Nokia C12: ₹5,999ಕ್ಕೆ ಹೊಸ ನೋಕಿಯಾ ಸ್ಮಾರ್ಟ್​ಫೋನ್ ಬಿಡುಗಡೆ

ಎಚ್​ಎಂಡಿ ಗ್ಲೋಬಲ್ ಒಡೆತನದ ನೋಕಿಯಾ ಕಂಪನಿ, ನೋಕಿಯಾ ಸಿ12 ಎನ್ನುವ ಆ್ಯಂಡ್ರಾಯ್ಡ್ 12 ಗೊ ಎಡಿಶನ್ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದೆ. ಬಜೆಟ್ ದರಕ್ಕೆ ಉತ್ತಮ ಫೀಚರ್ಸ್ ನೀಡುವ ಉದ್ದೇಶವನ್ನು ನೋಕಿಯಾ ಹೊಂದಿದೆ. ಅಮೆಜಾನ್ ಮೂಲಕ ಹೊಸ ನೋಕಿಯಾ ಸ್ಮಾರ್ಟ್​ಫೋನ್ ಲಭ್ಯವಾಗಲಿದ್ದು, ಮಾರ್ಚ್ 17ರಿಂದ ಖರೀದಿಸಬಹುದು.

Nokia C12: ₹5,999ಕ್ಕೆ ಹೊಸ ನೋಕಿಯಾ ಸ್ಮಾರ್ಟ್​ಫೋನ್ ಬಿಡುಗಡೆ
ನೋಕಿಯಾ ಸಿ12
Follow us
ಕಿರಣ್​ ಐಜಿ
|

Updated on: Mar 14, 2023 | 2:38 PM

ಬೇಸಿಕ್ ಫೀಚರ್ ಫೋನ್​ಗಳ ಮೂಲಕ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ ನೋಕಿಯಾ, ಸ್ಮಾರ್ಟ್​ಫೋನ್ ಯುಗದಲ್ಲೂ ಹಿಂದೆ ಬಿದ್ದಿಲ್ಲ. ಹಲವು ಮಾದರಿಗಳ ಸ್ಮಾರ್ಟ್​ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ಮೂಲಕ, ಪ್ರತಿಸ್ಪರ್ಧಿ ಬ್ರ್ಯಾಂಡ್​ಗಳಿಗೆ ಸ್ಪರ್ಧೆ ಒಡ್ಡುತ್ತಿದೆ. ಹೆಚ್ಚಿನ ಜನರ ಆಯ್ಕೆಯಾಗಿರುವ ಬಜೆಟ್ ದರದ ಸ್ಮಾರ್ಟ್​ಫೋನ್ ವಿಭಾಗದಲ್ಲಿ ನೋಕಿಯಾ ಹೊಸ ಮಾದರಿಯನ್ನು ಪರಿಚಯಿಸಿದೆ. ಕಡಿಮೆ ಬಜೆಟ್​ಗೆ ಹೆಚ್ಚಿನ ಫೀಚರ್ ನೀಡುವ ಮೂಲಕ ಬಳಕೆದಾರರನ್ನು ಸೆಳೆಯುವುದು ನೋಕಿಯಾ ಉದ್ದೇಶವಾಗಿದೆ. ನೋಕಿಯಾ ಹೊಸ ಸಿ 12 ಸ್ಮಾರ್ಟ್​ಫೋನ್ (NOKIA C12) ಬಿಡುಗಡೆಯಾಗಿದ್ದು, ಹೆಚ್ಚಿನ ವಿವರಗಳು ಇಲ್ಲಿವೆ.

ನೋಕಿಯಾ C12 ಆಕರ್ಷಕ ಸ್ಮಾರ್ಟ್​ಫೋನ್

ನೂತನ ನೋಕಿಯಾ C12 ಸ್ಮಾರ್ಟ್​ಫೋನ್, 6.3 ಇಂಚಿನ HD+ ಡಿಸ್​ಪ್ಲೇ ಹೊಂದಿದೆ. ಎಚ್​ಎಂಡಿ ಗ್ಲೋಬಲ್ (HMD Global) ಸಂಸ್ಥೆ ಒಡೆತನಕ್ಕೆ ಬಂದ ಮೇಲೆ, ನೋಕಿಯಾ ವಿವಿಧ ವಿಭಾಗಗಳಲ್ಲಿ ಹಲವು ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅದರಲ್ಲೂ ಬಜೆಟ್ ದರಕ್ಕೆ ಆಕರ್ಷಕ ಫೀಚರ್​ನ ಫೋನ್ ಒದಗಿಸುವುದರಲ್ಲಿ ನೋಕಿಯಾ ಮುಂದಿದೆ. ಹೊಸ ನೋಕಿಯಾ C12 ಸ್ಮಾರ್ಟ್​ಫೋನ್ ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಇದ್ದರೆ, 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.

ನೋಕಿಯಾ C12 ಕ್ಯಾಮೆರಾ

3000mAh ಬ್ಯಾಟರಿ ಮತ್ತು 5W ಚಾರ್ಜಿಂಗ್ ಸಾಮರ್ಥ್ಯದ ನೋಕಿಯಾ C12 ಸ್ಮಾರ್ಟ್​ಫೋನ್, 2 GB RAM ಮತ್ತು 64 GB ಸ್ಟೋರೇಜ್ ಹೊಂದಿದೆ. ಜತೆಗೆ, Unisoc 9863A1 ಪ್ರೊಸೆಸರ್ ಬೆಂಬಲದೊಂದಿಗೆ ನೋಕಿಯಾ C12 ಮಾರುಕಟ್ಟೆ ಪ್ರವೇಶಿಸಿದೆ. Android 12 ಗೊ ಆವೃತ್ತಿ ಮೂಲಕ ನೂತನ ನೋಕಿಯಾ ಫೋನ್ ಕಾರ್ಯನಿರ್ವಹಿಸುತ್ತದೆ.

ನೋಕಿಯಾ C12 ಸ್ಮಾರ್ಟ್​ಫೋನ್ ಬೆಲೆ ಮತ್ತು ಲಭ್ಯತೆ

ಹೊಸದಾಗಿ ಬಿಡುಗಡೆಯಾದ ನೋಕಿಯಾ ಸಿ12 ಸ್ಮಾರ್ಟ್​ಫೋನ್, ಡಾರ್ಕ್ ಕ್ಯಾನ್, ಮಿಂಟ್ ಲೈಮ್ ಮತ್ತು ಚಾರ್​ಕೋಲ್ ಬಣ್ಣಗಳಲ್ಲಿ ಲಭ್ಯವಿದೆ. ಇಯರ್​ಫೋನ್, ಚಾರ್ಜರ್ ಸಹಿತ ನೂತನ ನೋಕಿಯಾ C12 ಸ್ಮಾರ್ಟ್​ಫೋನ್ ದೊರೆಯಲಿದೆ. ಅಮೆಜಾನ್​ನಲ್ಲಿ ಮಾರ್ಚ್ 17ರಿಂದ ಲಭ್ಯವಿದ್ದು, ₹5,999 ದರ ನಿಗದಿಪಡಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