AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ವಾಟ್ಸ್​ಆ್ಯಪ್​ನಿಂದ ಶಾಕಿಂಗ್ ನ್ಯೂಸ್: ಇನ್ನುಂದೆ ಇರಲ್ಲ ಈ ಫೀಚರ್

WhatsApp New Feature: ಇದೀಗ ಮೆಸೇಜಿಂಗ್ ಅಪ್ಲಿಕೇಷನ್ ಪ್ರೈವಸಿಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗೆ ಸಜ್ಜಾಗಿದೆ. ಇನ್ನುಂದೆ ವಾಟ್ಸ್​ಆ್ಯಪ್​ನಲ್ಲಿ ನಿಮಗೆ ಸ್ಕ್ರೀನ್ ಶಾಟ್ ತೆಗೆಯಲು ಸಾಧ್ಯವಿಲ್ಲ. ಸದ್ಯದಲ್ಲೇ ಈ ಆಯ್ಕೆಯನ್ನು ನಿರ್ಬಂಧಿಸಲಿದೆ.

WhatsApp: ವಾಟ್ಸ್​ಆ್ಯಪ್​ನಿಂದ ಶಾಕಿಂಗ್ ನ್ಯೂಸ್: ಇನ್ನುಂದೆ ಇರಲ್ಲ ಈ ಫೀಚರ್
WhatsApp
TV9 Web
| Updated By: Vinay Bhat|

Updated on:Aug 19, 2022 | 12:43 PM

Share

ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಆಕರ್ಷಕ ಆಯ್ಕೆಗಳನ್ನು ನೀಡುತ್ತಿದೆ. ಅತ್ಯಂತ ಸುಲಭವಾಗಿ ಕಾರ್ಯನಿರ್ವಹಿಸುವಂತಹ ಆಯ್ಕೆಯನ್ನು ಒಂದರ ಹಿಂದೆ ಒಂದರಂತೆ ವಾಟ್ಸ್​ಆ್ಯಪ್ ನೀಡುತ್ತಿದೆ. ಈ ವರ್ಷವಂತು ಅನೇಕ ವಿನೂತನ ಅಪ್ಡೇಟ್​ಗಳನ್ನು (Update) ನೀಡಿ ಬಳಕೆದಾರರನ್ನು ಮತ್ತಷ್ಟು ಖುಷಿ ಪಡಿಸುತ್ತಿದೆ. ಹೊಸ ಹೊಸ ಅಪ್ಡೇಟ್​ಗಳ ಜೊತೆಗೆ ಬಳಕೆದಾರರ ಪ್ರೈವಸಿ ಮೇಲೂ ವಾಟ್ಸ್​ಆ್ಯಪ್ ಕಣ್ಣಿಟ್ಟಿದೆ. ಇದೀಗ ಮೆಸೇಜಿಂಗ್ ಅಪ್ಲಿಕೇಷನ್ ಪ್ರೈವಸಿಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗೆ ಸಜ್ಜಾಗಿದೆ. ಇನ್ನುಂದೆ ವಾಟ್ಸ್​ಆ್ಯಪ್​ನಲ್ಲಿ ನಿಮಗೆ ಸ್ಕ್ರೀನ್ ಶಾಟ್ (Screenshot) ತೆಗೆಯಲು ಸಾಧ್ಯವಿಲ್ಲ. ಸದ್ಯದಲ್ಲೇ ಈ ಆಯ್ಕೆಯನ್ನು ನಿರ್ಬಂಧಿಸಲಿದೆ.

ಈ ವರ್ಷದ ಆರಂಭದಲ್ಲಿ ವಾಟ್ಸ್​ಆ್ಯಪ್ ವೀವ್ ಒನ್ಸ್ ಎಂಬ ಫೀಚರ್ ಪರಿಚಿಸಿತ್ತು. ಇದರ ಮೂಲಕ ಫೋಟೋ ಅಥವಾ ವಿಡಿಯೋವನ್ನು ಓಪನ್ ಮಾಡಿ ನೋಡಿದ ತಕ್ಷಣ ಅದು ಮಾಯವಾಗುವುದು ಮಾತ್ರವಲ್ಲದೆ, ಇವು ಫೋನ್ ಮೆಮೊರಿಯಲ್ಲಿ ಎಲ್ಲಿಯೂ ಸ್ಟೋರ್ ಕೂಡ ಆಗದಿರುವುದು ವಿಶೇಷವಾಗಿದೆ. ಹಂಚಿಕೊಳ್ಳಲು, ಫಾರ್ವರ್ಡ್ ಮಾಡಲು, ನಕಲಿಸಲು, ಉಳಿಸಲು ಸಾಧ್ಯವಿಲ್ಲ. ಆದರೆ, ಇದನ್ನು ಸ್ಕ್ರೀನ್ ಶಾಟ್ ತೆಗೆಯುವಂತಹ ಆಯ್ಕೆ ಇತ್ತು. ಇದೊಂದು ಕಾರಣದಿಂದ ಅನೇಕರು ಈ ಆಯ್ಕೆಯಿಂದ ಬೇಸರಗೊಂಡಿದ್ದರು. ಇದೀಗ ವಾಟ್ಸ್​ಆ್ಯಪ್ ತನ್ನ ವೀವ್ ಒನ್ಸ್ ಫೀಚರ್​ನಲ್ಲಿ ಸ್ಕ್ರೀನ್ ಶಾಟ್ ತೆಗೆಯುವ ಆಯ್ಕೆಯನ್ನು ಬ್ಲಾಕ್ ಮಾಡಲು ಮುಂದಾಗಿದೆ.

