World Photography Day: ಇಂದು ವಿಶ್ವ ಫೋಟೋಗ್ರಫಿ ದಿನ: ಭಾರತದಲ್ಲಿರುವ ಬೆಸ್ಟ್ ಕ್ಯಾಮೆರಾ ಸ್ಮಾರ್ಟ್​​​ಫೋನ್​ಗಳು ಇಲ್ಲಿದೆ ನೋಡಿ

ಇಂದು ವಿಶ್ವ ಛಾಯಾಗ್ರಹಣ ದಿನ (World Photography Day). ಈ ಸಂದರ್ಭ ಸ್ಮಾರ್ಟ್​ಫೋನ್ ಪ್ರಿಯರಿಗಾಗಿ ಭಾರತದಲ್ಲಿ ಲಭ್ಯವಿರುವ ಆಕರ್ಷಕ ಕ್ಯಾಮೆರಾ ಫೋನುಗಳ (Camera Smartphone) ಬಗ್ಗೆ ಮಾಹಿತಿಯನ್ನು ನಾವು ನೀಡುತ್ತೇವೆ.

World Photography Day: ಇಂದು ವಿಶ್ವ ಫೋಟೋಗ್ರಫಿ ದಿನ: ಭಾರತದಲ್ಲಿರುವ ಬೆಸ್ಟ್ ಕ್ಯಾಮೆರಾ ಸ್ಮಾರ್ಟ್​​​ಫೋನ್​ಗಳು ಇಲ್ಲಿದೆ ನೋಡಿ
Best Camera Phone
Follow us
TV9 Web
| Updated By: Vinay Bhat

Updated on:Aug 19, 2022 | 2:35 PM

ಇಂದು ವಿಶ್ವ ಛಾಯಾಗ್ರಹಣ ದಿನ (World Photography Day). ಪದಗಳಲ್ಲಿ ವಿವರಿಸಲಾಗದ್ದನ್ನ ಫೋಟೋ ಮೂಲಕ ಹೇಳಬಹುದಾದ ಅದ್ಬುತ ಶಕ್ತಿ ಈ ಫೋಟೋಗ್ರಫಿದಲ್ಲಿದೆ. ಛಾಯಾಚಿತ್ರದ ಮೂಲಕ ವಿಶ್ವವನ್ನು ಸಕಾರಾತ್ಮಕವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಆರಂಭವಾದ ವಿಶ್ವ ಛಾಯಾಗ್ರಹಣ ದಿನವನ್ನು ಪ್ರತಿ ವರ್ಷ ಆಗಸ್ಟ್‌ 19 ಆಚರಿಸಲಾಗುತ್ತದೆ. ಫೊಟೋಗ್ರಫಿ ಒಂದು ಕಲೆ. ಹಿಂದಿನ ಇತಿಹಾಸದ ಸಾಕ್ಷಿ ಫೋಟೋ (Photo). ಯಾವುದೇ ಒಂದು ಘಟನೆಯನ್ನು ಸಂಪೂರ್ಣವಾಗಿ ವಿವರಿಸುವ ಸಾಧ್ಯತೆ ಒಂದು ಪೋಟೋವಿನಲ್ಲಿದೆ. ಈ ಸಂದರ್ಭ ಸ್ಮಾರ್ಟ್​ಫೋನ್ ಪ್ರಿಯರಿಗಾಗಿ ಭಾರತದಲ್ಲಿ ಲಭ್ಯವಿರುವ ಆಕರ್ಷಕ ಕ್ಯಾಮೆರಾ ಫೋನುಗಳ (Camera Smartphone) ಬಗ್ಗೆ ಮಾಹಿತಿಯನ್ನು ನಾವು ನೀಡುತ್ತೇವೆ.

ಒಪ್ಪೋ ರೆನೋ 8 ಪ್ರೊ: 45,999 ರೂ. ಬೆಲೆಯ ಈ ಸ್ಮಾರ್ಟ್​ಫೋನ್ ಕ್ಯಾಮೆರಾಕ್ಕೆ ಹೇಳಿ ಮಾಡಿಸಿದ್ದು. ಇದು 50MP +8MP + 2MP ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಸೆಲ್ಫೀಗಾಗಿ 32MP ಕ್ಯಾಮೆರಾ ನೀಡಲಾಗದೆ. ಈ ಫೋನ್ MariSilicon X NPU ಮತ್ತು Dual Sony ಯಿಂದ ಕಾರ್ಯನಿರ್ವಹಿಸುತ್ತದೆ. IMX766 ಮತ್ತು IMX709 ಫ್ಲ್ಯಾಗ್​ಶಿಪ್ ಸೆನ್ಸಾರ್ ಹೊಂದಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 8100 ಪ್ರೊಸೆಸರ್ ನೀಡಲಾಗಿದೆ. 6.7 ಇಂಚಿನ ಡಿಸ್​ಪ್ಲೇ ಮತ್ತು 4500mAh ಬ್ಯಾಟರಿ ಕೊಡಲಾಗಿದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ S22 ಆಲ್ಟ್ರಾ: ಈ ಫೋನಿನ 12GB RAM ಮತ್ತು 253GB ಸ್ಟೋರೇಜ್ ಆಯ್ಕೆಯ ಬೆಲೆ 1,09,999 ರೂ. ಇಷ್ಟು ಬೆಲೆ ಹೊಂದಿರುವ ಈ ಫೋನಿನ ಕ್ಯಾಮೆರಾ ಮಾತ್ರ ಅದ್ಭುತವಾಗಿದೆ. ಇದರಲ್ಲಿ 108MP+ 12MP+ 10MP+ 10MP ಸ್ಪೋರ್ಟ್ಸ್ ಕ್ವಾಡ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. 40 ಮೆಗಾಫಿಕ್ಸೆಲ್​ನ ಸೆಲ್ಫೀ ಕ್ಯಾಮೆರಾ ಕೂಡ ಇದೆ. 100X ಜೂಮ್ ಫೀಚರ್ ಇದರ ಹೈಲೇಟ್ ಆಗಿದ್ದು, 5000mAh ಬ್ಯಾಟರಿ, 6.8 ಇಂಚಿನ ಡಿಸ್ ಪ್ಲೇ, ಆಕ್ಟ್ರಾಕೋರ್ ಪ್ರೊಸೆಸರ್ ಅಳವಡಿಸಲಾಗಿದೆ.

