AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ಡಿಲೀಟ್ ಆದ ಮೆಸೇಜ್ ರಿಕವರಿ ಮಾಡಿ: ವಾಟ್ಸ್​ಆ್ಯಪ್​ನಲ್ಲಿ ವಿನೂತನ ಫೀಚರ್

ಇತ್ತೀಚೆಗಷ್ಟೆ ಡಿಲೀಟ್ ಫಾರ್ ಎವರಿವನ್ ಆಯ್ಕೆಯಲ್ಲಿ ಸಮಯದ ಮಿತಿಯನ್ನು ಹೆಚ್ಚಿಸಿತ್ತು. ಇದೀಗ ಇದರಲ್ಲಿ ಮತ್ತೊಂದು ಹೊಸ ಆಯ್ಕೆಯನ್ನು ನೀಡುವ ಬಗ್ಗೆ ವರದಿಯಾಗಿದೆ. ಇದರ ಪ್ರಕಾರ ವಾಟ್ಸ್​ಆ್ಯಪ್​ನಲ್ಲಿ ನೀವು ಡಿಲೀಟ್ ಮಾಡಿದ ಮೆಸೇಜ್ ಅನ್ನು ರಿಕವರಿ ಮಾಡಬಹುದಂತೆ.

WhatsApp: ಡಿಲೀಟ್ ಆದ ಮೆಸೇಜ್ ರಿಕವರಿ ಮಾಡಿ: ವಾಟ್ಸ್​ಆ್ಯಪ್​ನಲ್ಲಿ ವಿನೂತನ ಫೀಚರ್
ಪ್ರಾತಿನಿಧಿಕ ಚಿತ್ರ
TV9 Web
| Updated By: Vinay Bhat|

Updated on:Aug 18, 2022 | 2:58 PM

Share

ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಆಕರ್ಷಕ ಆಯ್ಕೆಗಳನ್ನು ನೀಡುತ್ತಿದೆ. ಕಳೆದ ಕೆಲವು ತಿಂಗಳುಗಳಿಂದಂತೂ ಒಂದರ ಹಿಂದೆ ಒಂದರಂತೆ ವಿನೂತನ ಅಪ್ಡೇಟ್​ ಅನ್ನು ಪರಿಚಯಿಸುತ್ತಿದೆ. ಇತ್ತೀಚೆಗಷ್ಟೆ ಡಿಲೀಟ್ ಫಾರ್ ಎವರಿವನ್ (Delete For Everyone) ಆಯ್ಕೆಯಲ್ಲಿ ಸಮಯದ ಮಿತಿಯನ್ನು ಹೆಚ್ಚಿಸಿತ್ತು. ಇದೀಗ ಇದರಲ್ಲಿ ಮತ್ತೊಂದು ಹೊಸ ಆಯ್ಕೆಯನ್ನು ನೀಡುವ ಬಗ್ಗೆ ವರದಿಯಾಗಿದೆ. ಇದರ ಪ್ರಕಾರ ವಾಟ್ಸ್​ಆ್ಯಪ್​ನಲ್ಲಿ ನೀವು ಡಿಲೀಟ್ ಮಾಡಿದ ಮೆಸೇಜ್ (Message) ಅನ್ನು ರಿಕವರಿ ಮಾಡಬಹುದಂತೆ.

ಈ ಬಗ್ಗೆ ವಾಟ್ಸ್​ಆ್ಯಪ್ ​ಬೇಟಾಇನ್​ಫೊ ವರದಿ ಮಾಡಿದ್ದು, ಆಂಡ್ರಾಯ್ಡ್ ಬೇಟಾ ವರ್ಷನ್​ನಲ್ಲಿ ಇದನ್ನು ಪರೀಕ್ಷಿಸಲಾಗುತ್ತಿದೆ. ಈಗ ನೀವು ಯಾರಿಗಾದರು ಮೆಸೇಜ್ ಕಳುಹಿಸಿದ್ದನ್ನು ತಪ್ಪಿ ಡಿಲೀಟ್ ಮಾಡಿದ್ದರೆ ಆ ಮೆಸೇಜ್ ಅನ್ನು ಮರಳಿ ಪಡೆಯುವ ಆಯ್ಕೆ ಇದಾಗಿದೆ. ಆದರೆ, ಇದು ಎಷ್ಟು ಸಮಯದ ಒಳಗೆ ರಿಕವರಿ ಮಾಡಬಹುದು ಎಂಬ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಸದ್ಯದಲ್ಲೇ ಈ ಆಯ್ಕೆ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಸಿಗಲಿದೆಯಂತೆ.

