Poco X5 5G: 22 ನಿಮಿಷಗಳಲ್ಲಿ ಚಾರ್ಜ್ ಫುಲ್: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಪೋಕೋ X5 5G ಸ್ಮಾರ್ಟ್​ಫೋನ್ ಬಿಡುಗಡೆ

ಭಾರತೀಯ ಮಾರುಕಟ್ಟೆಯಲ್ಲಿ ಇಂದು ಪೋಕೋ ಕಂಪನಿ ಹೊಸ ಪೋಕೋ ಎಕ್ಸ್ 5 (POCO X5) ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಕ್ವಾಲ್ಕಾಮ್ ಸ್ನಾಪ್​ಡ್ರಾಗನ್ 695 ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ.

Poco X5 5G: 22 ನಿಮಿಷಗಳಲ್ಲಿ ಚಾರ್ಜ್ ಫುಲ್: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಪೋಕೋ X5 5G ಸ್ಮಾರ್ಟ್​ಫೋನ್ ಬಿಡುಗಡೆ
Poco X5 5G
Follow us
Vinay Bhat
|

Updated on:Mar 14, 2023 | 3:14 PM

ಅಪರೂಪಕ್ಕೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು (Smartphone) ಬಿಡುಗಡೆ ಮಾಡುವ ಪ್ರಸಿದ್ಧ ಪೋಕೋ (POCO) ಸಂಸ್ಥೆ ಇದೀಗ ತನ್ನ X ಸರಣಿ ಫೋನ್​ನೊಂದಿಗೆ ಮತ್ತೆ ಬಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇಂದು ಪೋಕೋ ಕಂಪನಿ ಹೊಸ ಪೋಕೋ ಎಕ್ಸ್ 5 (POCO X5) ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಕ್ವಾಲ್ಕಾಮ್ ಸ್ನಾಪ್​ಡ್ರಾಗನ್ 695 ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು, 48 ಮೆಗಾಫಿಕ್ಸೆಲ್​ನ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಜೊತೆಗೆ ದೊಡ್ಡ ಬ್ಯಾಟರಿಗೆ ತಕ್ಕಂತೆ 33W ವೇಗದ ಚಾರ್ಜಿಂಗ್​ನೊಂದಿಗೆ ಅನಾವರಣಗೊಂಡಿದೆ. ವಿಶೇಷವಾಗಿ ಈ ಫೋನಿನ ಬೆಲೆ ಕಡಿಮೆ ಆಗಿದ್ದರೂ 5G ಸಪೋರ್ಟ್ ಮಾಡುತ್ತದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬ ಸಂಪೂರ್ಣ ಮಾಹಿತಿ ನೋಡೋಣ.

ಬೆಲೆ ಎಷ್ಟು?:

ಪೋಕೋ X5 5G ಸ್ಮಾರ್ಟ್​ಫೋನ್ ಭಾರತದಲ್ಲಿ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದರ 6GB RAM +128GB ಸ್ಟೋರೇಜ್ ರೂಪಾಂತರಕ್ಕೆ 18,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 8GB RAM + 256GB ಸ್ಟೋರೇಜ್ ಆಯ್ಕೆಗೆ 20,999 ರೂ. ಇದೆ. ಈ ಫೋನ್ ಸೂಪರ್ನೋವಾ ಗ್ರೀನ್, ವೈಲ್ಡ್ಕ್ಯಾಟ್ ಬ್ಲೂ ಮತ್ತು ಜಾಗ್ವಾರ್ ಬ್ಲಾಕ್ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಇದನ್ನೂ ಓದಿ
Image
Nokia C12: ₹5,999ಕ್ಕೆ ಹೊಸ ನೋಕಿಯಾ ಸ್ಮಾರ್ಟ್​ಫೋನ್ ಬಿಡುಗಡೆ
Image
Yellow iPhone 14: ಬಂಪರ್ ಆಫರ್​ನೊಂದಿಗೆ ಐಫೋನ್ 14, ಐಫೋನ್ 14 ಪ್ಲಸ್ ಹಳದಿ ಬಣ್ಣದಲ್ಲಿ ಬಿಡುಗಡೆ: ಬೆಲೆ ಎಷ್ಟು?
Image
Realme C33 2023: ಭಾರತದಲ್ಲಿ ಊಹಿಸಲಾಗದ ಬೆಲೆಗೆ ರಿಯಲ್ ಮಿಯಿಂದ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ
Image
iPhone 14: ಇಂದು ಹೊಸ ಕಲರ್​ನಲ್ಲಿ ಐಫೋನ್ 14, ಐಫೋನ್ 14 ಪ್ಲಸ್ ಬಿಡುಗಡೆ: ಬೆಲೆ ಎಷ್ಟು?

