ಜನರಿಗೆ ಭಯ ಹುಟ್ಟಿಸಿದ್ದ ಮೊಸಳೆ ಹಿಡಿದು ಸಾಹಸ ಪ್ರದರ್ಶಿಸಿದ ವೇಷಗಾರ ಮಲ್ಲಯ್ಯ, ಫೋಟೋಸ್ ಇವೆ
ವೇದಾವತಿ ನದಿಯ ದಡದಲ್ಲಿ ಇದೂವರೆಗೂ ಕಂಡು ಬಂದ 20ಕ್ಕೂ ಹೆಚ್ಚು ಮೊಸಳೆಗಳನ್ನ ಹಳೇಕೊಟೆಯ ನಿವಾಸಿ, ವೇಷಗಾರ ಮಲ್ಲಯ್ಯ ಮೊಸಳೆಗಳನ್ನ ಹಿಡಿಯುವಲ್ಲಿ ಸಾಹಸ ಪ್ರದರ್ಶನ ತೋರಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಮೊಸಳೆಗಳನ್ನ ಹಿಡಿಯುವ ವೇಷಗಾರ ಮಲ್ಲಯ್ಯ ಮೊಸಳೆ ಹಿಡಿಯಲೇಂದೆ ಸ್ಟಿಕ್ ಹಾಗೂ ಬಲೆಗಳನ್ನ ಖರೀದಿಸಿದ್ದಾರೆ.
Updated on: Aug 16, 2022 | 5:00 PM

ಇತ್ತೀಚೆಗೆ ಸುರಿದ ಧಾರಕಾರ ಮಳೆ ಹಾಗೂ ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಬಿಟ್ಟ ಪರಿಣಾಮ ಮೊಸಳಗಳ ಹಾವಳಿ ಹೆಚ್ಚಾಗಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಮೊಸಳಗಳ ಕಾಟ ಹೆಚ್ಚಾಗಿದ್ದು. ರೈತರು ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಇದೂವರೆಗೂ ಸಿರಗುಪ್ಪ ತಾಲೂಕಿನ ಹಲವಡೆ ಸಾಕಷ್ಟು ಮೊಸಳೆಗಳು ಪ್ರತ್ಯೇಕವಾಗಿದ್ದು. ಸಿರಗುಪ್ಪ ತಾಲೂಕಿನ ಶ್ರೀನಗರ ಕ್ಯಾಂಪ್ ವೊಂದರಲ್ಲೆ 20ಕ್ಕೂ ಹೆಚ್ಚು ಮೊಸಳೆಗಳು ಕಾಣಿಸಿಕೊಂಡಿವೆ.

ವೇದಾವತಿ ನದಿಯ ದಡದಲ್ಲಿ ಇದೂವರೆಗೂ ಕಂಡು ಬಂದ 20ಕ್ಕೂ ಹೆಚ್ಚು ಮೊಸಳೆಗಳನ್ನ ಹಳೇಕೊಟೆಯ ನಿವಾಸಿ, ವೇಷಗಾರ ಮಲ್ಲಯ್ಯ ಮೊಸಳೆಗಳನ್ನ ಹಿಡಿಯುವಲ್ಲಿ ಸಾಹಸ ಪ್ರದರ್ಶನ ತೋರಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಮೊಸಳೆಗಳನ್ನ ಹಿಡಿಯುವ ವೇಷಗಾರ ಮಲ್ಲಯ್ಯ ಮೊಸಳೆ ಹಿಡಿಯಲೇಂದೆ ಸ್ಟಿಕ್ ಹಾಗೂ ಬಲೆಗಳನ್ನ ಖರೀದಿಸಿದ್ದಾರೆ.

ಇದೂವರೆಗೂ ಹಿಡಿದ ಎಲ್ಲ ಮೊಸಳೆಗಳನ್ನ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಮರಳಿ ತುಂಗಭದ್ರಾ ಜಲಾಶಯಕ್ಕೆ ಬಿಡಲಾಗಿದ್ದು. ವೇಷಗಾರ ಮಲ್ಲಯ್ಯ ಬೇರೆ ಎಲ್ಲಾದ್ರು ಮೊಸಳೆಗಳು ಕಂಡು ಬಂದಲ್ಲಿ ಮೊಸಳೆ ಸೆರೆಗೆ ತನ್ನನ್ನು ಸಂಪರ್ಕಿಸಬಹುದು.

ಜನರು ಭಯಬೀತರಾಗದೇ ಮೊಸಳೆಗಳನ್ನ ಹಿಡಿಯಲು ಸಹಕರಿಸಬೇಕೆಂದು ವೇಷಗಾರ ಮಲ್ಲಯ್ಯ ಮನವಿ ಮಾಡಿದ್ದಾರೆ.

ಮೊಸಳೆ ಹಿಡಿದ ವೇಷಗಾರ ಮಲ್ಲಯ್ಯನ ಜೊತೆ ಮೊಸಳೆ ಕಂಡ ಖುಷಿಯಲ್ಲಿ ಫೋಟೋ ತೆಗೆದುಕೊಳ್ಳುತ್ತಿರುವ ಗ್ರಾಮಸ್ಥರು.