AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Photography Day 2022: ಇಂದು ವಿಶ್ವ ಛಾಯಗ್ರಹಣ ದಿನ, ಇತಿಹಾಸ, ಮಹತ್ವ, ಥೀಮ್ ಇಲ್ಲಿದೆ

ಛಾಯಾಗ್ರಹಣದ ಕಲಾ ಪ್ರಕಾರವನ್ನು ಆಚರಿಸಲು ಪ್ರತಿ ವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ. ಛಾಯಾಗ್ರಹಣ ಕಲೆಗೆ ಗೌರವ ಮತ್ತು ಅದರ ಬಗ್ಗೆ ಆಸಕ್ತಿ ಹೊಂದಿರುವ ಜನರಿಗೆ ಪ್ರೋತ್ಸಾಹವನ್ನು ನೀಡುವ ದಿನ ಇದಾಗಿದೆ.

World Photography Day 2022: ಇಂದು ವಿಶ್ವ ಛಾಯಗ್ರಹಣ ದಿನ, ಇತಿಹಾಸ, ಮಹತ್ವ, ಥೀಮ್ ಇಲ್ಲಿದೆ
ಸಾಂಕೇತಿಕ ಚಿತ್ರ
TV9 Web
| Updated By: Rakesh Nayak Manchi|

Updated on:Aug 19, 2022 | 7:10 AM

Share

ಇಂದು ಛಾಯಾಗ್ರಹಣವು ಯುವಜನತೆಯ ನೆಚ್ಚಿನ ವೃತ್ತಿ ಕ್ಷೇತ್ರವಾಗಿದ್ದು, ಅನೇಕರು ಇಂದು ಇದನ್ನೇ ತನ್ನ ಜೀವನಾಧಾರವಾಗಿ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಛಾಯಾಗ್ರಹಣವನ್ನು ಫ್ಯಾಷನ್ ಆಗಿ ಮಾಡಿಕೊಂಡಿದ್ದಾರೆ. ಛಾಯಾಗ್ರಹಣವು ಕಣ್ಣಾರೆ ಕಂಡಿರುವುದನ್ನು ದಾಖಲೆಯ ರೂಪದಲ್ಲಿ ಇರಿಸಿಕೊಳ್ಳುವ ಒಂದು ಸಾಧನವಾಗಿದೆ. ಈ ಕಲಾ ಪ್ರಕಾರವನ್ನು ಆಚರಿಸಲು ಪ್ರತಿ ವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ. ಛಾಯಾಗ್ರಹಣ ಕಲೆಗೆ ಗೌರವ ಮತ್ತು ಅದರ ಬಗ್ಗೆ ಆಸಕ್ತಿ ಹೊಂದಿರುವ ಜನರಿಗೆ ಪ್ರೋತ್ಸಾಹವನ್ನು ನೀಡುವ ದಿನ ಇದಾಗಿದೆ. ಅಷ್ಟೇ ಅಲ್ಲದೆ ಇದು ಛಾಯಾಗ್ರಹಣದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಜನರಿಗೆ ಪ್ರೇರಣೆ ನೀಡುತ್ತದೆ. ಈ ಬಾರಿ “ಕ್ಯಾಮೆರಾ ಕಣ್ಣಿನಲ್ಲಿ ಕೊವಿಡ್ ಸಂಕಷ್ಟ” ಎಂಬ ಥೀಮ್ ಮೂಲಕ ವಿಶ್ವ ಛಾಯಗ್ರಾಹಕರ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಛಾಯಾಗ್ರಹಣ ದಿನದ ಇತಿಹಾಸ

1837 ರಲ್ಲಿ ಫ್ರೆಂಚ್‌ನ ಜೋಸೆಫ್ ನೈಸ್‌ಫೋರ್ ನೀಪ್ಸ್ ಮತ್ತು ಲೂಯಿಸ್ ಡಾಗುರ್ರೆ ಅವರು ‘ಡಾಗ್ಯುರೋಟೈಪ್’ ಎಂಬ ಪೆಟ್ಟಿಗೆ ಆಕಾರದ ಸಾಧನವನ್ನು ಕಂಡುಹಿಡಿದರು. ಇದು ವಿಶ್ವದ ಮೊದಲ ಛಾಯಾಗ್ರಹಣ ಪ್ರಕ್ರಿಯೆಯಾಗಿದೆ. 1839 ಜನವರಿ 9 ರಂದು ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ ಅಧಿಕೃತವಾಗಿ ಡಾಗ್ಯುರೋಟೈಪ್ ಅನ್ನು ಅನುಮೋದಿಸಿತು.

