Grand Shopsy Sale: ಹಬ್ಬಕ್ಕೂ ಮೊದಲೇ ಶುರುವಾಯಿತು ಗ್ರ್ಯಾಂಡ್ ಶಾಪ್ಸಿ ಮೇಳ: ಬಂಪರ್ ಆಫರ್, ಭರ್ಜರಿ ಡಿಸ್ಕೌಂಟ್
ಈ ಮೇಳವು ಹಲವಾರು ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ. ದಿ 'ಗ್ರ್ಯಾಂಡ್ ಶಾಪ್ಸಿಮೇಳ', ಶಾಪ್ಸಿಯ ಅತಿ ದೊಡ್ಡ ಮಾರಾಟದ ಈವೆಂಟ್ ಆಗಿದ್ದು, ಹಬ್ಬಕ್ಕಾಗಿ ಶಾಪಿಂಗ್ ಮಾಡುವವರಿಗೆ ಇದೊಂದು ಉತ್ತಮ ತಾಣವಾಗಿದೆ.
ಭಾರತದ ಅತಿ ದೊಡ್ಡ ಇ–ಕಾಮರ್ಸ್ ವೇದಿಕೆ ಫ್ಲಿಪ್‌ಕಾರ್ಟ್ (Flipkart)ನ ಭಾಗವಾಗಿರುವ ‘ಶಾಪ್ಸಿ‘ (Shopsy) ಪ್ರಥಮ ಮೆಗಾ ಶಾಪಿಂಗ್ ಕಾರ್ನಿವಲ್ – ‘ಗ್ರ್ಯಾಂಡ್ ಶಾಪ್ಸಿ ಮೇಳ‘ಕ್ಕೆ (Grand Shopsy Sale) ಹಬ್ಬ ಆರಂಭಕ್ಕೂ ಮೊದಲೇ ಚಾಲನೆ ನೀಡಿದೆ. ಸೆಪ್ಟೆಂಬರ್ 3ಕ್ಕೆ ಈ ಸೇಲ್ ಶುರುವಾಗಿದ್ದು ಸೆ. 11ರ ವರೆಗೆ ನಡೆಯಲಿದೆ. ಈ ಮೇಳವು ಹಲವಾರು ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ. ದಿ ‘ಗ್ರ್ಯಾಂಡ್ ಶಾಪ್ಸಿಮೇಳ‘, ಶಾಪ್ಸಿಯ ಅತಿ ದೊಡ್ಡ ಮಾರಾಟದ ಈವೆಂಟ್ ಆಗಿದ್ದು, ಹಬ್ಬಕ್ಕಾಗಿ ಶಾಪಿಂಗ್ ಮಾಡುವವರಿಗೆ ಇದೊಂದು ಉತ್ತಮ ತಾಣವಾಗಿದೆ.
ಶಾಪ್ಸಿ ತನ್ನೆಲ್ಲ ಮಾರಾಟಗಾರರನ್ನು ಒಗ್ಗೂಡಿಸಿ, ಗ್ರಾಹಕರಿಗೆ ಮೌಲ್ಯಾಧಾರಿತ ಡೀಲ್‌ಗಳನ್ನು ನೀಡುತ್ತಿದೆ. 150 ದಶಲಕ್ಷ ಉತ್ಪನ್ನಗಳು ಮತ್ತು ವಾಚ್‌ಗಳು ₹ 15, ಸೀರೆ ₹ 25, ಕುರ್ತಾಗಳು ₹ 40, ಟೀ ಶರ್ಟ್‌ಗಳು ₹ 30 ಸೇರಿ 150+ ವರ್ಗಗಳ ಶ್ರೇಣಿಗಳನ್ನು ಒಳಗೊಂಡಿದೆ. ಫ್ಲಿಪ್‌ಕಾರ್ಟ್ ನ್ಯೂ ಬ್ಯುಸಿನೆಸ್ ಉಪಾಧ್ಯಕ್ಷ ಹಾಗೂ ಮುಖ್ಯಸ್ಥ ಆದರ್ಶ್ ಮೆನನ್ ಪ್ರತಿಕ್ರಿಯಿಸಿ, “ಗ್ರ್ಯಾಂಡ್ ಶಾಪ್ಸಿಮೇಳದ ಮೊದಲ ಆವೃತ್ತಿಯನ್ನು ಪರಿಚಯಿಸಲು ಮತ್ತು ಭಾರತೀಯ ಗ್ರಾಹಕರಿಗೆ ಹಬ್ಬದ ಶಾಪಿಂಗ್ ಅನುಭವವನ್ನು ಪರಿವರ್ತಿಸಲು ನಾವು ಸಂತೋಷಪಡುತ್ತೇವೆ ಎಂದು ಹೇಳಿದ್ದಾರೆ.
”ಶಾಪ್ಸಿಯ ಅರ್ಧದಷ್ಟು ಗ್ರಾಹಕರು ಇ–ಕಾಮರ್ಸ್ಗೆ ಹೊಸಬರು. ನಮ್ಮ ಒಟ್ಟು ಗ್ರಾಹಕ ಮೂಲದಲ್ಲಿ 65% ರಷ್ಟು ಶ್ರೇಣಿ 2 ಮತ್ತು ಅದರಾಚೆಯ ಪ್ರದೇಶಗಳಿಗೆ ಸೇರಿದವರಾಗಿದ್ದು, ಈ ಮೇಳವು ಪ್ರತಿಯೊಬ್ಬರಿಗೂ ಹೊಸತನವನ್ನು ತರುತ್ತದೆ ಎಂದು ನಾವು ಖಾತ್ರಿಯಾಗಿ ಹೇಳಬಲ್ಲೆವು. ನಮ್ಮ ವೇದಿಕೆಯಲ್ಲಿ ಇದೇ ಮೊದಲ ಬಾರಿಗೆ ಎಲ್ಲ ಮಾರಾಟಗಾರರನ್ನು, ವಿವಿಧ ವರ್ಗಗಳು ಮತ್ತು ವ್ಯಾಪಕ ಶ್ರೇಣಿಯ ಉತ್ಪನ್ನಗಳೊಂದಿಗೆ ತರುತ್ತಿದ್ದು, ನಂಬಲಸಾಧ್ಯವಾದ ಆಫರ್‌ಗಳು ಮತ್ತು ಡೀಲ್‌ಗಳೊಂದಿಗೆ ಗ್ರಾಹಕರ ಶಾಪಿಂಗ್ ಅಗತ್ಯಗಳನ್ನು ಹಬ್ಬಕ್ಕೂ ಮೊದಲೇ ಪೂರೈಸುತ್ತದೆ. ನಮ್ಮ ಗ್ರಾಹಕರು ಈ ಹಬ್ಬದ ಋತುವಿನಲ್ಲಿ ತಮ್ಮ ನೆಚ್ಚಿನ ಉತ್ಪನ್ನಗಳ ಮೇಲೆ ಮನ ಸೆಳೆಯುವ ಡೀಲ್‌ಗಳನ್ನು ತಮ್ಮದಾಗಿಸಿಕೊಳ್ಳುವ ವಿಶ್ವಾಸ ನಮಗಿದೆ” ಎಂದಿದ್ದಾರೆ.
ಶಾಪ್ಸಿ (Shopsy) ಒಂದು ವರ್ಷ ಪೂರ್ಣಗೊಳಿಸಿದ್ದು, ಅತಿ ಕಡಿಮೆ ಅವಧಿಯಲ್ಲಿ ಬಳಕೆದಾರರ ಸಂಖ್ಯೆ 100 ದಶಲಕ್ಷ ದಾಟಿದೆ. 2023ರ ಕೊನೆಗೆ ನಿಗದಿಪಡಿಸಿದ್ದ ಗುರಿಗಿಂತ ಆಗಲೇ ಸಾಕಷ್ಟು ಮುಂದೆ ಸಾಗಿದೆ. ಕೈಗೆಟಕುವ ಬೆಲೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳನ್ನು, ವಿಶೇಷವಾಗಿ ಶ್ರೇಣಿ 2+ ಮಾರುಕಟ್ಟೆಗಳಲ್ಲಿ ಒದಗಿಸುತ್ತಿದೆ.
ಶಾಪ್ಸಿಯನ್ನು ಫ್ಲಿಪ್‌ಕಾರ್ಟ್ ಜುಲೈ 2021ರಲ್ಲಿ ಮೌಲ್ಯಾಧಾರಿತ ಮತ್ತು ವಿಶ್ವಾಸಾರ್ಹ ವೇದಿಕೆಯಾಗಿ, ಅತ್ಯಾಕರ್ಷಕ ಉತ್ಪನ್ನಗಳ ವಿಸ್ತಾರವಾದ ಶ್ರೇಣಿಯನ್ನು ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರಿಗೆ ನೀಡುವ ಗುರಿಯೊಂದಿಗೆ ಸ್ಥಾಪಿಸಿತು. ಶೂನ್ಯ–ಕಮಿಷನ್ ಮಾರುಕಟ್ಟೆಯ ರೂಪದಲ್ಲಿ ದೇಶಾದ್ಯಂತ ಡಿಜಿಟಲ್ ವಾಣಿಜ್ಯವನ್ನು ಮುನ್ನಡೆಸುವುದು ಶಾಪ್ಸಿಯ ಗುರಿಯಾಗಿದೆ. ಶಾಪ್ಸಿ ವೇದಿಕೆಯು 2.5 ಲಕ್ಷಕ್ಕೂ ಹೆಚ್ಚು ಮಾರಾಟಗಾರರು ಮತ್ತು 150 ದಶಲಕ್ಷ ಉತ್ಪನ್ನಗಳನ್ನು ಭಾರತದ ಗ್ರಾಹಕರಿಗೆ ಲಭ್ಯಗೊಳಿಸಿದೆ.
Published On - 11:28 am, Sun, 4 September 22