, ಸಾಂಬಾ, ಕಥುವಾ, ಉಧಂಪುರ್, ಅಖ್ನೂರ್, ಕುಪ್ವಾರ, ಲಖನ್‌ಪುರ್ ಮತ್ತು ಖೌರ್.
– ಜಾರ್ಖಂಡ್: ರಾಂಚಿ, ಜಮ್ಶೆಡ್‌ಪುರ, ದಿಯೋಘರ್, ಆದಿತ್ಯಪುರ, ಧನ್‌ಬಾದ್, ಬೊಕಾರೊ ಸ್ಟೀಲ್ ಸಿಟಿ, ರಾಮಗಢ ಕಂಟೋನ್ಮೆಂಟ್, ಖುಂಟಿ ಮತ್ತು ಹಜಾರಿಬಾಗ್.
– ಕರ್ನಾಟಕ: ಬೆಂಗಳೂರು, ಮಂಗಳೂರು ಮತ್ತು ಮೈಸೂರು.
– ಕೇರಳ: ಕೊಚ್ಚಿ, ತಿರುವನಂತಪುರಂ, ಕೋಝಿಕ್ಕೋಡ್, ತ್ರಿಶೂರ್, ಪೊನ್ನಾನಿ, ಕಲಮಸ್ಸೆರಿ, ತಿರುರಂಗಡಿ, ವೆಂಗರಾ, ತ್ರಿಪ್ಪುನಿತುರ, ತಿರೂರ್, ಕೊಲ್ಲಂ, ಎಡತಾಲ, ಮುವಾಟ್ಟುಪುಳ, ಪಾಲಕ್ಕಾಡ್, ಚೆರುವನ್ನೂರ್, ವಝಕ್ಕಲ ಮತ್ತು ಕಾಯಂಕುಲಂ.
– ಮಹಾರಾಷ್ಟ್ರ: ಮುಂಬೈ, ನಾಗ್ಪುರ, ಪುಣೆ, ಧುಲೆ, ನಾಸಿಕ್, ಅಚಲ್ಪುರ್, ಉದ್ಗೀರ್, ಯವತ್ಮಾಲ್ ಸಿಟಿ, ಸಿನ್ನಾರ್, ಭಂಡಾರಾ ಸಿಟಿ, ಔರಂಗಾಬಾದ್, ಜಲಗಾಂವ್, ಪರ್ಭಾನಿ, ಥಾಣೆ, ಬುಲ್ಡಾನಾ ಮತ್ತು ಖಮ್ಗಾಂವ್.
– ಮಧ್ಯಪ್ರದೇಶ: ಇಂದೋರ್, ಭೋಪಾಲ್, ಉಜ್ಜಯಿನಿ, ಗ್ವಾಲಿಯರ್, ದೇವಾಸ್, ಜಬಲ್‌ಪುರ್, ಸಾಗರ್, ಛತ್ತರ್‌ಪುರ್, ಮೊವ್ ಮತ್ತು ಪಿತಾಂಪುರ್.
– ಮಣಿಪುರ: ಇಂಫಾಲ ಮತ್ತು ಚುರಚಂದಪುರ.
– ಮಿಜೋರಾಂ: ಐಜ್ವಾಲ್
ನಾಗಾಲ್ಯಾಂಡ್: ಕೊಹಿಮಾ ಮತ್ತು ದಿಮಾಪುರ್
– ಒಡಿಶಾ: ಭುವನೇಶ್ವರ್, ಕಟಕ್, ರೂರ್ಕೆಲಾ, ಪುರಿ, ಭವಾನಿಪಟ್ನಾ, ಪರದೀಪ್, ಧೆಂಕನಲ್, ಜರ್ಸುಗುಡ, ಬರ್ಗಢ್ ಟೌನ್, ಅನುಗುಲ್, ಸಂಬಲ್ಪುರ್, ಬೆಹ್ರಾಂಪುರ, ಬಾಲಸೋರ್, ಕೇಂದ್ರಪಾರಾ, ಜಾಜ್ಪುರ್ ರಸ್ತೆ, ಬೋಲಂಗೀರ್ ಮತ್ತು ತಲ್ಚೆರ್.
– ಪಂಜಾಬ್: ಲುಧಿಯಾನ, ದೇರಾಬಸ್ಸಿ, ಖರಾರ್, ಜಿರಕ್ಪುರ್ ಮತ್ತು ಮೊಹಾಲಿ.
– ರಾಜಸ್ಥಾನ: ಜೈಪುರ, ಕೋಟಾ, ಉದಯಪುರ, ಭಿವಾಡಿ, ಪಾಲಿ, ಗಂಗಾನಗರ, ಸಿಕರ್, ಜೋಧ್‌ಪುರ, ಅಜ್ಮೀರ್, ಅಲ್ವಾರ್, ಬಿಕಾನೇರ್ ಮತ್ತು ಭಿಲ್ವಾರಾ.
– ಸಿಕ್ಕಿಂ: ಗ್ಯಾಂಗ್ಟಾಕ್
– ತಮಿಳುನಾಡು: ಚೆನ್ನೈ, ಕೊಯಮತ್ತೂರು, ಮಧುರೈ, ಹೊಸೂರು ಮತ್ತು ತಿರುಚ್ಚಿ.
– ತೆಲಂಗಾಣ: ಹೈದರಾಬಾದ್, ವಾರಂಗಲ್, ಕರೀಂನಗರ, ನಿಜಾಮಾಬಾದ್, ಖಮ್ಮಂ ಮತ್ತು ರಾಮಗುಂಡಂ.
