- Kannada News Photo gallery Realme 9i 5G in India at a special launch event at 11:30AM on August 18, 2022 check price and specs
Realme 9i 5G: ರಿಯಲ್ ಮಿ ಹೊಸ ಫೋನ್ ಬಿಡುಗಡೆಗೆ ದಿನಗಣನೆ: ಯಾವುದು?, ಏನು ಫೀಚರ್ಸ್?
ರಿಯಲ್ ಮಿ ಕಂಪನಿ ಇದೇ ತಿಂಗಳು ಆಗಸ್ಟ್ 18 ರಂದು ಭಾರತದಲ್ಲಿ ತನ್ನ ಹೊಸ ರಿಯಲ್ ಮಿ 9i ಸ್ಮಾರ್ಟ್ ಫೋನನ್ನು ಅನಾವರಣ ಮಾಡುತ್ತಿದೆ. ಈ 5G ಫೋನ್ ಬೆಳಗ್ಗೆ 11:30 ಕ್ಕೆ ವಿಶೇಷ ಕಾರ್ಯಕ್ರಮದಲ್ಲಿ ಲಾಂಚ್ ಆಗಲಿದೆ.
Updated on:Aug 15, 2022 | 12:34 PM

ಎರಡನೇ ಕ್ವಾರ್ಟರ್ ನಲ್ಲಿ ಪ್ರಸಿದ್ಧ ರಿಯಲ್ ಮಿ ಸಂಸ್ಥೆ ತನ್ನ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಿರುವ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಈ ಹಿಂದೆ ತಿಂಗಳಿಗೆ ಕನಿಷ್ಠ ಎರಡು ಮೊಬೈಲ್ ಗಳನ್ನು ಅನಾವರಣ ಮಾಡುತ್ತಿದ್ದ ಕಂಪನಿ ಈಗೀಗ ಅಪರೂಪಕ್ಕೆ ಒಂದೊಂದು ಫೋನ್ ಗಳನ್ನು ರಿಲೀಸ್ ಮಾಡುತ್ತಿದೆ. ಹೀಗಿರುವಾಗ ರಿಯಲ್ ಮಿ ಭಾರತದಲ್ಲಿ ಹೊಸ ಫೋನೊಂದನ್ನ ಬಿಡುಗಡೆ ಮಾಡುವ ಕುರಿತು ಮಾಹಿತಿ ನೀಡಿದೆ.

ರಿಯಲ್ ಮಿ ಕಂಪನಿ ಇದೇ ತಿಂಗಳು ಆಗಸ್ಟ್ 18 ರಂದು ಭಾರತದಲ್ಲಿ ತನ್ನ ಹೊಸ ರಿಯಲ್ ಮಿ 9i ಸ್ಮಾರ್ಟ್ ಫೋನನ್ನು ಅನಾವರಣ ಮಾಡುತ್ತಿದೆ. ಈ 5G ಫೋನ್ ಬೆಳಗ್ಗೆ 11:30 ಕ್ಕೆ ವಿಶೇಷ ಕಾರ್ಯಕ್ರಮದಲ್ಲಿ ಲಾಂಚ್ ಆಗಲಿದೆ.

ಈ ಫೋನಿನ ಬಗ್ಗೆ ಖಚಿತ ಮಾಹಿತಿ ತಿಳಿದುಬಂದಿಲ್ಲ. ಆದರೆ, ಮೂಲಗಳ ಪ್ರಕಾರ ಇದು 6.6-ಇಂಚಿನ ಫುಲ್ HD+ LCD ಡಿಸ್ ಪ್ಲೇಯನ್ನು ಹೊಂದಿರಲಿದೆ. ಈ ಡಿಸ್ ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿರಲಿದೆ ಎನ್ನಲಾಗಿದೆ.

ಬಲಿಷ್ಠವಾದ ಮೀಡಿಯಾ ಟೆಕ್ ಹಿಲಿಯೋ 810 5G ಪ್ರೊಸೆಸರ್ ಬಲವನ್ನು ಪಡೆದಿರಲಿದೆ. ಇದು ಆಂಡ್ರಾಯ್ಡ್ 11 ಆಧಾರಿತ ರಿಯಲ್‌ಮಿ UI 2.o ಅನ್ನು ರನ್ ಮಾಡುತ್ತದೆ. ಈ ಫೋನ್ ಗೋಲ್ಡ್ ಕಲರ್ ರೂಪಾಂತರದಲ್ಲಿ ಬರುತ್ತದೆ.

ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರಲಿದೆ. ಎರಡನೇ ಕ್ಯಾಮೆರಾ 2MP ಡೆಪ್ತ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾದಲ್ಲಿ 2MP ಮ್ಯಾಕ್ರೋ ಲೆನ್ಸ್ ನೀಡಲಾಗಿದೆ. 16MP ಸೆಲ್ಫಿ ಕ್ಯಾಮೆರಾ ಕೂಡ ಇದೆ.

ರಿಯಲ್‌ಮಿ 9i 5G ಸ್ಮಾರ್ಟ್ ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಆದರೆ, ಇದು ಎಷ್ಟೊ ವೋಲ್ಟ್ ನ ಬೆಂಬಲ ಪಡೆದುಕೊಂಡಿದೆ ಎಂದು ತಿಳಿದುಬಂದಿಲ್ಲ.

ಈ ಸ್ಮಾರ್ಟ್ ಫೋನಿನ ನಿಖರ ಬೆಲೆ ಕೂಡ ಬಹಿರಂಗಗೊಂಡಿಲ್ಲ. ಮೂಲಗಳ ಪ್ರಕಾರ ಭಾರತದಲ್ಲಿ ಇದರ ಬೆಲೆ 15,000ರೂ. ಯಿಂದ 20,000ರೂ. ನಡುವೆ ಇರಬಹುದು ಎನ್ನಲಾಗಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಅಥವಾ ಫ್ಲಿಪ್ ಕಾರ್ಟ್ ಮೂಲಕ ಸೇಲ್ ಕಾಣಲಿದೆ.
Published On - 12:33 pm, Mon, 15 August 22









