Nothing Phone (1): ಬಿಡುಗಡೆ ಆದ ಒಂದೇ ತಿಂಗಳಲ್ಲಿ ಬೆಲೆ ಏರಿಕೆ: ನಥಿಂಗ್ ಫೋನ್ 1ಗೆ ಅಷ್ಟೊಂದು ಡಿಮ್ಯಾಂಡ್?

ಒಂದು ತಿಂಗಳ ಹಿಂದೆ ಬಿಡುಗಡೆ ಆದ ನಥಿಂಗ್ ಫೋನ್ (1) ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ನಥಿಂಗ್ ಕಂಪನಿಯ ಭಾರತದ ಪ್ರಧಾನ ವ್ಯವಸ್ಥಾಪಕ ಮನು ಶರ್ಮಾ (Manu Sharma) ಈ ಬಗ್ಗೆ ಮಾಹಿತಿ ನೀಡಿದ್ದು, ಬಿಡುಗಡೆ ಆಗಿದ್ದ ಮೂರೂ ಸ್ಟೋರೇಜ್ ರೂಪಾಂತರದ ಬೆಲೆಯಲ್ಲಿ 1,000 ರೂ. ಗಳನ್ನು ಹೆಚ್ಚಳ ಮಾಡಲಾಗಿದೆ ಎಂದಿದ್ದಾರೆ.

Nothing Phone (1): ಬಿಡುಗಡೆ ಆದ ಒಂದೇ ತಿಂಗಳಲ್ಲಿ ಬೆಲೆ ಏರಿಕೆ: ನಥಿಂಗ್ ಫೋನ್ 1ಗೆ ಅಷ್ಟೊಂದು ಡಿಮ್ಯಾಂಡ್?
Nothing phone (1)
TV9kannada Web Team

| Edited By: Vinay Bhat

Aug 19, 2022 | 6:45 AM

ನಥಿಂಗ್ ಕಂಪನಿಯ ಚೊಚ್ಚಲ ಸ್ಮಾರ್ಟ್ ​ಫೋನ್ ನಥಿಂಗ್ ಫೋನ್ (1) ಗೆ (Nothing Phone (1)) ಭಾರತದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಿದ್ದರೂ ಈ ಫೋನ್ ಭರ್ಜರಿ ಸೇಲ್ ಆಗುತ್ತಿದೆ. ಇದೀಗ ಒಂದು ತಿಂಗಳ ಹಿಂದೆ ಬಿಡುಗಡೆ ಆದ ನಥಿಂಗ್ ಫೋನ್ (1) ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ನಥಿಂಗ್ ಕಂಪನಿಯ ಭಾರತದ ಪ್ರಧಾನ ವ್ಯವಸ್ಥಾಪಕ ಮನು ಶರ್ಮಾ (Manu Sharma) ಈ ಬಗ್ಗೆ ಮಾಹಿತಿ ನೀಡಿದ್ದು, ಬಿಡುಗಡೆ ಆಗಿದ್ದ ಮೂರೂ ಸ್ಟೋರೇಜ್ ರೂಪಾಂತರದ ಬೆಲೆಯಲ್ಲಿ 1,000 ರೂ. ಗಳನ್ನು ಹೆಚ್ಚಳ ಮಾಡಲಾಗಿದೆ ಎಂದಿದ್ದಾರೆ. ದಿಢೀರ್ ಬೆಲೆ ಹೆಚ್ಚಳ ಈ ಫೋನಿನ ಮೇಲೆ ಯಾವರೀತಿ ಪರಿಣಾಮ ಬೀರುತ್ತದೆ ಎಂಬುದು ನೋಡಬೇಕಿದೆ. ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ (Flipkart) ಔಟ್ ಆಫ್ ಸ್ಟಾಕ್​ನಲ್ಲಿರುವ ನಥಿಂಗ್ ಫೋನ್ (1) ಸದ್ಯದಲ್ಲಿ ಪುನಃ ಖರೀದಿಗೆ ಸಿಗಲಿದೆ.

ನೂತನ ಬೆಲೆಯ ಪ್ರಕಾರ ಭಾರತದಲ್ಲಿ ನಥಿಂಗ್ ಫೋನ್ (1) 8GB RAM + 128GB ಸ್ಟೋರೇಜ್ ಆಯ್ಕೆಗೆ 33,999ರೂ. ನಿಗದಿ ಮಾಡಲಾಗಿದೆ. ಅಂತೆಯೆ 8GB RAM + 256GB ಸ್ಟೋರೇಜ್ ಆಯ್ಕೆಗೆ 36,999ರೂ., 12GB RAM + 256GB ಸ್ಟೋರೇಜ್ ಆಯ್ಕೆಗೆ 39,999ರೂ. ಇದೆ.

ಈ ಫೋನಿನ ಫೀಚರ್ಸ್ ಬಗ್ಗೆ ನೋಡುವುದಾದರೆ, ಇದು 6.55 ಇಂಚಿನ ಫುಲ್‌ ಹೆಚ್‌ ಡಿ ಪ್ಲಸ್‌ ಡಿಸ್‌ ಪ್ಲೇ ಹೊಂದಿದೆ. ಈ ಡಿಸ್‌ ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದ್ದು, 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ನೀಡಲಾಗಿದೆ. ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ ಡ್ರಾಗನ್ 778G+ SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ.

ನಥಿಂಗ್ ಫೋನ್ (1) ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮೊದಲನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದೆ. ಇದು OIS ಜೊತೆಗೆ EIS ಇಮೇಜ್ ಸ್ಟೆಬಿಲೈಸೇಶನ್‌ ನೊಂದಿಗೆ ಬರುತ್ತದೆ. ಈ ಫೋನ್ ​ನಲ್ಲಿರುವ ಎರಡನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸ್ಯಾಮ್‌ ಸಂಗ್‌ JN1 ಸೆನ್ಸಾರ್‌ ಹೊಂದಿದೆ. ಇದು EIS ಇಮೇಜ್ ಸ್ಟೆಬಿಲೈಸೇಶನ್, 114-ಡಿಗ್ರಿ ಫೀಲ್ಡ್ ಆಫ್ ವ್ಯೂ ಮತ್ತು ಮ್ಯಾಕ್ರೋ ಮೋಡ್‌ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೋನಿ IMX471 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಇದನ್ನೂ ಓದಿ

4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೈರ್ಡ್ ಚಾರ್ಜಿಂಗ್, 15W Qi ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್‌ ಬೆಂಬಲಿಸಲಿದೆ. ಆದರೆ, ನಥಿಂಗ್‌ ಫೋನ್‌ (1) ನೊಂದಿಗೆ ಚಾರ್ಜರ್‌ ನೀಡಲಾಗಿಲ್ಲ ಕೇವಲ ಟೈಪ್‌ ಸಿ ಚಾರ್ಜಿಂಗ್ ಕೇಬಲ್‌ ಲಭ್ಯ ಮಾಡಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada