AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Realme C33: 50MP ಕ್ಯಾಮೆರಾ, 5000mAh ಬ್ಯಾಟರಿ: ಕೇವಲ 9,000 ರೂ. ಗೆ ರಿಲೀಸ್ ಆಯ್ತು ಹೊಸ ಸ್ಮಾರ್ಟ್​ಫೋನ್

ಭಾರತದಲ್ಲಿ ರಿಯಲ್ ಮಿ ಸಿ33 (Realme C33) ಅನಾವರಣಗೊಂಡಿದೆ. ಈ ಫೋನ್ 10,000 ರೂ. ಒಳಗಡೆ ಬಿಡುಗಡೆ ಆಗಿದೆ. ಆದರೂ ಬರೋಬ್ಬರಿ 50 ಮೆಗಾಫಿಕ್ಸೆಲ್ ಕ್ಯಾಮೆರಾ, ಅತ್ಯುತ್ತಮ ಬ್ಯಾಟರಿ ನೀಡಲಾಗಿದೆ.

Realme C33: 50MP ಕ್ಯಾಮೆರಾ, 5000mAh ಬ್ಯಾಟರಿ: ಕೇವಲ 9,000 ರೂ. ಗೆ ರಿಲೀಸ್ ಆಯ್ತು ಹೊಸ ಸ್ಮಾರ್ಟ್​ಫೋನ್
Realme C33
TV9 Web
| Edited By: |

Updated on: Sep 06, 2022 | 1:32 PM

Share

ಭಾರತದಲ್ಲಿ ಈಗೇನಿದ್ದರು ಬಜೆಟ್ ಬೆಲೆಯ ಸ್ಮಾರ್ಟ್​ಫೋನ್​ಗಳ (Budget Smartphone) ಕಾಲ. ತಿಂಗಳಿಗೆ ಮೂರರಿಂದ ನಾಲ್ಕು ಮೊಬೈಲ್​ಗಳು ಕಡಿಮೆ ಬೆಲೆಗೆ ಬಿಡುಗಡೆ ಆಗುತ್ತವೆ. ಇದರಲ್ಲಿ ರಿಯಲ್ ಮಿ (Realme) ಕಂಪನಿಯ ಫೋನ್​ಗಳಿಗೆ ಭರ್ಜರಿ ಬೇಡಿಕೆ ಇದೆ. ಇದಕ್ಕಾಗಿಯೆ ಕಂಪನಿ ಹೆಚ್ಚಾಗಿ 20,000 ರೂ. ಒಳಗೆ ಆಕರ್ಷಕ ಫೀಚರ್​ಗಳ ಸ್ಮಾರ್ಟ್​ಫೋನ್​ಗಳನ್ನು ಲಾಂಚ್ ಮಾಡುತ್ತಿದೆ. ಈ ಸಾಲಿಗೆ ಇದೀಗ ಮತ್ತೊಂದು ಮೊಬೈಲ್ ಸೇರಿದೆ. ಭಾರತದಲ್ಲಿ ರಿಯಲ್ ಮಿ ಸಿ33 (Realme C33) ಅನಾವರಣಗೊಂಡಿದೆ. ಈ ಫೋನ್ 10,000 ರೂ. ಒಳಗಡೆ ಬಿಡುಗಡೆ ಆಗಿದೆ. ಆದರೂ ಬರೋಬ್ಬರಿ 50 ಮೆಗಾಫಿಕ್ಸೆಲ್ ಕ್ಯಾಮೆರಾ, ಅತ್ಯುತ್ತಮ ಬ್ಯಾಟರಿ ನೀಡಲಾಗಿದೆ. ಈ ಫೋನಿನ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.

ರಿಯಲ್ ಮಿ C33 ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿದೆ. ಇದರ 3GB RAM + 32GB ಸ್ಟೋರೇಜ್​ಗೆ 8,999 ರೂ. ನಿಗದಿ ಮಾಡಲಾಗಿದೆ. 4GB RAM + 64GB ಸ್ಟೋರೇಜ್ ರೂಪಾಂತರಕ್ಕೆ 9,999 ರೂ. ಇದೆ. ಈ ಫೋನ್ ಅಕ್ವಾ ಬ್ಲೂ, ಸ್ಯಾಂಡಿ ಗೋಲ್ಡ್ ಹಾಗೂ ನೈಟ್ ಸಿಯಾ ಕಲರ್​ನಲ್ಲಿ ಖರೀದಿಗೆ ಸಿಗುತ್ತದೆ. ಸೆಪ್ಟೆಂಬರ್ 12 ರಂದು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ಮತ್ತು ರಿಯಲ್ ಮಿ ಅಧಿಕೃತ ವೆಬ್​ಸೈಟ್​ನಲ್ಲಿ ಸೇಲ್ ಕಾಣಲಿದೆ.