ಇದಾದ ಏಳು ತಿಂಗಳ ನಂತರ ಅಂದರೆ ಆಗಸ್ಟ್ 19 ರಂದು ಫ್ರೆಂಚ್ ಸರ್ಕಾರವು ಸಾಧನಕ್ಕಾಗಿ ಪೇಟೆಂಟ್ ಅನ್ನು ಖರೀದಿಸಿದೆ ಎಂದು ನಂಬಲಾಗಿದೆ. ಅವರು ಡಾಗ್ಯುರೊಟೈಪ್​ನ ಆವಿಷ್ಕಾರವನ್ನು ಜಗತ್ತಿಗೆ ಉಡುಗೊರೆಯಾಗಿ ಘೋಷಿಸುವುದರ ಜೊತೆಗೆ ಅದು ಎಲ್ಲರಿಗೂ ಉಚಿತವಾಗಿ ಲಭ್ಯವಾಗುವಂತೆ ಮಾಡಿದರು. ಕಾಲಾನಂತರದಲ್ಲಿ ಈ ದಿನವನ್ನು ವಿಶ್ವ ಛಾಯಾಗ್ರಹಣ ದಿನವೆಂದು ಗುರುತಿಸಲು ಪ್ರಾರಂಭಿಸಲಾಯಿತು.

ಅಂದಿನಿಂದ ಛಾಯಾಗ್ರಹಣವು ತಂತ್ರಜ್ಞಾನದಲ್ಲಿನ ಬೆಳವಣಿಗೆಗಳು ಮತ್ತು ಪ್ರಗತಿಗಳೊಂದಿಗೆ ವಿಕಸನಗೊಳ್ಳುತ್ತಿದೆ. ಮೊದಲ ಬಾಳಿಕೆ ಬರುವ ಬಣ್ಣದ ಛಾಯಾಚಿತ್ರವನ್ನು 1861ರಲ್ಲಿ ಸೆರೆಹಿಡಿಯಲಾಯಿತು. ಆದರೆ ಮೊದಲ ಡಿಜಿಟಲ್ ಛಾಯಾಚಿತ್ರವನ್ನು 1957 ರಲ್ಲಿ ರಚಿಸಲಾಯಿತು.

ವಿಶ್ವ ಛಾಯಾಗ್ರಹಣ ದಿನದ ಮಹತ್ವ

ವಿಶ್ವ ಛಾಯಾಗ್ರಹಣ ದಿನವು ಛಾಯಾಗ್ರಹಣದ ಕಲೆ ಮತ್ತು ಕರಕುಶಲತೆಯನ್ನು ಮತ್ತು ಈ ಮಾಧ್ಯಮದ ಬಗ್ಗೆ ಜನರು ಹೊಂದಿರುವ ಉತ್ಸಾಹವನ್ನು ಆಚರಿಸುತ್ತದೆ. ಛಾಯಾಗ್ರಹಣದ ಉದ್ದೇಶವು ಹೇಗೆ ವಿಕಸನಗೊಂಡಿತು ಎಂಬುದನ್ನು ಕೂಡ ಈ ದಿನವು ತಿಳಿಸುತ್ತದೆ. ಕಳೆದ ದಶಕದಲ್ಲಿ ಬಹಳಷ್ಟು ಯುವಕರು ಛಾಯಾಗ್ರಹಣವನ್ನು ಹವ್ಯಾಸವಾಗಿ ತೆಗೆದುಕೊಳ್ಳಲು ತಾಂತ್ರಿಕ ಸಾಧನಗಳಲ್ಲಿ ಆದ ಪ್ರಗತಿ ಮತ್ತು ಅವುಗಳ ಬಳಕೆಯ ಸುಲಭತೆಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಆಗಸ್ಟ್ 19 ಹೆಚ್ಚು ಮಹತ್ವದ್ದಾಗಿದೆ, ಏಕೆಂದರೆ ಇದು ಹೆಚ್ಚಿನ ಜನರನ್ನು ಛಾಯಾಗ್ರಹಣವನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಅಥವಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ವ್ಯಕ್ತಪಡಿಸಲು ಪ್ರೇರೇಪಿಸುತ್ತದೆ.

Published On - 7:10 am, Fri, 19 August 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?