AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Realme C33: ಒಂದೇ ದಿನ ಬಾಕಿ: ಭಾರತಕ್ಕೆ ಅಪ್ಪಳಿಸುತ್ತಿದೆ ಭರ್ಜರಿ ಬ್ಯಾಟರಿ, ಕ್ಯಾಮೆರಾದ ಹೊಸ ರಿಯಲ್ ಮಿ ಸ್ಮಾರ್ಟ್​ಫೋನ್

ಇದೀಗ ರಿಯಲ್ ಮಿ ಈ ತಿಂಗಳು ಮತ್ತೊಂದು ಹೊಸ ಸ್ಮಾರ್ಟ್​ಫೋನ್ (Smartphone) ಬಿಡುಗಡೆ ಮಾಡುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಇದೇ ಸೆಪ್ಟೆಂಬರ್ 6 ರಂದು ಭಾರತದಲ್ಲಿ ಹೊಸ ರಿಯಲ್ ಮಿ ಸಿ33 (Realme C33) ಸ್ಮಾರ್ಟ್​ಫೋನ್ ಬಿಡುಗಡೆ ಆಗಲಿದೆ.

Realme C33: ಒಂದೇ ದಿನ ಬಾಕಿ: ಭಾರತಕ್ಕೆ ಅಪ್ಪಳಿಸುತ್ತಿದೆ ಭರ್ಜರಿ ಬ್ಯಾಟರಿ, ಕ್ಯಾಮೆರಾದ ಹೊಸ ರಿಯಲ್ ಮಿ ಸ್ಮಾರ್ಟ್​ಫೋನ್
Realme C33
TV9 Web
| Updated By: Vinay Bhat|

Updated on: Sep 05, 2022 | 6:59 AM

Share

ಈ ವರ್ಷದ ಎರಡನೇ ಕ್ವಾರ್ಟರ್​ನಲ್ಲಿ ಪ್ರಸಿದ್ಧ ರಿಯಲ್ ಮಿ (Realme) ಸಂಸ್ಥೆ ತನ್ನ ಸ್ಮಾರ್ಟ್​ ಫೋನ್​ಗಳನ್ನು ಬಿಡುಗಡೆ ಮಾಡುತ್ತಿರುವ ಸಂಖ್ಯೆಯನ್ನು ಕೊಂಚ ಇಳಿಕೆ ಮಾಡಿದೆ. ಈ ಹಿಂದೆ ತಿಂಗಳಿಗೆ ಕನಿಷ್ಠ ಎರಡು ಮೊಬೈಲ್​ಗಳನ್ನು ಅನಾವರಣ ಮಾಡುತ್ತಿದ್ದ ಕಂಪನಿ ಈಗೀಗ ಅಪರೂಪಕ್ಕೆ ಒಂದೊಂದು ಫೋನ್​ಗಳನ್ನಷ್ಟೆ ರಿಲೀಸ್ ಮಾಡುತ್ತಿದೆ. ಕಳೆದ ತಿಂಗಳು ರಿಯಲ್ ಮಿ ಭಾರತದಲ್ಲಿ ರಿಯಲ್ ಮಿ 9i 5G ಬಜೆಟ್ ಬೆಲೆಯ ಫೋನನ್ನು ರಿಲೀಸ್ ಮಾಡಿತ್ತು. ಇದೀಗ ಈ ತಿಂಗಳು ಮತ್ತೊಂದು ಹೊಸ ಸ್ಮಾರ್ಟ್​ಫೋನ್ (Smartphone) ಬಿಡುಗಡೆ ಮಾಡುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಇದೇ ಸೆಪ್ಟೆಂಬರ್ 6 ರಂದು ಭಾರತದಲ್ಲಿ ಹೊಸ ರಿಯಲ್ ಮಿ ಸಿ33 (Realme C33) ಸ್ಮಾರ್ಟ್​ಫೋನ್ ಬಿಡುಗಡೆ ಆಗಲಿದೆ. ಇದುಕೂಡ ಬಜೆಟ್ ಬೆಲೆಯ ಫೋನಾಗಿದ್ದರೂ ಆಕರ್ಷಕ ಕ್ಯಾಮೆರಾ, ಬೊಂಬಾಟ್ ಬ್ಯಾಟರಿ ನೀಡಲಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