ಇದನ್ನೂ ಓದಿ
Image
Moto G62 5G: ಅತಿ ಕಡಿಮೆ ಬೆಲೆಯ 5G ಫೋನ್ ಮೋಟೋ G62 ಈಗ ಖರೀದಿಗೆ ಲಭ್ಯ: ಏನಿದೆ ಫೀಚರ್ಸ್?
Image
WhatsApp: ವಾಟ್ಸ್​ಆ್ಯಪ್​ನಿಂದ ಶಾಕಿಂಗ್ ನ್ಯೂಸ್: ಇನ್ನುಂದೆ ಇರಲ್ಲ ಈ ಫೀಚರ್
Image
Nothing Phone (1): ಬಿಡುಗಡೆ ಆದ ಒಂದೇ ತಿಂಗಳಲ್ಲಿ ಬೆಲೆ ಏರಿಕೆ: ನಥಿಂಗ್ ಫೋನ್ 1ಗೆ ಅಷ್ಟೊಂದು ಡಿಮ್ಯಾಂಡ್?
Image
WhatsApp: ಡಿಲೀಟ್ ಆದ ಮೆಸೇಜ್ ರಿಕವರಿ ಮಾಡಿ: ವಾಟ್ಸ್​ಆ್ಯಪ್​ನಲ್ಲಿ ವಿನೂತನ ಫೀಚರ್

ಐಫೋನ್ 13: 128GB ಸ್ಟೋರೇಜ್ ಆಯ್ಕೆಯ ಆ್ಯಪಲ್ ಐಫೋನ್ 13 ಸದ್ಯ ಫ್ಲಿಪ್​ಕಾರ್ಟ್​ನಲ್ಲಿ ಕೇವಲ 73,999 ರೂ. ಗೆ ಮಾರಾಟ ಆಗುತ್ತಿದೆ. ಇದರಲ್ಲಿರುವ ಡ್ಯುಯೆಲ್ ರಿಯರ್ ಕ್ಯಾಮೆರಾ 12 ಮೆಗಾಫಿಕ್ಸೆಲ್​ನಲ್ಲಿದೆ. ಸೆಲ್ಫೀ ಕ್ಯಾಮೆರಾ ಕೂಡ 12 ಮೆಗಾಫಿಕ್ಸೆಲ್​ನಿಂದ ಕೂಡಿದೆ. ನೀವು ಕ್ಯಾಮೆರಾ ಫೋನ್ ಹುಡುಕುತ್ತಿದ್ದರೆ ಇದೊಂದು ಅತ್ಯುತ್ತಮ ಆಯ್ಕೆಯಾಗಿದೆ.

ರಿಯಲ್ ಮಿ ಜಿಟಿ 2 ಪ್ರೊ: ಈ ಫೋನಿನ 8GB RAM ಮತ್ತು 128GB ಸ್ಟೋರೇಜ್ ಆಯ್ಕೆಗೆ 49,999 ರೂ. ನಿಗದಿ ಮಾಡಲಾಗಿದೆ. ಇದು 50MP+ 50MP+ 2MP ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 32 ಮೆಗಾಫಿಕ್ಸೆಲ್​ನ ಸೆಲ್ಫೀ ಕ್ಯಾಮೆರಾ ಕೂಡ ನೀಡಲಾಗಿದೆ. ಇದರಲ್ಲಿರುವ ಮೈಕ್ರೊಲೆನ್ಸ್ ಸಾಕಷ್ಟು ಪ್ರಸಿದ್ಧಿ ಪಡೆದಿದೆ. 5000mAh ಬ್ಯಾಟರಿ, 6.7 ಇಂಚಿನ ಡಿಸ್ ಪ್ಲೇ, ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 1 ಪ್ರೊಸೆಸರ್ ಅಳವಡಿಸಲಾಗಿದೆ.

ಗೂಗಲ್ ಫಿಕ್ಸೆಲ್ 6a: ಇತ್ತೀಚೆಗಷ್ಟೆ ಬಿಡುಗಡೆ ಆದ ಗೂಗಲ್ ಫಿಕ್ಸೆಲ್ 6a ಸ್ಮಾರ್ಟ್​ಫೋನ್​ನ 6GB RAM + 12GB ಸ್ಟೋರೇಜ್ ಆಯ್ಕೆಯ ಬೆಲೆ 43,999 ರೂ. ಈ ಫೋನಿನ ಕ್ಯಾಮೆರಾ ಮತ್ತು ವಿಡಿಯೋ ಅದ್ಭುತವಾಗಿದೆ. ಇದು ಗೂಗಲ್ ಟೆನ್ಸಾರ್ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು, 6.14 ಇಂಚಿನ ಡಿಸ್ ಪ್ಲೇ ಮತ್ತು 4110mAh ಬ್ಯಾಟರಿ ನೀಡಲಾಗಿದೆ.

Published On - 2:35 pm, Fri, 19 August 22

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