ಈ ಸ್ಮಾರ್ಟ್‌ಫೋನ್​ನ ಫೀಚರ್ಸ್ ಬಗ್ಗೆ ನೋಡುವುದಾದರೆ, ಇದು 6.5 ಇಂಚಿನ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. 400 ನಿಟ್ಸ್ ಬ್ರೈಟ್​ನೆಸ್ ಸಾಮರ್ಥ್ಯ ಪಡೆದುಕೊಂಡಿದೆ. Unisoc T612 ಪ್ರೊಸೆಸರ್ ಅಳವಡಿಸಲಾಗಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ನ ರಿಯಲ್ ಮಿ UI S ಬೆಂಬಲವನ್ನು ಪಡೆದುಕೊಂಡಿದೆ.

ಇದನ್ನೂ ಓದಿ
Image
ನಿಮ್ಮ ಧ್ವನಿಯಿಂದ ಕೋವಿಡ್-19 ಸೋಂಕನ್ನು ನಿಖರವಾಗಿ ಪತ್ತೆ ಮಾಡುತ್ತ ಈ ಸ್ಮಾರ್ಟ್​ಫೋನ್ ಆ್ಯಪ್
Image
Poco M5: ಬಜೆಟ್ ಫೋನಂದ್ರೆ ಇದು: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಪೋಕೋ M5 ಸ್ಮಾರ್ಟ್​ಫೋನ್ ರಿಲೀಸ್
Image
Redmi A1: ರೆಡ್ಮಿ-ರಿಯಲ್ ಮಿ ನಡುವೆ ಫೈಟ್: ಇಂದು ಒಂದೇ ದಿನ ಭಾರತದಲ್ಲಿ ಎರಡು ಹೊಸ ಸ್ಮಾರ್ಟ್​ಫೋನ್ ಬಿಡುಗಡೆ
Image
Airtel: ಏರ್ಟಲ್​ನಿಂದ ಹಾಟ್​ಸ್ಟಾರ್, ಅಮೆಜಾನ್ ಪ್ರೈಮ್ ಉಚಿತ ಚಂದಾದಾರಿಕೆ: ಈ ಆಫರ್ ಮಿಸ್ ಮಾಡ್ಬೇಡಿ

ಈ ಸ್ಮಾರ್ಟ್‌ಫೋನ್​ನಲ್ಲಿ ಡ್ಯುಯೆಲ್ ಕ್ಯಾಮೆರಾ ಸೆಟ್‌ಅಪ್‌ ಇದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ನೀಡಲಾಗಿದೆ. ಜೊತೆಗೆ LED ಫ್ಲ್ಯಾಸ್ ಕೂಡ ಇದೆ. ಎರಡನೇ ಕ್ಯಾಮೆರಾ 0.3 ಮೆಗಾಪಿಕ್ಸೆಲ್. ಇದರಲ್ಲಿರುವ ಮುಖ್ಯ ಕ್ಯಾಮೆರಾ ಹೆಚ್​ಡಿಆರ್ ಮೋಡ್, ಪಾನೊರಮಿಕ್, ಪೋರ್ಟ್​ಟ್ರೈಟ್ ಮೋಡ್, ಟೈಮ್ ಲಾಪ್ಸ್ ಸೇರಿದಂತೆ ಅನೇಕ ಫೀಚರ್​ಗಳಿಂದ ಆವೃತ್ತವಾಗಿದೆ. ಮುಂಭಾಗ ಕೂಡ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ದೀರ್ಘ ಸಮಯ ಬಾಳಿಕೆ ಬರುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, 10W ಸಾಮಾನ್ಯ ವೇಗದ ಚಾರ್ಜರ್​ನೊಂದಿಗೆ ಬರುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, ಡ್ಯುಯಲ್ ಬ್ಯಾಂಡ್ Wi-Fi, ಬ್ಲೂಟೂತ್, GPS ಮತ್ತು USB ಟೈಪ್-C ಪೋರ್ಟ್ ಅನ್ನು ಹೊಂದಿದೆ.

Follow Us
Web contact
Web contact

TV9 Kannada

Read More
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್