WhatsApp: ವಾಟ್ಸ್​ಆ್ಯಪ್​ನಲ್ಲಿ ಬಹುಬೇಡಿಕೆಯ ಫೀಚರ್: ಇನ್ಮುಂದೆ ಫೋಟೋ ಕಳುಹಿಸಲು ಟೆನ್ಶನ್ ಬೇಡ

|

Updated on: Jan 23, 2023 | 1:03 PM

WhatsApp New Feature: ಸದ್ಯದಲ್ಲೇ ವಾಟ್ಸ್​ಆ್ಯಪ್​ನಲ್ಲಿ ಫೋಟೋ ಸೆಂಡ್‌ ಮಾಡುವಾಗ ವಿಶೇಷವಾದ ಆಯ್ಕೆಯೊಂದು ಕಾಣಿಸಲಿದ್ದು, ಇದರ ಮೂಲಕ ಮೂಲ ಗುಣಮಟ್ಟದಲ್ಲೇ ಆ ಫೋಟೋ ಸೆಂಡ್ ಆಗಲಿದೆ.

WhatsApp: ವಾಟ್ಸ್​ಆ್ಯಪ್​ನಲ್ಲಿ ಬಹುಬೇಡಿಕೆಯ ಫೀಚರ್: ಇನ್ಮುಂದೆ ಫೋಟೋ ಕಳುಹಿಸಲು ಟೆನ್ಶನ್ ಬೇಡ
WhatsApp
Follow us on

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ ಕಳೆದ ವರ್ಷ ಸಾಕಷ್ಟು ಅಭಿವೃದ್ದಿ ಕಂಡಿತು. 50ಕ್ಕೂ ಅಧಿಕ ಹೊಸ ಹೊಸ ವಿನೂತನವಾದ ಫೀಚರ್​ಗಳನ್ನು ಪರಿಚಯಿಸಿ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಯಿತು. ಇದಕ್ಕಾಗಿಯೆ ವಾಟ್ಸ್​ಆ್ಯಪ್ ಅನ್ನು ಇಂದು ವಿಶ್ವದಲ್ಲಿ ಬಳಸುವವರ ಸಂಖ್ಯೆ 2 ಬಿಲಿಯನ್​ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಹೆಚ್ಚಾಗಿ ಮೊಬೈಲ್ ಬಳಕೆದಾರರಿಗೆ ನೂತನ ಆಯ್ಕೆಗಳನ್ನು ಪರಿಚಯಿಸುವ ವಾಟ್ಸ್​ಆ್ಯಪ್ (WhatsApp) ಇದೀಗ ತನ್ನ ಆಂಡ್ರಾಯ್ಡ್ (Android) ಬಳಕೆದಾರರಿಗೆ ಉಪಯುಕ್ತವಾದ ಆಯ್ಕೆಯನ್ನು ನೀಡುತ್ತಿದೆ. ಸದ್ಯದಲ್ಲೇ ವಾಟ್ಸ್​ಆ್ಯಪ್​ನಲ್ಲಿ ಫೋಟೋ ಸೆಂಡ್‌ ಮಾಡುವಾಗ ವಿಶೇಷವಾದ ಆಯ್ಕೆಯೊಂದು ಕಾಣಿಸಲಿದ್ದು, ಇದರ ಮೂಲಕ ಮೂಲ ಗುಣಮಟ್ಟದಲ್ಲೇ ಆ ಫೋಟೋ ಸೆಂಡ್ ಆಗಲಿದೆ.

