Realme C33 2023: ಭಾರತದಲ್ಲಿ ಊಹಿಸಲಾಗದ ಬೆಲೆಗೆ ರಿಯಲ್ ಮಿಯಿಂದ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ
ಭಾರತದಲ್ಲಿ ರಿಯಲ್ ಮಿ ಸಿ33 2023 (Realme C33 2023) ಸ್ಮಾರ್ಟ್‌ಫೋನ್ ಅನಾವರಣಗೊಂಡಿದೆ. ಈ ಫೋನ್ 10,000 ರೂ. ಒಳಗಡೆ ಬಿಡುಗಡೆ ಆಗಿದೆ. ಆದರೂ ಬರೋಬ್ಬರಿ 50 ಮೆಗಾಫಿಕ್ಸೆಲ್ ಕ್ಯಾಮೆರಾ, ಅತ್ಯುತ್ತಮ ಬ್ಯಾಟರಿ ನೀಡಲಾಗಿದೆ.
ಭಾರತದಲ್ಲಿ ಈಗೇನಿದ್ದರು ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗಳ (Budget Smartphone) ಕಾಲ. ತಿಂಗಳಿಗೆ ಕಡಿಮೆ ಎಂದರೂ ಮೂರರಿಂದ ನಾಲ್ಕು ಮೊಬೈಲ್ಗಳು ಬಜೆಟ್ ಬೆಲೆಗೆ ಬಿಡುಗಡೆ ಆಗುತ್ತವೆ. ಇದರಲ್ಲಿ ರಿಯಲ್ ಮಿ (Realme) ಕಂಪನಿಯ ಫೋನ್ಗಳಿಗೆ ಭರ್ಜರಿ ಬೇಡಿಕೆ ಇದೆ. ಇದಕ್ಕಾಗಿಯೆ ಕಂಪನಿ ಹೆಚ್ಚಾಗಿ 15,000 ರೂ. ಒಳಗೆ ಆಕರ್ಷಕ ಫೀಚರ್ಗಳ ಸ್ಮಾರ್ಟ್ಫೋನ್ಗಳನ್ನು ಲಾಂಚ್ ಮಾಡುತ್ತಿದೆ. ಈ ಸಾಲಿಗೆ ಇದೀಗ ಮತ್ತೊಂದು ಮೊಬೈಲ್ ಸೇರಿದೆ. ಭಾರತದಲ್ಲಿ ರಿಯಲ್ ಮಿ ಸಿ33 2023 (Realme C33 2023) ಅನಾವರಣಗೊಂಡಿದೆ. ಈ ಫೋನ್ 10,000 ರೂ. ಒಳಗಡೆ ಬಿಡುಗಡೆ ಆಗಿದೆ. ಆದರೂ ಬರೋಬ್ಬರಿ 50 ಮೆಗಾಫಿಕ್ಸೆಲ್ ಕ್ಯಾಮೆರಾ, ಅತ್ಯುತ್ತಮ ಬ್ಯಾಟರಿ ನೀಡಲಾಗಿದೆ. ಈ ಫೋನಿನ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.
ಬೆಲೆ ಎಷ್ಟು?:
ರಿಯಲ್ ಮಿ C33 2023 ಸ್ಮಾರ್ಟ್‌ಫೋನ್ ಸದ್ಯಕ್ಕೆ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿದೆ. ಇದರ 4GB RAM + 64GB ಸ್ಟೋರೇಜ್ಗೆ 9,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 4GB RAM + 128GB ಸ್ಟೋರೇಜ್ ರೂಪಾಂತರಕ್ಕೆ 10,499 ರೂ. ಇದೆ. ಈ ಫೋನ್ ಅಕ್ವಾ ಬ್ಲೂ, ಸ್ಯಾಂಡಿ ಗೋಲ್ಡ್ ಹಾಗೂ ನೈಟ್ ಸಿಯಾ ಕಲರ್ನಲ್ಲಿ ಖರೀದಿಗೆ ಸಿಗುತ್ತದೆ. ರಿಯಲ್ ಮಿ ಅಧಿಕೃತ ವೆಬ್ಸೈಟ್ನಲ್ಲಿ ಈ ಫೋನ್ ಖರೀದಿಗೆ ಸಿಗಲಿದೆ.
Tech Tips: ಆನ್ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಸುವುದು ಹೇಗೆ?: ಇಲ್ಲಿದೆ ಟಿಪ್ಸ್
ಏನು ವಿಶೇಷತೆ?:
ರಿಯಲ್ ಮಿ C33 2023 ಸ್ಮಾರ್ಟ್‌ಫೋನ್ 6.5 ಇಂಚಿನ ಹೆಚ್‌ಡಿ ಪ್ಲಸ್ ಎಲ್ಸಿಡಿ ಡಿಸ್‌ಪ್ಲೇ ಹೊಂದಿದೆ. 400 ನಿಟ್ಸ್ ಬ್ರೈಟ್ನೆಸ್ ಸಾಮರ್ಥ್ಯ ಪಡೆದುಕೊಂಡಿದ್ದು, 120Hz ರಿಫ್ರೆಶ್ರೇಟ್ ನೀಡಲಾಗಿದೆ. Unisoc T612 ಪ್ರೊಸೆಸರ್ ಅಳವಡಿಸಲಾಗಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ನ ರಿಯಲ್ ಮಿ UI S ಬೆಂಬಲವನ್ನು ಪಡೆದುಕೊಂಡಿದೆ.
ಈ ಸ್ಮಾರ್ಟ್ಫೋನ್ನಲ್ಲಿ ಡ್ಯುಯೆಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಇದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ನೀಡಲಾಗಿದೆ ಮತ್ತು ಎಐ ಸೆನ್ಸಾರ್ನಿಂದ ಕೂಡಿದೆ. ಜೊತೆಗೆ LED ಫ್ಲ್ಯಾಸ್ ಕೂಡ ಇದೆ. ಇದರಲ್ಲಿರುವ ಮುಖ್ಯ ಕ್ಯಾಮೆರಾ ಹೆಚ್ಡಿಆರ್ ಮೋಡ್, ಪಾನೊರಮಿಕ್, ಪೋರ್ಟ್ಟ್ರೈಟ್ ಮೋಡ್, ಟೈಮ್ ಲಾಪ್ಸ್ ಸೇರಿದಂತೆ ಅನೇಕ ಫೀಚರ್ಗಳಿಂದ ಆವೃತ್ತವಾಗಿದೆ. ಮುಂಭಾಗ ಕೂಡ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
ದೀರ್ಘ ಸಮಯ ಬಾಳಿಕೆ ಬರುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, 10W ಸಾಮಾನ್ಯ ವೇಗದ ಚಾರ್ಜರ್ನೊಂದಿಗೆ ಬರುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, ಡ್ಯುಯಲ್ ಬ್ಯಾಂಡ್ Wi-Fi, ಬ್ಲೂಟೂತ್ 5.0, GPS ಮತ್ತು USB ಟೈಪ್-C ಪೋರ್ಟ್ ಅನ್ನು ಹೊಂದಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