- Kannada News Photo gallery Bharti Airtel offering free Amazon Prime membership with some select prepaid plans check here
Airtel: ಏರ್ಟೆಲ್ನಿಂದ ಫ್ರೀ ಅಮೆಜಾನ್ ಪ್ರೈಮ್ ಚಂದಾದಾರಿಕೆ: ಈ ಆಫರ್ ಮಿಸ್ ಮಾಡ್ಬೇಡಿ
Amazon Prime: ಜಿಯೋವನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟಕ್ಕೇರಲು ಭಾರ್ತಿ ಏರ್ಟೆಲ್ ಹರಸಾಹಸ ಪಡುತ್ತಿದೆ. ಇದಕ್ಕಾಗಿ ಆಕರ್ಷಕ ಆಫರ್ ಗಳನ್ನು ಕೂಡ ಬಿಡುಗಡೆ ಮಾಡುತ್ತಿದೆ. ಇದೀಗ ಏರ್ಟೆಲ್ ಮೂರು ಜನಪ್ರಿಯ ಯೋಜನೆಯಲ್ಲಿ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಕಲ್ಪಿಸಿದೆ.
Updated on:Aug 16, 2022 | 2:38 PM

ಟೆಲಿಕಾಂ ಮಾರುಕಟ್ಟೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ರಿಲಯನ್ಸ್ ಒಡೆತನದ ಜಿಯೋವನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟಕ್ಕೇರಲು ಭಾರ್ತಿ ಏರ್ಟೆಲ್ ಹರಸಾಹಸ ಪಡುತ್ತಿದೆ. ಇದಕ್ಕಾಗಿ ಆಕರ್ಷಕ ಆಫರ್ ಗಳನ್ನು ಕೂಡ ಬಿಡುಗಡೆ ಮಾಡುತ್ತಿದೆ. ಇದೀಗ ಏರ್ಟೆಲ್ ಮೂರು ಜನಪ್ರಿಯ ಯೋಜನೆಯಲ್ಲಿ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಕಲ್ಪಿಸಿದೆ.

ಏರ್ಟೆಲ್ ನ 359 ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ನೀಡಲಾಗಿದೆ. ಇದು 28 ದಿನಗಳ ವ್ಯಾಲಿಡಿಯನ್ನು ಹೊಂದಿದ್ದು ಪ್ರತಿದಿನ 2GB ಡೇಟಾ ಹಾಗೂ 100 ಎಸ್ ಎಮ್ ಎಸ್ ಉಚಿತ ಇದೆ.

ಇದರ ಜೊತೆಗೆ ಎಕ್ಸ್ ಸ್ಟ್ರೀಮ್ ಮೊಬೈಲ್ ಪ್ಯಾಕ್, ಅಪೋಲೊ 27/7 ಸರ್ಕಲ್ ಚಂದಾದಾರಿಕೆ, ವಿಂಕ್ ಮ್ಯೂಸಿಕ್ ಮತ್ತು ಫಾಸ್ಟ್ ಟ್ಯಾಗ್ ನಲ್ಲಿ 100 ರೂ. ಕ್ಯಾಶ್ ಬ್ಯಾಕ್ ಆಫರ್ ನೀಡಲಾಗಿದೆ.

ಏರ್ಟೆಲ್ ನ 699 ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಕೂಡ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ನೀಡಲಾಗಿದೆ. ಇದು 56 ದಿನಗಳ ವ್ಯಾಲಿಡಿಯನ್ನು ಹೊಂದಿದ್ದು ಪ್ರತಿದಿನ 3GB ಡೇಟಾ ಹಾಗೂ 100 ಎಸ್ ಎಮ್ ಎಸ್ ಉಚಿತ ಇದೆ.

ಇದರಲ್ಲಿ ಕೂಡ ಎಕ್ಸ್ ಸ್ಟ್ರೀಮ್ ಮೊಬೈಲ್ ಪ್ಯಾಕ್, ಅಪೋಲೊ 27/7 ಸರ್ಕಲ್ ಚಂದಾದಾರಿಕೆ, ವಿಂಕ್ ಮ್ಯೂಸಿಕ್ ಮತ್ತು ಫಾಸ್ಟ್ ಟ್ಯಾಗ್ ನಲ್ಲಿ 100 ರೂ. ಕ್ಯಾಶ್ ಬ್ಯಾಕ್ ಆಫರ್ ನೀಡಲಾಗಿದೆ.

ಇನ್ನು ಏರ್ಟೆಲ್ ನ 999 ರೂ. ಪ್ರಿಪೇಯ್ಡ್ ಯೋಜನೆಯಲ್ಲೂ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ನೀಡಲಾಗಿದೆ. ಇದು 84 ದಿನಗಳ ವ್ಯಾಲಿಡಿಯನ್ನು ಹೊಂದಿದ್ದು ಪ್ರತಿದಿನ 2.5GB ಡೇಟಾ ಹಾಗೂ 100 ಎಸ್ ಎಮ್ ಎಸ್ ಉಚಿತ ಇದೆ.

ಇದರಲ್ಲಿ ಎಕ್ಸ್ ಸ್ಟ್ರೀಮ್ ಮೊಬೈಲ್ ಪ್ಯಾಕ್, ಮೂರು ತಿಂಗಳ ಅಪೋಲೊ 27/7 ಸರ್ಕಲ್ ಚಂದಾದಾರಿಕೆ, ವಿಂಕ್ ಮ್ಯೂಸಿಕ್ ಮತ್ತು ಫಾಸ್ಟ್ ಟ್ಯಾಗ್ ನಲ್ಲಿ 100 ರೂ. ಕ್ಯಾಶ್ ಬ್ಯಾಕ್ ಆಫರ್ ನೀಡಲಾಗಿದೆ.
Published On - 2:38 pm, Tue, 16 August 22



















