Vivo V25 Pro: ಫಾಸ್ಟ್ ಚಾರ್ಜರ್, ಬೊಂಬಾಟ್ ಕ್ಯಾಮೆರಾ: ಭಾರತದಲ್ಲಿ ವಿವೋ V25 ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆ
ವಿವೋ ಕಂಪನಿ ಇದೀಗ ಭಾರತದಲ್ಲಿ V25 ಸರಣಿಯ ಹೊಸ ವಿವೋ V25 ಪ್ರೊ ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಆಕರ್ಷಕ ಫೀಚರ್ಗಳಿಂದ ಕೂಡಿರುವ ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 1300 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಪ್ರಸಿದ್ಧ ವಿವೋ (VIvo) ಕಂಪನಿ 2022ರ ಮೊದಲ ಕ್ವಾರ್ಟರ್ನಲ್ಲಿ ಅತಿ ಹೆಚ್ಚು ಸ್ಮಾರ್ಟ್ಫೋನ್ಗಳನ್ನು (Smartphone) ಬಿಡುಗಡೆ ಮಾಡಿತ್ತು. ಇದೀಗ ಎರಡನೇ ಕ್ವಾರ್ಟರ್ನಲ್ಲೂ ವಿವೋ ಫೋನ್ಗಳ ಬಿಡುಗಡೆ ಕಾರ್ಯಕ್ರಮ ಮುಂದುವರೆದಿದೆ. ಎರಡು ದಿನಗಳ ಹಿಂದೆಯಷ್ಟೆ ಜಾಗತಿಕ ಮಾರುಕಟ್ಟೆಗೆ ತನ್ನ Y ಸರಣಿಯ ವಿವೋ Y77e 5G ಫೋನನ್ನು ಬಿಡುಗಡೆ ಮಾಡಿತ್ತು. ಇದೀಗ ಭಾರತದಲ್ಲಿ V25 ಸರಣಿಯ ಹೊಸ ವಿವೋ ವಿ25 ಪ್ರೊ (VIvo V25 Pro) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಆಕರ್ಷಕ ಫೀಚರ್ಗಳಿಂದ ಕೂಡಿರುವ ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 1300 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಬಲಿಷ್ಠ ಬ್ಯಾಟರಿ, ಅತ್ಯುತ್ತಮ ಕ್ಯಾಮೆರಾ ಕೂಡ ನೀಡಲಾಗಿದೆ. ಹಾಗಾದ್ರೆ ಈ ಫೋನ್ನ ಬೆಲೆ ಎಷ್ಟು?, ಏನೆಲ್ಲ ವಿಶೇಷತೆಗಳಿವೆ ಎಂಬ ಸಂಪೂರ್ಣ ಮಾಹಿತಿ ನೋಡೋಣ.
- ವಿವೋ V25 ಪ್ರೊ ಸ್ಮಾರ್ಟ್‌ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ 8GB RAM + 128GB ಸ್ಟೋರೇಜ್ಗೆ 35,999ರೂ. ನಿಗದಿ ಮಾಡಲಾಗಿದೆ. 12GB RAM + 256GB ಸ್ಟೋರೇಜ್ ಸಾಮರ್ಥ್ಯಕ್ಕೆ 39,999ರೂ. ಇದೆ.
- ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್, ವಿವೊ ಆನ್‌ಲೈನ್ ಸ್ಟೋರ್ ಮತ್ತು ಇತರ ರೀಟೈಲ್ ಚಾನೆಲ್‌ಗಳ ಮೂಲಕ ಆಗಸ್ಟ್ 25 ರಿಂದ ಖರೀದಿಗೆ ಸಿಗಲಿದೆ.
- ವಿವೋ ಕಂಪನಿ ವಿಶೇಷವಾಗಿ ಪ್ರಿ ಬುಕ್ಕಿಂಗ್ ಅವಕಾಶ ಕೂಡ ಮಾಡಿಕೊಟ್ಟಿದ್ದು, ಈ ಮೂಲಕ 3,500ರೂ. ರಿಯಾಯಿತಿ ಪಡೆದುಕೊಳ್ಳಬಹುದು. ಇದು HDFC ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್ ಮತ್ತು EMI ವಹಿವಾಟುಗಳಲ್ಲಿ ಲಭ್ಯವಾಗಲಿದೆ. ಎಕ್ಸ್‌ಚೇಂಜ್ ಆಫರ್ 3,000 ರೂ. ವರೆಗೆ ಅವಕಾಶ ನೀಡಲಾಗಿದೆ.
- ವಿವೋ V25ಪ್ರೊ ಸ್ಮಾರ್ಟ್‌ಫೋನ್ 6.56-ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಇದು 2,376×1,080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ.
- ಮೀಡಿಯಾ ಟೆಕ್ ಡೈಮೆನ್ಸಿಟಿ 1300 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಫನ್‌ಟಚ್ OS 12 ಬೆಂಬಲವನ್ನು ಪಡೆದುಕೊಂಡಿದೆ.
- ಈ ಸ್ಮಾರ್ಟ್ಫೋನ್ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಇದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ವೈಡ್–ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ.
- ಮುಂಭಾಗ ಕೂಡ ಆಕರ್ಷಕವಾದ 32-ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದು ಐ ಆಟೋಫೋಕಸ್ ಮತ್ತು f/2.45 ಲೆನ್ಸ್ ಅನ್ನು ಒಳಗೊಂಡಿರುವುದು ವಿಶೇಷ.
- 66W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿರುವ 4,830mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು ಅತ್ಯಂತ ವೇಗವಾಗಿ ಮೊಬೈಲ್ ಅನ್ನು ಚಾರ್ಜ್ ಮಾಡುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್–ಬ್ಯಾಂಡ್ Wi-Fi, ಬ್ಲೂಟೂತ್ v5.2, GPS ಮತ್ತು USB ಟೈಪ್-C ಪೋರ್ಟ್ ಅನ್ನು ಹೊಂದಿದೆ.
ಇದನ್ನೂ ಓದಿ
Published On - 11:49 am, Thu, 18 August 22