ಈ ಸ್ಮಾರ್ಟ್​ಫೋನ್ ಇದೇ ಮಾರ್ಚ್ 21 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ಜೊತೆಗೆ ಪೋಕೋ ಅಧಿಕೃತ ವೆಬ್​ಸೈಟ್​ನಲ್ಲಿ ಮಾರಾಟವಾಗಲಿದೆ. ಮೊದಲ ಸೇಲ್ ಪ್ರಯುಕ್ತ ICICI ಬ್ಯಾಂಕ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರಿಗೆ 2,000 ರೂ. ಗಳ ರಿಯಾಯಿತಿಯನ್ನು ಘೋಷಿಸಲಾಗಿದೆ. 2000 ರೂಪಾಯಿಗಳ ಎಕ್ಸ್​ಚೇಂಜ್ ರಿಯಾಯಿತಿಯನ್ನು ಕೂಡ ನೀಡುತ್ತಿದೆ.

IQoo Z7i: ಸದ್ದಿಲ್ಲದೆ ಮಾರುಕಟ್ಟೆಗೆ ದಿಢೀರ್ ಹೊಸ ಸ್ಮಾರ್ಟ್​ಫೋನ್ ಪರಿಚಯಿಸಿದ ಐಕ್ಯೂ: ಪ್ರೊಸೆಸರ್ ಕಂಡು ದಂಗಾದ ಟೆಕ್ ಪ್ರಿಯರು

ಫೀಚರ್ಸ್ ಏನು?:

ಪೋಕೋ X5 5G ಸ್ಮಾರ್ಟ್‌ಫೋನ್‌ 1080*2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67 ಇಂಚಿನ ಫುಲ್‌ಹೆಚ್‌ಡಿ ಪ್ಲಸ್‌ ಸೂಪರ್ ಅಮೊಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. 120Hz ಅಡಾಪ್ಟಿವ್ ರಿಫ್ರೆಶ್ ರೇಟ್‌ ಪಡೆದುಕೊಂಡಿದೆ. ಕಾರ್ನಿಂಗ್ ಗೋರಿಲ್ಲ ಗ್ಲಾಸ್ 5 ಪ್ರೊಟೆಕ್ಷನ್ ಕೂಡ ನೀಡಲಾಗಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದು ಆಂಡ್ರಾಯ್ಡ್‌ 13ನಲ್ಲಿ ರನ್‌ ಆಗುತ್ತದೆ. ಇಷ್ಟು ಕಡಿಮೆ ಬೆಲೆಗೆ ಈ ಫೀಚರ್ಸ್ ಇರುವ ಕೆಲವೇ ಕೆಲವು ಮೊಬೈಲ್​ಗಳಲ್ಲಿ ಇದುಕೂಡ ಒಂದಾಗಿದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರ ಮುಖ್ಯ ಕ್ಯಾಮೆರಾ 48 ಮೆಗಾಫಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೆ ಎರಡನೇ ಕ್ಯಾಮೆರಾ 8MP ಅಲ್ಟ್ರಾ-ವೈಡ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2MP ಮ್ಯಾಕ್ರೋ ಲೆನ್ಸ್‌ ಅನ್ನು ಒಳಗೊಂಡಿರಲಿದೆ. ಇದರಲ್ಲಿ ಹೆಚ್​ಡಿಆರ್, ನೈಟ್ ಮೋಡ್ ಆಯ್ಕೆ ನೀಡಲಗಿದೆ. ಇದಲ್ಲದೆ ಮುಂಭಾಗ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಇದಕ್ಕೆ ತಕ್ಕಂತೆ 33W ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಈ ಚಾರ್ಜರ್ ಬಾಕ್ಸ್​ನಲ್ಲೇ ನೀಡಲಾಗಿದೆ. ಈ 33W ಫಾಸ್ಟ್ ಚಾರ್ಜರ್ ಮೂಲಕ ಕೇವಲ 22 ನಿಮಿಷಗಳಲ್ಲಿ 0-100 ಫುಲ್ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿದ್ದು, 4G LTE, ಡ್ಯುಯಲ್ ಬ್ಯಾಂಡ್ Wi-Fi, ಬ್ಲೂಟೂತ್ 5.0, GPS ಮತ್ತು USB ಟೈಪ್-C ಪೋರ್ಟ್ ಅನ್ನು ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:14 pm, Tue, 14 March 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್