5ಜಿ ಸೇವೆ ಆರಂಭಕ್ಕೆ ಸಿದ್ಧವಾಗಿರುವಂತೆ ಟೆಲಿಕಾಂ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ; 4ಜಿ ಡಾಟಾಗೂ 5ಜಿ ಡಾಟಾಗೂ ಇರುವ ವ್ಯತ್ಯಾಸ, ದರ ಎಷ್ಟು ?

ಭಾರತದಲ್ಲಿ ಸದ್ಯದಲ್ಲೇ 5ಜಿ ಸೇವೆ ಆರಂಭವಾಗಲಿದ್ದು, ಈ ಸಂಬಂಧ ಆರಂಭಕ್ಕೆ ಸಿದ್ದವಾಗಿರುವಂತೆ ಕೇಂದ್ರ ಸರ್ಕಾರ ಟೆಲಿಕಾಂ ಕಂಪನಿಗಳಿಗೆ ಸೂಚನೆ ನೀಡಿದೆ.

5ಜಿ ಸೇವೆ ಆರಂಭಕ್ಕೆ ಸಿದ್ಧವಾಗಿರುವಂತೆ ಟೆಲಿಕಾಂ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ; 4ಜಿ ಡಾಟಾಗೂ 5ಜಿ ಡಾಟಾಗೂ ಇರುವ ವ್ಯತ್ಯಾಸ, ದರ ಎಷ್ಟು ?
5G
TV9kannada Web Team

| Edited By: Vivek Biradar

Aug 19, 2022 | 9:06 PM

ನವದೆಹಲಿ: ಭಾರತದಲ್ಲಿ ಸದ್ಯದಲ್ಲೇ 5ಜಿ (5G) ಸೇವೆ ಆರಂಭವಾಗಲಿದ್ದು, ಈ ಸಂಬಂಧ ಆರಂಭಕ್ಕೆ ಸಿದ್ಧವಾಗಿರುವಂತೆ ಟೆಲಿಕಾಂ ಕಂಪನಿಗಳಿಗೆ (Telecom Companies)  ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಆಗಸ್ಟ್​ 15 ರಂದು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಕೆಂಪುಕೋಟೆ (Red fort) ಮೇಲೆ ನಿಂತು ಮಾಡಿದ ಭಾಷಣದಲ್ಲಿ ಭಾರತದಲ್ಲಿ ಈಗಾಗಲೇ 5ಜಿ ತರಂಗಾಂತರಗಳನ್ನು ಹರಾಜು ಹಾಕಲಾಗಿದೆ. ಭಾರತದಲ್ಲಿ 5ಜಿ ಟೆಕ್ನಾಲಜಿಯ ಪ್ರಯೋಗ ಕೂಡ ಯಶಸ್ವಿಯಾಗಿದೆ. ಭಾರತದಲ್ಲಿ ಸದ್ಯದಲ್ಲೇ 5ಜಿ ಟೆಕ್ನಾಲಜಿಯ ಸೇವೆಗಳು ಆರಂಭವಾಗಲಿವೆ ಎಂದು ಹೇಳಿದ್ದಾರೆ.

4ಜಿ ಡಾಟಾಗೂ 5ಜಿ ಡಾಟಾಗೂ ಇರುವ ವ್ಯತ್ಯಾಸ ಏನು?

ಸದ್ಯ ಜಾಗತಿಕ ಮಟ್ಟದಲ್ಲಿ 4ಜಿ ಒಂದು ಜಿಬಿ ಡಾಟಾಗೆ 17 ಡಾಲರ್ ಖರ್ಚು ಮಾಡಬೇಕಾಗಿದೆ. 5ಜಿ ಒಂದು ಜಿಬಿ ಡಾಟಾಗೆ 13 ಡಾಲರ್ ಖರ್ಚು ಮಾಡಬೇಕಾಗಿದೆ.

1. ಆಮೆರಿಕಾದಲ್ಲಿ ಸರಾಸರಿ ಒಂದು ತಿಂಗಳ ಆನ್ ಲಿಮಿಟೆಡ್‌ ಸರಾಸರಿ 4ಜಿ ಡಾಟಾಗೆ 40 ಡಾಲರ್ ಖರ್ಚು ಮಾಡಬೇಕು. 5ಜಿ ಡಾಟಾಗೆ 58 ಡಾಲರ್ ಖರ್ಚು ಮಾಡಬೇಕು.

2. ಸ್ವಿಟರ್ಜಲೆಂಡ್ ನಲ್ಲಿ ಸನ್ ರೈಸರ್‌ ಕಂಪನಿಯು ಒಂದು ಜಿಬಿ 4ಜಿ ಡಾಟಾಗೆ 35 ಡಾಲರ್ ಖರ್ಚು ಮಾಡಬೇಕು. ಅದೇ 5ಜಿ ಒಂದು ಜಿಬಿ ಡಾಟಾಗೆ 55 ಡಾಲರ್ ಖರ್ಚು ಮಾಡಬೇಕು.

