ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿದೆ ಹಾನರ್ 70 5G ಸ್ಮಾರ್ಟ್‌ಫೋನ್: ಏನಿದೆ ಫೀಚರ್ಸ್?, ಬೆಲೆ ಎಷ್ಟು?
ಈ ಬಾರಿ ಹಾನರ್ ಕಂಪನಿ ತನ್ನ ಬಹುನಿರೀಕ್ಷಿತ ಹಾನರ್ 70 5ಜಿ (Honor 70 5G) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಟೆಕ್ ಪ್ರಿಯರ ಹುಬ್ಬೇರುವಂತೆ ಮಾಡಿರುವ ಈ ಸ್ಮಾರ್ಟ್ಫೋನ್ನಲ್ಲಿ ಬಲಿಷ್ಠವಾದ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್ ನೀಡಲಾಗಿದೆ.
ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಅಪರೂಪಕ್ಕೆ ಆಕರ್ಷಕ ಮೊಬೈಲ್ಗಳನ್ನು ಪರಿಚಯಿಸುವ ಪ್ರಸಿದ್ಧ ಹಾನರ್ (Honor) ಕಂಪನಿ ಇದೀಗ ನೂತನ ಫೋನ್ನೊಂದಿಗೆ ಮತ್ತೆ ಬಂದಿದೆ. ಈ ಬಾರಿ ಹಾನರ್ ಕಂಪನಿ ತನ್ನ ಬಹುನಿರೀಕ್ಷಿತ ಹಾನರ್ 70 5ಜಿ (Honor 70 5G) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಟೆಕ್ ಪ್ರಿಯರ ಹುಬ್ಬೇರುವಂತೆ ಮಾಡಿರುವ ಈ ಸ್ಮಾರ್ಟ್ಫೋನ್ನಲ್ಲಿ ಬಲಿಷ್ಠವಾದ ಆಕ್ಟಾ–ಕೋರ್ ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್ ನೀಡಲಾಗಿದೆ. ಇದರಲ್ಲದೆ ಸೋನಿ ಸೆನ್ಸಾರ್ ಹೊಂದಿರುವ ಆಕರ್ಷಕ ಕ್ಯಾಮೆರಾ ನೀಡಲಾಗಿದ್ದು ಬಲಿಷ್ಠ ಬ್ಯಾಟರಿ, ಫಾಸ್ಟ್ ಚಾರ್ಜರ್ ಸೌಲಭ್ಯ ಕೂಡ ಇದೆ. ಹಾಗಾದರೆ ಇದರ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.
- ಹಾನರ್ 70 5G ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಇನ್ನಷ್ಟೆ ಬರಬೇಕಿದೆ. ಸದ್ಯಕ್ಕೆ ಮಲೇಷ್ಯಾದಲ್ಲಿ ರಿಲೀಸ್ ಆಗಿರುವ ಇದರ 8GB RAM + 256GB ಸ್ಟೋರೇಜ್ ಮಾದರಿಗೆ MYR 1,999, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 35,600ರೂ. ಎನ್ನಬಹುದು.
- ಈ ಸ್ಮಾರ್ಟ್‌ಫೋನ್ ಫೀಚರ್ಸ್ ಬಗ್ಗೆ ನೋಡುವುದಾದರೆ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದ್ದು 120Hz ರಿಫ್ರೆಶ್ ರೇಟ್ ನೀಡಲಾಗಿದೆ.
- ಆಕ್ಟಾ–ಕೋರ್ ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಇದು ಆಂಡ್ರಾಯ್ಡ್ 12-ಆಧಾರಿತ ಮ್ಯಾಜಿಕ್ UI 6.1 ನಲ್ಲಿ ಕಾರ್ಯನಿರ್ವಹಿಸುತ್ತದೆ.
- ಹಾನರ್ 70 5G ಸ್ಮಾರ್ಟ್ಫೋನ್ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಅಳವಡಿಸಲಾಗಿದೆ. ಇದರಲ್ಲಿರುವ ಮುಖ್ಯ ಕ್ಯಾಮೆರಾ 54 ಮೆಗಾಪಿಕ್ಸೆಲ್ನಲ್ಲಿದೆ. ಇದು ಸೋನಿ IMX800 ಸೆನ್ಸಾರ್ ಹೊಂದಿದೆ.
- ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಅಲ್ಟ್ರಾ–ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದರ ಜೊತೆಗೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
- 4,800mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು ಇದಕ್ಕೆ ತಕ್ಕಂತೆ 66W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಫೇಸ್ ಅನ್ಲಾಕ್ ಫೀಚರ್ಸ್ ಇದರಲ್ಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ v5.2, GPS, AGPS, OTG, USB ಟೈಪ್-C ಪೋರ್ಟ್ ನೀಡಲಾಗಿದೆ.
ಇದನ್ನೂ ಓದಿ
Published On - 12:30 pm, Sat, 20 August 22