ಭಾರತದಲ್ಲಿ ರಿಯಲ್‌ ಮಿ C33 ಸ್ಮಾರ್ಟ್‌ಫೋನ್‌ ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಲಿದೆ. ಇದರ ಖಚಿತ ಬೆಲೆ ಬಹಿರಂಗವಾಗಿಲ್ಲವಾದರೂ 3GB RAM + 32GB ಸ್ಟೋರೇಜ್ ಆವೃತ್ತಿಗೆ 9,500ರೂ. ಹಾಗೂ 4GB RAM + 64GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 10,500 ರೂ. ಇರಬಹುದೆಂದು ಅಂದಾಜಿಸಲಾಗಿದೆ.

ಇದನ್ನೂ ಓದಿ
Image
Big Billions Days sale: ಫ್ಲಿಪ್​ಕಾರ್ಟ್​ನಲ್ಲಿ ಶುರುವಾಗುತ್ತಿದೆ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌: ಈ ಬಾರಿ ಏನಿದೆ ಆಫರ್?
Image
Grand Shopsy Sale: ಹಬ್ಬಕ್ಕೂ ಮೊದಲೇ ಶುರುವಾಯಿತು ಗ್ರ್ಯಾಂಡ್ ಶಾಪ್ಸಿ ಮೇಳ: ಬಂಪರ್ ಆಫರ್, ಭರ್ಜರಿ ಡಿಸ್ಕೌಂಟ್
Image
WhatsApp Tips: ಮೊಬೈಲ್​ನಲ್ಲಿ ಡೇಟಾ ಆನ್ ಮಾಡದೆ ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಕಳುಹಿಸುವ ಟ್ರಿಕ್ ಗೊತ್ತೇ?
Image
JIO: ಪ್ರತಿದಿನ 2GB ಡೇಟಾ: ಜಿಯೋದಲ್ಲಿರುವ 500 ರೂ. ಒಳಗಿನ ಬೆಸ್ಟ್ ಪ್ಲಾನ್ ಇಲ್ಲಿದೆ ನೋಡಿ

ಈ ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ HD+ ಡಿಸ್‌ಪ್ಲೇಯನ್ನು ಹೊಂದಿರಬಹುದು. ಈ ಡಿಸ್‌ಪ್ಲೇ 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಪಡೆದುಕೊಂಡಿದ್ದು 90Hz ರಿಫ್ರೆಶ್ ರೇಟ್‌ ಇರಬಹುದೆಂದು ಹೇಳಲಾಗಿದೆ. ಮೀಡಿಯಾ ಟೆಕ್ ಹೀಲಿಯೊ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಬೆಂಬಲವನ್ನು ಪಡೆದಿದೆ.

ಡ್ಯುಯೆಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ನೀಡಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್​ನಲ್ಲಿರುವುದು ಕಂಪನಿ ಬಹಿರಂಗ ಪಡಿಸಿದೆ. ಎರಡನೇ ಕ್ಯಾಮೆರಾ ಎಷ್ಟು ಮೆಗಾಫಿಕ್ಸೆಲ್ ಎಂಬುದು ಇನ್ನೂ ತಿಳಿದುಬಂದಿಲ್ಲ. 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಕೂಡ ಇರಬಹುದು.

ಇನ್ನು ರಿಯಲ್‌ಮಿ C33 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಲೈಫ್ ಹೊಂದಿದ್ದು ಇದಕ್ಕೆ ಪೂರಕವಾಗಿ 18W ಕ್ವಿಕ್ ಚಾರ್ಜ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. 37 ಗಂಟೆಗಳ ಕಾಲ ಸ್ಟ್ಯಾಂಡ್ ಬೈ ಟೈಮ್ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಜೊತೆಗೆ ಆಲ್ಟ್ರಾ ಸೇವಿಂಗ್ ಮೋಡ್ ಆಯ್ಕೆ ಇರಲಿದೆಯಂತೆ.

Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