ವಾಟ್ಸ್​ಆ್ಯಪ್​ನಲ್ಲಿ ಈಗ ಒಂದು ಫೋಟೋ ಕಳುಹಿಸಿದರೆ ಅದು ರಿಸೀವ್ ಮಾಡಿಕೊಂಡ ಬಳಕೆದಾರನಿಗೆ ಒರಿಜಿನಲ್ ಕ್ವಾಲಿಟಿಯಲ್ಲಿ ಸಿಗುವುದಿಲ್ಲ. ಇದಕ್ಕಾಗಿ ವಾಟ್ಸ್​ಆ್ಯಪ್​ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೂಲ ಗುಣಮಟ್ಟದ ಫೋಟೋಗಳನ್ನು ಸೆಂಡ್‌ ಮಾಡಲು ಅನುಮತಿಸುವ ಹೊಸ ಫೀಚರ್ಸ್‌ ಪರಿಚಯಿಸುವುದಕ್ಕೆ ತಯಾರಿ ನಡೆಸಿದೆ. ವಾಟ್ಸ್​ಆ್ಯಪ್​ಪರಿಚಯಿಸಲಿರುವ ಹೊಸ ಫೀಚರ್ಸ್‌ ನಿಮಗೆ ಫೋಟೋ ಗುಣಮಟ್ಟವನ್ನು ಆಯ್ಕೆ ಮಾಡಲು ಅನುಮತಿಸಲಿದೆ. ಅಂದರೆ ನೀವು ಸೆಂಡ್‌ ಮಾಡುವ ಫೋಟೋ ಗುಣಮಟ್ಟ ಹೇಗಿರಬೇಕು ಎಂಬುದನ್ನು ನೀವೇ ನಿರ್ಧಾರ ಮಾಡಬಹುದು. ಇದರಿಂದ ನಿಮ್ಮ ಫೋಟೋದ ಒರಿಜಿನಲ್ ಕ್ವಾಲಿಟಿಯಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ ಸೆಂಡ್‌ ಮಾಡುತ್ತದೆ. ಸದ್ಯ ಆಂಡ್ರಾಯ್ಡ್‌ ಬೇಟಾ ವರ್ಷನ್​ನಲ್ಲಿ ಈ ಆಯ್ಕೆ ಕಾಣಿಸಿದ್ದು ಆದಷ್ಟು ಬೇಗ ಎಲ್ಲ ಬಳಕೆದಾರರಿಗೆ ಸಿಗಲಿದೆಯಂತೆ.

Vivo Y55s 5G: ವಿವೋದಿಂದ ಆಕರ್ಷಕ ವಿವೋ Y55s 5G (2023) ಸ್ಮಾರ್ಟ್‌ಫೋನ್‌ ಬಿಡುಗಡೆ: ಏನು ಫೀಚರ್ಸ್?, ಬೆಲೆ ಎಷ್ಟು?

ಇದನ್ನೂ ಓದಿ
Xiaomi 13: ಭಾರತಕ್ಕೆ ಬರುತ್ತಿದೆ ವಿದೇಶದಲ್ಲಿ ಧೂಳೆಬ್ಬಿಸಿದ ಶವೋಮಿ 13 ಸರಣಿ: ಇದರ ಫೀಚರ್ಸ್ ಕೇಳಿದ್ರೆ ದಂಗಾಗ್ತೀರ
Tech Tips: ಆಂಡ್ರಾಯ್ಡ್, ಐಫೋನ್​ಗಳಲ್ಲಿ ವಾಟ್ಸ್​ಆ್ಯಪ್​​ ಕಾಲ್ ರೆಕಾರ್ಡ್ ಮಾಡುವುದು​ ಹೇಗೆ?
OnePlus Nord CE 3 5G: ಬಹುನಿರೀಕ್ಷಿತ ಒನ್‌ಪ್ಲಸ್‌ ನಾರ್ಡ್‌ CE 3 5G ಫೋನ್ ಫೀಚರ್ಸ್ ಲೀಕ್: ಇದನ್ನು ಖರೀದಿಸಲು ಕ್ಯೂ ಗ್ಯಾರಂಟಿ
BSNL: ಬರೋಬ್ಬರಿ 9 ಒಟಿಟಿ ಸೌಲಭ್ಯ: ಬಿಎಸ್​ಎನ್​ಎಲ್ ಹೊಸ ಪ್ಲಾನ್ ಕಂಡು ದಂಗಾದ ಜಿಯೋ, ಏರ್ಟೆಲ್

ಸ್ಟೇಟಸ್​ನಲ್ಲಿ ವಾಯ್ಸ್ ಮೆಸೇಜ್:

