Vivo Y77e 5G: ವಿವೋ Y77e 5G ಸ್ಮಾರ್ಟ್​ಫೋನ್ ಬಿಡುಗಡೆ: ಇದು ಬಜೆಟ್ ಬೆಲೆಯ 5G ಫೋನ್

ಇದೀಗ ಜಾಗತಿಕ ಮಾರುಕಟ್ಟೆಗೆ ತನ್ನ Y ಸರಣಿಯಲ್ಲಿ ವಿವೋ ಹೊಸ ಸ್ಮಾರ್ಟ್​ಫೋನ್​ವೊಂದನ್ನು ಪರಿಚಯಿಸಿದೆ. ಅದುವೇ ವಿವೋ Y77e 5G.

Vivo Y77e 5G: ವಿವೋ Y77e 5G ಸ್ಮಾರ್ಟ್​ಫೋನ್ ಬಿಡುಗಡೆ: ಇದು ಬಜೆಟ್ ಬೆಲೆಯ 5G ಫೋನ್
Vivo Y77e 5G
Follow us
TV9 Web
| Updated By: Vinay Bhat

Updated on:Aug 14, 2022 | 2:31 PM

2022ರ ಮೊದಲ ಕ್ವಾರ್ಟರ್​​ನಲ್ಲಿ ಅತಿ ಹೆಚ್ಚು ಸ್ಮಾರ್ಟ್​​ಫೋನ್​ಗಳನ್ನು (Smartphone) ಬಿಡುಗಡೆ ಮಾಡಿದ್ದ ಕಂಪನಿ ಎಂದರೆ ಅದು ವಿವೋ (Vivo) ಎನ್ನಬಹುದು. ತಿಂಗಳಿಗೆ ಎರಡು ಅಥವಾ ಮೂರು ಮೊಬೈಲ್​ಗಳನ್ನು ವಿವೋ ಬಿಡುಗಡೆ ಮಾಡುತ್ತಲೇ ಇತ್ತು. ಇದೀಗ ಎರಡನೇ ಕ್ವಾರ್ಟರ್​ನಲ್ಲೂ ವಿವೋ ಫೋನ್​ಗಳ ಬಿಡುಗಡೆ ಕಾರ್ಯಕ್ರಮ ಮುಂದುವರೆದಿದೆ. ಇದೀಗ ಜಾಗತಿಕ ಮಾರುಕಟ್ಟೆಗೆ ತನ್ನ Y ಸರಣಿಯಲ್ಲಿ ವಿವೋ ಹೊಸ ಸ್ಮಾರ್ಟ್​ಫೋನ್​ವೊಂದನ್ನು ಪರಿಚಯಿಸಿದೆ. ಅದುವೇ ವಿವೋ ವೈ77ಇ 5ಜಿ (Vivo Y77e 5G). ಯಾವುದೇ ಸುದ್ದಿಯಿಲ್ಲದೆ ದಿಢೀರ್ ಆಗಿ ಲಾಂಚ್ ಆಗಿರುವ ಈ ಫೋನ್​ನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್‌, ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌, ಬಲಿಷ್ಠ ಬ್ಯಾಟರಿ ಸೇರಿದಂತೆ ಆಕರ್ಷಕ ಫೀಚರ್​ಗಳಿವೆ. ಇದರ ಬೆಲೆ ಕೂಡ ದುಬಾರಿಯೇನಿಲ್ಲ.

  1. ಪ್ರಸ್ತುತ ಚೀನಾದಲ್ಲಿ ಲಭ್ಯವಿರುವ ವಿವೋ Y77e 5G ಸ್ಮಾರ್ಟ್‌ಫೋನಿನ 8GB RAM + 128GB ಸ್ಟೋರೇಜ್ ಮಾದರಿಯ ಆಯ್ಕೆಯು CNY 1,699, ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 20,000ರೂ. ಎನ್ನಬಹುದು.
  2. ವಿವೋ Y77e 5G 6.58-ಇಂಚಿನ ಫುಲ್‌ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080×2,408 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದ್ದು, 60Hz ರಿಫ್ರೆಶ್‌ ರೇಟ್‌ ಅನ್ನು ಒಳಗೊಂಡಿದೆ.
  3. ಆಕ್ಟಾಕೋರ್ 6nm ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್‌ 12 ಆಧಾರಿತ OriginOS ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ Mali G57 GPU ಸಪೋರ್ಟ್‌ ಅನ್ನು ಹೊಂದಿದೆ.
  4. ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ ಸೆಲ್ಫಿಗಳು ಮತ್ತು ವಿಡಿಯೋ ಚಾಟ್‌ಗಳಿಗಾಗಿ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
  5. ಕ್ಯಾಮೆರಾ ಫೀಚರ್​ಗಳಲ್ಲಿ ಸೂಪರ್ HDR, ಮಲ್ಟಿಲೇಯರ್ ಭಾವಚಿತ್ರ, ಸ್ಲೋ ಮೋಷನ್‌, ಪನೋರಮಾ, ಲೈವ್ ಫೋಟೋ ಮತ್ತು ಸೂಪರ್ ನೈಟ್ ಮೋಡ್ ಫೀಚರ್ಸ್‌ ಅನ್ನು ಅಳವಡಿಸಲಾಗಿದೆ.
  6. ವಿವೋ Y77e 5G ಸ್ಮಾರ್ಟ್‌ಫೋನ್‌ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ಫ್ಲ್ಯಾಷ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತಿದ್ದು ಸಿಂಗಲ್‌ ಚಾರ್ಜ್‌ನಲ್ಲಿ ಬ್ಯಾಟರಿಯು 25 ದಿನಗಳವರೆಗೆ ಸ್ಟ್ಯಾಂಡ್‌ಬೈ ಸಮಯವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Published On - 2:31 pm, Sun, 14 August 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್