3. ಇಂಗ್ಲೆಂಡ್ ನಲ್ಲಿ ಇಇ ಎಂಬ ಟೆಲಿಕಾಂ ಕಂಪನಿಯಿಂದ 4ಜಿ ಡಾಟಾಗೆ 3 ಡಾಲರ್ ವೆಚ್ಚ ಮಾಡಬೇಕು, ಆದರೇ, 5ಜಿ ಡಾಟಾ ಒಂದೂವರೆ ಡಾಲರ್ ಗೆ ಸಿಗುತ್ತೆ.

4. ದಕ್ಷಿಣ ಕೊರಿಯಾದಲ್ಲೂ 5ಜಿ ಅಗ್ಗವಾಗಿ ಸಿಗುತ್ತಿದೆ. ದಕ್ಷಿಣ ಕೊರಿಯಾದಲ್ಲಿ 4ಜಿ ಒಂದು ಜಿಬಿ ಡಾಟಾಗೆ 7 ಡಾಲರ್ ವೆಚ್ಚ ಮಾಡಬೇಕು, ಅದೇ 5ಜಿ ಒಂದು ಜಿಬಿ ಡಾಟಾ 0.32 ಡಾಲರ್ ಗೆ ಸಿಗುತ್ತೆ.

5ಜಿ ಡಾಟಾವೇ ಕಡಿಮೆ ಬೆಲೆಗೆ ಸಿಗಲು ಕಾರಣವೇನೆಂದರೇ, 5ಜಿ ಅತ್ಯಂತ ವೇಗವಾಗಿ ಡೌನ್ ಲೋಡ್ ಮತ್ತು ಅಪ್ ಲೋಡ್ ಆಗುತ್ತೆ. ಇದರಿಂದ ಡಾಟಾ ಬೇಗ ಖಾಲಿಯಾಗುತ್ತೆ, 5ಜಿ ಡಾಟಾಗೆ ಹೆಚ್ಚಿನ ಬೇಡಿಕೆ ಇರುತ್ತೆ. ಹೆಚ್ಚಿನ ಡಾಟಾ ಪ್ಯಾಕ್ ಮಾರಾಟವಾಗುವುದರಿಂದ ಟೆಲಿಕಾಂ ಕಂಪನಿಗಳಿಗೆ ಹೆಚ್ಚಿನ ಹಣ ಹರಿದು ಬರುತ್ತೆ. ಬೆಲೆ ಸ್ಪರ್ಧಾತ್ಮಕವಾಗಿ ಇರಲಿ ಎಂಬ ಕಾರಣದಿಂದ ಟೆಲಿಕಾಂ ಕಂಪನಿಗಳು 5ಜಿ ಡಾಟಾದ ಬೆಲೆಯನ್ನು ಇಳಿಕೆ ಮಾಡಿವೆ.

4ಜಿ ಡಾಟಾಗೆ ಹೋಲಿಸಿದರೇ, ಗ್ರಾಹಕರು ಬಳಸುವ 5ಜಿ ಡಾಟಾದ ಬೆಲೆಯಲ್ಲಿ ಏರಿಕೆಯಾಗುತ್ತಾ?

ಭಾರತದಲ್ಲಿ 5ಜಿ ಡಾಟಾ ಪ್ಯಾಕ್ ಬೆಲೆ ಎಷ್ಟಿರುತ್ತೆ ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಇದೆ. ಭಾರತದಲ್ಲಿ 5ಜಿ ಡಾಟಾದ ಬೆಲೆಯ ಬಗ್ಗೆ ಎರಡು ಸಾಧ್ಯತೆಗಳಿವೆ. ಮೊದಲನೇಯದಾಗಿ 5ಜಿ ಡಾಟಾಗೆ ಟೆಲಿಕಾಂ ಕಂಪನಿಗಳು ಫ್ರೀಮಿಯಂ ದರವನ್ನು ನಿಗದಿ ಮಾಡಬಹುದು, ಅಂದರೇ, 4ಜಿ ಗಿಂತ 5ಜಿ ಡಾಟಾ ಪ್ಯಾಕ್ ಬೆಲೆ ಸ್ಪಲ್ಪ ಹೆಚ್ಚಿರುತ್ತೆ. ಭಾರತದಲ್ಲಿ 4ಜಿ ಗೆ ಹೋಲಿಸಿದರೇ, 5ಜಿ ದರವು ಶೇ.20 ರಿಂದ 30 ರಷ್ಟು ಹೆಚ್ಚು ನಿಗದಿ ಮಾಡುವ ಸಾಧ್ಯತೆ ಇದೆ.