– ತ್ರಿಪುರ: ಅಗರ್ತಲಾ
– ಉತ್ತರಾಖಂಡ: ಡೆಹ್ರಾಡೂನ್ ಮತ್ತು ಹರಿದ್ವಾರ.
– ಉತ್ತರ ಪ್ರದೇಶ: ವಾರಣಾಸಿ, ಲಕ್ನೋ, ಆಗ್ರಾ, ಮೀರತ್, ಗೋರಖ್‌ಪುರ, ಕಾನ್ಪುರ್, ಪ್ರಯಾಗ್‌ರಾಜ್, ನೋಯ್ಡಾ, ಘಾಜಿಯಾಬಾದ್, ಝಾನ್ಸಿ, ಅಯೋಧ್ಯೆ, ಶಹಜಹಾನ್‌ಪುರ, ರಾಯ್‌ಬರೇಲಿ, ಬಾರಾಬಂಕಿ, ಚಂದೌಲಿ, ಬಂದಾ, ಹರ್ದೋಯಿ, ಮಹಾರಾಜ್‌ಗಂಜ್, ಕುಶಿನಗರ, ಜಾನ್‌ಪುರ್, ಬಲರಾಮಪುರ, ಮೌ, ಜಿ ಬರೇಲಿ ಮತ್ತು ಅಲಿಗಢ.
– ಪಶ್ಚಿಮ ಬಂಗಾಳ: ಸಿಲಿಗುರಿ
ಏರ್ಟೆಲ್ 4G ಗೆ ಹೋಲಿಸಿದರೆ 30 ಪಟ್ಟು ಹೆಚ್ಚಿನ ವೇಗವನ್ನು 5G ನೀಡುತ್ತದೆ ಎಂದು ಕಂಪನಿ ಹೇಳಿದೆ. 5ಜಿ ತಂತ್ರಜ್ಞಾನವು ತಡೆರಹಿತ ಕವರೇಜ್, ಶತಕೋಟಿ ಡಿವೈಸ್ಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ವೇಗದಲ್ಲಿ ಉತ್ತಮ ಗುಣಮಟ್ಟದ ವಿಡಿಯೊ ಕರೆ ಸೇವೆಗಳನ್ನು ಒದಗಿಸುತ್ತದೆ. ಉತ್ತಮ ಮತ್ತು ಗುಣಮಟ್ಟದ ವಿಡಿಯೋ ಅಥವಾ ಚಲನಚಿತ್ರವನ್ನು ಮೊಬೈಲ್ ಸಾಧನದಲ್ಲಿ ಕೆಲವೇ ಸೆಕೆಂಡುಗಳಲ್ಲಿ ಡೌನ್‌ಲೋಡ್ ಮಾಡಲು (ಜನಸಂದಣಿ ಇರುವ ಪ್ರದೇಶಗಳಲ್ಲಿಯೂ ಸಹ) ಅನುಮತಿಸುತ್ತದೆ. ಜಿಯೋ 5G ಗಿಂತ ಭಿನ್ನವಾಗಿ ಏರ್ಟೆಲ್ ತನ್ನ 5G ಸೇವೆಗಳನ್ನು ಎಲ್ಲರಿಗೂ ನೀಡುತ್ತದೆ. ಆದ್ದರಿಂದ, ಬಳಕೆದಾರರು ಕನಿಷ್ಟ ರೀಚಾರ್ಜ್ ಯೋಜನೆಯನ್ನು ಪಡೆಯಬೇಕಾಗಿಲ್ಲ. ಬದಲಾಗಿ, ಏರ್‌ಟೆಲ್ 5G ಈಗಿರುವ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತದೆ.
ನಿಮ್ಮಲ್ಲಿ ಹಳೆಯ ಸ್ಮಾರ್ಟ್ಫೋನ್ಗಳಿದ್ದರೆ ಹೊಸ 5ಜಿ ಫೋನನ್ನು ಖರೀದಿಸುವಂತೆ ಏರ್ಟೆಲ್ ಬಳಕೆದಾರರ ಬಳಿ ಮನವಿ ಮಾಡಿದೆ. ಮುಖ್ಯವಾದ ಅಂಶ ಎಂದರೆ ನಿಮ್ಮ ಮೊಬೈಲ್ನಲ್ಲಿ ಈಗಿರುವ ಏರ್ಟೆಲ್ ಸಿಮ್ ಮೂಲಕವೇ 5ಜಿ ಕಾರ್ಯನಿರ್ವಹಿಸಲಿದೆ. ಅಂದರೆ 5ಜಿ ಸೇವೆ ಪಡೆಯಲು ಯಾವುದೇ ಹೊಸ ಸಿಮ್ನ ಅಗತ್ಯವಿಲ್ಲ. ನಿಮ್ಮ ಪ್ರದೇಶದಲ್ಲಿ 5ಜಿ ಲಭ್ಯವಾಗುತ್ತಿದೆ ಎಂದಾದರೆ ಸ್ಮಾರ್ಟ್ಫೋನ್ನಲ್ಲಿ ನೆಟ್ವರ್ಕ್ ಸೆಟ್ಟಿಂಗ್ಗೆ ಹೋಗಿ 5ಜಿ ಅನ್ನು ಚಾಲ್ತಿ ಮಾಡಿದರೆ ಸಾಕು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