ಇದನ್ನೂ ಓದಿ
Image
Nothing Phone (1): ಬಿಡುಗಡೆ ಆದ ಒಂದೇ ತಿಂಗಳಲ್ಲಿ ಬೆಲೆ ಏರಿಕೆ: ನಥಿಂಗ್ ಫೋನ್ 1ಗೆ ಅಷ್ಟೊಂದು ಡಿಮ್ಯಾಂಡ್?
Image
WhatsApp: ಡಿಲೀಟ್ ಆದ ಮೆಸೇಜ್ ರಿಕವರಿ ಮಾಡಿ: ವಾಟ್ಸ್​ಆ್ಯಪ್​ನಲ್ಲಿ ವಿನೂತನ ಫೀಚರ್
Image
Realme 9i 5G: ಭಾರತದಲ್ಲಿ ಬಹುನಿರೀಕ್ಷಿತ ರಿಯಲ್ ಮಿ 9i 5G ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರೆಂಟಿ
Image
Infinix Hot 12: ಕೇವಲ 9,499 ರೂ.ಗೆ ಬಂದಿದೆ ಹೊಸ ಸ್ಮಾರ್ಟ್​ಫೋನ್: ಶವೋಮಿ, ರಿಯಲ್ ಮಿಗೆ ಶುರುವಾಗಿದೆ ನಡುಕ

WABetaInfo ಈ ಕುರಿತು ಟ್ವೀಟ್ ಮಾಡಿದ್ದು, “ವಾಟ್ಸ್​ಆ್ಯಪ್ ಆಂಡ್ರಾಯ್ಡ್ ಬೀಟಾದಲ್ಲಿ ಸ್ಕ್ರೀನ್‌ಶಾಟ್ ನಿರ್ಬಂಧಿಸುವ ಕಾರ್ಯ ಪ್ರಗತಿಯಲ್ಲಿದೆ. ಆಂಡ್ರಾಯ್ಡ್​ಗಾಗಿ ವಾಟ್ಸ್​ಆ್ಯಪ್ ಬೀಟಾದ ಭವಿಷ್ಯದ ನವೀಕರಣಕ್ಕೆ ಧನ್ಯವಾದಗಳು,” ಎಂದು ಬರೆದುಕೊಂಡಿದೆ.

ವಾಟ್ಸ್​ಆ್ಯಪ್​ನಲ್ಲಿ ನೀವು ಡಿಲೀಟ್ ಮಾಡಿದ ಮೆಸೇಜ್ (Message) ಅನ್ನು ರಿಕವರಿ ಮಾಡಬಹುದಂತೆ. ಈ ಬಗ್ಗೆ ವಾಟ್ಸ್​ಆ್ಯಪ್ ​ಬೇಟಾಇನ್​ಫೊ ವರದಿ ಮಾಡಿದ್ದು, ಆಂಡ್ರಾಯ್ಡ್ ಬೇಟಾ ವರ್ಷನ್​ನಲ್ಲಿ ಇದನ್ನು ಪರೀಕ್ಷಿಸಲಾಗುತ್ತಿದೆ. ಈಗ ನೀವು ಯಾರಿಗಾದರು ಮೆಸೇಜ್ ಕಳುಹಿಸಿದ್ದನ್ನು ತಪ್ಪಿ ಡಿಲೀಟ್ ಮಾಡಿದ್ದರೆ ಆ ಮೆಸೇಜ್ ಅನ್ನು ಮರಳಿ ಪಡೆಯುವ ಆಯ್ಕೆ ಇದಾಗಿದೆ. ಆದರೆ, ಇದು ಎಷ್ಟು ಸಮಯದ ಒಳಗೆ ರಿಕವರಿ ಮಾಡಬಹುದು ಎಂಬ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಸದ್ಯದಲ್ಲೇ ಈ ಆಯ್ಕೆ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಸಿಗಲಿದೆಯಂತೆ.

ಇನ್ನು ಪ್ರೊಫೈಲ್ ಫೋಟೋದಲ್ಲಿ ಅವತಾರ್ (Avatar) ಎಂಬ ಆಯ್ಕೆಯನ್ನು ವಾಟ್ಸ್​ಆ್ಯಪ್ ಅಭಿವೃದ್ದಿ ಪಡಿಸುತ್ತಿರುವ ಬಗ್ಗೆ ವಾಟ್ಸ್​ಆ್ಯಪ್ ಬೇಟಾಇನ್​ಫೋ ವರದಿ ಮಾಡಿದೆ. ಈ ಅವತಾರ್ ಫೀಚರ್ ಅನ್ನು ಬಳಸಿ ನಿಮ್ಮ ಪ್ರೊಫೈಲ್ ಫೋಟೋವನ್ನು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಬಹುದು. ಅಂದರೆ, ಇಲ್ಲಿ ನಿಮಗೆ ಬ್ಯಾಕ್​ಗ್ರೌಂಡ್ ಕಲರ್ ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಸದ್ಯಕ್ಕೆ ಪರೀಕ್ಷಾ ಹಂತದಲ್ಲಿರುವ ಈ ಫೀಚರ್ ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್, ಐಒಎಸ್ ಹಾಗೂ ಡೆಸ್ಕ್ ಟಾಪ್ ಬಳಕೆದಾರರಿಗೆ ಸಿಗಲಿದೆ.

Published On - 12:42 pm, Fri, 19 August 22

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