ಸದ್ಯದಲ್ಲೇ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ವಾಯ್ಸ್ ಮೆಸೇಜ್ ಅನ್ನು ಹಂಚಿಕೊಳ್ಳಬಹುದು. ವಾಯ್ಸ್ ನೋಟ್ ಅನ್ನು ಸ್ಟೇಟಸ್​ನಲ್ಲಿ ಹಂಚಿಕೊಳ್ಳಬಹುದಾದ ಆಯ್ಕೆ ಮೊದಲಿಗೆ ಆಂಡ್ರಾಯ್ಡ್ ಬಳಕೆದಾರರಿಗೆ ಸಿಗಲಿದೆ. ಈಗಾಗಲೇ ಇದು ಆಂಡ್ರಾಯ್ಡ್ ಬೇಟಾ ವರ್ಷನ್​ನಲ್ಲಿ ಲಭ್ಯವಾಗಿದೆ. ಈವರೆಗೆ ಸ್ಟೇಟಸ್​ನಲ್ಲಿ ವಿಡಿಯೋ, ಫೋಟೋ, ಲಿಂಕ್​ ಮತ್ತು ಬರಹಗಳನ್ನು ಮಾತ್ರ ಹಂಚಿಕೊಳ್ಳಬಹುದಿತ್ತು. ಇದೀಗ ವಾಯ್ಸ್ ನೋಟ್ ಎಂಬ ಹೊಸ ಫೀಚರ್ ಬಳಕೆದಾರರು ಸ್ಟೇಟಸ್​ನಲ್ಲಿ ವಾಯ್ಸ್ ನೋಟ್ ಅಥವಾ ವಾಯ್ಸ್ ಕ್ಲಿಪ್​ಗಳನ್ನು ಶೇರ್ ಮಾಡಬಹುದಾಗಿದೆ. 30 ಸೆಕೆಂಡ್​ಗಳ ಕಾಲ ಇದು ಇರಲಿದೆ. ಇದಕ್ಕಾಗಿ ಬರಹಗಳನ್ನು ಹಂಚಿಕೊಳ್ಳಬಹುದಾದ ಜಾಗದಲ್ಲಿ ಮೈಕ್ರೊ ಫೋನ್ ಆಯ್ಕೆಯನ್ನು ಕೂಡ ನೀಡಲಾಗಿದೆ. ಇಲ್ಲಿ ಮೈಕ್ರೊ ಫೋನ್ ಮೇಲೆ ಕ್ಲಿಕ್ ಮಾಡುವ ಮೂಲಕ ವಾಯ್ಸ್ ಸ್ಟೇಟಸ್ ಶೇರ್ ಮಾಡಬಹುದು. ಇದು ಎಂಡ್-ಟು-ಎಂಡ್ ಎನ್​ಕ್ರಿಪ್ಟೆಡ್ ಆಗಿದೆ.

ಐದು ಚಾಟ್‌ ಪಿನ್‌ ಮಾಡುಬಹುದು:

ವಾಟ್ಸ್​ಆ್ಯಪ್ ತನ್ನ ಬಳಕೆದಾರರಿಗೆ ಪ್ರಮುಖ ಐದು ಚಾಟ್‌ಗಳನ್ನು ಪಿನ್‌ ಮಾಡುವಂತಹ ಆಯ್ಕೆ ನೀಡಲು ಮುಂದಾಗಿದೆ. ಈ ಫೀಚರ್ ಮೂಲಕ ನೀವು ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಚಾಟ್‌ ಮಾಡುವ ಪ್ರಮುಖ ಐದು ಚಾಟ್‌ಗಳನ್ನು ಪಿನ್‌ ಮಾಡಬಹುದಾಗಿದೆ. ಈ ಚಾಟ್‌ಗಳು ನಿಮ್ಮ ವಾಟ್ಸ್​ಆ್ಯಪ್ ಚಾಟ್‌ನ ಮೇಲ್ಭಾಗದಲ್ಲಿ ಗೋಚರಿಸುತ್ತದೆ. ಸದ್ಯದಲ್ಲೇ ಈ ಆಯ್ಕೆ ಆಂಡ್ರಾಯ್ಡ್, ಐಒಎಸ್ ಮತ್ತು ವೆಬ್ ಬಳಕೆದಾರರಿಗೆ ಸಿಗಲಿದೆಯಂತೆ. ಸದ್ಯ ಈ ಹೊಸ ಫೀಚರ್ಸ್‌ ಬಗ್ಗೆ ವಾಬೇಟಾಇನ್ಫೋ ವೆಬ್‌ಸೈಟ್‌ ವರದಿ ಮಾಡಿದೆ. ಪ್ರಸ್ತುತ, ವಾಟ್ಸ್​ಆ್ಯಪ್ ಬಳಕೆದಾರರು ತಮ್ಮ ಚಾಟ್‌ ವಿಂಡೋದ ಮೇಲೆ ಕೇವಲ ಮೂರು ಚಾಟ್‌ಗಳನ್ನು ಮಾತ್ರ ಪಿನ್ ಮಾಡಬಹುದು. ಆದರೆ ಹೊಸ ಆಯ್ಕೆಯಲ್ಲಿ ನೀವು ಐದು ಚಾಟ್‌ಗಳನ್ನು ಪಿನ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:03 pm, Mon, 23 January 23