ಸದ್ಯ ಬಳಸುತ್ತಿರುವ 4ಜಿ ಮೊಬೈಲ್ ಹ್ಯಾಂಡ್ ಸೆಟ್​ಗಳನ್ನೇ 5ಜಿ ಗೂ ಬಳಸಲು ಸಾಧ್ಯವೇ, ಆಗ್ಗಾಗ್ಗೆ ಸುಲಭವಾಗಿ 5ಜಿ ಅನ್ನು ರೀಚಾರ್ಜ್ ಮಾಡಿಸಿಕೊಳ್ಳಬಹುದೇ?

ಭಾರತದಲ್ಲಿ 4 ಜಿ ಆರಂಭವಾದಾಗ, 3ಜಿ ಮೊಬೈಲ್ ಬಳಕೆ ಮಾಡುತ್ತಿದ್ದ ಗ್ರಾಹಕರಿಗೆ ಅದೇ ಹ್ಯಾಂಡ್ ಸೆಟ್​ಗಳ ಸೆಟ್ಟಿಂಗ್​ನಲ್ಲೇ 4ಜಿ ಗೆ ವರ್ಗಾವಣೆ ಆಗಲು ಅವಕಾಶ ಕೊಡಲಾಯಿತು. ಇದು ಬಹಳ ಚೆನ್ನಾಗಿ ವರ್ಕ್ ಔಟ್ ಆಯಿತು. ಈಗಲೂ ಅದೇ ರೀತಿ 4ಜಿ ಹ್ಯಾಂಡ್ ಸೆಟ್ ಬಳಸುತ್ತಿರುವ ಗ್ರಾಹಕರಿಗೆ ಅದೇ ಹ್ಯಾಂಡ್ ಸೆಟ್​ನಲ್ಲೇ 5ಜಿ ಗೆ ವರ್ಗಾವಣೆ ಆಗಲು ಅವಕಾಶ ಕೊಡಬಹುದು.

ಏರ್​ಟೆಲ್ ಕಂಪನಿಯ ಸಿಟಿಓ ರಣದೀಪ್‌ ಹೇಳುವ ಪ್ರಕಾರ, 5ಜಿ ದರಗಳು 4ಜಿ ಪ್ರೀಪೇಯ್ಡ್ ಪ್ಲ್ಯಾನ್ ದರಗಳಂತೆಯೇ ಇರಲಿವೆ ಎಂದಿದ್ದಾರೆ. ವೋಡಾಪೋನ್ ಐಡಿಯಾ ಕಂಪನಿಯು 4ಜಿಗೆ ಹೋಲಿಸಿದರೇ, 5ಜಿ ದರಗಳು ಸ್ಪಲ್ಪ ಹೆಚ್ಚಿಗೆ ಇರಲಿವೆ ಎಂದಿದೆ.

ಭಾರತೀಯರು 5ಜಿ ಅಪ್ ಗ್ರೇಡ್ ಆಗಲು ಸಿದ್ದವಾಗಿದ್ದಾರೆಯೇ ಎಂಬ ಬಗ್ಗೆ ಹೂಕ್ಲಾ ಸಂಸ್ಥೆಯು 200 ಜನರನ್ನು ಸಂದರ್ಶಿಸಿ ಸರ್ವೇ ನಡೆಸಿದೆ. ಇದರ ಪ್ರಕಾರ, ಭಾರತದಲ್ಲಿ ಶೇ.89 ರಷ್ಟು ಸ್ಮಾರ್ಟ್ ಪೋನ್ ಬಳಕೆದಾರರು 5ಜಿ ಅಪ್ ಗ್ರೇಡ್ ಆಗಲು ಸಿದ್ದವಾಗಿದ್ದಾರೆ.

ಶೇ.48 ರಷ್ಟು ಜನರು 5ಜಿ ಆರಂಭವಾಗುತ್ತಿದ್ದಂತೆಯೇ ಅಪ್ ಗ್ರೇಡ್ ಆಗಲು ರೆಡಿಯಾಗಿದ್ದಾರೆ. ಜೊತೆಗೆ ಅಗತ್ಯಬಿದ್ದರೇ, ಟೆಲಿಕಾಂ ಕಂಪನಿಗಳನ್ನು ಬದಲಾಯಿಸಿ 5ಜಿ ಬಳಕೆಗೆ ಸಿದ್ದವಾಗಿದ್ದಾರೆ. ಶೇ.2ಕ್ಕಿಂತ ಕಡಿಮೆ ಜನರು ಮಾತ್ರ 5ಜಿ ಗೆ ಅಪ್ ಗ್ರೇಡ್ ಆಗಲು ಸಿದ್ದವಿಲ್ಲ.

Follow us on

Related Stories

Most Read Stories

Click on your DTH Provider to Add TV9 Kannada