ಇನ್ನು ಪ್ರೊಫೈಲ್ ಫೋಟೋದಲ್ಲಿ ಅವತಾರ್ (Avatar) ಎಂಬ ಆಯ್ಕೆಯನ್ನು ವಾಟ್ಸ್​ಆ್ಯಪ್ ಅಭಿವೃದ್ದಿ ಪಡಿಸುತ್ತಿರುವ ಬಗ್ಗೆ ವಾಟ್ಸ್​ಆ್ಯಪ್ ಬೇಟಾಇನ್​ಫೋ ವರದಿ ಮಾಡಿದೆ. ಈ ಅವತಾರ್ ಫೀಚರ್ ಅನ್ನು ಬಳಸಿ ನಿಮ್ಮ ಪ್ರೊಫೈಲ್ ಫೋಟೋವನ್ನು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಬಹುದು. ಅಂದರೆ, ಇಲ್ಲಿ ನಿಮಗೆ ಬ್ಯಾಕ್​ಗ್ರೌಂಡ್ ಕಲರ್ ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಸದ್ಯಕ್ಕೆ ಪರೀಕ್ಷಾ ಹಂತದಲ್ಲಿರುವ ಈ ಫೀಚರ್ ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್, ಐಒಎಸ್ ಹಾಗೂ ಡೆಸ್ಕ್ ಟಾಪ್ ಬಳಕೆದಾರರಿಗೆ ಸಿಗಲಿದೆಯಂತೆ.

ಇದನ್ನೂ ಓದಿ
Image
Realme 9i 5G: ಭಾರತದಲ್ಲಿ ಬಹುನಿರೀಕ್ಷಿತ ರಿಯಲ್ ಮಿ 9i 5G ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರೆಂಟಿ
Image
Infinix Hot 12: ಕೇವಲ 9,499 ರೂ.ಗೆ ಬಂದಿದೆ ಹೊಸ ಸ್ಮಾರ್ಟ್​ಫೋನ್: ಶವೋಮಿ, ರಿಯಲ್ ಮಿಗೆ ಶುರುವಾಗಿದೆ ನಡುಕ
Image
Vivo V25 Pro: ಫಾಸ್ಟ್ ಚಾರ್ಜರ್, ಬೊಂಬಾಟ್ ಕ್ಯಾಮೆರಾ: ಭಾರತದಲ್ಲಿ ವಿವೋ V25 ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆ
Image
BIG NEWS: 7 ಭಾರತೀಯ ಮತ್ತು 1 ಪಾಕಿಸ್ತಾನ ಮೂಲದ YouTube ಚಾನಲ್​ಗಳನ್ನು ಬ್ಯಾನ್ ಮಾಡಿದ ಕೇಂದ್ರ

ಇದರ ಜೊತೆಗೆ ಹೊಸ ಲಾಗಿನ್‌ ಫೀಚರ್ ತರಲು ಮುಂದಾಗಿದೆ. ಇದು ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ನಲ್ಲಿರುವ ಲಾಗಿನ್ ಅನುಮೋದನೆ ಫೀಚರ್ ಮಾದರಿಯಲ್ಲಿ ಇರಲಿದೆ ಎನ್ನಲಾಗಿದೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದರೆ, ನೀವು ಹೊಸ ಡಿವೈಸ್‌ನಲ್ಲಿ ವಾಟ್ಸ್​ಆ್ಯಪ್ ಖಾತೆಗೆ ಲಾಗಿನ್‌ ಮಾಡಿದರೆ ನಿಮಗೆ ವಾಟ್ಸ್​ಆ್ಯಪ್​​ನಿಂದ ನೋಟಿಫಿಕೇಶನ್‌ ಬರಲಿದೆ. ಈ ನೋಟಿಫಿಕೇಶನ್‌ನಲ್ಲಿ ಲಾಗಿನ್‌ ಆಗುತ್ತಿರುವುದು ನೀವೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಲು ನಿಮ್ಮನ್ನು ಕೇಳುತ್ತದೆ. ಅದನ್ನು ನೀವು ಓಕೆ ಮಾಡಿದರೆ ಮಾತ್ರ ವಾಟ್ಸ್​ಆ್ಯಪ್ ಲಾಗಿನ್‌ ಆಗುತ್ತದೆ. ಅಲ್ಲದೆ ಒಂದು ವೇಳೆ ನೀವು 6-ಅಂಕಿಯ ವೆರಿಫಿಕೇಶನ್ ಕೋಡ್ ಅನ್ನು ತಪ್ಪಾಗಿ ಶೇರ್‌ ಮಾಡಿದರೂ ಕೂಡ ನಿಮ್ಮ ಲಾಗ್‌ ಇನ್‌ ಪ್ರಯತ್ನ ವಿಫಲವಾಗಲಿದೆ.

Published On - 2:58 pm, Thu, 18 August 22

ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