Realme 9i 5G: ಭಾರತದಲ್ಲಿ ಬಹುನಿರೀಕ್ಷಿತ ರಿಯಲ್ ಮಿ 9i 5G ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರೆಂಟಿ

ಇದೀಗ ರಿಯಲ್ ಮಿ ಭಾರತದಲ್ಲಿ ಹೊಸ ಸ್ಮಾರ್ಟ್​​ಫೋನ್ (Smartphone)​ ಒಂದನ್ನ ಪರಿಚಯಿಸಿದೆ. ಅದುವೇ ರಿಯಲ್ ಮಿ 9ಐ 5ಜಿ (Realme 9i 5G).

Realme 9i 5G: ಭಾರತದಲ್ಲಿ ಬಹುನಿರೀಕ್ಷಿತ ರಿಯಲ್ ಮಿ 9i 5G ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರೆಂಟಿ
Realme 9i 5G
TV9kannada Web Team

| Edited By: Vinay Bhat

Aug 18, 2022 | 2:07 PM

ಈ ವರ್ಷದ ಎರಡನೇ ಕ್ವಾರ್ಟರ್​ನಲ್ಲಿ ಪ್ರಸಿದ್ಧ ರಿಯಲ್ ಮಿ (Realme) ಸಂಸ್ಥೆ ತನ್ನ ಸ್ಮಾರ್ಟ್​ ಫೋನ್​ಗಳನ್ನು ಬಿಡುಗಡೆ ಮಾಡುತ್ತಿರುವ ಸಂಖ್ಯೆಯಲ್ಲಿ ಕೊಂಚ ಇಳಿಕೆ ಮಾಡಿದೆ. ಈ ಹಿಂದೆ ತಿಂಗಳಿಗೆ ಕನಿಷ್ಠ ಎರಡು ಮೊಬೈಲ್​ಗಳನ್ನು ಅನಾವರಣ ಮಾಡುತ್ತಿದ್ದ ಕಂಪನಿ ಈಗೀಗ ಅಪರೂಪಕ್ಕೆ ಒಂದೊಂದು ಫೋನ್​ಗಳನ್ನು ರಿಲೀಸ್ ಮಾಡುತ್ತಿದೆಯಷ್ಟೆ. ಹೀಗಿರುವಾಗ ಇದೀಗ ರಿಯಲ್ ಮಿ ಭಾರತದಲ್ಲಿ ಹೊಸ ಸ್ಮಾರ್ಟ್​​ಫೋನ್ (Smartphone)​ ಒಂದನ್ನ ಪರಿಚಯಿಸಿದೆ. ಅದುವೇ ರಿಯಲ್ ಮಿ 9ಐ 5ಜಿ (Realme 9i 5G). ಇದೊಂದು ಬಜೆಟ್ ಬೆಲೆಯ ಫೋನಾಗಿದ್ದರೂ ಬಲಿಷ್ಠವಾದ ಮೀಡಿಯಾ ಟೆಕ್‌ ಡೈಮೆನ್ಸಿಟಿ 810 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿರುವುದು ವಿಶೇಷ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

ಇದನ್ನೂ ಓದಿ

  1. ಭಾರತದಲ್ಲಿ ರಿಯಲ್‌ ಮಿ 9i 5G ಸ್ಮಾರ್ಟ್‌ಫೋನ್‌ ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ4GB RAM + 64GB ಸ್ಟೋರೇಜ್ ಆವೃತ್ತಿಗೆ 13,999ರೂ. ನಿಗದಿ ಮಾಡಲಾಗಿದೆ. ಅಂತೆಯೆ 6GB RAM + 128GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 15,999ರೂ. ಇದೆ.
  2. ಈ ಫೋನ್‌ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ಸೇರಿದಂತೆ ರಿಯಲ್ ಮಿ.ಕಾಮ್​ನಲ್ಲಿ ಆಗಸ್ಟ್ 24 ರಂದು ಮಧ್ಯಾಹ್ನ 12 ಗಂಟೆಗೆ ಸೇಲ್‌ ಆಗಲಿದೆ.
  3. ರಿಯಲ್‌ಮಿ 9i 5G ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಪಡೆದುಕೊಂಡಿದ್ದು 90Hz ರಿಫ್ರೆಶ್ ರೇಟ್‌ ಒಳಗೊಂಡಿದೆ.
  4. ಆಕ್ಟಾಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 5G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಬೆಂಬಲವನ್ನು ಪಡೆದಿದೆ.
  5. ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ನೀಡಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ f/1.8 ಅಪರ್ಚರ್ ಲೆನ್ಸ್, ಪೋರ್ಟ್ರೇಟ್ ಶೂಟರ್ ಹಾಗೂ ಮಾಕ್ರೋ ಕ್ಯಾಮೆರಾ ಹೊಂದಿದೆ. 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಕೂಡ ನೀಡಲಾಗಿದೆ.
  6. ರಿಯಲ್‌ಮಿ 9i ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು ಇದಕ್ಕೆ ಪೂರಕವಾಗಿ 18W ಕ್ವಿಕ್ ಚಾರ್ಜ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada