Honor Magic 4 Series: 100W ಸೂಪರ್ ಫಾಸ್ಟ್ ಚಾರ್ಜರ್ನ ಹಾನರ್ ಫೋನ್ ಬಿಡುಗಡೆ
Honor Magic 4 Series ಫೋನ್‌ನಲ್ಲಿ 4600mAh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು 100W ವೈರ್ಡ್ ಮತ್ತು ವೈರ್‌ಲೆಸ್ ಸೂಪರ್‌ಡಾರ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.
Honor Magic 4 Series: ಮೊಬೈಲ್ ವರ್ಲ್ಡ್ ಕಾಂಗ್ರೆಸ್ನಲ್ಲಿ (Mobile World Congress) ಜನಪ್ರಿಯ ಫೋನ್ ತಯಾರಕ ಕಂಪೆನಿ ಹಾನರ್ ತನ್ನ ಹೊಸ ಹಾನರ್ ಮ್ಯಾಜಿಕ್ 4 ಸಿರೀಸ್ ಅನ್ನು ಬಿಡುಗಡೆ ಮಾಡಿದೆ. ಈ ಸಿರೀಸ್ನಲ್ಲಿ Honor Magic 4 ಮತ್ತು Honor Magic 4 Pro ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗಿದೆ. Honor Magic 4 Pro ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಯಲ್ 100 W ಸೂಪರ್ ಚಾರ್ಜಿಂಗ್ ತಂತ್ರಜ್ಞಾನವನ್ನು ನೀಡಲಾಗಿದೆ. ಈ ಫೋನ್ ಸ್ನಾಪ್‌ಡ್ರಾಗನ್ 8 ಜೆನ್ 1 ಪ್ರೊಸೆಸರ್ ಅನ್ನು ಹೊಂದಿರಲಿದೆ. ಹಾಗೆಯೇ ಫೋಟೋಶೂಟ್ ಹಾಗೂ ವೀಡಿಯೊ ರೆಕಾರ್ಡಿಂಗ್ಗಾಗಿ ಸುಧಾರಿತ ತಂತ್ರಜ್ಞಾನವನ್ನು ನೀಡಲಾಗಿದೆ. ಹಾಗಿದ್ರೆ ಹೊಸ ಹಾನರ್ ಸ್ಮಾರ್ಟ್ಫೋನ್ಗಳ ವಿಶೇಷತೆಗಳೇನು ನೋಡೋಣ…
Honor Magic 4 Pro: Honor Magic 4 Pro ಫೋನ್ 6.81 ಇಂಚಿನ ಫ್ಲೆಕ್ಸ್ OLED ಕ್ವಾಡ್ ಕರ್ವ್ ಡಿಸ್ಪ್ಲೇ ಹೊಂದಿದೆ. ಇದು 1213×2848 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರಲಿದೆ. ಫೋನ್ 120Hz ವರೆಗೆ ರಿಫ್ರೆಶ್ ರೇಟ್ ಹೊಂದಿದೆ. ಇನ್ನು ಈ ಫೋನ್‌ನಲ್ಲಿ 8 GB RAM ಮತ್ತು 256 GB ಆಂತರಿಕ ಸಂಗ್ರಹಣೆಯ ಅವಕಾಶ ಇರಲಿದೆ. Snapdragon 8 Gen 1 ಚಿಪ್‌ಸೆಟ್‌ನಿಂದ ಚಾಲಿತವಾಗುವ ಈ ಸ್ಮಾರ್ಟ್ಫೋನ್ GPU X ತಂತ್ರಜ್ಞಾನವನ್ನು ಹೊಂದಿರಲಿದೆ. ಈ ತಂತ್ರಜ್ಞಾನವು ಗೇಮ್ ಆಡುವವರಿಗೆ ವಿಭಿನ್ನ ಆನಂದವನ್ನು ನೀಡಲಿದೆ.
ಇನ್ನು ಈ ಸ್ಮಾರ್ಟ್ ಫೋನ್‌ನ ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಫ್ಲಿಕರ್ ಸಂವೇದಕದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಇದರಲ್ಲಿ ನೀಡಲಾಗಿದೆ. ಪ್ರೈಮರಿ ಕ್ಯಾಮೆರಾ 50 ಮೆಗಾಪಿಕ್ಸೆಲ್‌ಗಳಿದ್ದು, ಜೊತೆಗೆ 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 64 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ನೀಡಲಾಗಿದೆ. ಇದರ ಟೆಲಿಸ್ಕೋಪಿಕ್ ಲೆನ್ಸ್ 100x ಡಿಜಿಟಲ್ ಜೂಮ್ ಅನ್ನು ಬೆಂಬಲಿಸುತ್ತದೆ. ಸೆಲ್ಫಿಗಾಗಿ ಫೋನ್‌ನ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.
Honor Magic 4 Pro ಫೋನ್‌ನಲ್ಲಿ 4600mAh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು 100W ವೈರ್ಡ್ ಮತ್ತು ವೈರ್‌ಲೆಸ್ ಸೂಪರ್‌ಡಾರ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.
Honor Magic 4: Honor Magic 4 ಸ್ಮಾರ್ಟ್‌ಫೋನ್‌ನ ಡಿಸ್ಪ್ಲೇ ಸ್ವಲ್ಪ ಕಡಿಮೆ ರೆಸಲ್ಯೂಶನ್ ಹೊಂದಿದೆ. ಕ್ಯಾಮೆರಾ ಸೆಟಪ್‌ಗೆ ಸಂಬಂಧಿಸಿದಂತೆ, ಕಂಪನಿಯು ಈ ಫೋನ್‌ನಲ್ಲಿ ಎರಡು 50-ಮೆಗಾಪಿಕ್ಸೆಲ್ ಕ್ಯಾಮೆರಾಗಳೊಂದಿಗೆ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಅನ್ನು ನೀಡುತ್ತಿದೆ. ಮುಂಭಾಗದಲ್ಲಿ, ಸೆಲ್ಫಿಗಾಗಿ 12-ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿರುತ್ತದೆ. ಹಾಗೆಯೇ 66W ವೇಗದ ಚಾರ್ಜಿಂಗ್‌ನೊಂದಿಗೆ 4800mAh ಬ್ಯಾಟರಿಯನ್ನು ಇದರಲ್ಲಿ ನೀಡಲಾಗಿದೆ.
Honor Magic 4 Pro ಫೋನಿನ ಬೆಲೆ 1099 ಯುರೋ ಅಂದರೆ ಸುಮಾರು 93,000 ರೂಪಾಯಿಗಳು. Honor Magic 4 ನ ಆರಂಭಿಕ ಬೆಲೆ 899 ಯುರೋ ಅಂದರೆ ಸುಮಾರು 76,000 ರೂಪಾಯಿಗಳು. ಇದಾಗ್ಯೂ ಈ ಸ್ಮಾರ್ಟ್ಫೋನ್ ಇನ್ನೂ ಕೂಡ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿಲ್ಲ. ಸದ್ಯ ಮೊಬೈಲ್ ವರ್ಲ್ಡ್ ಕಾಂಗ್ರೆಸ್ನಲ್ಲಿ ಬಿಡುಗಡೆಯಾಗಿರುವ Honor Magic 4 ಸಿರೀಸ್ ಶೀಘ್ರದಲ್ಲೇ ಭಾರತೀಯ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?
(Honor Magic 4 Series Price in India, Specifications)