OnePlus Nord CE 2 Lite: ಒನ್‌ಪ್ಲಸ್ ಕಂಪನಿಯ ಈ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಇಂದೇ ಖರೀದಿಸಿ
ಒನ್‌ಪ್ಲಸ್ ಕಂಪನಿಯ ಅಧಿಕೃತ ವೆಬ್‌ಸೈಟ್ ಸೇರಿದಂತೆ ಇ ಕಾಮರ್ಸ್ ತಾಣವಾದ ಅಮೆಜಾನ್, ರಿಲಯನ್ಸ್ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ನಾರ್ಡ್ CE 2 5G ಫೋನಿನ ಬೆಲೆಯಲ್ಲಿ 1,000ರೂ. ಇಳಿಕೆ ಮಾಡಲಾಗಿದೆ.
ಒನ್‌ಪ್ಲಸ್ (OnePlus) ಕಂಪನಿ ಈ ವರ್ಷ ಅನೇಕ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಈ ಪೈಕಿ ಕಳೆದ ಏಪ್ರಿಲ್ನಲ್ಲಿ ಬಿಡುಗಡೆ ಮಾಡಿದ ಒನ್‌ಪ್ಲಸ್ ನಾರ್ಡ್ ಸಿಇ 2 ಲೈಟ್ 5ಜಿ (OnePlus Nord CE 2 Lite 5G) ಫೋನ್ ಕೂಡ ಒಂದು. ಅತ್ಯುತ್ತಮ ಡಿಸೈನ್, ಭರ್ಜರಿ ಫೀಚರ್ಗಳಿಂದ ತುಂಬಿರುವ ಈ ಸ್ಮಾರ್ಟ್‌ಫೋನ್ (Smartphone) ಸ್ನ್ಯಾಪ್‌ಡ್ರಾಗನ್ 695 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. 5,000mAh ಬ್ಯಾಟರಿ ಸಾಮರ್ಥ್ಯಕ್ಕೆ ಹೇಳಿ ಮಾಡಿಸಿರುವ 33W ಸೂಪರ್VOOC ವೇಗದ ಚಾರ್ಜಿಂಗ್ ಕೂಡ ನೀಡಲಾಗಿದೆ. ಇದೀಗ ಈ ಫೋನಿನ ಬೆಲೆಯಲ್ಲಿ ದಿಢೀರ್ ಇಳಿಕೆ ಮಾಡಲಾಗಿದೆ.
ಒನ್‌ಪ್ಲಸ್ ಕಂಪನಿಯ ಅಧಿಕೃತ ವೆಬ್‌ಸೈಟ್ ಸೇರಿದಂತೆ ಇ ಕಾಮರ್ಸ್ ತಾಣವಾದ ಅಮೆಜಾನ್, ರಿಲಯನ್ಸ್ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ನಾರ್ಡ್ CE 2 5G ಫೋನಿನ ಬೆಲೆಯಲ್ಲಿ 1,000ರೂ. ಇಳಿಕೆ ಮಾಡಲಾಗಿದೆ. ಈ ಮೂಲಕ ಇದೀಗ ಇದರ 6GB RAM ಮತ್ತು 128GB ಸ್ಟೋರೇಜ್ ಬೇಸ್ ಮಾಡೆಲ್‌ಗೆ 19,999 ರೂ. ಬದಲಾಗಿ 18,999 ರೂ. ಗೆ ಮಾರಾಟ ಆಗುತ್ತಿದೆ. ಅಂತೆಯೆ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ ಈ 20,999 ರೂ. ಆಗಿದೆ. ಇದರ ಜೊತೆಗೆ ನೀವು ಎಸ್ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 1,500 ರೂ. ರಿಯಾಯಿತಿ ಸಿಗಲಿದೆ.
ಒನ್‌ಪ್ಲಸ್ ನಾರ್ಡ್ CE 2 ಲೈಟ್ 5G ಸ್ಮಾರ್ಟ್‌ಫೋನ್ 1,080 x 2,412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.59 ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ವಿಶೇಷವಾಗಿ ಇದರಲ್ಲಿ ಗೇಮಿಂಗ್ಗಾಗಿ 240Hz ರೀಫ್ರೆಶ್ ರೇಟ್ ನೀಡಲಾಗಿದೆ. ಇದಕ್ಕೆ ತಕ್ಕಂತೆ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗ್ನ್ 695 SoC ಪ್ರೊಸೆಸರ್ ಪ್ರೊಸೆಸರ್ ಬಲವನ್ನು ಪಡೆದಿದೆ. ಆಂಡ್ರಾಯ್ಡ್ 12 ಓಎಸ್ನಿಂದ ಕಾರ್ಯನಿರ್ವಹಿಸುತ್ತದೆ.
ಆಕರ್ಷಕವಾದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಕೂಡ ನೀಡಲಾಗಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಇನ್ನು ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಯುಎಸ್‌ಬಿ ಟೈಪ್–ಸಿ ಮೂಲಕ 33W ಸೂಪರ್VOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈಫೈ 6, ಬ್ಲೂಟೂತ್ 5.2, NFC, GPS ಮತ್ತು A-GPS ಸೇರಿವೆ. ಇದಲ್ಲದೆ ಅಕ್ಸಿಲೆರೊಮೀಟರ್, ಗೈರೊಸ್ಕೋಪ್, ಆಂಬಿಯೆಂಟ್ ಲೈಟ್ ಸೆನ್ಸರ್, ಪ್ರಾಕ್ಸಿಮಿಟಿ ಸೆನ್ಸಾರ್ ಸೇರಿದಂತೆ ಇತ್ತೀಚೆಗಿನ ಎಲ್ಲ ಹೊಸ ಆಯ್ಕೆಗಳು ಇದರಲ್ಲಿದೆ.