Youtube Down: ಯುಟ್ಯೂಬ್ನಲ್ಲಿ ಸರಿಯಾಗಿ ಪ್ಲೇ ಆಗದ ವಿಡಿಯೊಗಳು, ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ತೋಡಿಕೊಂಡ ಬಳಕೆದಾರರು
‘ವಿಡಿಯೊಗಳು ಸರಿಯಾಗಿ ಪ್ಲೇ ಆಗುತ್ತಿಲ್ಲ’ ಎಂದು ನೂರಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಜನಪ್ರಿಯ ವಿಡಿಯೊ ವೇದಿಕೆ ಯುಟ್ಯೂಬ್ನ ಆ್ಯಪ್ ಮತ್ತು ವೆಬ್ಸೈಟ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಳಕೆದಾರರು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ. ‘ವಿಡಿಯೊಗಳು ಸರಿಯಾಗಿ ಪ್ಲೇ ಆಗುತ್ತಿಲ್ಲ’ ಎಂದು ನೂರಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಯಾವುದೇ ಹುಡುಕು ಪದ (Keyword) ನಮೂದಿಸಿದಾಗ ಯುಟ್ಯೂಬ್ ಅದಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ಮೊಗೆದು ಕೊಡುತ್ತದೆ. ಇದು ಯುಟ್ಯೂಬ್ ಕಾರ್ಯನಿರ್ವಹಣೆಯ ಮೂಲ ವೈಖರಿ. ಆದರೆ ಈ ಕೆಲಸವೂ ಇದೀಗ ಸಮರ್ಪಕ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಬಳಕೆದಾರರು ದೂರಿದ್ದಾರೆ.
ಈ ಕ್ಷಣಕ್ಕೆ ಸಮಸ್ಯೆ ಎಷ್ಟರಮಟ್ಟಿಗೆ ಗಂಭೀರವಾದುದು ಎಂದು ಸ್ಪಷ್ಟಪಟ್ಟಿಲ್ಲ. ಅಮೆರಿಕ ಬಳಕೆದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಸಮಸ್ಯೆ ವರದಿ ಮಾಡಿದ್ದಾರೆ. ಆ್ಯಪ್ ಮತ್ತು ವೆಬ್ಸೇವೆಗಳಲ್ಲಿ ಸಮಸ್ಯೆಯುಂಟಾದಾಗ ದಾಖಲಿಸುವ ಡೌನ್ಡಿಟೆಕ್ಟರ್ ಜಾಲತಾಣವು ಯುಟ್ಯೂಬ್ನಲ್ಲಿ ಸಮಸ್ಯೆಯಾಗಿರುವುದನ್ನು ವರದಿ ಮಾಡಿದೆ. ಇಂದು ಮುಂಜಾನೆಯಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಯುಟ್ಯೂಬ್ನಲ್ಲಿ ಸಮಸ್ಯೆಯಾಗಿರುವುದನ್ನು ಹೇಳಿಕೊಂಡಿದ್ದಾರೆ. ಈವರೆಗೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ಎಂದು ಡೌನ್ಡಿಟೆಕ್ಟರ್ ತಿಳಿಸಿದೆ.
User reports indicate Youtube is having problems since 12:25 AM EDT. https://t.co/XrCFHBn78f RT if you’re also having problems #Youtubedown
— Downdetector (@downdetector) August 17, 2022
ಡೌನ್ಡಿಟೆಕ್ಟರ್ನ ಅಧಿಕೃತ ಟ್ವಿಟರ್ ಅಕೌಂಟ್ ಈ ಕುರಿತು ಟ್ವೀಟ್ ಮಾಡಿದ್ದು, ‘ಜಗತ್ತಿನ ಹಲವೆಡೆ ಯುಟ್ಯೂಬ್ ಬಳಕೆ ಪ್ರಮಾಣ ಏಕಾಏಕಿ ಕಡಿಮೆಯಾಗಿದೆ’ ಎಂದು ಹೇಳಿದೆ.
Published On - 11:22 am, Wed, 17 August 22